• Home
 • »
 • News
 • »
 • entertainment
 • »
 • Kannadathi: ಕಂಬಿ ಹಿಂದೆ ಹರ್ಷ, ಟೈಮ್ ನೋಡಿ ಜೈಲಿಗೆ ಕಳಿಸಿದ ಸಾನಿಯಾ!

Kannadathi: ಕಂಬಿ ಹಿಂದೆ ಹರ್ಷ, ಟೈಮ್ ನೋಡಿ ಜೈಲಿಗೆ ಕಳಿಸಿದ ಸಾನಿಯಾ!

ಕಂಬಿ ಹಿಂದೆ ಹರ್ಷ

ಕಂಬಿ ಹಿಂದೆ ಹರ್ಷ

ಸಾನಿಯಾ ದೂರು ಕೊಟ್ಟ ನಂತರ ಹರ್ಷ ಜೈಲು ಸೇರಿದ್ದಾನೆ. ಏನೂ ಮಾತನಾಡಲು ಆಗದೇ ಮೌನವಾಗಿದ್ದಾನೆ.  ಅಮ್ಮಮ್ಮ ಆರೋಗ್ಯ ಹದಗೆಟ್ಟಿದೆ. ಅಲ್ಲಿ ಹರ್ಷ ಇರಬೇಕಿತ್ತು. ಅದನ್ನೂ ಸಾನಿಯಾ ತಪ್ಪಿಸಿದ್ದಾಳೆ. ಟೈಮ್ ನೋಡಿ ಹರ್ಷನನ್ನು ಜೈಲಿಗೆ ಕಳಿಸಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serial)ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷನಿಗೆ ಸಾನಿಯಾ ಕುತಂತ್ರ ಎಲ್ಲಾ ಗೊತ್ತಾಗಿ, ಅವಳ ಬಾಯಿಂದಲೇ ಸತ್ಯ ಬಾಯ್ಬಿಡಲು ಗನ್ (Gun) ಆಕೆ ತಲೆಗೆ ಹಿಡಿದಿರುತ್ತಾನೆ. ಅದು ವಿಡಿಯೋ ಸಾಕ್ಷಿ ಇದೆ. ಅದನ್ನೇ ಇಟ್ಟುಕೊಂಡು ಸಾನಿಯಾ ಹರ್ಷನ ವಿರುದ್ಧ ದೂರು (Complaint) ನೀಡಿ ಜೈಲಿಗೆ ಹಾಕಿದ್ದಾಳೆ.


  ಸಾನಿಯಾಳ ಪ್ಲ್ಯಾನ್ ಸತ್ಯ
  ಈ ಹಿಂದೆ ನವರಾತ್ರಿ ಹಬ್ಬದ ವೇಳೆ, ಹರ್ಷನ ಬಳಿ ಸಾನಿಯಾ ಕಳಿಸಿದ ಹುಡುಗ ನೀಲೇಶ್, ಸಾನಿಯಾ ಬಗ್ಗೆ ಎಲ್ಲಾ ಸತ್ಯ ಹೇಳ್ತಾನೆ. ಅಲ್ಲದೇ ಭುವಿ ಮೇಡಂ, ರತ್ನಾಮಾಲಾ ಮೇಡಂ ಅವರಿಂದ ನಾನು ಬುದ್ಧಿ ಕಲಿತೆ ಎಂದು ಹೇಳ್ತಾನೆ. ಸಾನಿಯಾ ಬಗ್ಗೆ ನೀಲೇಶ್ ಹೇಳಿದ ಸತ್ಯವನ್ನೆಲ್ಲಾ ಹರ್ಷ ಕೇಳಿಸಿಕೊಂಡು ಕೋಪಗೊಂಡಿದ್ದ, ಅಲ್ಲದೇ ತುಂಬಾ ಕೋಪ ಮಾಡಿಕೊಂಡು, ಗನ್ ಹಿಡಿದು ತಂದು, ನಿನ್ನ ಸುಮ್ನೆ ಬಿಡಲ್ಲ ಎಂದು ಸಾನಿಯಾಗೆ ಹರ್ಷ ಹೇಳಿದ್ದ. ಅವಳ ತಲೆಗೆ ಗನ್ ಹಿಡಿದು ಅವಳ ಬಾಯಿಂದ ಸತ್ಯ ಬಾಯ್ಬಿಡಿಸಿರುತ್ತಾನೆ.


  ಸಾನಿಯಾಗೆ ತಲೆಗೆ ಗನ್
  ಸಾನಿಯಾಳನ್ನು ಭಯಪಡಿಸಲು ನವರಾತ್ರಿ ಹಬ್ಬದ ದಿನ ಹರ್ಷ ಗನ್ ಹಿಡಿದಿರುತ್ತಾನೆ. ಅದರ ವಿಡಿಯೋ ಇದೆ. ಹರ್ಷ ಗನ್ ಹಿಡಿದ ಕಾರಣ, ಸಾನಿಯಾ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದಾಳೆ. ಭುವಿಯನ್ನು ಕೆಲಸದಿಂದ ತೆಗಿಸಲು ಸಾನಿಯಾಳೇ ಪ್ಲ್ಯಾನ್ ಮಾಡಿದ್ದು ಎಂದು ಮನೆಯವರಿಗೆಲ್ಲಾ ಗೊತ್ತಾಗುತ್ತೆ. ಅದು ಗೊತ್ತಾಗಿ ಭುವಿ ಸಹ ತುಂಬಾ ಬೇಜಾರು ಮಾಡಿಕೊಂಡಿರುತ್ತಾಳೆ.


  ಇದನ್ನೂ ಓದಿ: BBK Season 09: ಈ ಬಾರಿ ಪಕ್ಕಾ ಇವರೇ ವಿನ್ನರ್, ದರ್ಶ್ ಚಂದ್ರಪ್ಪ ಕಿಚ್ಚ ಸುದೀಪ್ ಬಳಿ ಹೇಳಿದ ಹೆಸರು ಯಾವುದು?


  ಹರ್ಷನ ಬಳಿ ಮಾತನಾಡಿದ ಪೊಲೀಸ್
  ಪೊಲೀಸ್ ನವರು ಹರ್ಷ ಬಳಿ ಬಂದು ಮಾಡನಾಡಿದ್ದಾರೆ. ಸಾನಿಯಾಗೆ ಗನ್ ಹಿಡಿದಿದ್ದು ಮರ್ಡರ್ ಅಟೆಮ್ಟ್ ಆಗುತ್ತೆ. ಸಾನಿಯಾ ದೂರು ಕೊಟ್ರೆ ನೀವು ಜೈಲಿಗೆ ಹೋಗ ಬೇಕಾಗುತ್ತೆ ಎಂದು ಹೇಳ್ತಾರೆ. ಅದನ್ನು ಕೇಳಿಸಿಕೊಂಡ ಹರ್ಷ ಏನೂ ಮಾತನಾಡದೇ ಸುಮ್ಮನಿದ್ದಾರೆ. ಆದ್ರೆ ಹರ್ಷ ಮತ್ತು ಪೊಲೀಸ್ ಮಾತನಾಡುವುದನ್ನು ಸಾನಿಯಾ ಕೇಳಿಸಿಕೊಂಡಿದ್ದಳು.


  Colors Kannada Kannada serial Kanndathi Watch today episode Hero Harsha in police station
  ಹರ್ಷ, ದೇವ್, ಭುವಿ


  ದೂರ ಕೊಟ್ಟ ಸಾನಿಯಾ, ಜೈಲಿಗೆ ಹರ್ಷ
  ಎಲ್ಲ ಅವಮಾನವನ್ನು ಸಹಿಸಿಕೊಂಡಿದ್ದ ಸಾನಿಯಾ, ಅಮ್ಮಮ್ಮನ ಆರೋಗ್ಯ ಹದಗೆಟ್ಟ ಸಮಯವನ್ನು ಬಳಸಿಕೊಂಡು ಹರ್ಷನ ವಿರುದ್ಧ ಮಸಲತ್ತು ಮಾಡಿದ್ದಾಳೆ. ಹರ್ಷನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನನ್ನು ಕೊಲ್ಲಲು ಬಂದಿದ್ದ ಎಂದು ದೂರಿನಲ್ಲಿ ಬರೆದು ಕೊಟ್ಟಿದ್ದಾಳೆ. ಹರ್ಷನು ಇದನ್ನು ಕೇಳಿಸಿಕೊಂಡು ಆತಂಕಗೊಂಡಿದ್ದಾನೆ.


  ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಅಭ್ಯರ್ಥಿ ದೀಪಿಕಾ ದಾಸ್ ಟಾಪ್ 2 ನಲ್ಲಿ ಇರ್ತಾರಂತೆ!


  ಕಂಬಿ ಹಿಂದೆ ಭುವಿಯ ಪ್ರೀತಿಯ ಪತಿ
  ಸಾನಿಯಾ ದೂರು ಕೊಟ್ಟ ನಂತರ ಹರ್ಷ ಜೈಲು ಸೇರಿದ್ದಾನೆ. ಏನೂ ಮಾತನಾಡಲು ಆಗದೇ ಮೌನವಾಗಿದ್ದಾನೆ.  ಅಮ್ಮಮ್ಮ ಆರೋಗ್ಯ ಹದಗೆಟ್ಟಿದೆ. ಅಲ್ಲಿ ಹರ್ಷ ಇರಬೇಕಿತ್ತು. ಅದನ್ನೂ ಸಾನಿಯಾ ತಪ್ಪಿಸಿದ್ದಾಳೆ. ಟೈಮ್ ನೋಡಿ ಹರ್ಷನನ್ನು ಜೈಲಿಗೆ ಕಳಿಸಿದ್ದಾಳೆ. ಹರ್ಷ ಸಹ ಅಮ್ಮಮ್ಮನ ಬಗ್ಗೆ ಯೋಚನೆ ಮಾಡ್ತಾ ಇದ್ದಾನೆ.


  Colors Kannada Kannada serial Kanndathi Watch today episode Hero Harsha in police station
  ಅಮ್ಮಮ್ಮ, ಸಾನಿಯಾ


  ಹರ್ಷ ಜೈಲಿನಿಂದ ಆಚೆ ಬರ್ತಾನಾ? ಅಮ್ಮಮ್ಮ ಗುಣಮುಖರಾಗ್ತಾರಾ? ಭುವಿ ಮುಂದಿನ ನಡೆ ಏನು? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: