Kannadathi: ಅಮ್ಮಮ್ಮನ ಮರೆವಿನ ಕಾಯಿಲೆ; ನಿಜ ಗೊತ್ತಾದ್ರೆ ಹರ್ಷನಿಗೆ ಶಾಕ್!

ಇಂದಿನ ಎಪಿಸೋಡ್‍ನಲ್ಲಿ ಅಮ್ಮಮ್ಮನ ಕಾಯಿಲೆ ಬಗ್ಗೆ ಹರ್ಷನಿಗೆ ಹೇಳೋ ಸಾಧ್ಯತೆ ಇದೆ. ಹರ್ಷ ಅದನ್ನು ಹೇಗೆ ಸ್ವೀಕರಿಸುತ್ತಾನೋ ಗೊತ್ತಿಲ್ಲ.

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಅಮ್ಮಮ್ಮ ಆರೋಗ್ಯ (Health) ಸರಿ ಇಲ್ಲದಾಗ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಲ್ಲಿಂದ ಬಂದ ಮೇಲೆ ಅಮ್ಮಮ್ಮನಿಗೆ ಮರವಿನ ಕಾಯಿಲೆ ಶುರುವಾಗಿದೆ.

  ಅಮ್ಮಮ್ಮನ ಮೆಮೊರಿ ಲಾಸ್!
  ಅಮ್ಮಮ್ಮ ಅಂದ್ರೆ ರತ್ನಮಾಲಾ, ಹರ್ಷನ ಮುದ್ದಿನ ಅಮ್ಮ. ಗಂಡ ತೀರಿ ಹೋದ್ರೂ ಜವಾಬ್ದಾರಿ ತಾನೇ ತೆಗೆದುಕೊಂಡು ಕಂಪನಿ ಬೆಳೆಸಿರುವ ಹೆಂಗಸು. ಎಲ್ಲೂ, ಏನು ತಪ್ಪಾಗದಂತೆ, ಸಂಸಾರ, ಅಧಿಕಾರ ಎರಡನ್ನೂ ನಿರ್ವಹಿಸಿಕೊಂಡು ಬಂದಿರುವವಳು. ಆದ್ರೆ ವಯಸ್ಸಾದಂತೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸಾವಿಗೆ ದಿನಗಳನ್ನು ಎಣಿಸುತ್ತಿದ್ದಾಳೆ. ಆದ್ರೆ ಈ ಬಾರಿ ಚಿಕಿತ್ಸೆ ಪಡೆದು ಬಂದ ನಂತರ ಅಮ್ಮಮ್ಮ ಮೆಮೊರಿ ಲಾಸ್ ಆಗಿದೆಯಂತೆ.

  ಡಾಕ್ಟರ್ ಹೇಳಿದಂತೆ ದಿನ ಕಳೆದಂತೆ ಮರೆವು ಹೆಚ್ಚು
  ಹರ್ಷ-ಭುವಿ ಮದುವೆ ಸಮಯದಲ್ಲಿ ಅಮ್ಮಮ್ಮನಿಗೆ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅದಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್‍ಗೆ ಕಳಿಸಲಾಗಿತ್ತು. ಅಲ್ಲಿಂದ ಏನೋ ಹುಷಾರಾಗಿ ಬಂದಿದ್ದಾರೆ. ಆದ್ರೆ ಅವರು ತಮ್ಮ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಆದ್ರೆ ಈ ಬಗ್ಗೆ ಸಾನಿಯಾಗೆ ಬಿಟ್ಟು ಮನೆಯ ಬೇರೆ ಯಾರಿಗೂ ಗೊತ್ತಿಲ್ಲ.

  ಇದನ್ನೂ ಓದಿ: Ramachari: ಪೊಲೀಸ್ ಠಾಣೆಯಲ್ಲಿ ರಾಮಾಚಾರಿ ತಂದೆಗೆ ಅವಮಾನ!, ಸಂಕಷ್ಟದಲ್ಲಿ ಚಾರಿ ಕುಟುಂಬ

  ಅಮ್ಮಮ್ಮನ ಬಗ್ಗೆ ಭುವಿಯಲ್ಲಿ ಹೆಚ್ಚಾದ ಆತಂಕ
  ಅಮ್ಮಮ್ಮ ಇತ್ತಿಚೇಗೆ ಒಬ್ಬೊಬ್ಬರೇ ಕೂರುತ್ತಾರೆ. ಮಧ್ಯರಾತ್ರಿ ಟಿವಿ ನೋಡುತ್ತಾರೆ. ಎಷ್ಟೋ ಹೊತ್ತಾದ್ರೂ ಮಲಗಲ್ಲ. ಕೇಳಿದ್ರೆ ತನಗೆ ಯಾರೂ ಊಟ ಕೊಟ್ಟಿಲ್ಲ. ರಾತ್ರಿ ಊಟ ಮಾಡಿದ್ರೂ ಮಾಡಿಲ್ಲ ಅನ್ನುತ್ತಾರೆ. ಫೋನ್ ಪಾಸ್‍ವರ್ಡ್ ಮರೆತು ಬಿಟ್ಟಿದ್ದಾಲೆ. ಇದಲ್ಲೆವನ್ನೂ ನೋಡಿದ ಭುವಿಗೆ ಆತಂಕ ಹೆಚ್ಚಾಗಿದೆ. ಅಮ್ಮಮ್ಮ ಒಬ್ಬೊಬ್ಬರೇ ಓಡಾಡಿದ್ರೆ ಭುವಿ ಗಾಬರಿ ಆಗುತ್ತಿದ್ದಾಳೆ. ಎಲ್ಲಿ ಹೋದ್ರೋ ಅಂತ ಹುಡುಕುತ್ತಾಳೆ.

  ಅಮ್ಮಮ್ಮನ ಮರೆವಿನ ಬಗ್ಗೆ ಹರ್ಷನ ಬಳಿ ಹೇಳ್ತಾಳಾ ಭುವಿ?
  ಹರ್ಷ-ಭುವಿಯನ್ನು ಕರೆದುಕೊಂಡು ಸುತ್ತಾಡಲು ಹೋಗಿದ್ದಾನೆ. ಜಾಲಿ ಮೂಡ್‍ನಲ್ಲಿ ಇದ್ದಾನೆ. ಆದ್ರೆ ಭುವಿ ಮಾತ್ರ, ಏನೋ ಕಳೆದುಕೊಂಡವರಂತೆ ಇದ್ದಾಳೆ. ಹರ್ಷ ಭುವಿಗೆ ಏನಾಯ್ತು ಎಂದು ಕೇಳುತ್ತಾನೆ. ಅದಕ್ಕೆ ಇಂದಿನ ಎಪಿಸೋಡ್‍ನಲ್ಲಿ ಅಮ್ಮಮ್ಮನ ಕಾಯಿಲೆ ಬಗ್ಗೆ ಹರ್ಷನಿಗೆ ಹೇಳೋ ಸಾಧ್ಯತೆ ಇದೆ. ಹರ್ಷ ಅದನ್ನು ಹೇಗೆ ಸ್ವೀಕರಿಸುತ್ತಾನೋ ಗೊತ್ತಿಲ್ಲ. ತನ್ನ ಅಮ್ಮನಿಗೆ ಈ ರೀತಿ ಆಗಿದೆ ಅಂತ ಗೊತ್ತಾದ್ರೆ ಆಘಾತಕ್ಕೆ ಒಳಗಾಗೋದು ನಿಜ.

  ಇದನ್ನೂ ಓದಿ: Anubandha Award-2022: ಮತ್ತೆ ಬರ್ತಿದೆ ಅನುಬಂಧ ಅವಾರ್ಡ್​, ಯಾರಾಗ್ತಾರೆ ಮನ ಮೆಚ್ಚಿದ ನಟಿ?

  ಭುವಿ ಹರ್ಷನಿಗೆ ನಿಜ ಹೇಳ್ತಾಳಾ? ಹರ್ಷ ಅದನ್ನು ಹೇಗೆ ಸ್ವೀಕರಿಸುತ್ತಾನೆ? ಮುಂದೆ ಏನಾಗುತ್ತೆ ಅಂತ ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.
  Published by:Savitha Savitha
  First published: