Doresani: ಆನಂದ್‍ಗೆ ಸಿಕ್ಕಿದೆ ಅಮ್ಮನ ಸುಳಿವು, ಒಂದು ಗಂಟೆ ಮಹಾಸಂಚಿಕೆಯಲ್ಲಿ ಒಂದಾಗ್ತಾರಾ ತಾಯಿ-ಮಗ?

ಆನಂದ್ ಈ ಕಥೆಯ ಹೀರೋ, ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ಅಮ್ಮ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತಾಳೆ ಎಂಬ ನಂಬಿಕೆಯಿಂದ ಬದುಕುತ್ತಿರುವ ಹುಡುಗು. ಈಗ ಆನಂದ್‍ಗೆ ಅಮ್ಮನ ಸುಳಿವು ಸಿಕ್ಕಿದೆಯಂತೆ. ತನ್ನ ಅಮ್ಮ ಕೂಡ ದೇವಸ್ಥಾನಕ್ಕೆ ಬರುತ್ತಾಳೆ ಅನ್ನೋ ಸುದ್ದಿ ಗೊತ್ತಾಗಿ, ತನ್ನ ಗೆಳತಿ ದೀಪಿಕಾಳನ್ನು ಕರೆದುಕೊಂಡು ಖುಷಿಯಿಂದ ಹೊರಟಿದ್ದಾನೆ.

ಆನಂದ್‍-ಸತ್ಯವತಿ

ಆನಂದ್‍-ಸತ್ಯವತಿ

  • Share this:
    ದೊರೆಸಾನಿ (Doresani) ಕಲರ್ಸ್ ಕನ್ನಡದಲ್ಲಿ (Colors Kannada) ಮೂಡಿಬರುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾಗೋ ಸೀರಿಯಲ್, ಏನೇನು ತಿರುವುಗಳನ್ನು ಪಡೆದುಕೊಂಡು ನಟ. ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ ಈ ಕಥೆಯ ಹೀರೋ, ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ಅಮ್ಮ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತಾಳೆ ಎಂಬ ನಂಬಿಕೆಯಿಂದ ಬದುಕುತ್ತಿರುವ ಹುಡುಗು. ದೀಪಿಕಾ ಈ ಕಥೆಯ ನಾಯಕಿ. ಬಡವರ ಮನೆ ಹುಡುಗಿ. ಆನಂದ್ (Anand), ದೀಪಿಕಾ, ಆನಂದ್ ಪರಿಚಯವಾಗಿ ಸ್ನೇಹಿರಾಗಿರುತ್ತಾರೆ. ಆ ಮೇಲೆ ಲವ್ (Love) ಮಾಡಲು ಶುರು ಮಾಡುತ್ತಾರೆ. ಆದ್ರೆ ದೀಪಿಕಾ ತಂದೆಗೆ ಇದು ಇಷ್ಟ ಆಗಲ್ಲ. ಆದ ಕಾರಣ ದೀಪಿಕಾ, ಆನಂದ್‍ಗೆ ತನ್ನನ್ನು ಮರೆಯುವಂತೆ ಹೇಳಿ, ಬೆಸ್ಟ್ ಫ್ರೆಂಡ್ಸ್ ಆಗಿರೋಣ ಅಂತ ಹೇಳ್ತಾಳೆ.

    ಅನಾಥನಾಗಿರುವ ಆನಂದ್‍ಗೆ ಅಮ್ಮನ ಪ್ರೀತಿ ಸಿಗುತ್ತಾ?
    ಆನಂದ್ ಹುಟ್ಟಿದಾಗಲೇ ಆಕೆಯ ತಾಯಿ ಬಿಟ್ಟು ಹೋಗಿರುತ್ತಾಳೆ. ಚಿಕ್ಕಂದಿನಿಂದಲೇ ಆನಂದ್‍ಗೆ ಅಪ್ಪ-ಅಮ್ಮನ ಪ್ರೀತಿ ದೊರೆಕಿಲ್ಲ. ಅನಾಧನಗಿಯೇ ಬೆಳೆದಿದ್ದಾನೆ. ತನ್ನ ಅಮ್ಮ ಸಿಗಬೇಕು. ಅವರ ಜೊತೆ ನಾ ಬದುಕ ಬೇಕು. ನನ್ನ ಅನಾಥ ಜೀವನ ಕೊನೆಯಾಗಬೇಕು ಎಂದು ಕಾಯುತ್ತಿದ್ದಾನೆ. ಆದ್ರೆ ಅವನಿಗೆ ಅಮ್ಮ ಸಿಕ್ಕಿಲ್ಲ. ಇವತ್ತಾದ್ರೂ ಸಿಗ್ತಾಳಾ ನೋಡಬೇಕು.

    ಮಗನಿಗಾಗಿ ಅಂಬಲಿಸುತ್ತಿರುವ ಸತ್ಯವತಿ
    ಸತ್ಯವತಿ ಈ ಧಾರಾವಾಹಿಯಲ್ಲಿ ಆನಂದ್ ಅಮ್ಮ. ಈಕೆಗೆ ಆನಂದ್ ಮದುವೆಗೂ ಮುಂಚೆ ಹುಟ್ಟಿರುತ್ತಾನೆ. ಅದಕ್ಕೆ ಸಮಾಜದಿಂದ ಆಗುವ ಅವಮಾನ ತಪ್ಪಿಸಿಕೊಳ್ಳಲು. ಮಗನನ್ನು ಒಂದು ದೇವಸ್ಥಾನದ ಬಳಿ ಬಿಟ್ಟು ಹೋಗಿರುತ್ತಾಳೆ. ನಂತರ ಎಲ್ಲವನ್ನೂ ಮರೆತು ಬೇರೆ ಮದುವಾಯಾಗುತ್ತಾಳೆ. ಸತ್ಯವತಿಗೆ ಒಬ್ಬಳು ಹೆಣ್ಣುಮಗಳು, ಒಬ್ಬ ಮಗ ಇದ್ದಾನೆ. ಆದ್ರೂ ಸತ್ಯವತಿಗೆ ಪ್ರತಿ ದಿನ ತಾನು ಬಿಟ್ಟು ಬಂದ ಮಗನ ನೆನಪೇ ಕಾಡುತ್ತಿದೆ. ಯಾವಾಗ ಆ ಮಗನನ್ನು ನೋಡುತ್ತೀನೋ ಎಂದು ಕಾಯುತ್ತಿದ್ದಾಳೆ.

    ಇದನ್ನೂ ಓದಿ: Paaru Serial: ರಿಯಲ್ ಲೈಫ್ ನಲ್ಲೂ ಸೂಪರ್ ಸಿಸ್ಟರ್, ವಿಶೇಷಚೇತನ ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಿರುವ ಪಾರು

    ಮಗನನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಬರೋ ಸತ್ಯವತಿ
    ಸತ್ಯವತಿ, ತಾನು ತನ್ನ ಮಗನನ್ನು ಬಿಟ್ಟು ಬಂದ ಸ್ಥಳದಲ್ಲೇ, ಅಂದ್ರೆ ಪ್ರತಿ ತಿಂಗಳು ದೇವಸ್ಥಾನಕ್ಕೆ ಹೋಗಿ ಮಗನನ್ನು ಹುಡುಕುತ್ತಾಳೆ. ತನ್ನ ಮಗ ಬರುತ್ತಾನೆ ಎಂದು ಕಾಯುತ್ತಾಳೆ. ಕಾದು ಕಾದು ತನ್ನ ಮಗ ಬರಲ್ಲ ಎಂದು ಬೇಸರದಿಂದ ಹೋಗುತ್ತಾಳೆ. ಆನಂದ್ ಸಹ ಅಷ್ಟೇ ತನ್ನ ಅಮ್ಮ ಅಲ್ಲಿ ಸಿಗಬಹುದು ಎಂದು ಬರುತ್ತಾನೆ. ಆದ್ರೆ ಅಮ್ಮ ಸಿಗಲ್ಲ. ನಿರಾಸೆಯಿಂದ ವಾಪಸ್ ಹೋಗುತ್ತಾನೆ.

    Colors Kannada serial, Kannada serial, Doresani Serial, Doresani serial today episode, Mother son sentiment , ದೊರೆಸಾನಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ದೊರೆಸಾನಿ ಧಾರಾವಾಹಿ


    ಕಥೆಯಲ್ಲಿ ನೆಗೆಟಿವ್ ಶೇಡ್ ಪಾತ್ರ ಸತ್ಯವತಿಯದ್ದು!
    ಸತ್ಯವತಿ ದೊರೆಸಾನಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ. ಈಕೆ ನಟಿ ದೀಪಿಕಾ ಅವರ ತಂದೆಯ ತಂಗಿ. ಅಂದ್ರೆ ದೀಪಿಕಾಗೆ ಅತ್ತೆ. ಈಕೆಯ ಮಗಳು ದೀಪಿಕಾ ಅತ್ತಿಗೆ. ಮಗಳನ್ನು ಕೊಟ್ಟಿರುವ ಸತ್ಯವತಿ, ಅಣ್ಣನ ಸಂಸಾರದಲ್ಲಿ ಆಟ ಆಡುತ್ತಿದ್ದಾಳೆ. ಮಗಳಿಗೆ ಇಲ್ಲ ಸಲ್ಲದ್ದನ್ನು ಹೇಳಿ, ಗಂಡನ ಮನೆಯಲ್ಲಿ ಗಲಾಟೆ ಮಾಡುವಂತೆ ಹೇಳುತ್ತಾಳೆ. ಅದಕ್ಕೆ ಆಕೆಯ ಮಗಳು ಮನೆಯಲ್ಲಿ ಏನೇನೂ ಕಿತಾಪತಿ ಮಾಡುತ್ತಾಳೆ.

    ಆನಂದ್ ಗೆ ಸಿಕ್ಕಿದೆಯಂತೆ ಅಮ್ಮನ ಸುಳಿವು
    ಆನಂದ್‍ಗೆ ಹಣ, ಅಧಿಕಾರ ಯಾವುದರಲ್ಲೂ ಕೊರತೆ ಇಲ್ಲ. ಎಲ್ಲವೂ ಹೆಚ್ಚಾಗಿಯೇ ಇದೆ. ಆದ್ರೆ ಅವನಿಗೆ ಅಮ್ಮನ ಪ್ರೀತಿ ಮಾತ್ರ ಸಿಗುತ್ತಿಲ್ಲ ಎಂಬ ಕೊರಗು ಇದೆ. ಕುಟುಂಬದ ಜೊತೆ ಬೆಳೆಯದ ಆನಂದ್‍ಗೆ ಪದೇ ಪದೇ ಅಮ್ಮ ನೆನಪಾಗುತ್ತಾಳೆ. ಈಗ ಆನಂದ್‍ಗೆ ಅಮ್ಮನ ಸುಳಿವು ಸಿಕ್ಕಿದೆಯಂತೆ. ತನ್ನ ಅಮ್ಮನು ಕೂಡ ದೇವಸ್ಥಾನಕ್ಕೆ ಬರುತ್ತಾಳೆ ಅನ್ನೋ ಸುದ್ದಿ ಗೊತ್ತಾಗಿ, ತನ್ನ ಗೆಳತಿ ದೀಪಿಕಾಳನ್ನು ಕರೆದುಕೊಂಡು ಖುಷಿಯಿಂದ ಹೊರಟಿದ್ದಾನೆ.

    ಇದನ್ನೂ ಓದಿ: Har Ghar Tiranga: ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಲರ್ಸ್ ಕನ್ನಡ ಸಾಥ್, ಧಾರಾವಾಹಿಗಳಲ್ಲಿ ರಾಷ್ಟ್ರಭಕ್ತಿ ಸಂದೇಶ

    ಇವತ್ತು ಸಂಜೆ 5 ರಿಂದ 6 ಗಂಟೆವರೆಗೆ ದೊರೆಸಾನಿ ಮಹಾಸಂಚಿಕೆ ಇದೆ. ಇವತ್ತಾದ್ರೂ ದೇವರ ಮುಂದೆ ತಾಯಿ-ಮಗ ಒಂದಾಗ್ತಾರಾ ಕಾದು ನೋಡಬೇಕಿದೆ. ಅದನ್ನು ನೋಡಲು ಸಂಚಿಕೆ ನೋಡಬೇಕು.
    Published by:Savitha Savitha
    First published: