Doresani: ನನ್ನ ಮದುವೆಗೆ ಬರ್ಬೇಡಿ, ಎಂದ ದೀಪಿಕಾ! ಛೇ! ಆನಂದ್​ಗೆ ಆಘಾತವೋ ಆಘಾತ

ನನ್ನ ಮೇಲೆ ಕಾಳಜಿ ಇರೋದೇ ಆದ್ರೆ, ನನ್ನ ಮೇಲಿನ ಅಕ್ಕರೆ ನಿಜನೇ ಆದ್ರೆ ನನ್ನ ಮದುವೆಗೆ ಬರಬೇಡಿ ಎಂದು ದೀಪಿಕಾ ಹೇಳುತ್ತಾಳೆ. ಅದಕ್ಕೆ ಆನಂದ್ ನೀನು ನನ್ನ ಗೆಳತಿ ನಿನ್ನ ಮದುವೆಗೆ ಬರೋದು ನನ್ನ ಹಕ್ಕು. ಬಂದೇ ಬರುತ್ತೇನೆ ಎನ್ನುತ್ತಾನೆ. ಅದಕ್ಕೆ ದೀಪಿಕಾ ಹಕ್ಕಿಗಿಂತ ಸಂಬಂಧ, ಸಂತೋಷ, ನೆಮ್ಮದಿ ಮುಖ್ಯ. ದಯವಿಟ್ಟು ಮದುವೆಗೆ ಬರಬೇಡಿ ಎನ್ನುತ್ತಾಳೆ.

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
    ದೊರೆಸಾನಿ (Doresani) ಕಲರ್ಸ್ ಕನ್ನಡದಲ್ಲಿ  (Colors Kannada) ಮೂಡಿಬರುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾಗೋ ಸೀರಿಯಲ್, ಏನೇನು ತಿರುವುಗಳನ್ನು ಪಡೆದುಕೊಂಡು ನಟ. ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ ಈ ಕಥೆಯ ಹೀರೋ (Hero), ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ದೀಪಿಕಾ ಈ ಕಥೆಯ ನಾಯಕಿ. ಬಡವರ ಮನೆ ಹುಡುಗಿ. ಆನಂದ್, ದೀಪಿಕಾ, ಆನಂದ್ ಪರಿಚಯವಾಗಿ ಸ್ನೇಹಿರಾಗಿರುತ್ತಾರೆ. ಆ ಮೇಲೆ ಲವ್ ಮಾಡಲು ಶುರು ಮಾಡುತ್ತಾರೆ. ಆದ್ರೆ ದೀಪಿಕಾ ತಂದೆಗೆ ಇದು ಇಷ್ಟ ಆಗಲ್ಲ. ಆದ ಕಾರಣ ದೀಪಿಕಾ, ಆನಂದ್‍ಗೆ ತನ್ನನ್ನು ಮರೆಯುವಂತೆ ಹೇಳಿ, ಬೆಸ್ಟ್ ಫ್ರೆಂಡ್ಸ್ (Best Friends) ಆಗಿರೋಣ ಅಂತ ಹೇಳ್ತಾಳೆ.

    ತನ್ನ ಮದುವೆಗೆ ಬರಬೇಡಿ ಎಂದು ಬೆಸ್ಟ್ ಫ್ರೆಂಡ್ ಗೆ ಹೇಳಿದ ದೀಪಿಕಾ
    ದೀಪಿಕಾ ಬೇಡ ಎಂದ ಮೇಲೆ ಆನಂದ್, ಆಕೆಗೆ ಒಳ್ಳೆಯ ಹುಡುಗನನ್ನೇ ಮದುವೆ ಮಾಡಬೇಕು ಎಂದು, ತನ್ನ ಆತ್ಮೀಯ ಸ್ನೇಹಿತ ಚಿನ್ಮಯ್‍ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ದೀಪಿಕಾ ಮನೆಯವರು ಸಹ ಒಪ್ಪಿದ್ದಾರೆ. ಮನೆಯವರಿಗಾಗಿ ದೀಪಿಕಾ ಸಹ ಒಪ್ಪಿದ್ದಾಳೆ. ನಿಶ್ಚಿತಾರ್ಥ ಕೂಡ ಆಗಿದೆ. ಇಷ್ಟರಲ್ಲಿ ಇಬ್ಬರ ಮದುವೆ ಇದ್ದು, ಲಗ್ನ ಪತ್ರಿಕೆ ಸಹ ಮಾಡಿಸಿದ್ದಾರೆ. ಆದ್ರೆ ದಿಡೀರನೇ ಆನಂದ್ ಮನೆಗೆ ಬಂದ ದೀಪಿಕಾ ತನ್ನ ಮದುವೆಗೆ ಬರಬೇಡಿ ಎಂದು ಹೇಳಿದ್ದಾಳೆ.

    ಆನಂದ್ ಮನಸ್ಸಿಗೆ ಆಘಾತ
    ಮದುವೆ ಗೊತ್ತಾದ ಮೇಲೆ ಚಿನ್ಮಯ್ ಆನಂದ್ ಜೊತೆ ಮಾತನಾಡಬೇಡಿ ಎಂದು ಹೇಳಿರುತ್ತಾನೆ. ಅದಕ್ಕೆ ದೀಪಿಕಾ ಸಹ ಆನಂದ್‍ನನ್ನು ಅವೈಡ್ ಮಾಡುತ್ತಾ ಇರುತ್ತಾಳೆ. ದೀಪಿಕಾ ಮಾತು ಬಿಟ್ಟಿದ್ದರಿಂದ ಆನಂದ್ ಈಗಾಗಲೇ ಬೇಸರದಲ್ಲಿದ್ದಾನೆ. ದೀಪಿಕಾ ಆನಂದ್ ಮನೆಗೆ ಬಂದಿದ್ದಾಳೆ. ಖುಷಿಯಿಂದ ಆನಂದ್ ಲಗ್ನ ಪತ್ರಿಕೆ ಕೊಡಲು ಬಂದ್ಯಾ, ನೀನು ಕರೆಯುದೇ ಬೇಡ. ನಾಳೆಯಿಂದ ನಿಮ್ಮ ಮನೆಯಲ್ಲೇ ಸೆಟಲ್ ಆಗಿ ಬಿಡುತ್ತೇನೆ ಎನ್ನುತ್ತಾನೆ.

    ಇದನ್ನೂ ಓದಿ: Kannadathi: ಪೂಜೆ ತಯಾರಿ ಮಾಡ್ತಿರೋ ಭುವಿ ಮೇಲೆ ಸುದರ್ಶನ್ ಹಲ್ಲೆ, ಶುಭದಿನದಲ್ಲಿ ಇದೆಂಥಾ ಅನಾಹುತ! 

    ಮದುವೆ ಮನೆಯಲ್ಲಿ ನಂದೇ ಓಡಾಟ. ನನ್ನ ಗೆಳತಿ ಮದುವೆಯಲ್ಲಿ ನಂದೇ ಓಡಾಟ ಎನ್ನುತ್ತಾನೆ. ಅದಕ್ಕೆ ದೀಪಿಕಾ ನನ್ನ ಮದುವೆಗೆ ಬರಬೇಡಿ ಎನ್ನುತ್ತಾಳೆ. ಅದರಿಂದ ಆನಂದ್ ಮನಸ್ಸಿಗೆ ಆಘಾತವಾಗುತ್ತದೆ.

    ಮದುವೆಗೆ ಬಂದೇ ಬರುತ್ತೇನೆ ಎನ್ನುತ್ತಿರುವ ಆನಂದ್
    ನನ್ನ ಮೇಲೆ ಕಾಳಜಿ ಇರೋದೇ ಆದ್ರೆ, ನನ್ನ ಮೇಲಿನ ಅಕ್ಕರೆ ನಿಜನೇ ಆದ್ರೆ ನನ್ನ ಮದುವೆಗೆ ಬರಬೇಡಿ ಎಂದು ದೀಪಿಕಾ ಹೇಳುತ್ತಾಳೆ. ಅದಕ್ಕೆ ಆನಂದ್ ನೀನು ನನ್ನ ಗೆಳತಿ ನಿನ್ನ ಮದುವೆಗೆ ಬರೋದು ನನ್ನ ಹಕ್ಕು. ಬಂದೇ ಬರುತ್ತೇನೆ ಎನ್ನುತ್ತಾನೆ. ಅದಕ್ಕೆ ದೀಪಿಕಾ ಹಕ್ಕಿಗಿಂತ ಸಂಬಂಧ, ಸಂತೋಷ, ನೆಮ್ಮದಿ ಮುಖ್ಯ. ದಯವಿಟ್ಟು ಮದುವೆಗೆ ಬರಬೇಡಿ ಎನ್ನುತ್ತಾಳೆ.

    ನಮ್ಮ ಮದುವೆ ದಿನವೇ ನೀವು ಮದುವೆ ಆಗಿ ಎಂದು ದೀಪಿಕಾ
    ನಮ್ಮ ಸ್ನೇಹ ಉಳಿಯಬೇಕು ಅಂದ್ರೆ ನೀವು ಒಂದು ಮಾತು ಕೊಡಬೇಕು ಎಂದು ಕೇಳುತ್ತಾಳೆ. ಏನೂ ಎಂದು ಆನಂದ್ ಕೇಳಿದಾಗ. ನನ್ನ ಮದುವೆ ದಿನವೇ ನೀವು ಡಿಪಿಯನ್ನು ಮದುವೆಯಾಗಬೇಕು. ನನ್ನ, ಚಿನ್ಮಯ್ ಮದುವೆ ದಿನ, ನಿಮ್ಮಿಬ್ಬರ ಮದುವೆ ನಡೆಯಬೇಕು ಎಂಧು ಹೇಳುತ್ತಾಳೆ. ಆನಂದ್ ಈ ಮಾತಿಗೂ ಶಾಕ್ ಆಗುತ್ತಾನೆ.

    ಇದನ್ನೂ ಓದಿ: Paaru: ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದ ವೀರಣ್ಣ; ಅರಸನಕೋಟೆಯಲ್ಲಿ ಸಂಭ್ರಮವೋ, ಸಂಭ್ರಮ 

    ತನ್ನ ಗೆಳತಿ ದೀಪಿಕಾ ಹೇಳಿದಂತೆ, ಅವರ ಮದುವೆ ದಿನವೇ, ಆನಂದ್ ಸಹ ಮದುವೆ ಆಗ್ತಾರಾ? ದೀಪಿಕಾ ಮದುವೆ ನೋಡೋ ಭಾಗ್ಯ ಆನಂದ್‍ಗೆ ಇಲ್ವಾ? ಏನಾಗುತ್ತೆ ಅನ್ನೋದನ್ನ ನೋಡೋದಕ್ಕೆ ಸಂಚಿಕೆಗಳನ್ನು ನೋಡಬೇಕು.
    Published by:Savitha Savitha
    First published: