ದೊರೆಸಾನಿ (Doresani), ಕಲರ್ಸ್ ಕನ್ನಡದಲ್ಲಿ (Colors Kannada) ಮೂಡಿ ಬರುತ್ತಿರುವ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾದೋ ಸೀರಿಯಲ್ (Serial), ಏನೇನು ತಿರುವುಗಳನ್ನು ಪಡೆದುಕೊಂಡು ನಟ. ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ ಈ ಕಥೆಯ ಹೀರೋ, ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ದೀಪಿಕಾ (Deepika) ಈ ಕಥೆಯ ನಾಯಕಿ. ಬಡವರ ಮನೆ ಹುಡುಗಿ. ಆನಂದ್ (Anand), ದೀಪಿಕಾ, ಆನಂದ್ ಪರಿಚಯವಾಗಿ ಸ್ನೇಹಿರಾಗಿರುತ್ತಾರೆ. ಆ ಮೇಲೆ ಲವ್ ಮಾಡಲು ಶುರು ಮಾಡುತ್ತಾರೆ. ಆದ್ರೆ ದೀಪಿಕಾ ತಂದೆಗೆ ಇದು ಇಷ್ಟ ಆಗಲ್ಲ. ಆದ ಕಾರಣ ದೀಪಿಕಾ, ಆನಂದ್‍ಗೆ ತನ್ನನ್ನು ಮರೆಯುವಂತೆ ಹೇಳಿ, ಬೆಸ್ಟ್ ಫ್ರೆಂಡ್ಸ್ ಆಗಿರೋಣ ಅಂತ ಹೇಳ್ತಾಳೆ. ಆದ್ರೆ ನಾಳೆಯಿಂದ ಧಾರಾವಾಹಿ ಇರಲ್ಲ ಅನ್ನಿಸುತ್ತೆ.
ಎರಡು ಗಂಟೆ ಮಹಾಸಂಚಿಕೆ, ಎರಡು ಮದುವೆ
ದೊರೆಸಾನಿ ಧಾರಾವಾಹಿಯು ಅಂತಿಮ ಘಟ್ಟ ತಲುಪಿದೆಯಾ? ನಾಳೆಯಿಂದ ಪ್ರಸಾರ ಆಗಲ್ವಾ? ಇದು ಕೋಟ್ಯಂತರ ಕನ್ನಡಿಗರ ಪ್ರಶ್ನೆ. ಯಾಕಂದ್ರೆ ನಾಳೆ ಸಂಜೆ 6.30ರಿಂದ ಕೆಂಡಸಂಪಿಗೆ ಅನ್ನೋ ಧಾರಾವಾಹಿ ಪ್ರಸಾರವಾಗಲಿದೆ. ಸದ್ಯ ಇವತ್ತು 2 ಗಂಟೆಯ ಮಹಾಸಂಚಿಕೆ ಇದೆ. 2 ಗಂಟೆಯಲ್ಲಿ ಎರೆಡೆರಡು ಜೋಡಿಯ ಮದುವೆ ನಡೆಯಲಿದೆ. ಒಂದು ದೀಪಿಕಾ ಮತ್ತು ಚಿನ್ಮಯ್. ಇನ್ನೊಂದು ಆನಂದ್ ಮತ್ತು ಡಿ.ಪಿ ಮದುವೆ. ಒಂದೇ ಸ್ಥಳದಲ್ಲಿ ಇಬ್ಬರೂ ಮದುವೆ ಮಾಡಿಕೊಳ್ಳಲು ನಿಶ್ಚಿಯಿಸಿದ್ದಾರೆ.
ದೀಪಿಕಾಳನ್ನು ಆನಂದ್ ಮದುವೆ ಆಗೋದೇ ಸರಿ ಎಂದ ಚಿನ್ಮಯ್
ಆನಂದ್ ಸ್ನೇಹಿತನೇ ಚಿನ್ಮಯ್. ದೀಪಿಕಾ ಆನಂದ್‍ನ ಪ್ರೀತಿ ನಿರಾಕರಿಸಿದ ಮೇಲೆ, ಆನಂದ್ ತನ್ನ ಗೆಳೆಯ ಚಿನ್ಮಯ್‍ನನ್ನು ದೀಪಿಕಾಳಿಗೆ ಮದುವೆ ಮಾಡಿಕೊಳ್ಳುವಂತೆ ಹೇಳಿರುತ್ತಾನೆ. ಅಂತೆಯೇ ದೀಪಿಕಾ ಸಹ ಒಪ್ಪಿರುತ್ತಾಳೆ. ಅಲ್ಲದೇ ದೀಪಿಕಾ ತನ್ನ ಮದುವೆಯ ದಿನದಂದೇ, ಆನಂದ್, ಡಿಪಿಯನ್ನು ಮದುವೆ ಆಗುವಂತೆ ಹೇಳಿರುತ್ತಾಳೆ. ಅದಕ್ಕೆ ಆನಂದ್ ಸಹ ಒಪ್ಪಿರುತ್ತಾನೆ. ಮದುವೆ ದಿನ, ಚಿನ್ಮಯ್ ಬದಲಾಗಿದ್ದಾನೆ. ದೀಪಿಕಾ-ಆನಂದ್ ಮದುವೆ ಸಿರಿ ಎಂದು ಹೇಳುತ್ತಿದ್ದಾನೆ.
ಇದನ್ನೂ ಓದಿ: Drama Juniors: ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರ್ಯಾಂಡ್ ಫಿನಾಲೆ! ಈ ಬಾರಿಯ ವಿನ್ನರ್ ಯಾರು?
ದೀಪಿಕಾಳನ್ನು ಮದುವೆ ಆಗಲು ಆನಂದ್‍ಗೆ ಮಾತ್ರ ಅರ್ಹತೆ ಇರೋದು. ಅವನು ಮಾತ್ರನೇ ಆ ಭಾಗ್ಯ ಪಡೆದುಕೊಂಡು ಬಂದಿರೋದು. ದೀಪಿಕಾ ಸೇರಬೇಕಿರೋದು ಆನಂದ್‍ಗೆ. ದೀಪಿಕಾ ತಾಯಿ ಗಾಬರಿಯಾಗುತ್ತಾರೆ. ಈ ಮಂಟಪ, ಈ ಅಲಂಕಾರ ನಾನು, ದೀಪಿಕಾ ಮದುವೆ ಆಗ್ತೀವಿ ಅಂತಾನೆ ರೆಡಿಯಾಗಿದ್ದು, ಆದ್ರೆ ವಿಧಿ ಬೇರೆದನ್ನೇ ಬರೆದಿದೆ. ಹೈಡ್ರಾಮಾ ಎಲ್ಲ ನಡೆದಿದ್ದು, ಉದ್ದೇಶ ಈಡೇರಲೆಂದೇ ಇರಬಹುದು ಎಂದು ಚಿನ್ಮಯ್ ಹೇಳುತ್ತಾನೆ.
ದೀಪಿಕಾ ತಂದೆಗೆ ಬುದ್ಧಿ ಹೇಳಿದ ಚಿನ್ಮಯ್
ನಿಮ್ಮ ಮಗಳನ್ನು ಜಡ್ಜ್ ಮಾಡಬೇಡಿ ಅಂಕಲ್. ನಿಮಗೆ ಯಾವತ್ತೂ ಮೋಸ ಮಾಡಬೇಕು ಅಂದುಕೊಂಡಿಲ್ಲ ಅವಳು ಎಂದು ಚಿನ್ಮಯ್ ದೀಪಿಕಾ ಅಪ್ಪನಿಗೆ ಹೇಳುತ್ತಾನೆ. ದೀಪಿಕಾ ಬಂಗಾರ, ನಿಮಗಾಗಿ ತಮ್ಮ ಪ್ರೀತಿ ತ್ಯಾಗ ಮಾಡಲು ಹೊರಟಿದ್ದಾರೆ. ಈ ರೀತಿ ಮಗಳನ್ನು ಪಡೆಯಲು ನೀವು ಪುಣ್ಯ ಮಾಡಿದ್ರಿ. ಅವರ ಪ್ರೀತಿಗಿಂತ ನಿಮ್ಮ ಮರ್ಯಾದೆ ಹೆಚ್ಚಾಯ್ತಾ. ದಯವಿಟ್ಟು ದೀಪಿಕಾ-ಆನಂದ್ ಮದುವೆ ಮಾಡಿಸಿ ಎಂದು ಕೇಳಿಕೊಳ್ಳತ್ತಾನೆ.
ಮಹಾಸಂಚಿಕೆಯಲ್ಲಿ ಆನಂದ್‍ಗೆ ಅಮ್ಮ ಸಿಗ್ತಾಳಾ?
ಇನ್ನು ಆನಂದ್ ತಾಯಿ ಸತ್ಯವತಿ. ಅಂದ್ರೆ ದೀಪಿಕಾಳ ಅತ್ತೆ. ಅವಳು ಸಹ ಮದುವೆಗೆ ಬಂದಿದ್ದಾಳೆ. ಅವಳಿಗೂ ಆನಂದ್ ತನ್ನ ಮಗ ಎಂದು ಗೊತ್ತು. ಆದ್ರೂ ಅವನ ಬಳಿ ಹೇಳುತ್ತಿಲ್ಲ. ದೀಪಿಕಾಗೂ ಸಹ ಆನಂದ್ ತಾಯಿ ಸತ್ಯವತಿ ಎಂದು ಗೊತ್ತಾಗಿದೆ. ಈಗ ದೀಪಿಕಾ ಆನಂದ್‍ಗೆ ಅವನ ತಾಯಿ ಸತ್ಯವತಿ ಎಂದು ಸತ್ಯ ಹೇಳುತ್ತಾಳಾ ನೋಡಬೇಕು. ಆನಂದ್‍ಗೆ ಅವನ ಅಮ್ಮ ಸಿಗ್ತಾಳಾ ಗೊತ್ತಿಲ್ಲ. ಎಲ್ಲವನ್ನೂ ನೋಡಲು ಇವತ್ತಿನ ಮಹಾಸಂಚಿಕೆ ನೋಡಿ.
ಇದನ್ನೂ ಓದಿ: Serial Actress Nupur Alankar: ಸನ್ಯಾಸತ್ವ ಸ್ವೀಕರಿಸಿ ಹಿಮಾಲಯಕ್ಕೆ ಹೊರಟ ಟಾಪ್ ಕಿರುತೆರೆ ನಟಿ!
ಆದ್ರೂ ದೊರೆಸಾನಿ ಧಾರಾವಾಹಿ ಇವತ್ತೇ ಕೊನೆಯ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ವಾಹಿನಿ ಇನ್ನೂ ಯಾವ ಸ್ಪಷ್ಟತೆಯನ್ನೂ ನೀಡಿಲ್ಲ. ಇವತ್ತಿನ ಸಂಚಿಕೆ ಜೊತೆ ಧಾರಾವಾಹಿಯೂ ಕೊನೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ