ದೊರೆಸಾನಿ (Doresani), ಕಲರ್ಸ್ ಕನ್ನಡದಲ್ಲಿ (Colors Kannada) ಮೂಡಿ ಬರುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾಗೋ ಸೀರಿಯಲ್, ಏನೇನು ತಿರುವುಗಳನ್ನು ಪಡೆದುಕೊಂಡು ನಟ, ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ (Anand) ಈ ಕಥೆಯ ಹೀರೋ, ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ಅಮ್ಮ ಸಿಗುತ್ತಾಳೆ ಎಂದು ಕಾಯುತ್ತಿದ್ದಾನೆ. ಪ್ರತಿ ವರ್ಷ ಅವರು ಬರುವ ದೇವಸ್ಥಾನಕ್ಕೆ (Temple) ಬಂದು ಅಮ್ಮನಿಗಾಗಿ ಕಾಯುತ್ತಿದ್ದಾನೆ. ಈ ಧಾರಾವಾಹಿಯಲ್ಲಿರುವ ನಟಿ ದೀಪಿಕಾ ಅತ್ತೆ ಸತ್ಯವತಿಯೇ ಆನಂದ್ ಅಮ್ಮ. ಸತ್ಯವತಿ ಸಹ ಮಗನಿಗಾಗಿ ಪರಿತಪಿಸುತ್ತಿದ್ದಾಳೆ. ಅವಳನ್ನು ನೋಡಬೇಕು ಎಂದು ಕಾಯುತ್ತಿದ್ದಾಳೆ. ಸತ್ಯವತಿಗೆ ಆನಂದ್ ತನ್ನ ಮಗ (Son) ಎಂದು ಗೊತ್ತಾಗಿದೆ.
ಸತ್ಯವತಿಗೆ ಗೊತ್ತಾಗಿದೆ ಸತ್ಯ
ಸತ್ಯವತಿ ಈ ಧಾರಾವಾಹಿಯಲ್ಲಿ ಆನಂದ್ ಅಮ್ಮ. ಈಕೆಗೆ ಆನಂದ್ ಮದುವೆಗೂ ಮುಂಚೆ ಹುಟ್ಟಿರುತ್ತಾನೆ. ಅದಕ್ಕೆ ಸಮಾಜದಿಂದ ಆಗುವ ಅವಮಾನ ತಪ್ಪಿಸಿಕೊಳ್ಳಲು. ಮಗನನ್ನು ಒಂದು ದೇವಸ್ಥಾನದ ಬಳಿ ಬಿಟ್ಟು ಹೋಗಿರುತ್ತಾಳೆ. ನಂತರ ಎಲ್ಲವನ್ನೂ ಮರೆತು ಬೇರೆ ಮದುವಾಯಾಗುತ್ತಾಳೆ. ಸತ್ಯವತಿಗೆ ಒಬ್ಬಳು ಹೆಣ್ಣು ಮಗಳು, ಒಬ್ಬ ಮಗ ಇದ್ದಾನೆ. ಆದ್ರೂ ಸತ್ಯವತಿಗೆ ಪ್ರತಿ ದಿನ ತಾನು ಬಿಟ್ಟು ಬಂದ ಮಗನ ನೆನಪೇ ಕಾಡುತ್ತಿದೆ. ಯಾವಾಗ ಆ ಮಗನನ್ನು ನೋಡುತ್ತೀನೋ ಎಂದು ಕಾಯುತ್ತಿದ್ದಳು. ಈಗ ಸತ್ಯವತಿಗೆ ಆನಂದ್ ತನ್ನ ಮಗ ಎಂದು ಗೊತ್ತಾಗಿದೆ.
ಅಮ್ಮನಿಗಾಗಿ ದೇವಸ್ಥಾನದ ತುಂಬಾ ಹುಡುಕಾಟ
ಆನಂದ್ 27 ವರ್ಷದಿಂದ ಕಳೆದು ಹೋಗಿರುವ ಅಮ್ಮನನ್ನು ಹುಡುಕುತ್ತಿದ್ದಾನೆ. ಪ್ರತಿ ವರ್ಷ ಅಮ್ಮ ತನ್ನನ್ನು ಬಿಟ್ಟು ಹೋದ ದೇವಸ್ಥಾನಕ್ಕೆ ಬರುತ್ತಾನೆ. ಅಮ್ಮನು ಬಂದೇ ಬರುತ್ತಾಳೆ ಅಂತ ಕಾಯುತ್ತೇನೆ. ಈ ಬಾರಿಯೂ ಬಂದಿದ್ದಾನೆ. ಅಮ್ಮ ಸತ್ಯವತಿಯೂ ಬಂದಿದ್ದಾಳೆ. ಅಮ್ಮ ಇಲ್ಲೇ ಇದ್ದಾಳೆ ಎಂದು, ದೇವಸ್ಥಾನದಲ್ಲಿ ಸಿಕ್ಕ ಸಿಕ್ಕವರನ್ನು, ನೀವು ನಮ್ಮ ಅಮ್ಮನಾ ಎಂದು ಕೇಳುತ್ತಿದ್ದಾನೆ. ಒದ್ದಾಡುತ್ತಿದ್ದಾನೆ.
ಇದನ್ನೂ ಓದಿ: Olavina Nildana: ತಾರಿಣಿಗೆ ಇರೋ ಸಮಸ್ಯೆಯ ಹೆಸರೇ ಸಿದ್ಧಾಂತ್, ಮೊಮ್ಮಗಳ ಅಳು ಕಂಡು ತಾತಾ ಕಂಗಾಲು!
ಮಗ ಮುಂದೆ ಇದ್ರೂ ಮಾತನಾಡಿಸುತ್ತಿಲ್ಲ ಸತ್ಯವತಿ
ಸತ್ಯವತಿ ಸಹ ಮಗನನ್ನು 27 ವರ್ಷದಿಂದ ಹುಡುಕುತ್ತಿದ್ದಾಳೆ. ಈಗ ಆನಂದ್ ತನ್ನ ಮಗ ಎಂದು ಗೊತ್ತಾಗಿದೆ. ಆದ್ರೂ ಯಾಕೋ ಮಾತನಾಡಿಸುತ್ತಿಲ್ಲ. ಮಗ ಎಲ್ಲಿ ನೋಡಿ ಬಿಡುತ್ತಾನೋ ಅಂತ ಭಿಕ್ಷುಕರ ಬಳಿ ಹೋಗಿ, ಮುಖ ಮರೆಸಿಕೊಂಡಿದ್ದಾಳೆ. ಆನಂದ್ ಹುಡುಕುತ್ತಿದ್ದರು, ಅವನ ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ.
ಅನಾಥನಾಗಿರುವ ಆನಂದ್‍ಗೆ ಅಮ್ಮನ ಪ್ರೀತಿ ಸಿಗುತ್ತಾ?
ಆನಂದ್ ಹುಟ್ಟಿದಾಗಲೇ ಆಕೆಯ ತಾಯಿ ಬಿಟ್ಟು ಹೋಗಿರುತ್ತಾಳೆ. ಚಿಕ್ಕಂದಿನಿಂದಲೇ ಆನಂದ್‍ಗೆ ಅಪ್ಪ-ಅಮ್ಮನ ಪ್ರೀತಿ ದೊರೆಕಿಲ್ಲ. ಅನಾಥನಾಗಿಯೇ ಬೆಳೆದಿದ್ದಾನೆ. ತನ್ನ ಅಮ್ಮ ಸಿಗಬೇಕು. ಅವರ ಜೊತೆ ನಾ ಬದುಕ ಬೇಕು. ನನ್ನ ಅನಾಥ ಜೀವನ ಕೊನೆಯಾಗಬೇಕು ಎಂದು ಕಾಯುತ್ತಿದ್ದಾನೆ. ಆದ್ರೆ ಅವನಿಗೆ ಅಮ್ಮ ಸಿಕ್ಕಿಲ್ಲ.
ಇದನ್ನೂ ಓದಿ: Hitler Kalyana: ಎಜೆ ವಿರುದ್ಧ ಲೀಲಾಗೆ ಸಿಕ್ಕಿದೆ ಸಾಕ್ಷಿ, ಪವಿತ್ರಾ ಬರ್ತಡೇ ದಿನ ಬಿಗ್ ಟ್ವಿಸ್ಟ್!
ಕಥೆಯಲ್ಲಿ ನೆಗೆಟಿವ್ ಶೇಡ್ ಪಾತ್ರ ಸತ್ಯವತಿಯದ್ದು!
ಸತ್ಯವತಿ ದೊರೆಸಾನಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ. ಈಕೆ ನಟಿ ದೀಪಿಕಾ ಅವರ ತಂದೆಯ ತಂಗಿ. ಅಂದ್ರೆ ದೀಪಿಕಾಗೆ ಅತ್ತೆ. ಈಕೆಯ ಮಗಳು ದೀಪಿಕಾ ಅತ್ತಿಗೆ. ಮಗಳನ್ನು ಕೊಟ್ಟಿರುವ ಸತ್ಯವತಿ, ಅಣ್ಣನ ಸಂಸಾರದಲ್ಲಿ ಆಟ ಆಡುತ್ತಿದ್ದಾಳೆ. ಮಗಳಿಗೆ ಇಲ್ಲ ಸಲ್ಲದ್ದನ್ನು ಹೇಳಿ, ಗಂಡನ ಮನೆಯಲ್ಲಿ ಗಲಾಟೆ ಮಾಡುವಂತೆ ಹೇಳುತ್ತಾಳೆ. ಅದಕ್ಕೆ ಆಕೆಯ ಮಗಳು ಮನೆಯಲ್ಲಿ ಏನೇನೂ ಕಿತಾಪತಿ ಮಾಡುತ್ತಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ