Gichi GiliGili: ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು-ವನ್ಷಿಕಾ, ಮತ್ತೊಮ್ಮೆ ಮಾಸ್ಟರ್ ಆನಂದ್ ಮಗಳಿಗೆ ಗೆಲುವಿನ ಮಾಲೆ

ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ವಿನ್ನರ್ ಆಗಿ ಶಿವು ಮತ್ತು ವಂಶಿ ಹೊರ ಹೊಮ್ಮಿದ್ದಾರೆ. ಆಕ್ಟರ್ ವಿಭಾಗದಲ್ಲಿ ಶಿವು ಪ್ರಶಸ್ತಿಯನ್ನು ಗೆದ್ರೆ, ನಾನ್ ಆಕ್ಟರ್ ವಿಭಾಗದಲ್ಲಿ ವಂಶಿ ಪ್ರಶಸ್ತಿಯನ್ನು ಗೆದ್ದಿದ್ದಾಳೆ.

ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು ಮತ್ತು ವನ್ಷಿಕಾ

ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು ಮತ್ತು ವನ್ಷಿಕಾ

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ  (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಇನ್ನೇನು ಬಿಗ್‍ಬಾಸ್ (Bigg Boss) ಸೀಸನ್ 9 (Season 9) ಶುರುವಾಗಲಿದೆ. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವರ್ಷ ಗಿಚ್ಚಿ ಗಿಲಿಗಿಲಿ (Gichhi Giligili) ಅನ್ನೋ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದರು. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಮುಗಿದಿದ್ದು ವಿನ್ನರ್ (Winner) ಯಾರು ಅಂತ ತಿಳಿದಿದೆ.

  ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ

  ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು ಜಡ್ಜ್ ಗಳಾಗಿ ಶ್ರುತಿ, ಸಾಧು ಕೋಕಿಲ ಸರ್ ತೀರ್ಪು ನೀಡುತ್ತಿದ್ದಾರೆ. ನಿರೂಪಕನಾಗಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಡೆಸಿಕೊಡುತ್ತಿದ್ರು. ಎಲ್ಲಾ ಕಲಾವಿದರೂ ಅದ್ಭುತವಾಗಿ ನಟಿಸಿದ್ದರು.

  ಇಬ್ಬರಿಗೆ ರನ್ನರ್ ಅಪ್

  ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಎರಡು ರೀತಿ ಬಹುಮಾನ ನೀಡಲಾಗಿದೆ. ಅಂದ್ರೆ ಒಬ್ಬರು ಆಕ್ಟರ್, ನಾನ್ ಆಕ್ಟರ್ ವಿಭಾಗ ಮಾಡಿ ಪ್ರಸ್ತಿ ಘೋಷಿಸಲಾಗಿದೆ. ರನ್ನರ್ ಅಪ್ ಆಗಿ ಆಕ್ಟರ್ ವಿಭಾಗದಲ್ಲಿ ಗೊಬ್ಬರ ಗಾಲಾ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾನ್ ಆಕ್ಟರ್ ವಿಭಾಗದಲ್ಲಿ ನಿವೇದಿತಾ ಗೌಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

  Colors Kannada program, Gichhi Gili Gili Program winner, Colors Kannada Programs, Reality show, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ, ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು ಮತ್ತು ವನ್ಷಿಕಾ, ಕಲರ್ಸ್ ಕನ್ನಡ ಕಾರ್ಯಕ್ರಮಗಳು, Kannada news, Karnataka news,
  ರನ್ನರ್ ಅಪ್ ಗೊಬ್ಬರ ಗಾಲಾ


  ಶಿವು ಮತ್ತು ವನ್ಷಿಕಾ

  ಇನ್ನು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ವಿನ್ನರ್ ಆಗಿ ಶಿವು ಮತ್ತು ವಂಶಿ ಹೊರ ಹೊಮ್ಮಿದ್ದಾರೆ. ಆಕ್ಟರ್ ವಿಭಾಗದಲ್ಲಿ ಶಿವು ಪ್ರಶಸ್ತಿಯನ್ನು ಗೆದ್ರೆ, ನಾನ್ ಆಕ್ಟರ್ ವಿಭಾಗದಲ್ಲಿ ವಂಶಿ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಅಭಿಮಾನಿಗಳ ನಿರೀಕ್ಷೆಯಂತೆ ವಂಶಿಗೆ ಅದೃಷ್ಟ ಒಲಿದಿದೆ.

  ಇದನ್ನೂ ಓದಿ: Gichi GiliGili: ಗಿಚ್ಚಿ ಗಿಲಿಗಿಲಿ ಗ್ರಾಂಡ್ ಫಿನಾಲೆಗೆ ಬರ್ತಿದ್ದಾರೆ ಕನಸಿನ ರಾಣಿ! ಯಾರು ಗೆಲ್ತಾರೆ ನಗುವಿನ ಟ್ರೋಫಿ?

  ಕಾರ್ಯಕ್ರಮದಲ್ಲಿ ಮಿಂಚಿದ್ದ ವಂಶಿ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಆಕೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ಶಿವು ಜೋಡಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಳು. ಈ ಕಾರ್ಯಕ್ರಮದಲ್ಲೂ ತನ್ನದೇ ಹವಾ ಸೃಷ್ಟಿಸಿದ್ದಳು.

  Colors Kannada program, Gichhi Gili Gili Program winner, Colors Kannada Programs, Reality show, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ, ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು ಮತ್ತು ವನ್ಷಿಕಾ, ಕಲರ್ಸ್ ಕನ್ನಡ ಕಾರ್ಯಕ್ರಮಗಳು, Kannada news, Karnataka news,
  ರನ್ನರ್ ಅಪ್ ನಿವೇದಿತಾ ಗೌಡ


  ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಹಲವಾರು ಮಜಾಭಾರತದ ಹೆಸರಾಂತ ಕಲಾವಿದರು ಇದ್ದಾರೆ. ಎಲ್ಲರೂ ಜನರನ್ನು ತುಂಬಾನೇ ನಗಿಸಿದ್ದಾರೆ. ಈ ಶೋನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಪಟಾಕಿ ವನ್ಷಿಕಾ ಅಂಜನಿ ಕಶ್ಯಪ, ಮಜಾ ಭಾರತ ಶೋನಲ್ಲಿ ಭಾಗವಹಿಸಿದ್ದ ಜಗ್ಗಪ್ಪ, ಸುಷ್ಮಿತಾ, ಚಂದ್ರಪ್ರಭಾ, ಮಾನಸಾ, ಎನ್ ಸಿ ಅಯ್ಯಪ್ಪ, ಜೋಗಿ ಸುನೀತಾ, ನಿವೇದಿತಾ ಗೌಡ ಮುಂತಾದವರು ಭಾಗವಹಿಸಿದ್ದಾರೆ.

  ಇದನ್ನೂ ಓದಿ: Vanshika Film: ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ, ವನ್ಷಿಕಾಗೆ ಆಫರ್ ಮೇಲೆ ಆಫರ್!

  'Love ಲಿ' ಸಿನಿಮಾದಲ್ಲಿ ವಂಶಿಕಾ ನಟನೆ

  ಇತ್ತೀಚೆಗೆ ಶಾಲೆಗೆ ಹೋಗಲು ಶುರುಮಾಡಿರುವ ವಂಶಿಕಾ ಅವರು ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ. ವಸಿಷ್ಠ ಸಿಂಹ ನಟನೆಯ 'ಲವ್ ಲಿ' ಸಿನಿಮಾದಲ್ಲಿ ವಂಶಿಕಾ ನಟಿಸುತ್ತಿದ್ದಾರಂತೆ.   ಸಿನಿಮಾ, ವೆಬ್ ಸಿರೀಸ್‍ನಲ್ಲಿ ನಟಿಸುವ ಆಫರ್ ಹುಡುಕಿಕೊಂಡು ಬಂದಿದೆ ಎಂದು ಸ್ವತಃ ಮಾಸ್ಟರ್ ಆನಂದ್ ಹೇಳಿಕೊಂಡಿದ್ದರು.
  Published by:Savitha Savitha
  First published: