Gicchi Gili Gili: ಗಿಚ್ಚಿ ಗಿಲಿಗಿಲಿ ಕ್ಲಿನಿಕ್‍ನಲ್ಲಿ ಡಾಕ್ಟರ್ ವಂಶಿ ನಗುವಿನ ಕಚಗುಳಿ, ಕರ್ಕೊಂಡು ಬರ್ತಾ ಇರಿ, ಹೊತ್ಕೊಂಡು ಹೋಗ್ತಾ ಇರಿ!

ಈ ಬಾರಿಯ ಸ್ಕಿಟ್‍ನಲ್ಲಿ ಶಿವು, ನಿವೇದಿತಾ, ವಂಶಿ ಮಾಡ್ತಿದ್ದಾರೆ. ವಂಶಿ ಡಾಕ್ಟರ್ ಪಾತ್ರದಲ್ಲಿ, ಶಿವು, ನಿವೇದಿತಾ ನರ್ಸ್ ಪಾತ್ರದಲ್ಲಿ ಮಾಡುತ್ತಿದ್ದಾರೆ. ವಂಶಿ ಎಂಟ್ರಿಯೇ ಸಖತ್ ಆಗಿದೆ. ನಿವೇದಿತ ವಂಶಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಾಳೆ. ವಂಶಿ ಬಂದ ತಕ್ಷಣ ನಾನು, ವಂನ್ಷಿಕಾ ಅಂಜನಿ ಕಶ್ಯಪ, ನಮ್ಮ ಆಸ್ಪತ್ರೆಗೆ ಕರ್ಕೊಂಡ್ ಬರ್ತಾ ಇರಿ, ಹೊತ್ಕೊಂಡು ಹೋಗ್ತಾ ಇರಿ ರೂಲ್ಸ್ ಎಂದು ಹೇಳುತ್ತಾಳೆ

ವಂನ್ಷಿಕಾ ಅಂಜನಿ ಕಶ್ಯಪ್

ವಂನ್ಷಿಕಾ ಅಂಜನಿ ಕಶ್ಯಪ್

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ಇನ್ನೊಂದು ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದು ಬಿಗ್ ಬಾಸ್ ಅನ್ನು ಓಟಿಟಿಯಲ್ಲಿ ತರುತ್ತಿದೆ. 24 ಗಂಟೆಯೂ ವೋಟ್‍ನಲ್ಲಿ ಬಿಗ್ ಬಾಸ್ ನೋಡಬಹುದು. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವರ್ಷ ಗಿಚ್ಚಿ ಗಿಲಿಗಿಲಿ (Gicchi Gili Gili) ಅನ್ನೂ ಕಾರ್ಯಕ್ರಮ ನಡೆಸುತ್ತಿದ್ದು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದಾರೆ. ಮಜಾಭಾರತದ ಶಿವುಗೆ (Shivu) ನಮ್ಮಮ್ಮ ಸೂಪರ್ ಸ್ಟಾರ್ ವಿನ್ನರ್ ವಂನ್ಷಿಕಾ ಅಂಜನಿ ಕಶ್ಯಪ್ ಜೋಡಿಯಾಗಿ ಕರುನಾಡ ಜನರ ಮನ ಗೆದ್ದಿದ್ದಾಳೆ. ವಂಶಿಯ ಅಮೋಘ ನಟನೆಗೆ ಬೆರಗಾಗದವರೇ ಇಲ್ಲ.

    ಪಟ್ ಪಟ್ ಪಟಾಕಿ ಈ ವಂನ್ಷಿಕಾ
    ವಂನ್ವಿಕಾ ಈ ಹೆಸರು ಕಳೆದ ಒಂದು ವರ್ಷದಿಂದ ಕನ್ನಡಿಗರ ಮನದಲ್ಲಿ ಉಳಿದು, ನೆಲೆಸಿರುವ ಹೆಸರು. ಈಕೆ ಮಾಸ್ಟರ್ ಆನಂದ್, ಯಶಸ್ವಿನಿ ಅವರ ಮಗಳು. ಈಗ 5 ವರ್ಷ. ಆದ್ರೆ ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ.

    ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ವಿನ್ನರ್
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು. ಅಂತೆಯೇ ಅವಳೇ ವಿನ್ ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದಳು.

    ಇದನ್ನೂ ಓದಿ: Dance Karnataka Dance: ಡ್ಯಾನ್ಸ್ ವಿತ್ ಮಿ ಎಂದ ಶಿವಣ್ಣ! ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ನಲ್ಲಿ ಶಿವಣ್ಣನ ಝಲಕ್ ನೋಡಿ 

    ಇವತ್ತು ಡಾಕ್ಟರ್ ಆಗಿರುವ ವಂಶಿ
    ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮುಗಿಯುತ್ತಿದ್ದತಂತೆ, ಗಿಚ್ಚಿ ಗಿಲಿಗಿಲಿ ಕಾರ್ಯಕಾರ್ಯಮಕ್ಕೆ ಬಂದಿದ್ದಾಳೆ. ಈಕೆಯ ಪಾಟನರ್ ಮಜಾ ಭಾರತ ಖ್ಯಾತಿಯ ಶಿವು. ಇಬ್ಬರ ಜೋಡಿ ಕರುನಾಡನ್ನೇ ಮೋಡಿ ಮಾಡಿದೆ. ಈಗಾಗಲೇ ಹಲವು ಸ್ಕಿಟ್‍ಗಳ ಮೂಲಕ ವಂಶಿ, ಪ್ರತಿಬಾರಿಯೂ ಗೋಲ್ಡನ್ ಬಜಾರ್ ಪಡೆದಿದ್ದಾಳೆ. ಇವತ್ತು ಡಾಕ್ಟರ್ ಪಾತ್ರದಲ್ಲಿ ಮಿಂಚುತ್ತಿದ್ದಾಳೆ.

    ಗಿಚ್ಚಿ ಗಿಲಿ ಗಿಲಿ ಕ್ಲಿನಿಕ್‍ನಲ್ಲಿ ನಗುವಿನ ಕಚಗುಳಿ
    ಈ ಬಾರಿಯ ಸ್ಕಿಟ್‍ನಲ್ಲಿ ಶಿವು, ನಿವೇದಿತಾ, ವಂಶಿ ಮಾಡ್ತಿದ್ದಾರೆ. ವಂಶಿ ಡಾಕ್ಟರ್ ಪಾತ್ರದಲ್ಲಿ, ಶಿವು, ನಿವೇದಿತಾ ನರ್ಸ್ ಪಾತ್ರದಲ್ಲಿ ಮಾಡುತ್ತಿದ್ದಾರೆ. ವಂಶಿ ಎಂಟ್ರಿಯೇ ಸಖತ್ ಆಗಿದೆ. ನಿವೇದಿತ ವಂಶಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಾಳೆ. ವಂಶಿ ಬಂದ ತಕ್ಷಣ ನಾನು, ವಂನ್ಷಿಕಾ ಅಂಜನಿ ಕಶ್ಯಪ, ನಮ್ಮ ಆಸ್ಪತ್ರೆಗೆ ಕರ್ಕೊಂಡ್ ಬರ್ತಾ ಇರಿ, ಹೊತ್ಕೊಂಡು ಹೋಗ್ತಾ ಇರಿ ರೂಲ್ಸ್ ಎಂದು ಹೇಳುತ್ತಾಳೆ. ಹಲ್ಲು ನೋವು ಎಂದು ಬರುವ ರೋಗಿಯ ಹಲ್ಲು ಕೀಳುವ ಸನ್ನಿವೇಶ, ಡೈಲಾಗ್ ಎಲ್ಲವು ನಿಮಗೆ ನಗು ತರಿಸುತ್ತೆ.

    ಇದನ್ನೂ ಓದಿ: Ismart Jodi: ನನ್ನ ದುಡಿಮೆಯಲ್ಲೇ ನನ್ನ ಗಂಡ ಕೂತು ತಿನ್ನುತ್ತಾನೆ! ಹೀಗ್ಯಾಕೆ ಅಂದ್ರು ಈ ನಟಿ? 

    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಜಡ್ಜ್ ಗಳಾಗಿ ಶ್ರುತಿ, ಸಾಧು ಕೋಕಿಲ ಸರ್ ತೀರ್ಪು ನೀಡುತ್ತಿದ್ದಾರೆ. ಎಲ್ಲಾ ಕಲಾವಿದರೂ ಅದ್ಭುತವಾಗಿ ನಟಿಸುತ್ತಿದ್ದಾರೆ. ಎಲ್ಲಾ ಸ್ಕಿಟ್‍ಗಳು ತುಂಬಾ ನಗಿಸುತ್ತವೆ. ನೀವು ಟೆನ್ಶನ್‍ನಲ್ಲಿ ಇದ್ರೆ ಗಿಚ್ಚಿ ಗಿಲಿಗಿಲಿ ನೋಡಿ. ನಿಮ್ಮ ಮನಸ್ಸು ಹಗುರಾಗುತ್ತೆ. ನೋವೆಲ್ಲಾ ಮರೆತು ನಗುತ್ತೀರಿ. ವಂಶಿ ಡಾಕ್ಟರ್ ಸ್ಕಿಟ್ ಮಿಸ್ ಮಾಡ್ದೇ ನೋಡಿ.
    Published by:Savitha Savitha
    First published: