Gichi GiliGili: ಗಿಚ್ಚಿ ಗಿಲಿಗಿಲಿ ಗ್ರಾಂಡ್ ಫಿನಾಲೆಗೆ ಬರ್ತಿದ್ದಾರೆ ಕನಸಿನ ರಾಣಿ! ಯಾರು ಗೆಲ್ತಾರೆ ನಗುವಿನ ಟ್ರೋಫಿ?

ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ಫೈನಲ್‌ಗೆ ಬಂದಿದೆ. ಇದೇ 17 ಮತ್ತು 18ರಂದು ಗಿಚ್ಚಿ ಗಿಲಿಗಿಲಿಯ ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಕನಸಿನ ರಾಣಿ ಮಾಲಾಶ್ರೀ ಬಂದಿದ್ದಾರೆ. ಮಾಸ್ ಲುಕ್‍ನಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಗುವಿನ ಟ್ರೋಫಿ ಯಾರಿಗೆ ಸಿಗುತ್ತೆ ಅನ್ನೋದಕ್ಕೆ ಅವರೇ ಉತ್ತರ ಕೊಡ್ತಾರೆ!

ಮಾಲಾಶ್ರೀ

ಮಾಲಾಶ್ರೀ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು (Program) ಅದ್ಭುತವಾಗಿ ಮೂಡಿ ಬರುತ್ತಿವೆ. ಇನ್ನೇನು ಬಿಗ್‍ಬಾಸ್ ಸೀಸನ್ 9 ಶುರುವಾಗಲಿಗೆ. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವರ್ಷ ಗಿಚ್ಚಿ ಗಿಲಿಗಿಲಿ (Gichi GiliGili) ಅನ್ನೂ ಕಾರ್ಯಕ್ರಮ ನಡೆಸುತ್ತಿದ್ದು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಮುಗಿಯುವ ಹಂತ ತಲುಪಿದೆ, ಇದೇ ವೀಕೆಂಡ್ ಫಿನಾಲೆ  (Finale) ಇದೆ.

    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ
    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಜಡ್ಜ್ ಗಳಾಗಿ ಶ್ರುತಿ, ಸಾಧು ಕೋಕಿಲ ಸರ್ ತೀರ್ಪು ನೀಡುತ್ತಿದ್ದಾರೆ. ಎಲ್ಲಾ ಕಲಾವಿದರೂ ಅದ್ಭುತವಾಗಿ ನಟಿಸುತ್ತಿದ್ದಾರೆ. ಎಲ್ಲಾ ಸ್ಕಿಟ್‍ಗಳು ತುಂಬಾ ನಗಿಸುತ್ತವೆ. ನೀವು ಟೆನ್ಶನ್‍ನಲ್ಲಿ ಇದ್ರೆ ಗಿಚ್ಚಿ ಗಿಲಿಗಿಲಿ ನೋಡಿ. ನಿಮ್ಮ ಮನಸ್ಸು ಹಗುರಾಗುತ್ತೆ.

    ಕಾರ್ಯಕ್ರಮದಲ್ಲಿ ಮಿಂಚಿರುವ ವಂಶಿ
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಆಕೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ಶಿವು ಜೋಡಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಾಳೆ. ಈ ಕಾರ್ಯಕ್ರಮದಲ್ಲೂ ತನ್ನದೇ ಹವಾ ಸೃಷ್ಟಿಸಿದ್ದಾಳೆ. ಎಲ್ಲರೂ ಈಕೆಯ ಗೆಲ್ಲಬಹುದು ಎನ್ನುತ್ತಿದ್ದಾರೆ.

    ಇದನ್ನೂ ಓದಿ: Colors Kannada: ಬಿಗ್ ಬಾಸ್‍ಗಾಗಿ 4 ಧಾರಾವಾಹಿ ಒಟ್ಟಿಗೆ ಮುಗಿಯುತ್ತಿವೆಯೇ?

    ಸೆಪ್ಟೆಂಬರ್ 17 ಮತ್ತು 18ಕ್ಕೆ ಗ್ರಾಂಡ್ ಫಿನಾಲೆ
    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಮುಗಿಯುವ ಹಂತ ತಲುಪಿದೆ, ಇದೇ ವೀಕೆಂಡ್ ಫಿನಾಲೆ ಇದೆ. ಅಂದ್ರೆ ಸೆಪ್ಟೆಂಬರ್ 17 ಮತ್ತು 18ಕ್ಕೆ ಗ್ರಾಂಡ್ ಫಿನಾಲೆ ಕಾರ್ಯಕ್ರಮ.

    ನಗುವಿನ ಶೋನಲ್ಲಿ ಕನಸಿನ ರಾಣಿ
    ಸೆಪ್ಟೆಂಬರ್ 17 ಮತ್ತು 18ರ ಗಿಚ್ಚಿ ಗಿಲಿಗಿಲಿಯ ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಕನಸಿನ ರಾಣಿ ಮಾಲಾಶ್ರೀ ಬಂದಿದ್ದಾರೆ. ಮಾಸ್ ಲುಕ್‍ನಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಮಾತುವ, ನಗು ಎಲ್ಲವನ್ನೂ ನೋಡಬೇಕು ಎಂದ್ರೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ನೋಡಬೇಕು.

    Colors Kannada program, Gichhi Gili Gili grand finale, Colors Kannada Programs, ಗಿಚ್ಚಿ ಗಿಲಿಗಿಲಿ ಗ್ರಾಂಡ್ ಫಿನಾಲೆ, ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಕನಸಿನ ರಾಣಿ ಮಾಲಾಶ್ರೀ, ಕಲರ್ಸ್ ಕನ್ನಡ ಕಾರ್ಯಕ್ರಮಗಳು, Kannada news, Karnataka news,
    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ


    ಯಾರಾಗ್ತಾರೆ ವಿನ್ನರ್?
    ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಹಲವಾರು ಮಜಾಭಾರತದ ಹೆಸರಾಂತ ಕಲಾವಿದರು ಇದ್ದಾರೆ. ಎಲ್ಲರೂ ಜನರನ್ನು ತುಂಬಾನೇ ನಗಿಸಿದ್ದಾರೆ. ಈ ಶೋನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಪಟಾಕಿ ವಂಶಿಕಾ ಅಂಜನಿ ಕಶ್ಯಪ, ಮಜಾ ಭಾರತ ಶೋನಲ್ಲಿ ಭಾಗವಹಿಸಿದ್ದ ಜಗ್ಗಪ್ಪ, ಸುಷ್ಮಿತಾ, ಚಂದ್ರಪ್ರಭಾ, ಮಾನಸಾ, ಎನ್ ಸಿ ಅಯ್ಯಪ್ಪ, ಜೋಗಿ ಸುನೀತಾ, ನಿವೇದಿತಾ ಗೌಡ ಮುಂತಾದವರು ಭಾಗವಹಿಸಿದ್ದಾರೆ.

    ಇದನ್ನೂ ಓದಿ: Ramachari: ಒನಕೆ ಓಬವ್ವ ಮತ್ತೆ ಹುಟ್ಟಿ ಬರ್ತಿದ್ದಾರೆ! ರಾಮಾಚಾರಿ ಧಾರಾವಾಹಿಲಿ ಹೊಸ ಸಾಹಸ

    ಯಾರು ವಿನ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎಲ್ಲಾ ಕುತೂಹಲಕ್ಕೂ ಶನಿವಾರ, ಭಾನುವಾರ ತೆರೆ ಬೀಳಲಿದೆ.
    Published by:Savitha Savitha
    First published: