Doresani Serial: ಆನಂದ್‍ಗೆ ಹೇಳದೇ ದೀಪಿಕಾ ನಿಶ್ಚಿತಾರ್ಥ ಮಾಡಿಕೊಳ್ತಾಳಾ? ಬೇಸರದಲ್ಲಿ ಬೆಸ್ಟ್ ಫ್ರೆಂಡ್!

ಇಂದು ದೀಪಿಕಾ ಮತ್ತು ಆನಂದ್ ನ ಸ್ನೇಹಿತನಿಗೆ ನಿಶ್ಚಿತಾರ್ಥ ಆಗಲಿದೆ. ಎಂಗೇಜ್‍ಮೆಂಟ್‍ಗೆ ಸಕಲ ತಯಾರಿ ನಡೆದಿದೆ. ದೇವಸ್ಥಾನದಲ್ಲಿ ನಿಶ್ಚಿತಾರ್ಥ ಆಗುತ್ತಿದೆ. ಆದ್ರೆ ಈ ವಿಷಯವನ್ನು ತನ್ನ ಆತ್ಮೀಯ ಗೆಳೆಯ ಆನಂದ್‍ಗೆ ತಿಳಿಸಿಲ್ಲ. ಏನೂ ಹೇಳದೇ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ.

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
ದೊರೆಸಾನಿ (Doresani) ಕಲರ್ಸ್ ಕನ್ನಡ (Colors Kannada)ದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾದೋ ಸೀರಿಯಲ್, ಏನೇನು ತಿರುವುಗಳನ್ನು ಪಡೆದುಕೊಂಡು ನಟ. ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ ಈ ಕಥೆಯ ಹೀರೋ (Hero), ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ದೀಪಿಕಾ (Deepika) ಈ ಕಥೆಯ ನಾಯಕಿ. ಬಡವರ ಮನೆ ಹುಡುಗಿ. ಆನಂದ್, ದೀಪಿಕಾ, ಆನಂದ್ ಪರಿಚಯವಾಗಿ ಸ್ನೇಹಿರಾಗಿರುತ್ತಾರೆ. ಆ ಮೇಲೆ ಲವ್ ಮಾಡಲು ಶುರು ಮಾಡುತ್ತಾರೆ. ಆದ್ರೆ ದೀಪಿಕಾ ತಂದೆಗೆ ಇದು ಇಷ್ಟ ಆಗಲ್ಲ. ಆದ ಕಾರಣ ದೀಪಿಕಾ, ಆನಂದ್‍ಗೆ ತನ್ನನ್ನು ಮರೆಯುವಂತೆ ಹೇಳಿ, ಬೆಸ್ಟ್ ಫ್ರೆಂಡ್ಸ್ ಆಗಿರೋಣ ಅಂತ ಹೇಳ್ತಾಳೆ.

ದೀಪಿಕಾಗೆ ತನ್ನ ಗೆಳೆಯನನ್ನು ಜೋಡಿ ಮಾಡಿದ ಆನಂದ್
ದೀಪಿಕಾ ಬೇಡ ಎಂದು ಮೇಲೆ ಆನಂದ್, ಆಕೆಗೆ ಒಳ್ಳೆಯ ಹುಡುಗನನ್ನೇ ಮದುವೆ ಮಾಡಬೇಕು ಎಂದು ತನ್ನ ಆತ್ಮೀಯ ಸ್ನೇಹಿತನನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ದೀಪಿಕಾ ಮನೆಯವರು ಸಹ ಒಪ್ಪಿದ್ದಾರೆ. ಮನೆಯವರಿಗಾಗಿ ದೀಪಿಕಾ ಸಹ ಒಪ್ಪಿದ್ದಾಳೆ.

ಆನಂದ್‍ಗೆ ಗೊತ್ತಿಲ್ಲದೇ ನಿಶ್ಚಿತಾರ್ಥ
ಇಂದು ದೀಪಿಕಾ ಮತ್ತು ಆನಂದ್ ನ ಸ್ನೇಹಿತನಿಗೆ ನಿಶ್ಚಿತಾರ್ಥ ಆಗಲಿದೆ. ಎಂಗೇಜ್‍ಮೆಂಟ್‍ಗೆ ಸಕಲ ತಯಾರಿ ನಡೆದಿದೆ. ದೇವಸ್ಥಾನದಲ್ಲಿ ನಿಶ್ಚಿತಾರ್ಥ ಆಗುತ್ತಿದೆ. ಆದ್ರೆ ಈ ವಿಷಯವನ್ನು ತನ್ನ ಆತ್ಮೀಯ ಗೆಳೆಯ ಆನಂದ್‍ಗೆ ತಿಳಿಸಿಲ್ಲ. ಏನೂ ಹೇಳದೇ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: Puttakkana Makkalu: ಪುಟ್ಟಕ್ಕನ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ, ಹಬ್ಬಕ್ಕೆ ರಾಜಿಗಿದಿಯಾ ಆಹ್ವಾನ? 

ಫೋನ್ ಮಾಡಿ, ಮಾಡಿ ಸುಸ್ತಾದ ಆನಂದ್
ಇನ್ನು ದೀಪಿಕಾ ಆಕೆಯ ಅತ್ತಿಗೆ ಮಾತು ಕೇಳಿ ಆನಂದ್‍ನನ್ನು ದೂರ ಮಾಡಲು ಯತ್ನಿಸುತ್ತಿದ್ದಾಳೆ. ಆನಂದ್ ಎಷ್ಟೇ ಫೋನ್ ಮಾಡಿದ್ರೂ ರಿಸೀವ್ ಮಾಡುತ್ತಿಲ್ಲ. ಆಕೆ ರಿಸೀವ್ ಮಾಡಿಲ್ಲ ಅಂತ ಆಕೆತ ತಂಗಿಯರಿಗೆ ಫೆÇೀನ್ ಮಾಡುತ್ತಿದ್ದಾನೆ. ಅವರಿಗೂ ಕೂಡ ಫೋನ್ ರಿಸೀವ್ ಮಾಡದಂತೆ ದೀಪಿಕಾ ಹೇಳಿದ್ದಾಳೆ. ಆನಂದ್, ದೀಪಿಕಾ ಮನೆಯವರಿಗೆ ಏನೋ ಆಗಿದೆ ಎಂದು ಚಡ ಪಡಿಸುತ್ತಿದ್ದಾನೆ.

ದೀಪಿಕಾ ನಿಶ್ಚಿತಾರ್ಥ ಎಂದು ತಿಳಿದು ಶಾಕ್ ಆದ ಆನಂದ್
ದೀಪಿಕಾ ಮತ್ತು ಆಕೆಯ ಮನೆಯವರು ಫೋನ್ ರಿಸೀವ್ ಮಾಡುತ್ತಿಲ್ಲ. ಏನೋ ಆಗಿದೆ ಎಂದು ನೇರವಾಗಿ ಅವರ ಮನೆಗೆ ಹೋಗಲು ತಯಾರಾಗುತ್ತಾನೆ. ಆದ್ರೆ ಅಷ್ಟೋತ್ತಿಗೆ ಆಪೀಸ್‍ನಲ್ಲಿ ಆತನನ್ನು ಗೆಳೆಯನೊಬ್ಬ ತಡೆಯುತ್ತಾನೆ. ನೀವು ಅಲ್ಲಿಗೆ ಹೋಗೋದು ಬೇಡ. ಹೋದರೆ ಬೇಜಾರಾಗುತ್ತೆ ಎನ್ನುತ್ತಾನೆ. ಆಗ ಏಕೆ ಎಂದು ಕೇಳಿದಾಗ ದೀಪಿಕಾ ನಿಶ್ಚಿತಾರ್ಥ ಎನ್ನುವುದು ತಿಳಿಯುತ್ತದೆ. ಆಗ್ ಆನಂದ್‍ಗೆ ಬೇಸರದ ಜೊತೆ ಶಾಕ್ ಕೂಡ ಆಗುತ್ತೆ.

ಇದನ್ನೂ ಓದಿ: Paaru Serial: ಆ್ಯಸಿಡ್ ಹಾಕಿದ್ದು ಯಾರು ಅಂತ ಕೊನೆಗೂ ಗೊತ್ತಾಯ್ತಾ ಪಾರುಗೆ? ಮುಂದಿದೆ ಬಿಗ್ ಟ್ವಿಸ್ಟ್! 

ದೀಪಿಕಾ ತನಗೆ ಹೇಳದೇ ಈ ರೀತಿ ಮಾಡಿದ್ದೇಕೆ?
ಪ್ರೀತಿ ಮಾಡುವುದನ್ನು ಬಿಟ್ಟ ನಂತರ, ಅನಂದ್, ದೀಪಿಕಾ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಎಲ್ಲಾ ವಿಷಯವನ್ನೂ ಶೇರ್ ಮಾಡಿಕೊಳ್ಳುತ್ತಾ ಇರ್ತಾರೆ. ಅಲ್ಲದೇ ಆನಂದ್ ದೀಪಿಕಾಳ ಮದುವೆಗ ಹಣ ಸಹಾಯ ಮಾಡಿದ್ದಾನೆ. ಎಲ್ಲವನ್ನೂ ಹೇಳುತ್ತಿದ್ದ ದೀಪಿಕಾ ಇದನ್ನು ಮಾತ್ರ ಏಕೆ ಹೇಳಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ಏನೂ ತೋಚದವನಂತೆ ಕೊರಗುತ್ತಿದ್ದಾನೆ. ಅನಾಥವಾಗಿದ್ದ ಆನಂದ್‍ಗೆ ಮನೆಯವರು ಪ್ರೀತಿ ತೋರಿಸಿದ್ದು, ದೀಪಿಕಾ ಮನೆಯವರು. ಈಗ ಅವರೇ ಕರೆಯದೇ ಈ ರೀತಿ ಮಾಡಿದ್ದಾರೆ ಎಂದು ಚಿಂತೆಗೀಡಾಗಿದ್ದಾನೆ.

ಇವತ್ತು ಏನಾಗುತ್ತೆ? ಕರೆಯದಿದ್ರೂ ಆನಂದ್ ನಿಶ್ಚಿತಾರ್ಥಕ್ಕೆ ಹೋಗುತ್ತಾನಾ? ದೀಪಿಕಾ ಖುಷಿಯಿಂದ ಎಂಗೇಜ್‍ಮೆಂಟ್ ಮಾಡಿಕೊಳ್ಳುತ್ತಾಳಾ ಅಂತ ಇವತ್ತಿನ ಸಂಚಿಕೆ ನೋಡಬೇಕು.
Published by:Savitha Savitha
First published: