ಕಲರ್ಸ್ ಕನ್ನಡ (Colors Kannada) ಪ್ರತಿ ಬಾರಿಯೂ ವಿಭಿನ್ನ ಯೋಚನೆಗಳನ್ನು ಮಾಡುತ್ತೆ. ಏನಾದ್ರೂ ಹೊಸತನ್ನು ಹುಡುಕುತ್ತೆ. ಅಭಿಮಾನಿಗಳನ್ನು (Fans) ತಮ್ಮತ್ತ ಸೆಳೆಯಲು ದೀಪಾವಳಿಗೆ (Deepavali) ಒಂದು ಪ್ಲ್ಯಾನ್ ಮಾಡಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ಸರಿಯಾಗಿ ಉತ್ತರ ಹೇಳಿದವರ ಮನೆಗೆ ಆ ಸೀರಿಯಲ್ ತಂಡ ದೀಪಾವಳಿ ಹಬ್ಬ ಆಚರಿಸಲು ಹೋಗುತ್ತದೆ. ಕಲರ್ಸ್ ಕನ್ನಡದ ಹೊಸ ಧಾರಾವಾಹಿಗಳು ಎಂದ್ರೆ, ಒಲವಿನ ನಿಲ್ದಾಣ (Olavina Nildana), ಕೆಂಡಸಂಪಿಗೆ (Kendasampige), ಭಾಗ್ಯಲಕ್ಷ್ಮಿ (Bhagya Lakshmi). ಈ ಮೂರು ಸೀರಿಯಲ್ಗಳಿಗೆ ಇದೇ ಮೊದಲ ದೀಪಾವಳಿ. ಅದಕ್ಕೆ ಈ ಮೂರು ಧಾರಾವಾಹಿಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಸರಿಯಾದ ಉತ್ತರ ಹೇಳಿ, ಸೀರಿಯಲ್ ಟೀಮ್ ನಿಮ್ಮ ಮನೆಗೆ ಬಂದ ದೀಪಾವಳಿ ಆಚರಣೆ ಮಾಡುತ್ತೆ.
ಒಲವಿನ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮೀ ತಾರೆಯರಿಗೆ ನಿಮ್ಮೊಂದಿಗೆ ಇದು ಮೊದಲ ದೀಪಾವಳಿ. ನಿಮ್ಮ ಮನೆಯಲ್ಲೇ ಆಚರಿಸಿದರೆ ಹೇಗೆ? ಸರಿಯಾದ ಉತ್ತರ ಕೊಟ್ಟ ಲಕ್ಕಿ ವಿಜೇತರ ಮನೆಯಲ್ಲೇ ಕಲರ್ಸ್ ತಾರೆಯರು ದೀಪಾವಳಿ ಆಚರಿಸುತ್ತಾರೆ.
ಒಲವಿನ ನಿಲ್ದಾಣದ ಪ್ರಶ್ನೆ?
ಒಲವಿನ ನಿಲ್ದಾಣ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರ ಆಗುತ್ತದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಸಿದ್ಧಾಂತ್ ಗೆ ತಾರಿಣಿ ಮೇಲೆ ಲವ್ ಇಲ್ಲ. ಇಬ್ಬರ ನಡುವೆ ಸುಳ್ಳು ನಿಶ್ಚಿತಾರ್ಥ ಆಗಿದೆ. ಲಗ್ನ ಪತ್ರಿಕೆವರೆಗೂ ವಿಚಾರ ಬಂದಿದೆ.
ಒಲವಿನ ನಿಲ್ದಾಣದ ತಂಡವು ಅಭಿಮಾನಿಗಳಿಗೆ ಕೇಳಿದ ಪ್ರಶ್ನೆ ಈ ರೀತಿ ಇದೆ. 'ಸಿದ್ಧಾಂತ್ ತಾರಿಣಿಗೆ ಕೊಟ್ಟ ಮೊದಲ ಉಡುಗೊರೆ ಏನು'? ಹಲವು ಅಭಿಮಾನಿಗಳಿಗಳಿ ಸರಿಯಾದ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: Actress Sara Annaiah: ಸೊಂಟದ ವಿಷ್ಯ ಬೇಡವೋ ಶಿಷ್ಯ! ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ವರು!
ಕೆಂಡಸಂಪಿಗೆ ಧಾರಾವಾಹಿಯ ಪ್ರಶ್ನೆ ಏನು?
ಒಲವಿನ ನಿಲ್ದಾಣ ಧಾರಾವಾಹಿಯೂ ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರಾವಗುತ್ತಿದೆ. ಯಾರನ್ನೋ ಮದುವೆ ಆಗಬೇಕಿದ್ದ ಸುಮ ತೀರ್ಥಂಕರ್ನನ್ನು ಮದುವೆ ಆಗಿದ್ದಾಳೆ. ಮನೆಯವರೆಲ್ಲಾ ಇನ್ನೂ ಸುಮನಾಳನ್ನು ಒಪ್ಪಿಕೊಂಡಿಲ್ಲ. ಅತ್ತೆ ಮಾತ್ರ ಮದುವೆ ಒಪ್ಪಿಕೊಂಡು ಇಬ್ಬರನ್ನು ಒಂದು ಮಾಡೋ ಪ್ರಯತ್ನ ಮಾಡ್ತಾ ಇದ್ದಾಳೆ.
ಕೆಂಡಸಂಪಿಗೆ ತಂಡವು ಅಭಿಮಾನಿಗಳಿಗೆ ಕೇಳಿದ ಪ್ರಶ್ನೆ, 'ಸುಮನಾಳನ್ನು ತೀರ್ಥಂಕರ್ ಯಾವ ಕಾರಣಕ್ಕೆ ಮದುವೆ ಆಗ್ತಾನೆ'? ಈ ಪ್ರಶ್ನೆ ಹಲವು ಅಭಿಮಾನಿಗಳಿಗಳಿ ಸರಿಯಾದ ಉತ್ತರ ನೀಡಿದ್ದಾರೆ.
ಭಾಗ್ಯಲಕ್ಷ್ಮಿ ಧಾರಾವಾಹಿಯ ಪ್ರಶ್ನೆ ಏನು?
ಭಾಗ್ಯಲಕ್ಷ್ಮಿ ಧಾರಾವಾಹಿಯೂ ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಸಾರಾವಗುತ್ತಿದೆ. ಅಕ್ಕ-ತಂಗಿಯರ ಬಾಂದವ್ಯವನ್ನು ಒಳಗೊಂಡ ಕಥೆ. ಅಕ್ಕ ಭಾಗ್ಯ ತಂಗಿ ಮದುವೆ ಮಾಡಲು ಗಂಡು ಹುಡುಕುತ್ತಿದ್ದಾಳೆ. ತಂಗಿಗೆ ಶ್ರೀಮಂತ ಬೇಡ್ವಂತೆ, ಶ್ರೀರಾಮನಂತ ಹುಡುಗ ಬೇಕಂತೆ.
ಭಾಗ್ಯಲಕ್ಷ್ಮಿ ತಂಡವು ಅಭಿಮಾನಿಗಳಿಗೆ ಕೇಳಿದ ಪ್ರಶ್ನೆ, 'ಲಕ್ಷ್ಮಿಗೆ ಬಂದ ಸಂಬಂಧವನ್ನು ಭಾಗ್ಯ ತಿರಸ್ಕರಿದ್ದೇಕೆ'?
ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ-ಅಮ್ಮು ಆಪ್ತತೆ, ಕಮಲಿಗೆ ಸದಾ ಕೀಟಲೆ ಮಾಡ್ತಾನೆ ಜೋಶ್ ಹುಡುಗ!
ನಿನ್ನೆ ಸಂಜೆ ಒಳಗೆ ಉತ್ತರ
ಈ ಮೂರು ಪ್ರಶ್ನೆಗಳನ್ನು ಕೇಳಿದ ವಾಹಿನಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಸಾವಿರಾರು ಜನರು ಉತ್ತರ ಹೇಳಿದ್ದಾರೆ. ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟುವರು ಯಾರು? ಯಾರ ಮನೆಗೆ ದೀಪಾವಳಿ ಆಚರಿಸಲು ತಾರೆಗಳು ಹೋಗ್ತಾರೆ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ