Dancing Champion: ಡ್ಯಾನ್ಸಿಂಗ್ ಚಾಂಪಿಯನ್ ಗ್ರ್ಯಾಂಡ್ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್

ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಈಗಾಗಲೇ ಯಶಸ್ವಿಯಾಗಿ ಜನಮನ ಗೆದ್ದಿದೆ. ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ಇದೀಗ ಗ್ರಾಂಡ್ ಪಿನಾಲೆ ಹಂತಕ್ಕೆ ತಲುಪಿರುವ ಈ ಶೋಗೆ ಸ್ಪೆಷಲ್ ಗೆಸ್ಟ್ ಆಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Punith Rajkumar) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯವರು ಈಗಾಗಲೇ ಪ್ರೊಮೋ ಕೂಡ ಬಿಟ್ಟಿದ್ದಾರೆ.

  14 ಸೆಲೆಬ್ರಿಟಿಗಳು ವೃತ್ತಿಪರ ಡ್ಯಾನ್ಸರ್ ಜೊತೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿದ ನಟ-ನಟಿಯರು ಇಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳಾಗಿ ಸ್ಪರ್ಧಿಸಿದ್ದಾರೆ. ಇದೀಗ ಫೈನಲ್ ಹಂತಕ್ಕೆ ತಲುಪಿರುವ ಈ ಶೋ ನಲ್ಲಿ ಗ್ರಾಂಡ್ ಫಿನಾಲೆಗೆ ಐದು ಜೋಡಿಗಳು ಆಯ್ಕೆಯಾಗಿವೆ.

  ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆಗೆ ಆರಂಭದಿಂದಲೂ ಪ್ರತಿವಾರ ಒಬ್ಬರು ಸೆಲೆಬ್ರೆಟಿ ಬಂದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದರು. ಅದೇ ರೀತಿ ಡಾ. ಶಿವ ರಾಜ್‍ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನಾಲ್ಕು ದಿನದ ಪುಟ್ಟ ಮಗುವಿಗೆ ನಾಮಕರಣ ಕೂಡ ಮಾಡಿದ್ದರು.

  ಇದನ್ನೂ ಓದಿ: Ibbani: 'ನನ್ನಮ್ಮ ಸೂಪರ್‌ ಸ್ಟಾರ್' ಖ್ಯಾತಿಯ ಇಬ್ಬನಿಯಿಂದ ಕೂದಲು ದಾನ! ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು

  ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ನಟ ಪುನೀತ್ ರಾಜಕುಮಾರ್ ಅರ್ಪಣೆ

  ವಿಶೇಷ ಎಂದರೆ ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಯನ್ನು ನಟ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿ ಕಾರ್ಯಕ್ರಮ ನಡೆಸುತ್ತಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

  ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಪತಿ ಹೆಸರು ಉಳಿಸುವುದಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೇ ಮೊದಲ ಬಾರಿಗೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಅಶ್ವಿನಿ ಅವರು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿರುವುದು ಪ್ರೋಮೋ ದಲ್ಲಿ ಕಾಣಿಸುತ್ತಿದೆ. ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೇದಿಕೆಗೆ ಗ್ರಾಂಡ್ ಎಂಟ್ರಿ ಕೊಟ್ಟು ಪೊಗರು ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್ ಕೂಡ ಹಾಕಿದ್ದಾರೆ.

  ಇದನ್ನೂ ಓದಿ: Bettada Hoo Serial: ಹೂವಿಯ ಪ್ರಾಮಾಣಿಕತೆಗೆ ಸೋತ ಮಾಲಿನಿ! ಬೆಟ್ಟದ ಹೂ ಧಾರಾವಾಹಿಯಲ್ಲಿ ಟ್ವಿಸ್ಟ್

  5 ಜೋಡಿಗಳೂ ವಿಭಿನ್ನ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ಗುರುತಿಸಿಕೊಂಡವರು.

  ಚಂದನಾ ಮತ್ತು ಅಕ್ಷತಾ

  ನಟಿ ಚಂದನ ಹಾಗೂ ಅಕ್ಷತಾ ಜೋಡಿಯು ಹೆಚ್ಚಿನ ಬಾರಿ ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕುಚುಪುಡಿ ಗಳಂತಹ ನೃತ್ಯ ಮಾಡಿ ವೀಕ್ಷಕರ ಮನಗೆದ್ದಿದ್ದಾರೆ ಹಾಗೆ ಇದೀಗ ಫೈನಲ್ ಸುತ್ತಿಗೂ ಆಯ್ಕೆಯಾಗಿದ್ದಾರೆ.

  ಆರಾಧ್ಯ ಮತ್ತು ನಿವೇದಿತಾ

  ರಿಯಾಲಿಟಿ ಶೋನ ಪಟಾಕಿಗಳು ಎಂದು ಪ್ರೀತಿಯಿಂದ ಕರೆಯಲ್ಪಡುವ ಆರಾಧ್ಯ ಮತ್ತು ನಿವೇದಿತಾ ತಮ್ಮ ಅಪ್ರತಿಮ ಪ್ರತಿಭೆಯಿಂದ ಇತರ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದ್ದಾರೆ. ರಿಯಾಲಿಟಿ ಶೋನಲ್ಲಿ ಕಿರಿಯ ಸ್ಪರ್ಧಿಗಳಲ್ಲದೆ, ಚಿಕ್ಕ ಹುಡುಗಿಯರು ಯಾವಾಗಲೂ ತಮ್ಮ ಮೋಡಿ ಮತ್ತು ಮುಗ್ಧತೆಯಿಂದ ಜನಮನವನ್ನು ಕದ್ದಿದ್ದಾರೆ.

  ಅರ್ಜುನ್ ಮತ್ತು ರಾಣಿ

  ಡ್ಯಾನ್ಸಿಂಗ್ ಚಾಂಪಿಯನ್‌ನ ಪ್ರಯಾಣದ ಉದ್ದಕ್ಕೂ ತಮ್ಮ ಪವರ್‌ಪ್ಯಾಕ್ ಪ್ರದರ್ಶನಗಳಿಗೆ ಹೆಸರುವಾಸಿಯಾದ ಅರ್ಜುನ್ ಮತ್ತು ರಾಣಿ ಗ್ರ್ಯಾಂಡ್ ಫಿನಾಲೆಗೆ ತಲುಪಿದ ತಂಡಗಳಲ್ಲಿ ಒಂದಾಗಿದೆ. ಇವರಿಬ್ಬರು ತಮ್ಮ ಮನಮುಟ್ಟುವ ಅಭಿನಯಕ್ಕಾಗಿ ಯಾವಾಗಲೂ ತೀರ್ಪುಗಾರರಿಂದ ಅನೇಕ ಪ್ರಶಂಸೆಯನ್ನು ಗಳಿಸಿದ್ದಾರೆ.

  ಅನ್ಮೋಲ್ ಮತ್ತು ಆದಿತ್ಯ

  ಈ ಪುಟ್ಟ ಬಾಲಕರಿಬ್ಬರು ಅದ್ಭುತ ಪವರ್ ಪ್ಯಾಕ್ ಪ್ರದರ್ಶನದಿಂದ ತೀರ್ಪುಗಾರರ ಮನಗೆದ್ದಿದ್ದಾರೆ. ಅದೇ ರೀತಿ ಒಂದೆರಡುಬಾರಿ ಗೋಲ್ಡನ್ ಸ್ಟಾರ್ ಗಳನ್ನು ಗಳಿಸಿದ ಕೀರ್ತಿ ಈ ಪುಟ್ಟ ಹುಡುಗರಿಗೆ ಸಲ್ಲುತ್ತದೆ.

  ಆರತಿ ಮತ್ತು ಸಾಗರ್

  ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ ಸ್ಪರ್ಧಿಯಾಗಿ ಆರತಿ ಮತ್ತು ಸಾಗರ್ ಉತ್ತಮ ಪರ್ಫಾರ್ಮೆನ್ಸ್ ನೀಡಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಮತ್ತು ಡ್ಯಾನ್ಸಿಂಗ್ ಚಾಂಪಿಯನ್‌ನ ಅಂತಿಮ ಟ್ರೋಫಿಯನ್ನು ಗೆಲ್ಲಲು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ.

  ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ನಟಿ ಮೇಘನಾ ರಾಜ್ ವಿಜಯ ರಾಘವೇಂದ್ರ ಹಾಗೂ ಮಯೂರಿ ಜಡ್ಜಸ್ ಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ನಿರೂಪಕರಾಗಿ ಅಕುಲ್ ಬಾಲಾಜಿ ಭಾಗವಹಿಸುತಿದ್ದಾರೆ.
  Published by:Swathi Nayak
  First published: