Olavina Nildana: ಕಲರ್ಸ್ ಕನ್ನಡದಲ್ಲಿ ಹೊಸ ರಂಗಿನ ಕಥೆ! 'ಒಲವಿನ ನಿಲ್ಗಾಣ'ದಲ್ಲಿ ಒಂದು ಸುತ್ತು ಹಾಕೋಣ ಬನ್ನಿ

ಒಲವಿನ ನಿಲ್ದಾಣ ಎಂಬ ಹೊಸ ಧಾರವಾಹಿ ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲಿ ಪ್ರಸಾರಗೊಳ್ಳಲಿದೆ.  ನಾಯಕ ನಟಿಯಾಗಿ ಹೊಸ ಪರಿಚಯ ಅಮಿತ ಸದಾಶಿವ ಇವರು ನಟಿಸುತ್ತಿದ್ದಾರೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯು ಸದಾ ಹೊಸ ಹೊಸ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಸಂಜೆ ಗಂಟೆ 5 ರಿಂದ ರಾತ್ರಿ  10 ಗಂಟೆಯ ತನಕ ಉತ್ತಮ ಕಥೆಯನ್ನೊಳಗೊಂಡ ಧಾರಾವಾಹಿಗಳು ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಇದೀಗ ಪ್ರೇಕ್ಷಕರನ್ನು ಮನರಂಜಿಸಲು ಹೊಸದೊಂದು ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ವಾಹಿನಿಯ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ (Instagram) ಇದರ ಪ್ರೋಮೊವನ್ನು (Promo) ಕೂಡ ಹರಿ ಬಿಟ್ಟಿದ್ದಾರೆ. ಹೌದು ಒಲವಿನ ನಿಲ್ದಾಣ (Olavina Nildana) ಎಂಬ ಹೊಸ ಧಾರವಾಹಿ (Serial) ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲಿ ಪ್ರಸಾರಗೊಳ್ಳಲಿದೆ.  ನಾಯಕ ನಟಿಯಾಗಿ ಹೊಸ ಪರಿಚಯ ಅಮಿತ ಸದಾಶಿವ ಇವರು ನಟಿಸುತ್ತಿದ್ದಾರೆ.

    ಹಿರಿಯ ನಟಿ ವಿನಯ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಈ ಪ್ರೋಮೊದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಖ್ಯಾತ ನಿರ್ದೇಶಕಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಧಾರಾವಾಹಿಯು ಮೂಡಿಬರಲಿದೆ‌

    ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ ಖ್ಯಾತ ನಿರ್ದೇಶಕಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಈ ಧಾರಾವಾಹಿಯು ಮೂಡಿಬರಲಿದೆ‌. ಅವರು ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ವಾಹಿನಿಯ ಪ್ರೋಮೊವನ್ನು ತಮ್ಮ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

    ಇದನ್ನೂ ಓದಿ: Jothe Jotheyali: ಶಾನುಭೋಗರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಜೇಂಡೆ! ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ‌ಮತ್ತೆ ಟ್ವಿಸ್ಟ್

    ಸೋನೆ ಮಳೆಯಲ್ಲಿ ನಾಯಕ ನಟಿ ಕುಣಿದಾಡುತ್ತಿರುವ ಪ್ರೋಮೋ

    ಸೋನೆ ಮಳೆಯಲ್ಲಿ ನಾಯಕ ನಟಿ ನೆನೆಯುತ್ತಾ ಕುಣಿದಾಡುತ್ತಿರುವ ಮೂಲಕ ಈ ಪ್ರೋಮೋ ಆರಂಭಗೊಳ್ಳುತ್ತದೆ. ಮಳೆ ಬಂದಾಗ ಮಲ್ನಾಡ್ ಅವರನ್ನು ಗುರುತು ಹಿಡಿಯುವುದು ತುಂಬಾ ಸುಲಭ ಅವರಿಗೆ ಮಳೆ ಅಂದ್ರೆ ತುಂಬಾ ಇಷ್ಟ ತಾರಿಣಿ ಮಲ್ನಾಡ್ ಹುಡುಗಿ ಎನ್ನುವ ವಿಚಾರವನ್ನು ಪ್ರೋಮೊದಲ್ಲಿ ವಾಹಿನಿ ಹಂಚಿಕೊಂಡಿದೆ. ಸೋನೆ ಮಳೆಯ ಜೊತೆ ಕನಸಲ್ಲಿ ಬಂದವನು ಈಗ ಮನಸಲ್ಲೂ ನಿಂತಾಯ್ತು ಇನ್ನು ನೇರ ಬೇಟಿ ಅಷ್ಟೇ ಬಾಕಿ! ಎನ್ನುವ ಮಾಹಿತಿಯನ್ನಷ್ಟೇ ವಾಹಿನಿ ಹಂಚಿಕೊಂಡಿದೆ. ನಟಿ ಪ್ರಥಮ ಪ್ರಸಾದ್ ಧಾರಾವಾಹಿಯಲ್ಲಿ ಸುಮತಿ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ಈ ಧಾರಾವಾಹಿ ಯಾವ ಸಮಯಕ್ಕೆ ಮೂಡಿಬರಲಿದೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಯಾವ ಧಾರಾವಾಹಿಯು ತಮ್ಮ ಮುಗಿಸುತ್ತದೆ ಎನ್ನುವ ಪ್ರಶ್ನೆಯಂತೂ ಪ್ರೇಕ್ಷಕರನ್ನು ಕಾಡುತ್ತಿರುವುದು ಸುಳ್ಳಲ್ಲ.

    ಯಾವ ಧಾರವಾಹಿಯನ್ನು ಮುಗುಸುತ್ತಿದ್ದೀರಾ? ಅಭಿಮಾನಿಗಳ ಪ್ರಶ್ನೆ

    ಕಮೆಂಟ್ ಸೆಕ್ಷನ್ ನಲ್ಲಂತೂ ಕಲರ್ಸ್ ಕನ್ನಡ ಅಭಿಮಾನಿಗಳು ಯಾವ ಧಾರವಾಹಿಯನ್ನು ಮುಗುಸುತ್ತಿದ್ದೀರಾ? ಎಂಬ ಪ್ರಶ್ನೆಯನ್ನು ಎಲ್ಲರೂ ಮಾಡುತ್ತಿದ್ದಾರೆ. ಉತ್ತಮ ಕಥೆಯನ್ನು ನೀಡಿ ಅದೇ ಅತ್ತೆ-ಸೊಸೆ ಫ್ಯಾಮಿಲಿ ಡ್ರಾಮಾ ಬಿಟ್ಟು ಬೇರೆನಾದರೂ ಹೊಸ ಕಥೆಯೊಂದಿಗೆ ಬನ್ನಿ ಎಂದು ಕೇಳಿಕೊಂಡಿದ್ದಾರೆ.

    ನಾಯಕ ನಟಿ ಅಮಿತಾ ಸದಾಶಿವ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲಾ.  ಜಗತ್ ಕಿಲಾಡಿ ಹಾಗೂ ಆ ಎರಡು ವರ್ಷಗಳು ಎನ್ನುವ ಎರಡು ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಧಾರಾವಾಹಿ ಆರಂಭವಾದ ಮೇಲಷ್ಟೇ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ‌ತಿಳಿದುಕೊಳ್ಳಬೇಕು.

    ಇದನ್ನೂ ಓದಿ: Vaishnavi Gowda: ರಾ ರಾ ರಕ್ಕಮ್ಮ ಎಂದು ಹೆಜ್ಜೆ ಹಾಕಿದ ವೈಷ್ಣವಿ ಗೌಡ - ಕಾಮೆಂಟ್​ಗಳ ಮಳೆ ಸುರಿಸಿದ ಅಭಿಮಾನಿಗಳು

    ನಾಯಕ ನಟ ಯಾರು ಎಂಬ ಮಾಹಿತಿಯನ್ನು ಇನ್ನೂ ವಾಹಿನಿಯು ಬಿಟ್ಟು ಕೊಟ್ಟಿಲ್ಲ

    ಇನ್ನು ನಟಿಯ ಕನಸಲ್ಲಿ ಬರುತ್ತಿರುವ ಆ ಹುಡುಗ ಯಾರು ನಾಯಕ ನಟನಾಗಿ ಯಾರು ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇನ್ನೂ ವಾಹಿನಿಯು ಬಿಟ್ಟು ಕೊಟ್ಟಿಲ್ಲ. ನಟ ಪ್ರೋಮೊದಲ್ಲಿ ಬೈಕ್ ನಲ್ಲಿ ರಾಯಲ್ ಆಗಿ ಎಂಟ್ರಿ ಕೊಟ್ಟಿದ್ದಾನೆ ಆದರೆ ತನ್ನ ಮುಖವನ್ನು ಇಲ್ಲಿ ಹೆಲ್ಮೆಟ್ ಮೂಲಕ ಮುಚ್ಚಿಕೊಂಡಿದ್ದರಿಂದ ನಟ ಯಾರೆಂಬುದು ಪ್ರೇಕ್ಷಕರೆಲ್ಲರ ಕುತೂಹಲವಾಗಿದೆ. ಧಾರಾವಾಹಿ ಯಾವಾಗ ಮೂಡಿಬರಲಿದೆ ಎಂದು ಪ್ರೇಕ್ಷಕರೆಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
    Published by:Swathi Nayak
    First published: