Raja Rani 2: ಇದು ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋ, ಶುರುವಾಗ್ತಿದೆ 'ರಾಜಾ-ರಾಣಿ' ಸೀಸನ್ 2
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ-ರಾಣಿ' ರಿಯಾಲಿಟಿ ಶೋ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಮತ್ತೆ ನಿಮ್ಮನ್ನು ರಂಜಿಸಲು ರಾಜಾ ರಾಣಿಯರು ಬರುತ್ತಿದ್ದಾರೆ. ಅಂದರೆ ಈ ಬಾರಿ 'ರಾಜಾ-ರಾಣಿ 2' ಶೋ ಪ್ರಾರಂಭಿಸಲಾಗುತ್ತಿದೆ.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋ ದಿನೆ ದಿನೇ ವೀಕ್ಷಕರ ಗಮನ ಸೆಳೆದಿದೆ. ರಿಯಲ್ ಲೈಫ್ (Real Life) ನಲ್ಲೂ ಹೀಗೆ ಇರ್ತಾರಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. 'ಕಲರ್ಸ್ ಕನ್ನಡ' ಸದಾ ಹೊಸಹೊಸ ರಿಯಾಲಿಟಿ ಶೋ (Reality Show) ಗಳ ಮೂಲಕ ವೀಕ್ಷಕರ ಎದುರು ಬರುತ್ತಿದೆ. ಈ ಬಾರಿ 'ರಾಜಾ-ರಾಣಿ 2' (Raja Rani Season 2) ಶೋಅನ್ನು ಮತ್ತೆ ತರಲಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ-ರಾಣಿ' ರಿಯಾಲಿಟಿ ಶೋ (Raja Rani Show) ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ 'ರಾಜಾ-ರಾಣಿ' ಸೀಸನ್ 2 ಆರಂಭವಾಗಲಿದೆ.
ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅನೇಕರಲ್ಲಿ ಇರುತ್ತದೆ. 'ರಾಜಾ-ರಾಣಿ' ವೇದಿಕೆ ಮೇಲೆ ಕಿರುತೆರೆ ಸೆಲೆಬ್ರಿಟಿಗಳ ಸಾಕಷ್ಟು ಗುಟ್ಟುಗಳು ರಟ್ಟಾಗಿತ್ತು. 'ಮೊದಲ ಸೀಸನ್ಅನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಇದು ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿತ್ತು. ಈಗ ಎರಡನೇ ಸೀಸನ್ನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಬರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ವೈರಲ್ ಆಗಿದೆ 'ರಾಜಾ-ರಾಣಿ-2' ಪ್ರೋಮೋ
'ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ರಿಯಾಲಿಟಿ ಶೋ ರಾಜಾ-ರಾಣಿ ಮತ್ತೆ ಬರುತ್ತಿದೆ. ರಾಜಾ-ರಾಣಿ 2' ಎಂದು ಕಲರ್ಸ್ ಕನ್ನಡ ವಾಹಿನಿ ಇನ್ಸ್ಟಾಗ್ರಾಮ್ನಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋದ ಕಮೆಂಟ್ ಬಾಕ್ಸ್ನಲ್ಲಿ ಫ್ಯಾನ್ಸ್ 'ಬಿಗ್ ಬಾಸ್ ಹಾಗೂ ಮಜಾ ಟಾಕೀಸ್ ಹೊಸ ಸೀಸನ್ ಯಾವಾಗ' ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ವಾಹಿನಿ ಕಡೆಯಿಂದ ಉತ್ತರ ಬಂದಿಲ್ಲ.
12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ ಆಗಿದೆ. ಪ್ರದರ್ಶನವು ಈ ಜೋಡಿಗಳ ಬಾಂಧವ್ಯವನ್ನು ವಿವಿಧ ಆಟಗಳ ಮೂಲಕ ಪರಿಶೋಧಿಸುತ್ತದೆ. ಕಾರ್ಯಕ್ರಮದ ಉತ್ಕೃಷ್ಟ ಸಂದೇಶವೆಂದರೆ 'ಒಬ್ಬರನ್ನೊಬ್ಬರು ಬಿಟ್ಟುಕೊಡಲು ನಿರಾಕರಿಸುವ ಇಬ್ಬರು ಅಪರಿಪೂರ್ಣ ವ್ಯಕ್ತಿಗಳು ಪರಿಪೂರ್ಣ ದಾಂಪತ್ಯ.'
ದಂಪತಿ ಆಧಾರಿತ ರಿಯಾಲಿಟಿ ಶೋನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಮತ್ತು ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದಾರೆ. ಅನುಪಮಾ ಗೌಡ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.
'ಗೊಂಬೆ' ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಗೆದ್ದು ಬೀಗಿದ್ದರು
ಕಳೆದ ಸೀಸನ್ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ಮೊದಲಾದವರು ಭಾಗಿ ಆಗಿದ್ದರು. ಅಂತಿಮವಾಗಿ 'ಗೊಂಬೆ' ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಗೆದ್ದು ಬೀಗಿದ್ದರು. ಈ ಮೂಲಕ ರಾಜಾ-ರಾಣಿ ಕಿರೀಟ ತೊಟ್ಟಿದ್ದರು. ರಿಯಾಲಿಟಿ ಶೋ ಯಾವಾಗ ಪ್ರಸಾರವಾಗಲಿದೆ ಎಂಬ ಬಗ್ಗೆ ಘೋಷಣೆ ಆಗಿಲ್ಲ.
ಈ ರಿಯಾಲಿಟಿ ಶೋ ಅನೇಕರಿಗೆ ಸ್ಪೂರ್ತಿಯಾಗಿತ್ತು. ಹೆಣ್ಣು ಮಕ್ಕಳು ಹೇಗೆಲ್ಲಾ ಯೋಚನೆ ಮಾಡುತ್ತಾರೆ, ಎಷ್ಟು ಕಷ್ಟ ಪಡುತ್ತಾರೆ ಎಂಬ ದೊಡ್ಡ ವಿಚಾರಗಳನ್ನು ಸೂಕ್ಷವಾಗಿ ತೋರಿಸಲಾಗಿದೆ. ಕಿರುತೆರೆ ನಟಿ ನೇಹಾ ಗೌಡ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರಣ 7-8 ವರ್ಷಗಳಿಂದ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿರಲಿಲ್ಲ. ಮದುವೆಗೂ ಮುನ್ನ ಪ್ರತಿ ಹುಟ್ಟುಹಬ್ಬಕ್ಕೆ ಸೀರೆ ಕೊಡುತ್ತೇನೆ ಎಂದು ಹೇಳಿದ್ದರು. ಅದು ಮಿಸ್ ಆಗಿದ್ದ ಕಾರಣ ರಾಜಾ ರಾಣಿ ವೇದಿಕೆ ಮೇಲೆ 7-8 ಸೀರೆ ಕೊಟ್ಟಿದ್ದಾರೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಸ್ಪೆಷಲ್ ಹಾಡು ಡೆಡಿಕೇಟ್ ಮಾಡಿದ್ದಾರೆ.