• Home
  • »
  • News
  • »
  • entertainment
  • »
  • Aishwarya-Nawaj: ಬೈಕ್ ರೇಸರ್ ಐಶ್ವರ್ಯ ಮೇಲೆ ಸೈಕೋ ನವಾಜ್‍ಗೆ ಕುಚ್​ಕುಚ್!

Aishwarya-Nawaj: ಬೈಕ್ ರೇಸರ್ ಐಶ್ವರ್ಯ ಮೇಲೆ ಸೈಕೋ ನವಾಜ್‍ಗೆ ಕುಚ್​ಕುಚ್!

ಬೈಕ್ ರೇಸರ್ ಐಶ್ಚರ್ಯ

ಬೈಕ್ ರೇಸರ್ ಐಶ್ಚರ್ಯ

ಐಶ್ವರ್ಯ ಅವರೇ. ನಾನು ನಿಮ್ಮನ್ನ ನೋಡಿದಾಗಿನಿಂದ ಫಿದಾ ಆಗ್ಬಿಟ್ಟಿದ್ದೀನಿ. ಸೋ, ನನಗೆ ಇಂಗ್ಲೀಷ್ ಸ್ಟೈಲ್‍ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು. ಆದರೆ, ನಮ್ಮ ಮನಸ್ಸು ತುಂಬಾ ದೊಡ್ಡದು. ನಮ್ಮದು - ನಿಮ್ಮದು ದೊಡ್ಡ ಮನಸ್ಸಾಗಿ ದೊಡ್ಡ ದೊಡ್ಡದಾಗಿ ಪ್ರೀತಿ ಮಾಡೋಣ ಎಂದು ನವಾಜ್ ಪ್ರಪೋಸ್ ಮಾಡಿದರು.

ಮುಂದೆ ಓದಿ ...
  • Share this:

    ಬಿಗ್ ಬಾಸ್ (Bigg Boss) ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ (Reality Show). ಬಿಗ್ ಬಾಸ್ ಸೀಸನ 9 (Season 9) ಶುರುವಾಗಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ ತುಂಬಾ ವಿಶೇಷವಾಗಿದೆ. ಯಾಕಂದ್ರೆ 9 ಪ್ರವೀಣರ ಜೊತೆ 9 ನವೀನರು ಬಂದಿದ್ದಾರೆ. ಅದರಲ್ಲಿ 9 ಜನ ಹುಡುಗಿಯರು. 9 ಜನ ಹುಡುಗರು ಇದ್ದಾರೆ. ಬಂದಿರುವ ಪ್ರವೀಣರೆಲ್ಲಾ ಟಾಪ್ 5 ತನಕ ಹೋಗಿ ಬಂದಿರುವವರೇ. ಈ ಬಾರಿ ಕಪ್ ಗೆಲ್ಲಲೇ ಬೇಕು ಎಂದು ಹಠ ತೊಟ್ಟು ಬಂದಿದ್ದಾರೆ. ನವೀನರೂ ಏನೂ ಕಮ್ಮಿ ಇಲ್ಲ. ಎಲ್ಲ ಟ್ಯಾಲೆಂಟ್ ಗಳು. ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುವಂತವರು. ನವೀನರಲ್ಲಿ ಈ ಬಾರಿ ಸಿನಿಮಾ ಬಗ್ಗೆ ಡೈಲಾಗ್ ಹೇಳೋ ಸೈಕೋ ನವಾಜ್ ಬಂದಿದ್ದಾರೆ. ಇನ್ನು ಬೈಕ್ ರೇಸರ್ ಐಶ್ವರ್ಯ (Aishwarya) ಬಂದಿದ್ದಾರೆ. ಐಶ್ವರ್ಯ ಪಿಸೆ ಮೇಲೆ ನವಾಜ್‍ಗೆ ಲವ್ ಆಗಿದೆಯಂತೆ.


    ಯಾರು ಈ ಐಶ್ವರ್ಯ ಪಿಸೆ?
    9 ನವೀನರಲ್ಲಿ ಮೋಟರ್ ಸೈಕಲ್ ರೇಸರ್ ಐಶ್ವರ್ಯ ಪಿಸೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 10 ಬಾರಿ ವರ್ಲ್ಡ್  ಚಾಂಪಿಯನ್ ಪಟ್ಟ ಗೆದ್ದ ಕೀರ್ತಿ ಇವರದು. ಮೋಟರ್ ಬೈಕ್ ರೇಸ್ ಲಾಭ ತಿಳಿಸಿಕೊಡೋದೇ ಇವರ ಉದ್ದೇಶವಂತೆ. ಬೆಂಗಳೂರು ಮೂಲದ ಐಶ್ವರ್ಯಾ ಪಿಸೆ ಅವರು ಮೋಟಾರ್ ಸ್ಪೋರ್ಟ್ಸ್ ನಲ್ಲಿ ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಪಡೆದಿದ್ದಾರೆ.


    ನೀನು ಹುಡುಗಿ, ಬೈಕ್ ಓಡಿಸಬೇಡ ಅಂತ ಕೆಲವರು ಹೇಳಿದ್ರೆ, ಮದುವೆ ಆಗೋದು ಕಷ್ಟ ಎಂದು ಹಲವು ಜನ ಹೇಳಿದ್ರಂತೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ತಮ್ಮ ಇಷ್ಟದ ಕೆಲಸ ಮಾಡ್ತಿದ್ದಾರೆ.


    ಇದನ್ನೂ ಓದಿ: Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?


    ಹಾಲಿವುಡ್ ಹೀರೋಯಿನ್ ತರಹ ಐಶ್ವರ್ಯ
    ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮ ಶುರುವಾದ ದಿನ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೈಗೆ ಕಟ್ಟಲು ಎಲ್ಲರಿಗೂ ಬ್ಯಾಂಡ್ ತೆಗೆದುಕೊಳ್ಳಲು ಹೇಳಿದ್ರು. ಆಗ ನವಾಜ್ ಸುರಸುಂದರಿ ಟ್ಯಾಗ್ ತೆಗೆದುಕೊಂಡಿದ್ದರು. ಅದನ್ನು ಐಶ್ವರ್ಯ ಅವರಿಗೆ ಕೊಟ್ಟಿದ್ರು. ನೀವು ಹಾಲಿವುಡ್ ನಟಿ ತರ ಇದ್ದಾರೆ. ಮೇಕಪ್ ಹಾಕಿಕೊಳ್ಳದಿದ್ರು ಸುಂದರವಾಗಿ ಕಾಣ್ತರೆ ಎಂದು ಹೇಳಿದ್ರು.


    ಐಶ್ವರ್ಯಾ-ನವಾಜ್


    ನವಜ್ ಪ್ರಪೋಸ್ ಮಾಡಿದ್ದು ಹೇಗೆ?
    'ನೋಡಿ ಐಶ್ವರ್ಯ ಪ್ರೀತ್ಸೆ ಅವರೇ. ನಾನು ನಿಮ್ಮನ್ನ ನೋಡಿದಾಗಿನಿಂದ ಫಿದಾ ಆಗ್ಬಿಟ್ಟಿದ್ದೀನಿ. ಸೋ, ನನಗೆ ಇಂಗ್ಲೀಷ್ ಸ್ಟೈಲ್‍ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು. ಆದರೆ, ನಮ್ಮ ಮನಸ್ಸು ತುಂಬಾ ದೊಡ್ಡದು. ನಮ್ಮದು - ನಿಮ್ಮದು ದೊಡ್ಡ ಮನಸ್ಸಾಗಿ ದೊಡ್ಡ ದೊಡ್ಡದಾಗಿ ಪ್ರೀತಿ ಮಾಡೋಣ, ಚಿಕ್ಕ ಚಿಕ್ಕದಾಗಿ ಖುಷಿ ಪಡೋಣ. ಚಿಕ್ಕ ಚಿಕ್ಕ ಖುಷಿಯಲ್ಲೇ ಚಿಕ್ಕ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಚಿಕ್ಕ ಮಕ್ಕಳನ್ನ ದೊಡ್ಡ ದೊಡ್ಡದಾಗಿ ಮಾಡೋವರೆಗೂ ಸಾಕೋಣ. ಚಿಕ್ಕ ಚಿಕ್ಕದಾಗಿ ನಕ್ಕೊಂಡು ಸಾಯೋಣ. ದೊಡ್ಡ ದೊಡ್ಡದಾಗಿ ನಮ್ಮ ಸಮಾಧಿ ಕಟ್ತಾರೆ, ಅವರ ಮನಸ್ಸಿನಲ್ಲಿ ನಮ್ಮನ್ನ ಚಿಕ್ಕ ಚಿಕ್ಕದಾಗಿ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ' ಎಂದು ನವಾಜ್ ಪ್ರಪೋಸ್ ಮಾಡಿದರು.


    ಇದನ್ನೂ ಓದಿ: Allu Arjun: ಗೋಲ್ಡನ್ ಟೆಂಪಲ್‌ನಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ! ಫೋಟೋಸ್ ಇಲ್ಲಿವೆ ನೋಡಿ


    ಐಶ್ವರ್ಯ ಅವರು ಹೇಳಿದ್ದೇನು?
    'ವಾವ್, ಬಿಡಪ್ಪ ನಿನಗೆ ಒಳ್ಳೆ ಹುಡುಗಿ ಸಿಕ್ಕೇ ಸಿಕ್ತಾಳೆ. ಹಿಂಗ್ ಹೇಳಿದರೆ, ಯಾರಾದರೂ ನಿನಗೆ ಸಿಕ್ಕೇ ಸಿಕ್ತಾಳೆ ಎಂದು ಐಶ್ವರ್ಯ ಅವರು ಹೇಳ್ತಾರೆ. ಅದಕ್ಕೆ, ನವಾಜ್, ನೀವು ಸಿಗಲ್ವಾ ಎಂದು ಪ್ರಶ್ನಿಸಿದರು. ಐಶ್ವರ್ಯ ನಕ್ಕ ಸುಮ್ಮನಾದ್ರು.

    Published by:Savitha Savitha
    First published: