• Home
 • »
 • News
 • »
 • entertainment
 • »
 • Bigg Boss Kannada: ಜಂಟಲ್ ಮ್ಯಾನ್ ಅಲ್ಲ, 'ಗಂಟಲ್ ಮ್ಯಾನ್'! ಈ ನಿಕ್‌ ನೇಮ್ ಯಾರಿಗೆ ಕೊಟ್ರು ಸುದೀಪ್?

Bigg Boss Kannada: ಜಂಟಲ್ ಮ್ಯಾನ್ ಅಲ್ಲ, 'ಗಂಟಲ್ ಮ್ಯಾನ್'! ಈ ನಿಕ್‌ ನೇಮ್ ಯಾರಿಗೆ ಕೊಟ್ರು ಸುದೀಪ್?

 'ಗಂಟಲ್ ಮ್ಯಾನ್' ಇದು ಸುದೀಪ್ ಕೊಟ್ಟ ನಿಕ್ ನೇಮ್!

'ಗಂಟಲ್ ಮ್ಯಾನ್' ಇದು ಸುದೀಪ್ ಕೊಟ್ಟ ನಿಕ್ ನೇಮ್!

ಸುದೀಪ್ ಅವರು ಪ್ರತಿ ಸೀಸನ್‌ನಲ್ಲೂ ಅಡುಗೆ ಮಾಡಿ ಕಳಿಸುತ್ತಾರೆ. ಅದೇ ರೀತಿ ಈ ಬಾರಿಯೂ ಸ್ಪರ್ಧಿಗಳಿಗೆ ಅವರಿಷ್ಟದ ಅಡುಗೆಯನ್ನು ಕಳಿಸಿ, ಅವರ ದಿನವನ್ನು ಸ್ಪೆಷಲ್ ಮಾಡಿದ್ದಾರೆ. ಜೊತೆಗೆ ಕಿಚ್ಚನ ಪ್ರೀತಿಯ ಪತ್ರವೂ ಇತ್ತು!

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ (Bigg Boss) ಸೀಸನ್ 09 ಚೆನ್ನಾಗಿ ಓಡ್ತಾ ಇದೆ. ಪ್ರವೀಣರು, ನವೀನರು ಚೆನ್ನಾಗಿ ಸ್ಪರ್ಧೆ ನೀಡ್ತಾ ಇದ್ದಾರೆ. ಈ ವಾರ ಸುದೀಪ್ (Sudeep) ಅವರು ಮನೆಯ ಸ್ಪರ್ಧಿಗಳಿಗಾಗಿ ವಿಶೇಷ ಅಡುಗೆ ಮಾಡಿ ಕಳಿಸಿದ್ದಾರೆ. ಸುದೀಪ್ ಅವರು ಅಡುಗೆ ಮಾಡುತ್ತಿರುವ ವಿಡಿಯೋವನ್ನು ಮನೆ ಮಂದಿಗೆ ತೋರಿಸಿದ್ದಾರೆ. ಸುದೀಪ್ ಅಡುಗೆ ಮಾಡುವುದನ್ನು ನೋಡಿ ಮನೆ ಮಂದಿ ಖುಷಿಯಾಗಿ ಕುಣಿದಾಡಿದ್ದರು. ಕಿಚ್ಚ ಸುದೀಪ್ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತು. ಇದೀಗ  ಅವರು ಬಿಗ್ ಬಾಸ್ ಮನೆಯವರಿಗೆ ರುಚಿ ರುಚಿಯಾದ ಊಟ ಕಳಿಸಿದ್ದರು.  ಅಡುಗೆ ಮಾಡುವುದರ ಜೊತೆಗೆ ಮನೆಯವರಿಗೆ ಪ್ರೀತಿಯಿಂದ ಪತ್ರ  (Letter) ಬರೆದು ಕಳಿಸಿದ್ದಾರೆ. ಅದನ್ನು ನೋಡಿ ಮನೆಯವರು ಸಂತೋಷಗೊಂಡಿದ್ದಾರೆ. ಪ್ರಶಾಂತ್ ಸಂಬರ್ಗಿಗೆ ಗಂಟಲ್ ಮ್ಯಾನ್ (Gantal Man) ಎಂದು ಕಳಿಸಿದ್ದರು.


  ಸ್ಪರ್ಧಿಗಳಿಗೆ ಕಿಚ್ಚನ ಅಡುಗೆ
  ಸುದೀಪ್ ಅವರು ಪ್ರತಿ ಸೀಸನ್‌ನಲ್ಲೂ ಅಡುಗೆ ಮಾಡಿ ಕಳಿಸುತ್ತಾರೆ. ಅದೇ ರೀತಿ ಈ ಬಾರಿಯೂ ಸ್ಪರ್ಧಿಗಳಿಗೆ ಅವರಿಷ್ಟದ ಅಡುಗೆಯನ್ನು ಕಳಿಸಿ, ಅವರ ದಿನವನ್ನು ಸ್ಪೆಷಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಕಳಿಸಿದ ಊಟವನ್ನು ಮನೆ ಮಂದಿ ಖುಷಿಯಾಗಿ ತಿಂದಿದ್ದಾರೆ. ವಾರ ಪೂರ್ತಿ ಕಷ್ಟ ಪಟ್ಟಿದ್ದಕ್ಕೆ ಸಾರ್ಥಕ ಆಯ್ತು, ಒಳ್ಳೆ ಊಟ ಸಿಕ್ತು ಎಂದಿದ್ದಾರೆ. ಅಲ್ಲದೇ ಮನೆ ಮಂದಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. "ಐ ಲವ್ ಯು ಸರ್" ಎಂದಿದ್ದಾರೆ.


  ಮನೆಯವರು ಹೇಳಿದ್ದೇನು?
  "ಚಿಕನ್ ನೀಡಿದ್ದಕ್ಕೆ ಧನ್ಯವಾದಗಳು, ಸುದೀಪ್ ಸರ್ ಥ್ಯಾಂಕ್ಯೂ ಸೋ ಮಚ್. ಪ್ರತಿ ವಾರ ಚಿಕನ್ ಬರಲಿ. ನಿಮ್ಮ ಕೈಯಿಂದ ಆಹಾರ ತಿಂದ ನಾವೇ ಪುಣ್ಯವಂತರು" ಎಂದು ಕಾವ್ಯಶ್ರೀ ಗೌಡ ಹೇಳಿದ್ದಾರೆ. "ನಾನು ಎರಡನೇ ಬಾರಿಗೆ ನಿಮ್ಮ ಕೈರುಚಿ ತಿಂತಿರೋದು. ತುಂಬಾ ಖುಷಿಯಾಯ್ತು" ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.


  ಇದನ್ನೂ ಓದಿ: Shrirasthu Shubhamasthu: ಸಿರಿ-ಸಮರ್ಥ್ ಮದುವೆಗೆ ತುಳಸಿ ಒಪ್ಪಿಗೆ, ಆದ್ರೂ ವಿವಾಹಕ್ಕೆ ಎದುರಾಗಿದೆ ವಿಘ್ನ! 


  ಪ್ರತಿಯೊಬ್ಬರಿಗೂ ಪ್ರೀತಿಯ ಪತ್ರ
  ಸುದೀಪ್ ಅವರು ಅಡುಗೆ ಮಾಡುವುದರ ಜೊತೆಗೆ ಮನೆಯವರಿಗೆ ಪ್ರೀತಿ ಪತ್ರ ಬರೆದು ಕಳಿಸಿದ್ದಾರೆ. ಅದನ್ನು ನೋಡಿ ಮನೆಯವರು ಸಂತೋಷಗೊಂಡಿದ್ದಾರೆ. ರೂಪೇಶ್ ಶೆಟ್ಟಿಗೆ "ನೀವು ನೋಡಲು ಚಂದ ಕಾಣುವ ಹಾಗೆ, ನಿಮಗೂ ನೀವು ಹೊಸತಾಗಿರಬೇಕು" ಎಂದಿದ್ದಾರೆ. ರಾಕೇಶ್ ಅಡಿಗ ಕೂಗಾಡಿದ್ದ ಕಾರಣ "ಬದಲಾವಣೆ ಒಳ್ಳೆಯದಕ್ಕಾಗಿರಬೇಕು" ಎಂಬರ್ಥದಲ್ಲಿ ಬರೆದಿದ್ದರು. ವಿನೋದ್ ಗೊಬ್ಬರಗಾಲ ಅವರಿಗೆ, "ನಗಿಸಬೇಕು" ಎಂದು ಹೇಳಿದ್ದರು. ಕಾವ್ಯಶ್ರೀ ಗೌಡಗೆ "ಕಪ್ಪೆ ಯಾವಾಗಲೂ ವಟ ವಟ ಎನ್ನುತ್ತಾ ಇರಿ" ಎಂದಿದ್ದಾರೆ.


  kannada bigg boss, sudeep give gantal man name to prashanth sambargi, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಜಂಟಲ್ ಮ್ಯಾನ್ ಅಲ್ಲ, 'ಗಂಟಲ್ ಮ್ಯಾನ್' ಇದು ಸುದೀಪ್ ಕೊಟ್ಟ ನಿಕ್ ನೇಮ್!, kannada news, karnataka news,
  ಸುದೀಪ್


  "ಗಂಟಲ್ ಮ್ಯಾನ್ ಪ್ರಶಾಂತ್ ಸಂಬರ್ಗಿ"
  ಪ್ರತಿಯೊಬ್ಬ ಸ್ಪರ್ಧಿಗೂ ಪ್ರೀತಿಯ ಸಂದೇಶ ಕಳಿಸುವ ರೀತಿ, ಪ್ರಶಾಂತ್ ಸಂಬರ್ಗಿಗೆ 'ಗಂಟಲ್ ಮ್ಯಾನ್' ಎಂದು ಕಳಿಸಿದ್ದರು. ಆಟದಲ್ಲಿ ರೂಲ್ಸ್ ರೂಲ್ಸ್ ಬ್ರೇಕ್ ಆದ್ರೂ ಪರವಾಗಿಲ್ಲ. ಮನಸ್ಸಿನ ರೂಲ್ಸ್ ಬ್ರೇಕ್ ಮಾಡಬಾರದು. ನಿಮ್ಮ ಕಿರುಚಾಟ ಮುಂದುವರೆಯಲಿ ಗಂಟಲ್ ಮ್ಯಾನ್ ಎಂದು ಕಳಿಸಿದ್ದರು.


  kannada bigg boss, sudeep give gantal man name to prashanth sambargi, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಜಂಟಲ್ ಮ್ಯಾನ್ ಅಲ್ಲ, 'ಗಂಟಲ್ ಮ್ಯಾನ್' ಇದು ಸುದೀಪ್ ಕೊಟ್ಟ ನಿಕ್ ನೇಮ್!, kannada news, karnataka news,
  ಪ್ರಶಾಂತ್ ಸಂಬರ್ಗಿ


  ಇದನ್ನೂ ಓದಿ: Actress Vijaya Lakshmi: ನಕ್ಷತ್ರಾಳ ನಿಜ ಜೀವನದ ಬಗ್ಗೆ ನಿಮಗೆ ಗೊತ್ತಾ? ಸಿಂಪಲ್ ಹುಡುಗಿ ಈ ಬೆಡಗಿ! 


  ಪ್ರಶಾಂತ್ ಸಂಬರ್ಗಿ ಗಂಟಲ್ ಮ್ಯಾನ್ ಕೇಳಿ ಮನೆ ಮಂದಿ ಎಲ್ಲ ನಕ್ಕರು. ಒಳ್ಳೆಯ ಪದ ಎಂದು ಹೇಳಿದ್ದರು. ಪ್ರಶಾಂತ್ ಸಂಬರ್ಗಿ ಮನೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಜಗಳ ಆಡ್ತಾನೇ ಇರ್ತಾರೆ. ಅದಕ್ಕೆ ಸುದೀಪ್ ಗಂಟಲ್ ಮ್ಯಾನ್ ಎಂದು ಕೊಟ್ಟಿದ್ದಾರೆ.

  Published by:Savitha Savitha
  First published: