• Home
  • »
  • News
  • »
  • entertainment
  • »
  • BBK Season 09: ಕನ್ನಡಿಗರ ವಿರುದ್ಧ ಮಾತನಾಡಿದ್ದ ಸಂಬರ್ಗಿಗೆ ಕಿಚ್ಚನ ಕ್ಲಾಸ್, ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ!

BBK Season 09: ಕನ್ನಡಿಗರ ವಿರುದ್ಧ ಮಾತನಾಡಿದ್ದ ಸಂಬರ್ಗಿಗೆ ಕಿಚ್ಚನ ಕ್ಲಾಸ್, ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ!

ಪ್ರಶಾಂತ್‍ಗೆ ಸುದೀಪ್ ಕ್ಲಾಸ್

ಪ್ರಶಾಂತ್‍ಗೆ ಸುದೀಪ್ ಕ್ಲಾಸ್

ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ಎಚ್ಚರಿಕೆ ಸುದೀಪ್  ನೀಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಅದರಲ್ಲಿ ಪ್ರಶಾಂತ್ ಸಂಬರ್ಗಿ  (Prashanth Sambargi) ಕೂಡ ಒಬ್ಬರು. ಪ್ರಶಾಂತ್ ಸಂಬರ್ಗಿ ಇದ್ರೆ ಕೇಳಬೇಕಾ, ಅಲ್ಲಿ ಜಗಳ ಇದ್ದೇ ಇರುತ್ತೆ. ಈ ಬಾರಿ ಆ ಲೀಸ್ಟ್ ಗೆ ರೂಪೇಶ್ ರಾಜಣ್ಣ ಸೇರಿದ್ದಾರೆ. ಇಬ್ಬರು ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಕನ್ನಡ ಹೋರಾಟಗಾರಿಗೆ ಅವಮಾನ ಮಾಡಿದ್ದ ಪ್ರಶಾಂತ್ ಸಂಬರ್ಗಿಗೆ ಕಿಚ್ಚ ಸುದೀಪ್ (Sudeep) ಕ್ಲಾಸ್  (Class) ತೆಗೆದುಕೊಂಡಿದ್ದಾರೆ.


    ಪ್ರಶಾಂತ್-ರಾಜಣ್ಣ ಪದೇ ಪದೇ ಜಗಳ
    ಬಿಗ್ ಬಾಸ್ ಸೀಸನ್ 09ರಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಯಾವುದಾದರೂ ವಿಷಯಕ್ಕೆ ಇಬ್ಬರು ಕಾಲು ಕೆರೆದುಕೊಂಡು ಗಲಾಟೆ ಮಾಡಿಕೊಳ್ತಾನೆ ಇರುತ್ತಾರೆ. ಮತ್ತೆ ಮಾತನಾಡುತ್ತಾರೆ. ಮರು ದಿನ ಮತ್ತೆ ಜಗಳ. ಇದೇ ಆಗಿ ಹೋಗಿದೆ. ಅದು ಓವರ್ ಆಗಿ ಪ್ರಶಾಂತ್ ಸಂಬರ್ಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ರು.


    ಹೋರಾಟ ನಡೆಸಿದ್ದ ಕನ್ನಡ ಪರ ಹೋರಾಟಗಾರರು
    ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣನ ಮೇಲೆ ಮೈಂಡ್ ಗೇಮ್ ಹೋಗಿ, ಪ್ರಶಾಂತ್ ಸಂಬರ್ಗಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಮಾತಾನಾಡುವಾಗ ಇಲ್ಲದ ಸಲ್ಲದ ಆರೋಪ ಮಾಡ್ತಾರೆ.


    ಇದನ್ನೂ ಓದಿ: Matte Mayamruga: ಸೋಮವಾರದವರೆಗೆ ಕಾಯಲಾಗದು, ಶನಿವಾರ, ಭಾನುವಾರವೂ ಮಾಯಾಮೃಗ ಪ್ರಸಾರ ಮಾಡಬೇಕಂತೆ! 


    ರೋಲ್ ಕಾಲ್ ಗಿರಾಕಿ, ಈ ಮನೆಯಲ್ಲಿ ಕನ್ನಡ ಹೋರಾಟಗಾರನ್ನು ಬಾಯಿ ಮುಚ್ಚಿಸಿದ್ದೇನೆ ಪ್ರಶಾಂತ್ ಹೇಳ್ತಾರೆ. ಇದು ಸರಿಯಲ್ಲಿ ಅವನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ ಎಂದು ಕನ್ನಡ ಪರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು.


    bigg boss kannada season 9, sudeep class to prashanth sambargi, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕನ್ನಡಿಗರ ವಿರುದ್ಧ ಮಾತನಾಡಿದ್ದ ಸಂಬರ್ಗಿಗೆ ಕಿಚ್ಚನ ಕ್ಲಾಸ್, kannada news, karnataka news,
    ಹೋರಾಟ ನಡೆಸಿದ್ದ ಕನ್ನಡ ಪರ ಹೋರಾಟಗಾರರು


    ಕ್ಷಮೆ ಕೇಳಿ, ಕಣ್ಣೀರು ಹಾಕಿದ್ದ ಪ್ರಶಾಂತ್ ಸಂಬರ್ಗಿ
    ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ, ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ಕ್ಷಮೆ ಇರಲಿ, ಈ ರೀತಿ ಅರ್ಥ ಹೋಗಿದೆ ಎಂದ್ರೆ, ನನ್ನಿಂದ ತಪ್ಪಾಗಿದೆ. ನನಗೆ ಆ ರೀತಿ ಮಾತನಾಡಬಾರದಿತ್ತು ಎಂದು ಕ್ಷಮೆ ಕೇಳಿ, ಕಣ್ಣೀರು ಹಾಕಿದ್ದರು.


    bigg boss kannada season 9, sudeep class to prashanth sambargi, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕನ್ನಡಿಗರ ವಿರುದ್ಧ ಮಾತನಾಡಿದ್ದ ಸಂಬರ್ಗಿಗೆ ಕಿಚ್ಚನ ಕ್ಲಾಸ್, kannada news, karnataka news,
    ಕ್ಷಮೆ ಕೇಳಿ, ಕಣ್ಣೀರು ಹಾಕಿದ್ದ ಪ್ರಶಾಂತ್ ಸಂಬರ್ಗಿ


    ಪ್ರಶಾಂತ್‍ಗೆ ಸುದೀಪ್ ಕ್ಲಾಸ್
    ಪ್ರಶಾಂತ್ ಸಂಬರ್ಗಿ ಅವರೇ ಕಳೆದ ಭಾನುವಾರ, ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ.


    ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ಎಚ್ಚರಿಕೆ ಸುದೀಪ್  ನೀಡಿದ್ದಾರೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಗೂಗ್ಲಿ ಬೌಲರ್ ಅಂದ್ರೆ ಆರ್ಯವರ್ಧನ್ ಗುರೂಜಿಯಂತೆ, ಮನೆಯವರು ಹೇಳಿದ್ದೇನು? 


    ಸೈಲೆಂಟ್ ಆದ ಸಂಬರ್ಗಿ
    ಕಿಚ್ಚ ಕಿವಿ ಮಾತು ಹೇಳಿದ್ದಕ್ಕೆ ಪ್ರಶಾಂತ್ ಸಂಬರ್ಗಿ ಸೈಲೆಂಟ್ ಆದ್ರು. ಹೌದು ನನ್ನಿಂದ ತಪ್ಪಾಯ್ತು. ಮಾತನಾಡುವಾಗ ಆ ರೀತಿ ಬಂದಿದೆ. ನಾನು ಕ್ಷಮೆ ಕೇಳಿದ್ದೇನೆ. ಇನ್ನೊಮ್ಮೆ ಆ ರೀತಿ ಆಗಲ್ಲ ಎಂದು ತಮ್ಮ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.

    Published by:Savitha Savitha
    First published: