• Home
 • »
 • News
 • »
 • entertainment
 • »
 • Bigg Boss Kannada: ಡೋರ್ ತುಂಬಾ ಹತ್ತಿರ ಇದೆ ಹೋಗಿ, ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?

Bigg Boss Kannada: ಡೋರ್ ತುಂಬಾ ಹತ್ತಿರ ಇದೆ ಹೋಗಿ, ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?

ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?

ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?

ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಬಿಗ್ ಬಾಸ್ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಎಸ್ಕೇಪ್ ಆಗಿ ಓಡಿ ಹೋಗುವವರಿದ್ರೆ, ಮೇನ್ ಡೋರ್ ಬಹಳ ಹತ್ತಿರ ಇದೆ ಎಂದು ಸುದೀಪ್ ಅವರು ವಾರ್ನಿಂಗ್ ನೀಡಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ ರಾತ್ರಿ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಶನಿವಾರ ಮತ್ತು ಭಾನುವಾರ 9 ಗಂಟೆಗೆ ಪ್ರಸಾರವಾಗುತ್ತದೆ. ಈಗಾಗಲೇ ಬಿಗ್ ಬಾಸ್ 8 ಸೀಸಸ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿರುವವರು. ಪ್ರತಿ ವಾರವೂ ಒಬ್ಬಬ್ಬರು ಎಲಿಮಿನೇಟ್ ಆಗಿ ಹೋಗ್ತಾ ಇದ್ದಾರೆ. ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಅವರು ಪಂಚಾಯಿತಿ ನಡೆಸಿ ಕೊಡುತ್ತಾರೆ. ಕ್ಯಾಪ್ಟನ್ ಅಭ್ಯರ್ಥಿ ಆಯ್ಕೆಗೆ ಮನೆಯವರು ಯಾವುದೇ ಹೆಸರು ತಿಳಿಸದ ಕಾರಣ, ಕಿಚ್ಚ ಸುದೀಪ್ (Sudeep) ಎಲ್ಲರಿಗೂ ಕ್ಲಾಸ್ (Class) ತೆಗೆದುಕೊಂಡಿದ್ದಾರೆ.


  ಮುಂದಿನ ವಾರ ಕ್ಯಾಪ್ಟನ್ ಇಲ್ಲ
  ಬಿಗ್ ಬಾಸ್ ನಲ್ಲಿ ಕ್ಯಾಪ್ಟನ್ ಆಗುವುದು ಒಂದು ಹೆಮ್ಮೆಯ ವಿಷಯ. ಎಲ್ಲರೂ ಒಮ್ಮೆಯಾದ್ರೂ ಕ್ಯಾಪ್ಟನ್ ಆಗಬೇಕು ಎಂದುಕೊಳ್ಳುತ್ತಾರೆ. ಕ್ಯಾಪ್ಟನ್ ಆಗಬೇಕು ಎಂದು ಎಲ್ಲರೂ ಕಷ್ಟ ಪಡುತ್ತಾರೆ. ಆದ್ರೆ ಸ್ಪರ್ಧಿಗಳ ಎಡವಟ್ಟಿನಿಂದ ಮುಂದಿನ ವಾರ ಯಾರೂ ಕ್ಯಾಪ್ಟನ್ ಆಗಲು ಸಾಧವಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ.


  ಸ್ಪರ್ಧಿಗಳು ಮಾಡಿದ್ದೇನು?
  ಬಿಗ್ ಬಾಸ್, ಕ್ಯಾಪ್ಟನ್ ಆಗಲು 2 ತಂಡದಿಂದ ಇಬ್ಬರ ಹೆಸರು ಹೇಳಿ ಎಂದು ಸೂಚನೆ ನೀಡಿರುತ್ತಾರೆ. 2 ತಂಡದವರು ಯಾರನ್ನು ಕ್ಯಾಪ್ಟನ್ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಚರ್ಚೆ ಮಾಡ್ತಾರೆ. ಅದಕ್ಕೆ ಒಬ್ಬಬ್ಬರು ಒಂದೊಂದು ಹೇಳ್ತಾರೆ. ಪ್ರಶಾಂತ್ ಸಂಬರ್ಗಿ ಈ ವಾರ ಎಲ್ಲರೂ ಕಷ್ಟಪಟ್ಟಿದ್ದಾರೆ ನಾನು ಕ್ಯಾಪ್ಟನ್ ಆಗಬೇಕು ಅಂತಾರೆ.


  ರಾಕೇಶ್ ಅಡಿಗ ನಾನು ಒಮ್ಮೆಯೂ ಕ್ಯಾಪ್ಟನ್ ಆಗಿಲ್ಲ. ನನಗೆ ಒಂದು ಅವಕಾಶ ಕೊಡಿ ಎಂದು ತಮ್ಮ ತಂಡದವರನ್ನು ಕೇಳುತ್ತಿದ್ದಾರೆ. ಅದಕ್ಕೆ ಅವರು ಒಪ್ಪಲ್ಲ.


  ಇದನ್ನೂ ಓದಿ: Bigg Boss Kannada: ಕಿಚ್ಚ ಸುದೀಪ್ ಜೊತೆ ಕಿಚಡಿ ಕಥೆ ಹಂಚಿಕೊಂಡ ಮನೆಯವರು, ಗುರೂಜಿ ಕೋಪ! 


  ಕ್ಯಾಪ್ಟನ್ ಆದ್ರೆ ನಾಮಿನೇಷನ್ ನಿಂದ ತಪ್ಪಿಸಿಕೊಳ್ಳಬಹುದು. ಒಂದು ವಾರ ನಾಮಿನೇಟ್ ಆಗದೇ ಇರುವುದು ಕೂಡ ತುಂಬಾ ಮುಖ್ಯ. ನಾನು ಕೂಡ ಕ್ಯಾಪ್ಟನ್ ಆಗಬೇಕು ಎಂದು ಅನುಪಮಾ ಹೇಳ್ತಾರೆ. ರೂಪೇಶ್ ರಾಜಣ್ಣ ಸಹ, ನಮ್ಮ ತಂಡದಿಂದ ನಾನು ಹೋಗ್ತೀನಿ. ನನಗೆ ತುಂಬಾ ಆಸೆ ಇದೆ ಕ್ಯಾಪ್ಟನ್ ಆಗಬೇಕು ಎಂದು ಹೇಳ್ತಾರೆ. ಅದಕ್ಕೆ ಅವರ ತಂಡದವರು ಒಪ್ಪಲಿಲ್ಲ.


  kannada bigg boss, sudeep class to contestants about captain matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಮೇನ್ ಡೋರ್ ತುಂಬಾ ಹತ್ತಿರ ಇದೆ ಹೋಗಿ, ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?, kannada news, karnataka news,
  ಸುದೀಪ್ ವಾರ್ನಿಂಗ್!


  ಮೂಡದ ಒಮ್ಮತ, ಬಿಗ್ ಬಾಸ್ ನಿರ್ಧಾರ
  ಒಂದು ವಾರ ಕ್ಯಾಪ್ಟನ್ ಆದ್ರೆ 3 ವಾರ ಸೇವ್ ಆಗಬಹುದು. ಯಾರೂ ಕ್ಯಾಪ್ಟನ್ ಅಭ್ಯರ್ಥಿ ಆಟವನ್ನು ಬಿಟ್ಟು ಕೊಡಲ್ಲ. ನಾನು ಭಾಗವಹಿಸುತ್ತೇನೆ ಎಂದು ಆರ್ಯವರ್ಧನ್ ಗುರೂಜಿ ಹೇಳುತ್ತಾರೆ. ಆಟದಲ್ಲಿ ಪ್ರತಿಯೊಬ್ಬರು ಚೆನ್ನಾಗಿ ಆಡಿದ್ದಾರೆ. ಈ ನಿರ್ಧಾರವನ್ನು ಬಿಗ್ ಬಾಸ್ ಗೆ ಬಿಡೋಣ ಎಂದು ಅರುಣ್ ಸಾಗರ್ ಹೇಳ್ತಾರೆ. ಇದೇ ಮಾತನ್ನು ಅಮೂಲ್ಯ ಗೌಡ ಸಹ ಹೇಳ್ತಾರೆ. ಯಾರಲ್ಲಿಯೂ ಒಮ್ಮತ ಮೂಡಲ್ಲ.


  kannada bigg boss, sudeep class to contestants about captain matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಮೇನ್ ಡೋರ್ ತುಂಬಾ ಹತ್ತಿರ ಇದೆ ಹೋಗಿ, ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ?, kannada news, karnataka news,
  ಸುದೀಪ್ ವಾರ್ನಿಂಗ್!


  ಅದಕ್ಕೆ ಬಿಗ್ ಬಾಸ್ ಮನೆ ಮಂದಿಗೆ ಶಾಕ್ ನೀಡಿದ್ದಾರೆ. 2 ತಂಡದಿಂದ ಕ್ಯಾಪ್ಟೆನ್ಸಿ ಆಯ್ಕೆಗೆ ಯಾವುದೇ ಸದಸ್ಯರ ಹೆಸರು ಬರದ ಕಾರಣ ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಇರಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಮನೆಯವರೆಲ್ಲಾ ಬೇಸರಗೊಂಡಿದ್ದಾರೆ.


  ಇದನ್ನೂ ಓದಿ: Bigg Boss Kannada: ವೀಕೆಂಡ್​​ಗೆ ಕಿಚ್ಚನ ಸ್ಪೆಷಲ್ ಅಡುಗೆ, ಖುಷಿಯಿಂದ ಕುಣಿದಾಡಿದ ಸ್ಪರ್ಧಿಗಳು! 


  ಸುದೀಪ್ ವಾರ್ನಿಂಗ್!
  'ಬಿಗ್ ಬಾಸ್ ಒಬ್ಬಬ್ಬರ ಹೆಸರು ಕೊಡಿ ಎಂದಾಗ, ಯಾವ ಹೆಸರು ಬರಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಬಿಗ್ ಬಾಸ್ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಎಸ್ಕೇಪ್ ಆಗಿ ಓಡಿ ಹೋಗುವವರಿದ್ರೆ, ಮೇನ್ ಡೋರ್ ಬಹಳ ಹತ್ತಿರ ಇದೆ.' ಎಂದು ಸುದೀಪ್ ಅವರು ವಾರ್ನಿಂಗ್ ನೀಡಿದ್ದಾರೆ.

  Published by:Savitha Savitha
  First published: