• Home
 • »
 • News
 • »
 • entertainment
 • »
 • BBK Season 09: ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್, ಕಳೆದ ವಾರದ್ದು ಸೇರಿಸಿ ಸುದೀಪ ಮಾತು!

BBK Season 09: ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್, ಕಳೆದ ವಾರದ್ದು ಸೇರಿಸಿ ಸುದೀಪ ಮಾತು!

ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್

ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್

ಸುದೀಪ್ ಈ ವಾರ ಕಾರ್ಯಕ್ರಮದ ನಿರೂಪಣೆಗೆ ವಾಪಸ್ ಬಂದಿದ್ದು, ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಇಲ್ಲದ ವಾರದ ಪಂಚಾಯಿತಿಯನ್ನು ಮಾಡಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದರು. ಆದ್ರೆ, 4 ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ (Out) ಆಗಿದ್ದಾರೆ. ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಸುದೀಪ್ (Sudeep)  ಕ್ಲಾಸ್  (Class) ತೆಗೆದುಕೊಂಡಿದ್ದಾರೆ.


  ಕಳೆದ ವೀಕೆಂಡ್‍ಗೆ ಬಂದಿರಲಿಲ್ಲ ಸುದೀಪ್
  ಬಿಗ್ ಬಾಸ್ ಸೀಸನ್‍ಗಳನ್ನು ಜನ ತಪ್ಪದೇ ನೋಡ್ತಾರೆ. ವೀಕೆಂಡ್‍ನಲ್ಲಿ ಸುದೀಪ್ ನಡೆಸೋ ಪಂಚಾಯಿತಿಯನ್ನು ನೋಡಲು ಕಾಯ್ತಾ ಇರ್ತಾರೆ. ವಾರದ ತಪ್ಪು, ಸರಿಗಳನ್ನು ಹೇಳಿ, ಕ್ಲಾರಿಟಿ ನೀಡ್ತಾರೆ. ಆದ್ರೆ ಕಳೆದ ವಾರ ಸುದೀಪ್ ವೀಕೆಂಡ್ ಕಾರ್ಯಕ್ರಮ ನಡೆಸಿಕೊಡಲು ಬಂದಿರಲಿಲ್ಲ. ವಿವಿಧ ಟಾಸ್ಕ್ ಗಳ ಮೂಲಕ ಒಬ್ಬಬ್ಬರನ್ನೇ ಸೇವ್ ಮಾಡಿ, ಕೊನೆಗೆ ಮಯೂರಿ ಮನೆಯಿಂದ ಹೊರ ಹೋಗಿದ್ದರು.


  ಮದುವೆ ವಾರ್ಷಿಕೋತ್ಸವಕ್ಕೆ ವಿದೇಶಕ್ಕೆ
  ಸುದೀಪ್ ಸಾಮಾನ್ಯವಾಗಿ ಬಿಗ್ ಬಾಸ್ ಸಂಚಿಕೆಗಳನ್ನು ಮಿಸ್ ಮಾಡಲ್ಲ. ಕೋವಿಡ್ ವೇಳೆ ಮಾತ್ರ ಸಂಚಿಕೆಗಳನ್ನು ನಡೆಸಿಕೊಟ್ಟಿರಲಿಲ್ಲ. ಆದ್ರೆ ಈ ಬಾರಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆಗೆ ವಿದೇಶಕ್ಕೆ ತೆರಳಿದ್ರು ಎಂದು ಹೇಳಲಾಗ್ತಿದೆ. ಅಲ್ಲದೇ ಸುದೀಪ್ ಮತ್ತು ಪ್ರಿಯಾ, ಭಾರತ ಹಾಗೂ ಪಾಕ್ ನಡುವಿನ ಟಿ-20 ಪಂದ್ಯ ವೀಕ್ಷಿಸಿದ್ದ ಫೋಟೋ ವೈರಲ್ ಆಗಿತ್ತು.


  ಇದನ್ನೂ ಓದಿ: BBK Season 09: ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳಗಳನೇ ಅತ್ತ ಕಾವ್ಯಶ್ರೀ! ಯಾರಿವರು? 


  ಈ ವಾರ ಬಿಗ್‍ಬಾಸ್ ಮನೆ ಮಂದಿಗೆ ಕ್ಲಾಸ್
  ಸುದೀಪ್ ಈ ವಾರ ಕಾರ್ಯಕ್ರಮದ ನಿರೂಪಣೆಗೆ ವಾಪಸ್ ಬಂದಿದ್ದು, ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಇಲ್ಲದ ವಾರದ ಪಂಚಾಯಿತಿಯನ್ನು ಮಾಡಿದ್ದಾರೆ. ಸ್ಪರ್ಧಿಗಳು ಮಾಡಿದ ತಪ್ಪನ್ನು ಅವರಿಗೆ ಅರ್ಥ ಮಾಡಿಸಿದ್ದಾರೆ. ಅವರ ನಡುವೆ ಇದ್ದ ಮನಸ್ತಾಪಗಳು ದೂರ ಆಗಿವೆ.


  ಕ್ಯಾಪ್ಟನ್ ಆಗಿದ್ದ ದೀಪಿಕಾಗೆ ಪ್ರಶ್ನೆ?
  ದೀಪಿಕಾ ಕ್ಯಾಪ್ಟನ್ ಆಗಿದ್ದಾಗ ಒಂದು ತಂಡಕ್ಕೆ ಫೇವರಿಸಂ ಆಗಿದೆ ಎಂದು ಸುದೀಪ್ ಹೇಳ್ತಾರೆ. ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಸಹ ಅದನ್ನೇ ಹೇಳ್ತಾರೆ. ಅವರು ನಮ್ಮ ಮಾತನ್ನು ಸಹ ಕೇಳಿಸಿಕೊಳ್ಳಲಿಲ್ಲ ಎಂದು ಸುದೀಪ್ ಬಳಿ ಹೇಳ್ತಾರೆ. ಆಗ ನೇಹಾ ಗೌಡ, ದೀಪಿಕಾ ಅವರು ನಡೆದುಕೊಂಡ ರೀತಿ ಇಷ್ಟ ಆಗಲಿಲ್ಲ ಎಂದು ಹೇಳ್ತಾರೆ. ದೀಪಿಕಾ ಅವರಿಗೆ ಗೇಮ್ ವೇಳೆ ಫೇವರಿಸಂ ಆಗಿದೆ ಎಂದು ಕಿಚ್ಚ ತಿದ್ದಿದ್ದಾರೆ.


  ದೀಪಿಕಾ


  ನಿಮ್ಮ ಮಾತಿನ ದಾಟಿಯಿಂದ ನೋವಾಗಿದೆ
  ಸಾನ್ಯಾ ಐಯ್ಯರ್ ಕ್ಯಾಪ್ಟನ್ ಆಗಿದ್ದಾಗ ಹಲವು ನಿರ್ಧಾರಗಳು ತಪ್ಪಾಗಿದ್ವು. ಆಗ ಮನೆಯವರು ಅವರ ಕ್ಯಾಪ್ಟೆನ್ಸಿ ಇಷ್ಟ ಆಗಿಲ್ಲ ಎಂದು ಕಳಪೆ ಕೊಟ್ಟಿದ್ದರು. ಸಾನ್ಯಾ ಐಯ್ಯರ್ ಅವರೇ ನಿಮ್ಮ ಮಾತಿನ ದಾಟಿಯಿಂದ ಎಲ್ಲರಿಗೂ ನೋವಾಗಿದೆ ಎಂದು ಸುದೀಪ್ ಅವರು ಹೇಳಿದ್ದಾರೆ.


  bigg boss kannada season 9, sudeep class to bbk people, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್, kannada news, karnataka news,
  ಸಾನ್ಯಾ ಐಯ್ಯರ್-ರೂಪೇಶ್ ಶೆಟ್ಟಿ


  ಇದನ್ನೂ ಓದಿ: BBK Season 09: ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಾನ್ಯಾಗೆ ಈ ಬಾರಿ ಸಿಕ್ಕಿದ್ದು ಕಳಪೆ ಪಟ್ಟ! 


  ಮನೆಯ ಉಳಿದ ಸದಸ್ಯರಿಗೂ ಅವರವರ ತಪ್ಪುಗಳನ್ನು ತಿದ್ದಿ ಹೇಳಿದ್ರು. ಕಿಚ್ಚನನ್ನು ನೋಡಿ ಬಿಗ್ ಬಾಸ್ ಮನೆ ಮಂದಿ ಖುಷಿ ಪಟ್ಟರು.

  Published by:Savitha Savitha
  First published: