• Home
  • »
  • News
  • »
  • entertainment
  • »
  • BBK Season 9: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ

BBK Season 9: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ

ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ!

ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ!

ದೀಪವೊಂದು ಆರಿ ಹೋಗಿ ವರುಷ ಆಗಿದೆ. ಆರುವ ಮುನ್ನ ಎಷ್ಟೋ ಮನೆಯ ಬೆಳಗಿ ಹೋಗಿದೆ. ಉತ್ತರ ಸಿಗದೆ ಪ್ರಶ್ನೆ ಒಂಟಿಯಾಗಿದೆ. ಕಾರಣ ಹೇಳದೆ ಯಾಕೆ ತೆರಳಿದೆ. ಮನಸ್ಸು ಭಾರವಾಗಿ ಇಂದು ಮೌನವಾಗಿದೆ.

  • News18 Kannada
  • Last Updated :
  • Karnataka, India
  • Share this:

    ಅಪ್ಪು, ಪುನೀತ್ ರಾಜ್‍ಕುಮಾರ್ (Puneeth Rajkumar) , ಅಭಿಮಾನಿಗಳ ದೇವರು, ರಾಜ್‍ಕುಮಾರ್ ಅವರು ಪ್ರೀತಿಯ ಪುತ್ರ ನಮ್ಮನ್ನು ಅಗಲಿ ಒಂದು ವರ್ಷ ಆಯ್ತು. ಆದರೆ ಅವರನ್ನು ಮರೆಯಲು ಆಗುತ್ತಿಲ್ಲ. ಅವರ ನೆನಪುಗಳು ಇಂದಿಗೂ ಕಾಡುತ್ತಿವೆ. ಅವರ ಚಿತ್ರಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ. ವರ್ಷದ ಪುಣ್ಯ ತಿಥಿಗೆ ಎಲ್ಲೆಡೆ ಅಪ್ಪು ಆರಾಧನೆ ನಡೆದಿದೆ. ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಬಂದು ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳು ಅಪ್ಪುವನ್ನು ನೆನೆದಿದ್ದಾರೆ. ದೀಪವೊಂದು ಆರಿ ಹೋಗಿ ವರುಷ ಆಗಿದೆ ಎಂದು ರೂಪೇಶ್ ಶೆಟ್ಟಿ (Rupesh Shetty) ಅಪ್ಪುಗಾಗಿ ಹಾಡು (Song) ಹೇಳಿದ್ದಾರೆ.


    ಬಿಗ್ ಬಾಸ್ ಮನೆಯಲ್ಲಿ ಅಪ್ಪು ಸ್ಮರಣೆ
    ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು ಅಪ್ಪುವನ್ನು ನೆನೆದಿದ್ದಾರೆ. ಅಪ್ಪು ಅವರು ನಮ್ಮ ಎಲ್ಲರಿಗೂ ಒಂದು ಸಿಹಿ ನೆನಪಾಗಬೇಕು. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋಗಿರಬಹುದು. ಆದರೆ, ನಾವು ಮೇಲೆ ಬಂದಿರುವ ಚಂದ್ರನನ್ನ ನೋಡಬೇಕು.


    ಎಷ್ಟೋ ವರ್ಷಗಳ ಗೆಳೆತನ, ಜೊತೆಯಾಗಿ ಮಾಡಿರುವ ಎಷ್ಟೋ ಕೆಲಸಗಳು, ಆಡಿದ ಮಾತುಗಳು, ಭೇಟಿಗಳು ಒಂದೊಂದರ ಹಿಂದೆ ಸಿಕ್ಕಾಪಟ್ಟೆ ನೆನಪುಗಳಿವೆ. ಅಪ್ಪು ಅವರು ಈಗಲೂ ಎಲ್ಲರ ಜೊತೆ ಇದ್ದಾರೆ. ದಾರಿ ಎಷ್ಟೇ ದೂರ ಇದ್ದರೂ ಜೊತೆಗಿರುವ ಆ ಚಂದ್ರನ ತರಹ ಎಂದು ಹೇಳಿದ್ದಾರೆ.


    bigg boss kannada season 9, rupesh shetty write song for puneeth rajkumar, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ, kannada news, karnataka news,
    ಸುದೀಪ್


    ರೂಪೇಶ್ ಶೆಟ್ಟಿ ಹಾಡು
    'ದೀಪವೊಂದು ಆರಿ ಹೋಗಿ ವರುಷ ಆಗಿದೆ. ಆರುವ ಮುನ್ನ ಎಷ್ಟೋ ಮನೆಯ ಬೆಳಗಿ ಹೋಗಿದೆ. ಉತ್ತರ ಸಿಗದೆ ಪ್ರಶ್ನೆ ಒಂಟಿಯಾಗಿದೆ. ಕಾರಣ ಹೇಳದೆ ಯಾಕೆ ತೆರಳಿದೆ. ಮನಸ್ಸು ಭಾರವಾಗಿ ಇಂದು ಮೌನವಾಗಿದೆ. ಹಳೆಯ ನೆನಪು ಬಳಿಗೆ ಬಂದು ಕಾಡತೊಡಗಿದೆ. ಅಭಿಮಾನಿಗೆ ನೀವೇ ದೇವರು. ಮನಸ್ಸಲ್ಲಿ ದೇವಾಲಯ ಕಟ್ಟಿಹರು.


    bigg boss kannada season 9, rupesh shetty write song for puneeth rajkumar, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ, kannada news, karnataka news,
    ರೂಪೇಶ್ ಶೆಟ್ಟಿ


    ಇದನ್ನೂ ಓದಿ: Actress Vinay Prasad: ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ, ಕಳ್ಳರು ದೋಚಿದ್ದೆಷ್ಟು?


    ನೀವೆಂದೂ ಜೀವಂತ ದೂರಾದರೂ. ನಿಮ್ಮ ಹೆಸರು ಮರೆಯಲ್ಲ ಮರೆಯಾದರು
    ನೀವಲ್ಲ ವ್ಯಕ್ತಿ ನೀವೊಂದು ಶಕ್ತಿ. ಹೆಚ್ಚಾಗಿದೆ ನಮ್ಮ ಭಕ್ತಿ. ಅಪ್ಪು ಅಪ್ಪು ವಿ ಮಿಸ್ ಯೂ ಅಪ್ಪು. ಯಾಕೀ ಶಿಕ್ಷೆ ನಮ್ಮದ್ಯಾವ ತಪ್ಪು?' ಎಂಬ ಹಾಡನ್ನು ರೂಪೇಶ್ ಶೆಟ್ಟಿ ಬರೆದಿದ್ದಾರೆ.



    ಯುದ್ಧ ಮಾಡದೇ ರಾಜನಾದ್ರು
    ಅಪ್ಪು ಅವರು ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷ ಆಗುತ್ತಿದೆ. ರಾಜನಾಗಬೇಕು ಅಂದ್ರೆ ಯುದ್ಧ ಮಾಡ್ಲೇ ಬೇಕು ಅಂತ ಏನಿಲ್ಲ. ಪ್ರೀತಿಯನ್ನ ಕೊಟ್ರೆ ಯಾರು ಬೇಕಾದರೂ ರಾಜ ಆಗಬಹುದು. ಯುದ್ಧವನ್ನೇ ಮಾಡದೆ ರಾಜ್ಯವನ್ನ ಗೆದ್ದು ರಾಜನಾದವರು ಪುನೀತ್ ರಾಜ್‍ಕುಮಾರ್. ಕನ್ನಡ ನಾಡಿನ ಮಣ್ಣಿನ ಪ್ರತಿ ಕಣ ಕಣದಲ್ಲೂ ಪುನೀತ್ ರಾಜ್‍ಕುಮಾರ್ ಅಮರ ಎಂದು ರೂಪೇಶ್ ರಾಜಣ್ಣ ಹೇಳಿದ್ರು.


    ಇದನ್ನೂ ಓದಿ: BBK Season 09: ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳಗಳನೇ ಅತ್ತ ಕಾವ್ಯಶ್ರೀ! ಯಾರಿವರು? 


    ಜೊತೆಗಿರದ ಜೀವ ಎಂದಿಂಗೂ ಜೀವಂತ. ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎಂದು ಅಭಿಮಾನಿಗಳು ದೇವರ ಬಳಿ ಕೇಳ್ತಾ ಇದ್ದಾರೆ. ಅಲ್ಲದೇ ಗಂಧದಗುಡಿ ಚಿತ್ರ ನೋಡಿ ಹಲವರು ಭಾವುಕರಾಗಿದ್ದಾರೆ. ಅಪ್ಪು ಚಿತ್ರದ ಮೂಲಕ ನಮಗೆ ದರ್ಶನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    Published by:Savitha Savitha
    First published: