ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಓಟಿಟಿಯಿಂದ ಬಂದಿರುವ ರೂಪೇಶ್ ಶೆಟ್ಟಿ (Rupesh Shetty) ಮತ್ತು ಆರ್ಯವರ್ಧನ್ (Arya Vardhan) ಗುರೂಜಿ ಹೆಚ್ಚು ಕ್ಲೋಸ್ ಆಗಿದ್ದಾರೆ, ಗುರೂಜಿಗೆ ರೂಪೇಶ್ ಶೆಟ್ಟಿ ಅಪ್ಪಾಜಿ ಅಪ್ಪಾಜಿ ಎಂದು ಹೇಳುತ್ತಾ ಇರುತ್ತಾರೆ. ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿ ಮದುವೆ ಆಗೋ ಹುಡುಗಿ ಬಗ್ಗೆ ಹೇಳಿದ್ದಾರೆ.
ಸುದೀಪ್ ಏನ್ ಪ್ರಶ್ನೆ ಕೇಳಿದ್ದರು?
ವಾರದ ಕಥೆ ಕಿಚ್ಚನ ಜೊತೆಯಲಿ ಕಾರ್ಯಕ್ರಮದಲ್ಲಿ ಸುದೀಪ್, ರೂಪೇಶ್ ಶೆಟ್ಟಿ ಯಾವ ತರ ಹುಡುಗಿ ಸರಿ ಹೋಗ್ತಾಳೆ? ಯಾವ ಅಕ್ಷರದಿಂದ ಹೆಸರು ಬರಬೇಕು ಎಂದು ಆರ್ಯವರ್ಧನ್ ಗುರೂಜಿಗೆ ಪ್ರಶ್ನೆ ಮಾಡ್ತಾರೆ.
ಆರ್ಯವರ್ಧನ್ ಗುರೂಜಿ ಹೇಳಿದ್ದೇನು?
ರೂಪೇಶ್ ಶೆಟ್ಟಿ ಹುಟ್ಟಿರುವುದು 5 ದಿನಾಂಕದಂದು. ಅವರಿಗೆ ಒಳ್ಳೆಯ ಹುಡುಗಿ ಸಿಕ್ತಾಳೆ. ಅದರಲ್ಲೂ ಅವರು 'ಎಸ್' ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆ ಆದ್ರೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ. ಅದನ್ನು ಕೇಳಿ ಮನೆಯವರೆಲ್ಲಾ ನಕ್ಕಕಿದ್ದಾರೆ, ಸುದೀಪ್ ಕೂಡ ರೇಗಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಪ್ರಣಯ ಪಕ್ಷಿಗಳಂತೆ ಇದ್ದ ಅಮೂಲ್ಯ-ರಾಕಿ ಮಧ್ಯೆ ಮುನಿಸು, ಕಮಲಿಗ್ಯಾಕೆ ಕೋಪ?
'ಎಸ್ 'ಅಂದ್ರೆ ಸಾನಿಯಾ ಐಯ್ಯರ್ ಎಂದ ಅಭಿಮಾನಿಗಳು!
ಆರ್ಯವರ್ಧನ್ ಗುರೂಜಿ ಎಸ್ ಅಕ್ಷರ ಎಂದಾಕ್ಷಣ, ಅಭಿಮಾನಿಗಳೆಲ್ಲಾ, ಎಸ್ ಅಕ್ಷರ ಅಂದ್ರೆ ಸಾನ್ಯಾ ಐಯ್ಯರ್ ಎಂದು ಪ್ರಶ್ನೆ ಮಾಡಿದ್ದಾರೆ. ಗುರೂಜಿ ಸರಿಯಾಗಿ ಹೇಳಿದ್ದಾರೆ. ಇಬ್ಬರ ಜೋಡಿ ಚೆನ್ನಾಗಿರುತ್ತೆ ಎಂದು ಮಾತನಾಡಿಕೊಳ್ತಾ ಇದ್ದಾರೆ.
ಈ ವಾರದ ಕಿಚ್ಚನ ಚಪ್ಪಾಳೆ ರೂಪೇಶ್ ಶೆಟ್ಟಿಗೆ
ಕಾಡಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ತುಂಬಾ ಕಷ್ಟ ಆಗಿತ್ತು. ಅದರಲ್ಲೂ ಊಟ ಇಲ್ಲದೇ ಪರದಾಡಿದ್ದರು. ಟಾಸ್ಕ್ ಆಡಿ ಸೌಕರ್ಯ ಪಡೆಯಬೇಕಿತ್ತು. ಆದ್ರೆ ಎಷ್ಟೊಂದು ಟಾಸ್ಕ್ ಸೋತು ನೋವು ಪಟ್ಟಿದ್ದರು. ಚಳಿಯಲ್ಲಿ ಮಲಗಿದ್ದರು. ಕ್ಯಾಪ್ಟನ್ ಆಗೋಕೆ ಹೊಡೆದಾಡಿದ್ದರು. ಗೆಲ್ಲಲೇ ಬೇಕೆಂಬ ಹಠಕ್ಕೆ ಎಲ್ಲ ನೋವನ್ನು ಸಹಿಸಿಕೊಂಡಿದ್ದರು.
ಯಾವಾಗಲೂ ಊಟ ಊಟ ಅನ್ನೋ ರೂಪೇಶ್ ಶೆಟ್ಟಿ, ಹಸಿವನ್ನು ಸಹಿಸಿಕೊಂಡು, ಆಟಗಳನ್ನು ಚೆನ್ನಾಗಿ ಆಡಿದ್ದರು. ಅದಕ್ಕೆ ಈ ಬಾರಿ ಸುದೀಪ್ ಅವರ ಆಟ, ತಾಳ್ಮೆ ಮೆಚ್ಚಿಕೊಂಡು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ನೀಡಿದ್ದರು. ರೂಪೇಶ್ ಶೆಟ್ಟಿ ತುಂಬಾ ಖುಷಿ ಪಟ್ಟಿದ್ದರು.
ರೂಪೇಶ್ ಶೆಟ್ಟಿ ನೋವಿನ ಕಥೆ
ರೂಪೇಶ್ ಶೆಟ್ಟಿ, ಸಾಲ ಮಾಡಿ ಒಂದು ತುಳು ಸಿನಿಮಾ ಮಾಡಿದ್ರಂತೆ. ಅವರು ಮಾಡಿದ ಹಿಂದಿನ ಸಿನಿಮಾಗಳು ಯಶಸ್ಸು ಕಂಡಿರಲಿಲ್ವಂತೆ. ಅದಕ್ಕೆ ಅವರೇ ನಿದೇರ್ಶನಕ್ಕೆ ಕೈ ಹಾಕಿ ಸಿನಿಮಾ ಮಾಡಿದ್ರಂತೆ. ಅದಕ್ಕಾಗಿ ಎಲ್ಲಾ ಕಡೆ ಸಾಲ ಮಾಡಿದ್ರಂತೆ. ಅದು ಸಿನಿಮಾ ಸಕ್ಸಸ್ ಆಗಲಿಲ್ಲ ಅಂದ್ರೆ, ಸೂಸೈಡ್ ಮಾಡಿಕೊಳ್ಳೋಣ, ಇಲ್ಲ ಊರು ಬಿಟ್ಟು ಹೋಗೋಣ ಎಂದುಕೊಂಡಿದ್ರಂತೆ.
ಇದನ್ನೂ ಓದಿ: Bigg Boss Kannada: ವಿನೋದ್ ಔಟ್ ಆದ ಬೆನ್ನಲ್ಲೇ, 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ!
ಆದ್ರೆ ಸಿನಿಮಾ ಸಕ್ಸಸ್ ಆಯ್ತಂತೆ. ಸೂಪರ್ ಹಿಟ್ ಆಗಿ ಸಿನಿಮಾ ರನ್ ಆಯ್ತಂತೆ. ಆಗ ರೂಪೇಶ್ ಶೆಟ್ಟಿಗೆ ಖುಷಿ ಆಯ್ತಂತೆ. ಇಲ್ಲ ಅಂದ್ರೆ ಅವತ್ತು ನಾನ್ ಏನ್ ಆಗಿ ಬಿಡ್ತಿದ್ನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ