ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಈಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ನವೀನರಾಗಿ ಈ ಬಾರಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಇದ್ದಾರೆ. ಅವರು ಸಹ ಮೊದಲನೇ ವಾರಕ್ಕೆ ಹೋಗ್ತಾರೆ ಎಂದು ಹೇಳಲಾಗ್ತಿತ್ತು. ಆದ್ರೆ 10ನೇ ವಾರದಲ್ಲೂ ಇದ್ದಾರೆ. ಸದಾ ಜಗಳ ಮಾಡ್ತಾನೇ ಇರ್ತಾರೆ. ರೂಪೇಶ್ ರಾಜಣ್ಣ ತಮ್ಮ ಹೆಂಡ್ತಿ ಕಾಲಿಗೆ ಬಿದ್ದಿದ್ದಾರೆ, ನಿಮ್ಮ ಮೇಲೆ ಅಭಿಮಾನ ಹೆಚ್ಚಾಯ್ತು ಎಂದಿದ್ದಾರೆ ಅಭಿಮಾನಿಗಳು.
ರೂಪೇಶ್ ರಾಜಣ್ಣ ಅಂದ್ರೆ ಗಲಾಟೆ
ಕನ್ನಡ ಹೋರಾಟಗಾರರಾಗಿರು ರೂಪೇಶ್ ರಾಜಣ್ಣ ಸದಾ ಗಲಾಟೆ ಮಾಡುತ್ತಲೇ ಇರುತ್ತಾರೆ. ನ್ಯಾಯಕ್ಕಾಗಿ ನಾನು ಹೋರಾಡಲು ಸದಾ ಮುಂದೆ ಇರುತ್ತೇನೆ ಎಂದು ಹೇಳುತ್ತಾರೆ. ಮನೆಯ ಹಲವು ಸದಸ್ಯರ ನಡುವೆ ಹಲವು ಬಾರಿ ಜಗಳ ಆಗಿದೆ. ಆದ್ರೂ ಮುಗ್ಧರು ಈ ರಾಜಣ್ಣ. ಜಗಳ ಎಲ್ಲಾ ಮುಗಿದ ಮೇಲೆ ಅವರೇ ಹೋಗಿ ಮಾತನಾಡಿಸುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಭಾವುಕ ಕ್ಷಣ
ಬಿಗ್ ಶೋ ಶುರುವಾಗಿ 9 ವಾರ ಕಳೆದಿದೆ. 10ನೇ ವಾರ ನಡೆಯುತ್ತಿದೆ. ಎಲ್ಲರೂ ತಮ್ಮ ಮನೆಯವರನ್ನು ಮಿಸ್ ಮಾಡಿಕೊಂಡಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯವರನ್ನು ಕರೆಸಿದ್ದಾರೆ. ಮನೆಯವರ ಜೊತೆ ಮಾತನಾಡಬೇಕು ಎಂಬ ಸ್ಪರ್ಧಿಗಳ ಬಹುದಿನದ ಹಂಬಲವನ್ನು ಬಿಗ್ ಬಾಸ್ ನೆರವೇರಸಿದ್ದಾರೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada: ಖುಷಿಯಿಂದ ಕುಣಿದಾಡಿದ ಪ್ರಶಾಂತ್, ಅನುಪಮಾ, ರಾಜಣ್ಣ! ಏಕೆ ನೋಡಿ?
ಪತ್ನಿಗಾಗಿ ಕಾದ ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ ಅವರು ತಮ್ಮ ಮನೆಯವರು ಬರುತ್ತಾರೆ ಎಂದು ತುಂಬಾ ಕಾಯ್ತಾ ಇದ್ರು. ಮನೆಯ ಲೈಟ್ ಆಫ್ ಆದ್ರೂ ಬರಲಿಲ್ಲ. ಬೇಸರ ಮಾಡಿಕೊಂಡು ಮಲಗಿ ಬಿಟ್ರು. ಎಲ್ಲರೂ ಮಲಗಿದ ಮೇಲೆ ರೂಪೇಶ್ ರಾಜಣ್ಣ ಪತ್ನಿ ಬರುತ್ತಾರೆ. ರಾಜಣ್ಣ ಖುಷಿಯಿಂದ ಕುಣಿದಾಡ್ತಾರೆ.
ಹೆಂಡ್ತಿ ಕಾಲಿಗೆ ಬಿದ್ದ ರಾಜಣ್ಣ
ಹೆಂಡ್ತಿಯನ್ನು ನೋಡ್ತಿದ್ದಂತೆ ರೂಪೇಶ್ ರಾಜಣ್ಣ ತಾವೇ ಪತ್ನಿ ಕಾಲಿಗೆ ಬಿದ್ದಿದ್ದಾರೆ. ಭಾವುಕರಾಗಿ ಅವರ ಆಶೀರ್ವಾದ ಕೇಳಿದ್ದಾರೆ. ಅವರು ಹೆಂಡ್ತಿ ಈ ರೀತಿ ಮಾಡಬೇಡಿ, ಮೇಲೆ ಏಳಿ ಎಂದಿದ್ದಾರೆ. ನಂತರ ಭಾವುಕರಾಗಿದ್ದಾರೆ. ತುಂಬಾ ದಿನ ಆದ ಮೇಲೆ ನೋಡಿದ್ದು ಖುಷಿಯಾಯ್ತು ಎಂದಿದ್ದಾರೆ. ಅಲ್ಲದೇ ಅವರ ಹೆಂಡ್ತಿ, ದೀಪಿಕಾ ಜೊತೆ ಓಡಾಡಿದ್ರೆ ನಾನು ಯಾಕೆ ಬೇಸರ ಮಾಡಿಕೊಳ್ಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಮೇಲೆ ಗೌರವ ಹೆಚ್ಚಾಯ್ತು ಎಂದ ಅಭಿಮಾನಿಗಳು
ರೂಪೇಶ್ ರಾಜಣ್ಣ ತಮ್ಮ ನೇರ ನುಡಿ, ಮಾತಿನಿಂದ ಕನ್ನಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಪ್ರತಿ ವಾರ ನಾಮಿನೇಟ್ ಆದಾಗಲೂ ಸೇವ್ ಆಗ್ತಾರೆ. ಅಲ್ಲದೇ ರೂಪೇಶ್ ರಾಜಣ್ಣ ನೀವು ತುಂಬಾ ಇಷ್ಟ ಎಂದು ಕಾಮೆಂಟ್ ಹಾಕ್ತಾರೆ. ಅಲ್ಲದೇ ಹೆಂಡ್ತಿ ಕಾಲಿಗೆ ಬಿದ್ದದ್ದನ್ನು ನೋಡಿ ನಿಮ್ಮ ಮೇಲೆ ಇನ್ನೂ ಗೌರವ ಹೆಚ್ಚಾಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Agnisakshi Serial: ಹಿಂದಿಗೆ ರಿಮೇಕ್ ಆಗಿದೆ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ!
ಅಲ್ಲದೇ ಈ ವಾರ 10 ಜನರಲ್ಲಿ ರೂಪೇಶ್ ರಾಜಣ್ಣ ಮಾತ್ರ ನಾಮಿನೇಟ್ ಆಗಿಲ್ಲ. ಉಳಿದ ಸದಸ್ಯರೆಲ್ಲಾ ನಾಮಿನೇಟ್ ಆಗಿದ್ದಾರೆ. ರೂಪೇಶ್ ರಾಜಣ್ಣ ಗೆಲ್ಲಲಿ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ