ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ (Reality Show) ಕೆಲವೇ ದಿನಗಳಲ್ಲಿ ಮುಕ್ತಾಯ ಗೊಳ್ಳಲಿದೆ. 100 ದಿನ ಜನರನ್ನು ಮನರಂಜಿಸಿ, ತನ್ನ ಆಟ ಅಂತ್ಯಗೊಳಿದಲು ಸಜ್ಜಾಗಿದೆ. ಡಿಸೆಂಬರ್ 31 ಜನವರಿ 01ರಂದು ಬಿಗ್ ಬಾಸ್ (Bigg Boss) ಗ್ರ್ಯಾಂಡ್ ಫಿನಾಲೆ (Grand Finale) ನಡೆಯಲಿದೆ. ಯಾರು ಬಿಗ್ ಬಾಸ್ ವಿನ್ನರ್ (Winner) ಆಗ್ತಾರೆ ಎಂದು ತೀವ್ರ ಕುತೂಹಲ ಮೂಡಿದೆ. ಬಿಗ್ ಬಾಸ್ ಶುರುವಾದಾಗ 18 ಜನ ಬಂದಿದ್ದರು. ಓಟಿಟಿಯಿಂದ 4 ಜನ ಸೇರಿ ಇನ್ನು ನಾಲ್ಕು ಮಂದಿ ಪ್ರವೀಣರು. ಉಳಿದ 8 ಮಂದಿ ನವೀನರು ಬಂದಿದ್ದರು. ಈಗ ಮನೆಯಲ್ಲಿ 8 ಮಂದಿ ಉಳಿದಿದ್ದಾರೆ. ಭಾನುಚಾರ ಒಬ್ಬರು ಔಟ್ ಆದ್ರೆ, ವಾರದ ಮಧ್ಯೆದಲ್ಲಿ ಒಬ್ಬರು ಔಟ್ ಆಗಲಿದ್ದಾರೆ. 5 ಮಂದಿ ಟಾಪ್ 5ನಲ್ಲಿ ಇರಲಿದ್ದಾರೆ. ಕೆಲವೇ ದಿನ ಇರುವಾಗ ರೂಪೇಶ್ ರಾಜಣ್ಣ ಬಿಗ್ ಬಾಸ್ ಜರ್ನಿ ಬಗ್ಗೆ ಹಾಡು (Song) ಬರೆದಿದ್ದಾರೆ.
ರೂಪೇಶ್ ರಾಜಣ್ಣ ಹೇಳಿದ್ದೇನು?
8 ಜನರಲ್ಲಿ ಯಾರು ಬೇಕಾದ್ರೂ ಹೋಗಬಹುದು. ಯಾರು ಬೇಕಾದ್ರೂ ಇರಬಹುದು. ಬಟ್ ಒಂದೊಳ್ಳೆ ಜರ್ನಿಯಲ್ಲಿ ನಾವೆಲ್ಲಾ ಜೊತೆ ಸೇರಿದ್ದೇವೆ. ನಮ್ಮ ಕಷ್ಟ, ಸುಖ, ನೋವು, ಹೋರಾಟ, ಕಿರುಚಾಟ, ಜಗಳ ಏನೇ ಇದ್ರು, ಅವನ್ನೆಲ್ಲಾ ಬಿಟ್ಟು,
ನಾವೆಲ್ಲಾ ಹೊರಗಡೆ ಹೋಗಿ, ನಮ್ಮದೇ ಆದ ಜೀವನವನ್ನು ಕಟ್ಟಿ ಕೊಳ್ತೇವೆ. ಒಂದು ಆಟದಲ್ಲಿ ನಾವು ಭಾಗಿಯಾಗಿದ್ವಿ. ಮನಸ್ಸಲ್ಲಿ ಏನೇ ಇದ್ರೂ ಇಲ್ಲಿ ಬಿಟ್ಟು, ಬಿಗ್ ಬಾಸ್ ನಿಂದ ಹೊರ ಹೋಗೋಣ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ರೂಪೇಶ್ ರಾಜಣ್ಣ ಅವರ ಹಾಡು
ನೂರು ದಿನದ ಆಟ ಮುಗಿಸೋ ಸಮಯ ಬಂದಿತೇ
ಕೂಡಿ ನಲಿದ ನೆನಪು ಹೋಗಿ ಬರುವೀರಾ ಎಂದಿತೇ
ಬರುವಾಗ ಒಬ್ಬರು, ಹೋಗುವಾಗ ಒಬ್ಬರು
ಇದ್ದಾಗ ಇಲ್ಲಿ, ಅವರಿಗೆ ಇವರು, ಇವರಿಗೆ ಅವರು
ಮುಗಿಯಿತೋ ಎಲ್ಲಾ, ಬೇರೆನೂ ಉಳಿದಿಲ್ಲ
ಓ ಗೆಳೆಯ ಓ ಗೆಳತಿ ಶುಭ ವಿದಾಯ, ಶುಭ ವಿದಾಯ
ಅವಕಾಶ ನೀಡಿ, ನಮ್ಮನ್ನು ಒಟ್ಟುಗೂಡಿಸಿ, ಪ್ರೀತಿಯಲಿ ನೋಡಿ
ಬದುಕುವ ಕಲೆಯ, ತಿಳಿಸಿದೆ ಒಡೆಯ
ಬಿಗ್ ಬಾಸ್, ನಮ್ಮ ಬಿಗ್ ಬಾಸ್, ನಿಮಗಿದೋ ವಂದನೆ, ನಿಮಗಿದೋ ಅಭಿನಂದನೆ,
ಪ್ರೀತಿಯಲಿ ನಮ್ಮನ್ನು ಅರಸಿದ ಜನರೇ ನಿಮಗೂ ವಂದನೆ, ಅಭಿನಂದನೆ
ಜೈ ಕರ್ನಾಟಕ ಮಾತೆ
ಇದನ್ನೂ ಓದಿ: Kannadathi: ಕಚೇರಿಯಲ್ಲೇ ಎಚ್ಚರ ತಪ್ಪಿ ಬಿದ್ದ ಭುವಿ, ಆತಂಕದಲ್ಲಿ ಹರ್ಷ!
ಮುಂದಿನ ಶನಿವಾರ, ಭಾನುವಾರ ಅಂದ್ರೆ ಡಿಸೆಂಬರ್ 31, ಜನವರಿ 01 ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಟಾಪ್ 5 ರಲ್ಲಿ ಯಾರು ಇರ್ತಾರೆ ಅನ್ನೋ ಕುತೂಹಲಗಳು ಹೆಚ್ಚಾಗಿವೆ. ಈ ಬಾರಿಯಾದ್ರೂ ಹುಡುಗಿ ಗೆಲ್ಲಬೇಕು ಎಂದು ಎಲ್ಲರೂ ಹೇಳ್ತಾ ಇದ್ದಾರೆ.
ಇರುವ 8 ಮಂದಿ ಯಾರು?
ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯಾ ಉರುಡುಗ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಅಮೂಲ್ಯ ಗೌಡ, ರೂಪೇಶ್ ರಾಜಣ್ಣ. ಇವರಲ್ಲಿ ಯಾರು ವಿನ್ ಆಗ್ತಾರೆ ಅನ್ನೋದೆ ಕುತೂಹಲ. ಎಲ್ಲರೂ ಚೆನ್ನಾಗಿ ಆಡಿದ್ದಾರೆ.
ಇದನ್ನೂ ಓದಿ: Bigg Boss Kannada: ಯಾರು 4 ಗಂಟೆಗಿಂತ ಹೆಚ್ಚು ಕಾಲ ನಿಲ್ತಾರೆ? ದೀಪಿಕಾ ಕಾ ಕಾ!
ಪ್ರತಿವಾರದೂ ಆರ್ಯವರ್ಧನ್, ಪ್ರಶಾಂತ್ ಸಂಬರಗಿ, ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ಗೆ ಕಳಪೆ ಕೊಡುತ್ತಿದ್ದರು ಆದರೆ ಈ ವಾರ ರಾಕೇಶ್ ಅಡಿಗೆ ಕಳಪೆ ಪಟ್ಟ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ