• Home
  • »
  • News
  • »
  • entertainment
  • »
  • BBK Rupesh Rajanna: 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ!

BBK Rupesh Rajanna: 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ!

100 ರೂಪಾಯಿ ಕದ್ದಿದ್ರಂತೆ ರಾಜಣ್ಣ

100 ರೂಪಾಯಿ ಕದ್ದಿದ್ರಂತೆ ರಾಜಣ್ಣ

ಪತ್ರ ಬರೆಸಿಕೊಂಡ ಪೊಲೀಸ್ ವಠಾರದ ಜನರನ್ನು ಒಂದೆಡೆ ಸೇರಿದ್ರಂತೆ . ಸುಮಾರ 200 ಜನ ಇದ್ರಂತೆ. ಎಲ್ಲರೂ ಇವರಿಗೆ ಬೈದ್ರಂತೆ. 4 ಜನ ನನ್ನ ಬಟ್ಟೆಯನ್ನು ಬಿಚ್ಚಿ ತುಂಬಾ ಹೊಡೆದ್ರು.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ನವೀನರಾಗಿ ಈ ಬಾರಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದ್ದಾರೆ. ಅವರು ಸಹ ಮೊದಲನೇ ವಾರಕ್ಕೆ ಹೋಗ್ತಾರೆ ಎಂದು ಹೇಳಲಾಗ್ತಿತ್ತು, ಆದ್ರೆ 50 ದಿನಗಳ ಮೇಲೆ ಇದ್ದಾರೆ. ಸದಾ ಜಗಳ ಮಾಡ್ತಾನೇ ಇರ್ತಾರೆ. ರೂಪೇಶ್ ರಾಜಣ್ಣನ (Rupesh Rajanna) ಹಳೇ ಕಥೆ ಘನಘೋರವಾಗಿದೆ.


    ಕಾಡಾಗಿರುವ ಬಿಗ್ ಬಾಸ್ ಮನೆ


    ಈ ಬಾರಿ ಬಿಗ್ ಬಾಸ್ ಮನೆ ಕಾಡಾಗಿದೆ. ಮನೆ ಮಂದಿಗೆ ಗಾರ್ಡನ್ ಏರಿಯಾದಲ್ಲೇ ಇರುವ ಟಾಸ್ಕ್ ಕೊಟ್ಟಿದ್ದಾರೆ. ಅಲ್ಲಿ ಅಡುಗೆ ಮಾಡಿಕೊಳ್ಳಬೇಕು. ಅಲ್ಲೇ ಮಲಗಬೇಕು. ಕಾಲ ಕಾಲಕ್ಕೆ ಟಾಸ್ಕ್ ಆಡಿ ಸೌಕರ್ಯಗಳನ್ನು ಪಡೆಯಬೇಕು. 2 ದಿನದಿಂದ ಕಾಡಿನಲ್ಲಿ ಇದ್ದು ನೋವು ಅನುಭವಿಸುತ್ತಿರುವ ಮನೆ ಮಂದಿಗೆ, ತಮ್ಮ ಜೀವನದ ನೋವಿನ ಕಥೆ ಹೇಳಲು ಬಿಗ್ ಬಾಸ್ ಹೇಳಿದ್ರು.


    100 ರೂಪಾಯಿ ಕದ್ದಿದ್ರಂತೆ ರಾಜಣ್ಣ
    ರಾಜಣ್ಣ ಮೊದಲು ಬೆಂಗಳೂರಿಗೆ ಬಂದಾಗ ದುಡ್ಡು ಇರಲಿಲ್ವಂತೆ. 200 ಜನ ಇರೋ ವಠಾರದಲ್ಲಿ ಇದ್ರಂತೆ. ಅಲ್ಲಿ ಒಂದು ಹೋಟೆಲ್ ನಲ್ಲಿ ಊಟ ಮಾಡ್ತಿದ್ರಂತೆ. ವಾರ ಆದ ಮೇಲೆ ಅವರಿಗೆ ದುಡ್ಡು ಕೊಡಬೇಕಿತ್ತಂತೆ. ಒಂದು ವಾರ ದುಡ್ಡೇ ಇರಲಿಲ್ವಂತೆ. ಅದಕ್ಕೆ ಹೋಟೆಲ್ ನವರು ಊಟ ಕೊಡಲ್ಲ ಅದ್ರಂತೆ. ಅದಕ್ಕೆ ರಾಜಣ್ಣ ಊಟಕ್ಕಾಗಿ ಪೊಲೀಸ್ ಜೇಬ್ ನಿಂದ 100 ರೂಪಾಯಿ ಕದ್ರಂತೆ. ಅದು ಅವರಿಗೆ ಗೊತ್ತಾಗಿ. ಇನ್ನು ತಪ್ಪು ಮಾಡಲ್ಲ ಎನ್ನುವ ರೀತಿ ಪತ್ರ ಬರೆಸಿಕೊಂಡಿದ್ರಂತೆ.


    ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಮೇಲೆ ಕಾವೇರಿ ಒಲವು! ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ? 


    ಬೆತ್ತದಲ್ಲಿ ಹೊಡೆತ


    ಆ ಪತ್ರ ಬರೆಸಿಕೊಂಡ ಪೊಲೀಸ್ ವಠಾರದ ಜನರನ್ನು ಒಂದೆಡೆ ಸೇರಿದ್ರಂತೆ . ಸುಮಾರ 200 ಜನ ಇದ್ರಂತೆ. ಎಲ್ಲರೂ ಇವರಿಗೆ ಬೈದ್ರಂತೆ. 4 ಜನ ನನ್ನ ಬಟ್ಟೆಯನ್ನು ಬಿಚ್ಚಿ ತುಂಬಾ ಹೊಡೆದ್ರು. ಕೆಟ್ಟಾದಾಗಿ ಮಾತನಾಡಿದ್ರು. ಒಬ್ಬರೂ ನಾನು ಕದ್ದ ಕಾರಣ ಕೇಳಲಿಲ್ಲ. ಬೆತ್ತದಲ್ಲಿ ಹೊಡೆದು, ನನ್ನ ಬಟ್ಟೆ ಸಮೇತ ಆಚೆ ಹಾಕಿ ಬಿಟ್ಟರು ಎಂದು ರಾಜಣ್ಣ ಹೇಳಿದ್ದಾರೆ.


    kannada bigg boss, rupesh rajanna real life story horrible, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ!, kannada news, karnataka news,
    100 ರೂಪಾಯಿ ಕದ್ದಿದ್ರಂತೆ ರಾಜಣ್ಣ


    ಮಧ್ಯರಾತ್ರಿ ಊರು ಅಲೆದೆ
    ಆ ವಠಾರದವರು ಹೊಡೆದು ಮಧ್ಯರಾತ್ರಿ 12.30ಕ್ಕೆ ಆಚೆ ಕಳಿಸಿದ್ರಂತೆ. ರಾಜಣ್ಣ ಊಟ ಇಲ್ಲದೇ, ಹೊಡೆತ ತಿಂದು ಏನೂ ತಿಳಿಯದೇ ಬೆಂಗಳೂರು ಸುತ್ತಿದ್ರಂತೆ. ಕೊನೆಗೆ ಬಸ್ ಸ್ಟಾಂಡ್ ನಲ್ಲಿ ಮಲಗಿ ಕಾಲ ಕಳೆದಿದ್ರಂತೆ. ಜೀವನದಲ್ಲಿ ಕಷ್ಟ ಹೇಗೆ ಬರುತ್ತೆ ಎಂದು ಹೇಳೋಕೆ ಆಗಲ್ಲ ಎಂದು ರಾಜಣ್ಣ ಹೇಳಿದ್ದಾರೆ.


    ಇದನ್ನೂ ಓದಿ: Puttakkana Makkalu: ಪುಟ್ಟಕ್ಕ ಅಡುಗೆ ಮಾಡುವುದಕ್ಕೂ ಸೈ, ಗೂಡ್ಸ್ ಆಟೋ ಓಡಿಸೋಕೂ ಜೈ, ಎಲ್ಲಾ ಮಕ್ಕಳಿಗಾಗಿ! 


    ದಿವ್ಯಾ ಸಹ ಚಿಕ್ಕಪ್ಪನನ್ನು ಕಳೆದುಕೊಂಡಿದ್ದಾಳೆ
    ದಿವ್ಯಾ ಉರುಡುಗ ಕಳೆದ ಬಾರಿ ಬಿಗ್ ಸೀಸನ್ ನಲ್ಲಿ ಇದ್ದರೂ ಆಗ ಕೋವಿಡ್ ಬಂದು ಶೋ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆಗ ಮನೆಗೆ ಹೋದಾಗ ಆಕೆ ಚಿಕ್ಕಪ್ಪ ಇರಲಿಲ್ವಂತೆ. ತುಂಬಾ ಪ್ರೀತಿಯಿಂದ ನೋಡಿಕೊಳ್ತಿದ್ದ ಚಿಕ್ಕಪ್ಪ ಇಲ್ಲ ಎಂದು ಕೇಳಿ ತುಂಬಾ ಬೇಸರ ಆಗಿತ್ತು. ಈಗಲೂ ಬಿಗ್ ಬಾಸ್ ಗೆ ಬರುವಾಗ ಭಯ ಆಗ್ತಿತ್ತು. ಮತ್ತೆ ಹೋದಾಗ ಯಾರಿಗೆ ಏನ್ ಆಗುತ್ತೋ ಅಂತ ಭಯ ಎಂದು ಹೇಳಿದ್ದಾಳೆ.


    kannada bigg boss, rupesh rajanna real life story horrible, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ!, kannada news, karnataka news,
    ದಿವ್ಯಾ


    ಎಲ್ಲರೂ ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡು, ಬೇಸರ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಅವರದ್ದೇ ಅದ ಕಷ್ಟಗಳು ಇರುತ್ತವೆ ಎಂದು ಹೇಳಿದ್ದಾರೆ.

    Published by:Savitha Savitha
    First published: