• Home
 • »
 • News
 • »
 • entertainment
 • »
 • Bigg Boss Kannada: ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ, ಬೀಳದ ರೀತಿ ತಡೆದಿರೋದು ಯಾರು?

Bigg Boss Kannada: ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ, ಬೀಳದ ರೀತಿ ತಡೆದಿರೋದು ಯಾರು?

ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ

ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ

ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣರನ್ನು ಬಾಳೆಗಿಡ ಇದ್ದಂತೆ ಎಂದು ಹೇಳಿದ್ದೇ ತಡ, ಸುದೀಪ್ ಅವರು ರಾಜಣ್ಣನನ್ನು ಬೀಳದಂತೆ ತಡೆದು ಹಿಡಿದ 2 ಕೋಲುಗಳು ಯಾರು ಎಂದು ಕೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಈ ಬಾರಿ ನವೀನರಾಗಿ ಬಂದಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಸದಾ ಜಗಳ ಮಾಡುತ್ತಲೇ ಇರುತ್ತಾರೆ. ರೂಪೇಶ್ ರಾಜಣ್ಣ ಬಾಳೆ ಗಿಡದಂತೆ. ಹಣ್ಣು ಹೆಚ್ಚಾದಾಗ ಗಿಡ ಬಾಗಿ ಬಿಡುತ್ತಂತೆ. ರಾಜಣ್ಣ ಆ ರೀತಿ ಎಂದು ಆರ್ಯವರ್ಧನ್ (Arya Vardhan) ಗುರೂಜಿ ಹೇಳಿದ್ದಾರೆ.


  ರೂಪೇಶ್ ರಾಜಣ್ಣ ಗಲಾಟೆ


  ಬಿಗ್ ಬಾಸ್ ಸೀಸನ್ 09ಕ್ಕೆ ನವೀನರಾಗಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಬಂದಿದ್ದಾರೆ. ಸದಾ ಯಾವಗಲು ನೇರ ನುಡಿಗಳನ್ನು ಸ್ಪರ್ಧಿ ಬಳಿ ಹೇಳ್ತಾರೆ. ಆದ್ರೆ ಒಂದಲ್ಲ ಒಂದು ವಿಷಯಕ್ಕೆ, ಯಾರ ಬಳಿಯಾದ್ರೂ ಜಗಳ ಆಡ್ತಾನೆ ಇರ್ತಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಜೊತೆಯೇ ಹೆಚ್ಚು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ಸೀಸನ್ ನಿಂದಲೂ ಪ್ರಶಾಂತ್ ಸಂಬರ್ಗಿ ಜಗಳಕ್ಕೆ ಹೆಸರು ವಾಸಿಯಾಗಿದ್ದಾರೆ.
  ಬಾಳೆಗಿಡವಂತೆ ರೂಪೇಶ್ ರಾಜಣ್ಣ
  ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ಆರ್ಯವರ್ಧನ್ ಗುರೂಜಿ ರೂಪೇಶ್ ರಾಜಣ್ಣರನ್ನು ಬಾಳೆಗಿಡ ಇದ್ದಂತೆ ಎಂದಿದ್ದಾರೆ. ಬಾಳೆ ಗಿಡಕ್ಕೆ ಹಣ್ಣು ಹೆಚ್ಚಾದಂತೆ, ಆ ಗಿಡ ಬಿದ್ದು ಬಿಡುತ್ತೆ. ಅದಕ್ಕೆ ಕೋಲು ಕಟ್ಟಿ ನಿಲ್ಲಿಸುತ್ತಾರೆ. ಬೀಳಬಾರದು ಅಂತ. ಅದೇ ರೀತಿ ರೂಪೇಶ್ ರಾಜಣ್ಣ ಎಂದು ಹೇಳಿದ್ದಾರೆ.


  kannada bigg boss, rupesh rajanna is like banana tree, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ, kannada news, karnataka news,
  ರೂಪೇಶ್ ರಾಜಣ್ಣ


  ಇದನ್ನೂ ಓದಿ: Juhi Chawla: ಪ್ರೇಮಲೋಕದ ಬೆಡಗಿ, ಬಾಲಿವುಡ್ ತಾರೆ ಜೂಹಿ ಚಾವ್ಲಾ ಬರ್ತ್​ಡೇ! 


  ರೂಪೇಶ್ ರಾಜಣ್ಣನನ್ನು ತಡೆ ಹಿಡಿದಿರುವವರು ಯಾರು?
  ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣರನ್ನು ಬಾಳೆಗಿಡ ಇದ್ದಂತೆ ಎಂದು ಹೇಳಿದ್ದೇ ತಡ, ಸುದೀಪ್ ಅವರು ರಾಜಣ್ಣನನ್ನು ಬೀಳದಂತೆ ತಡೆದು ಹಿಡಿದ 2 ಕೋಲುಗಳು ಯಾರು ಎನ್ನುತ್ತಾರೆ. ಅದಕ್ಕೆ ಗುರೂಜಿ, ನಾನು ಮತ್ತು ರೂಪೇಶ್ ಶೆಟ್ಟಿ ಬೀಳಬೇಡಿ ಅಂತ ತಡೆಯುತ್ತೇವೆ. ಅವರು ಇಲ್ಲ ಬಿದ್ದೇ ಬೀಳುತ್ತೇನೆ ಎನ್ನುತ್ತಾರೆ ಎಂದು ಹೇಳಿದ್ದಾರೆ.


  kannada bigg boss, rupesh rajanna is like banana tree, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಗಲಾಟೆ ಮಾಡೋ ರೂಪೇಶ್ ರಾಜಣ್ಣ ಬಾಳೆಗಿಡವಂತೆ, kannada news, karnataka news,
  ರೂಪೇಶ್ ರಾಜಣ್ಣನನ್ನು ತಡೆ ಹಿಡಿದಿರುವವರು ಯಾರು?


  ದಿವ್ಯಾ-ರಾಜಣ್ಣನ ನಡುವೆ ಗಲಾಟೆ
  ಕಳೆದ ವಾರ ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ನಡುವೆ ಗಲಾಟೆ ಆಗಿತ್ತು. ದಿವ್ಯಾ ಉರುಡುಗ ನನ್ನ ಹಾಡನ್ನು, ಅವರದ್ದು ಎನ್ನುವ ರೀತಿ ಹೇಳಿದ್ದಾರೆ ಎಂದು ಹೇಳಿದ್ರು. ಅದಕ್ಕೆ ದಿವ್ಯಾ ಬೇಸರ ಮಾಡಿಕೊಂಡು ಅತ್ತಿದ್ದರು. ನಾನು ನನ್ನ ಹಾಡು ಎಂದು ಎಲ್ಲೂ ಹೇಳಿಲ್ಲ ಎಂದು ದಿವ್ಯಾ ಹೇಳಿದ್ದರು.


  ಈ ವಾರ ಕಳಪೆ ಪಟ್ಟ ರಾಜಣ್ಣನಿಗೆ
  ಯಾರು ಫೇಕ್ , ಯಾರು ರಿಯಲ್ ಎನ್ನುವ ವಿಚಾರದಲ್ಲಿ ರೂಪೇಶ್ ರಾಜಣ್ಣ ಎಲ್ಲರ ಬಳಿ ಅಗ್ರೆಸಿವ್ ಆಗಿ ಮಾತನಾಡಿದ್ರು. ಅದಕ್ಕೆ ಮನೆಯವರಿಗೆ ಇಷ್ಟ ಆಗಿರಲಿಲ್ಲ. ಎಲ್ಲರೂ ಅದಕ್ಕೆ ರೂಪೇಶ್ ರಾಜಣ್ಣನಿಗೆ ಕಳಪೆ ಪಟ್ಟ ನೀಡಿದ್ರು.


  ಇದನ್ನೂ ಓದಿ: Bigg Boss Kannada: ಯಾರನ್ನಾದ್ರೂ ಮಿಸ್ ಮಾಡಿಕೊಂಡ್ರೆ ಜಾಸ್ತಿ ಊಟ ಮಾಡಿ ಎಂದ ಕಿಚ್ಚ ಸುದೀಪ್! 


  ಬಿಗ್ ಬಾಸ್‍ಗೆ ಬಂದಾಗಿನಿಂದ ರೂಪೇಶ್ ರಾಜಣ್ಣ ಸದಾ ಗಲಾಟೆ ಮಾಡ್ತಾ ಇದ್ದಾರೆ. ಪ್ರತಿ ವಾರವೂ ನಾಮಿನೇಟ್ ಆಗ್ತಾ ಇದ್ದಾರೆ. ಈ ವಾರ ಸೇವ್ ಆಗ್ತಾರಾ ನೋಡಬೇಕು.

  Published by:Savitha Savitha
  First published: