• Home
  • »
  • News
  • »
  • entertainment
  • »
  • BBK Season 09: ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ!

BBK Season 09: ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ!

ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ

ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ

ಪುನೀತ್ ರಾಜ್‍ಕುಮಾರ್ ಸರ್ ಅವರನ್ನ ನೆನಪು ಮಾಡಿಕೊಳ್ಳದೇ ಇದ್ದರೆ ಖಂಡಿತ ಅಪೂರ್ಣವಾಗುತ್ತದೆ. ಅಪ್ಪು ಸರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ಸಾಧನೆ, ಅವರ ಪ್ರತಿಭೆಯ ಅನಾವರಣ ಯಾವತ್ತೂ ಕೂಡ ನಮ್ಮ ಮನಸ್ಸಿನಲ್ಲಿ ಉಳಿದಿರುತ್ತೆ.

  • News18 Kannada
  • Last Updated :
  • Karnataka, India
  • Share this:

    ಅಪ್ಪು, ಪುನೀತ್ ರಾಜ್‍ಕುಮಾರ್ (Punit Rajkumar), ಅಭಿಮಾನಿಗಳ ದೇವರು, ರಾಜ್‍ಕುಮಾರ್ ಅವರು ಪ್ರೀತಿಯ ಪುತ್ರ ನಮ್ಮನ್ನು ಅಗಲಿ ಇವತ್ತಿಗೆ ಒಂದು ವರ್ಷ (1 Year) ಆಯ್ತು. ಆದರೆ ಅವರನ್ನು ಮರೆಯಲು ಆಗುತ್ತಿಲ್ಲ. ಅವರ ನೆನಪುಗಳು ಇಂದಿಗೂ ಕಾಡುತ್ತಿವೆ. ಅವರ ಚಿತ್ರಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ. ಗಂಧದಗುಡಿ ನಿನ್ನೆ ರಿಲೀಸ್ ಆಗಿದ್ದು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ವರ್ಷದ ಪುಣ್ಯ ತಿಥಿಗೆ ಎಲ್ಲೆಡೆ ಅಪ್ಪು ಆರಾಧನೆ ನಡೆಯುತ್ತಿದೆ. ಅಪ್ಪು ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು (Fans) ದೂರದ ಊರುಗಳಿಂದ ಬರುತ್ತಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳು ಅಪ್ಪುವನ್ನು ನೆನೆದಿದ್ದಾರೆ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡು (Song) ಹೇಳಿ ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


    ಬಿಗ್ ಬಾಸ್ ಮನೆಯಲ್ಲಿ ಅಪ್ಪು ಸ್ಮರಣೆ
    ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬದ ಅಂಗವಾಗಿ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಎಲ್ಲರೂ ತಮಗೆ ಬೇಕಾದ ಹಾಡು, ನೃತ್ಯ, ಡ್ರಾಮಾ ಮಾಡಿ ಎಂಜಾಯ್ ಮಾಡಿದ್ರು.


    ಆಗ ರೂಪೇಶ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಸರ್ ಅವರನ್ನ ನೆನಪು ಮಾಡಿಕೊಳ್ಳದೇ ಇದ್ದರೆ ಖಂಡಿತ ಅಪೂರ್ಣವಾಗುತ್ತದೆ. ಅಪ್ಪು ಸರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ಸಾಧನೆ, ಅವರ ಪ್ರತಿಭೆಯ ಅನಾವರಣ ಯಾವತ್ತೂ ಕೂಡ ನಮ್ಮ ಮನಸ್ಸಿನಲ್ಲಿ ಉಳಿದಿರುತ್ತೆ ಎಂದು ಹೇಳಿದ್ದಾರೆ.


    ಯುದ್ಧ ಮಾಡದೇ ರಾಜನಾದ್ರು
    ಅಪ್ಪು ಅವರು ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷ ಆಗುತ್ತಿದೆ. ರಾಜನಾಗಬೇಕು ಅಂದ್ರೆ ಯುದ್ಧ ಮಾಡ್ಲೇ ಬೇಕು ಅಂತ ಏನಿಲ್ಲ. ಪ್ರೀತಿಯನ್ನ ಕೊಟ್ರೆ ಯಾರು ಬೇಕಾದರೂ ರಾಜ ಆಗಬಹುದು. ಯುದ್ಧವನ್ನೇ ಮಾಡದೆ ರಾಜ್ಯವನ್ನ ಗೆದ್ದು ರಾಜನಾದವರು ಪುನೀತ್ ರಾಜ್‍ಕುಮಾರ್. ಕನ್ನಡ ನಾಡಿನ ಮಣ್ಣಿನ ಪ್ರತಿ ಕಣ ಕಣದಲ್ಲೂ ಪುನೀತ್ ರಾಜ್‍ಕುಮಾರ್ ಅಮರ ಎಂದು ರೂಪೇಶ್ ರಾಜಣ್ಣ ಹೇಳಿದ್ರು.


    ಇದನ್ನೂ ಓದಿ: Puneeth Rajkumar: ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತು ಸಾಧನೆ ಕಥೆ! ಸಿಎಂ ಬೊಮ್ಮಾಯಿಗೆ ಪುನೀತ್​ ಅಭಿಮಾನಿಗಳಿಂದ ಮನವಿ


    ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ
    ಭಾಗ್ಯವಂತ ಸಿನಿಮಾದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದ ರೂಪೇಶ್ ರಾಜಣ್ಣ ಹಾಡು ಹೇಳಿದ್ರು. ಅವರ ಜೊತೆಗೆ ಎಲ್ಲಾ ಸ್ಪರ್ಧಿಗಳು ಸೇರಿಕೊಂಡ್ರು. ಬಿಗ್ ಬಾಸ್ ಮನೆ ಮನದಲ್ಲಿ ಅಪ್ಪು ಸ್ಮರಣೆ ನಡೆಯಿತು.


    bigg boss kannada season 9, remembering punit rajkumar, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ, kannada news, karnataka news,
    ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ


    ವರ್ಷದ ಪುಣ್ಯ ತಿಥಿ
    ಅಪ್ಪು ಇಂದಿಗೆ ನಮ್ಮನ್ನು ಅಗಲಿ ಒಂದು ವರ್ಷ ಕಳೆಯಿತು. ವರ್ಷದ ಪುಣ್ಯ ತಿಥಿಗೆ ಎಲ್ಲೆಡೆ ಅಪ್ಪು ಆರಾಧನೆ ನಡೆಯುತ್ತಿದೆ. ಅಪ್ಪು ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಬರುತ್ತಿದ್ದಾರೆ. ಪ್ರೀತಿಯ ದೇವರ ದರ್ಶನ ಮಾಡಲು ಬರುತ್ತಿದ್ದಾರೆ. ದೂರದ ಊರಿನ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಷ್ಟೋ ಮಂದಿ ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದಾರೆ.


    bigg boss kannada season 9, remembering punit rajkumar, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ, kannada news, karnataka news,
    ಅಪ್ಪು


    ಇದನ್ನೂ ಓದಿ: BBK Season 09: ಅಣ್ಣ ಎಂದು ರಾಕೇಶ್ ಜೊತೆ ಕ್ಲೋಸ್ ಆಗಿದ್ದ ಕಾವ್ಯಶ್ರೀ ಕಣ್ಣೀರು! ಅವರಿಬ್ಬರ ಮನಸ್ಥಾಪಕ್ಕೆ ಕಾರಣ ಏನು? 


    ಜೊತೆಗಿರದ ಜೀವ ಎಂದಿಂಗೂ ಜೀವಂತ. ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎಂದು ಅಭಿಮಾನಿಗಳು ದೇವರ ಬಳಿ ಕೇಳ್ತಾ ಇದ್ದಾರೆ. ಅಲ್ಲದೇ ಗಂಧದಗುಡಿ ಚಿತ್ರ ನೋಡಿ ಹಲವರು ಭಾವುಕರಾಗಿದ್ದಾರೆ. ಅಪ್ಪು ಚಿತ್ರದ ಮೂಲಕ ನಮಗೆ ದರ್ಶನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    Published by:Savitha Savitha
    First published: