• Home
  • »
  • News
  • »
  • entertainment
  • »
  • Bigg Boss Kannada: ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?

Bigg Boss Kannada: ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?

ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?

ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ? ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?

ಓಟಿಟಿಯಿಂದ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿರುವ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ತಮ್ಮ ಜೀವನದ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 (Bigg Boss Season 09) ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಓಟಿಟಿಯಿಂದ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿರುವ ರಾಕೇಶ್ ಅಡಿಗ  (Rakesh Adiga) ಮತ್ತು ರೂಪೇಶ್ ಶೆಟ್ಟಿ (Rupesh Shetty) ತಮ್ಮ ಜೀವನದ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ. ರಾಕೇಶ್‍ಗೆ ಎಲ್ಲರೂ ಡ್ರಗ್ ಅಡಿಕ್ಟ್ ಎಂತಿದ್ರಂತೆ. ರೂಪೇಶ್ ಶೆಟ್ಟಿ ಸೂಸೈಡ್ (Suicide) ಮಾಡಿಕೊಳ್ಳೋಣ ಎಂದುಕೊಂಡಿದ್ರಂತೆ.


    ಕಾಡಾಗಿದ್ದ ಬಿಗ್ ಬಾಸ್ ಮನೆ
    ಈ ಬಾರಿ ಬಿಗ್ ಬಾಸ್ ಮನೆ ಕಾಡಾಗಿತ್ತು. ಮನೆ ಮಂದಿಗೆ ಗಾರ್ಡನ್ ಏರಿಯಾದಲ್ಲೇ ಇರುವ ಟಾಸ್ಕ್ ಕೊಟ್ಟಿದ್ದರು. ಅಲ್ಲಿ ಅಡುಗೆ ಮಾಡಿಕೊಳ್ಳಬೇಕು. ಅಲ್ಲೇ ಮಲಗಬೇಕು. ಕಾಲ ಕಾಲಕ್ಕೆ ಟಾಸ್ಕ್ ಆಡಿ ಸೌಕರ್ಯಗಳನ್ನು ಪಡೆಯಬೇಕಿತ್ತು. 2 ದಿನದಿಂದ ಕಾಡಿನಲ್ಲಿ ಇದ್ದು ನೋವು ಅನುಭವಿಸುತ್ತಿದ್ದ ಮನೆ ಮಂದಿಗೆ, ತಮ್ಮ ಜೀವನದ ನೋವಿನ ಕಥೆ ಹೇಳಲು ಬಿಗ್ ಬಾಸ್ ಅವಕಾಶ ನೀಡಿದ್ರು.


    ಕನ್ನಡ ರ್ಯಾಪರ್ ಸಾಂಗ್ ಕಥೆ
    ರಾಕೇಶ್ ಅಡಿಗ ಅವರು ಸ್ನೇಹಿತರು ಸೇರಿ ಕನ್ನಡದಲ್ಲಿ ರ್ಯಾಪರ್ ಸಾಂಗ್ ಮಾಡಿದ್ರಂತೆ. ಎಲ್ಲರೂ ಕನ್ನಡದಲ್ಲಿ ರ್ಯಾಪರ್ ಸಾಂಗ್ ಎಂದು ರೇಗಿಸಿದ್ರಂತೆ. ಆದ್ರೂ ತಲೆ ಕೆಡಿಸಿಕೊಳ್ಳದೇ ಸ್ನೇಹಿತರೆಲ್ಲಾ ಸೇರಿ ಮಾಡಿದ್ರಂತೆ. ಇದ್ದ ದುಡ್ಡಿನಲ್ಲಿ ಅದರ ಪ್ರಮೋಶನ್ ಮಾಡಿದ್ರಂತೆ. ಆದ್ರೆ ಒಂದು ಸಿಡಿ ಸಹ ಸೇಲ್ ಆಗ್ತಾ ಇರಲಿಲ್ವಂತೆ.


    ಇದನ್ನೂ ಓದಿ: SA RI GA MA PA ವೇದಿಕೆಯಲ್ಲೇ ಅನುಶ್ರೀಗೆ ಮದುವೆ ಆಫರ್! ಅವ್ರ ಪ್ರಪೋಸಲ್‌ಗೆ ಮಾತಿನಮಲ್ಲಿ ಹೇಳಿದ್ದೇನು?


    ಹೊಟ್ಟೆಗೆ ತಣ್ಣೀರು ಬಟ್ಟೆ
    ಎಷ್ಟೋ ದಿನ ಸಿಡಿ ಸೇಲ್ ಆಗದೇ ದುಡ್ಡು ಇಲ್ಲದೇ ಕಷ್ಟ ಪಟ್ಟಿದ್ದೇವೆ. ಊಟ ಸಹ ಇರಲಿಲ್ಲ. ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ರೆ, ಹಸಿವು ನೀಗಿಸುತ್ತೆ ಅಂತ, ಎಷ್ಟೋ ಬಾರಿ ಆ ರೀತಿ ಮಾಡಿದ್ದೇವೆ. ನಂತರ ಒಂದು ಮಾಧ್ಯಮದಲ್ಲಿ ನಮ್ಮನ್ನು ಇಂಟರ್ ವೀವ್ ಕರೆದ್ರು. ಅಲ್ಲಿಂದ ಆಗಿದ್ದು ಪವಾಡ. ನೆಕ್ಟ್ ಡೇ ಯಿಂದ ನಮ್ಮ ಲಕ್ ಚೇಂಜ್ ಆಯ್ತು. ಸಾವಿರಾರು ಸಿಡಿಗಳು ಸೇಲ್ ಆದ್ವು. ಜೋಶ್ ಸಿನಿಮಾ ಮಾಡಿದೆ. 8 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ಆದೆ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.


    kannada bigg boss, rakesh and rupesh shetty real life story, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ?, ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?, kannada news, karnataka news,
    ರಾಕೇಶ್ ಅಡಿಗ


    ಡ್ರಗ್ ಅಡಿಕ್ಟ್ ಎಂದಿದ್ದರು
    ನನಗೆ ಸಿಕ್ಕ ಗೆಲುವಿನಿಂದ ಅಹಂಕಾರ ಬಂತು. ಅದನ್ನು ಸಹಿಸಿಕೊಳ್ಳದ ಕೆಲವರು, ಅವನು ಡ್ರಗ್ ಅಡಿಕ್ಟ್. ಶೂಟಿಂಗ್ ಟೈಂನಲ್ಲಿ ಡ್ರಗ್ಸ್ ಸೇವಿಸಿರುತ್ತಾನೆ. ಎಂದು ಸುಳ್ಳು ಅಪಪ್ರಸಾರ ಎಬ್ಬಿಸಿದ್ರಂತೆ. ಅಲ್ಲಿಂದ ಅವಕಾಶಗಳು ಕಡಿಮೆ ಆದವು. ಈಗ ಬಿಗ್ ಬಾಸ್ ವೇದಿಕೆ ನನಗೆ ಸಿಕ್ಕ ಒಳ್ಳೆ ಅವಕಾಶ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.


    ಸೂಸೈಡ್ ಮಾಡಿಕೊಳ್ಳೋಣ ಎಂದುಕೊಂಡಿದ್ದೆ
    ರೂಪೇಶ್ ಶೆಟ್ಟಿ, ಸಾಲ ಮಾಡಿ ಒಂದು ತುಳು ಸಿನಿಮಾ ಮಾಡಿದ್ರಂತೆ. ಅವರು ಮಾಡಿದ ಹಿಂದಿನ ಸಿನಿಮಾಗಳು ಯಶಸ್ಸು ಕಂಡಿರಲಿಲ್ವಂತೆ. ಅದಕ್ಕೆ ಅವರೇ ನಿದೇರ್ಶನಕ್ಕೆ ಕೈ ಹಾಕಿ ಸಿನಿಮಾ ಮಾಡಿದ್ರಂತೆ. ಅದಕ್ಕಾಗಿ ಎಲ್ಲಾ ಕಡೆ ಸಾಲ ಮಾಡಿದ್ರಂತೆ. ಅದು ಸಿನಿಮಾ ಸಕ್ಸಸ್ ಆಗಲಿಲ್ಲ ಅಂದ್ರೆ, ಸೂಸೈಡ್ ಮಾಡಿಕೊಳ್ಳೋಣ, ಇಲ್ಲ ಊರು ಬಿಟ್ಟು ಹೋಗೋಣ ಎಂದುಕೊಂಡಿದ್ರಂತೆ.


    kannada bigg boss, rakesh and rupesh shetty real life story, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ರಾಕೇಶ್ ಅಡಿಗ ಡ್ರಗ್ ಅಡಿಕ್ಟ್ ಆಗಿದ್ರಾ?, ರೂಪೇಶ್ ಶೆಟ್ಟಿ ಸೂಸೈಡ್‍ಗೆ ಯತ್ನಿಸಿದ್ರಾ?, kannada news, karnataka news,
    ರೂಪೇಶ್ ಶೆಟ್ಟಿ


    ಇದನ್ನೂ ಓದಿ: Rakhi Sawant Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಖಿ ಸಾವಂತ್, ಈಕೆ ನಿಜವಾದ ಹೆಸರು ಹೀಗಿದೆ 


    ಆದ್ರೆ ಸಿನಿಮಾ ಸಕ್ಸಸ್ ಆಯ್ತಂತೆ. ಸೂಪರ್ ಹಿಟ್ ಆಗಿ ಸಿನಿಮಾ ರನ್ ಆಯ್ತಂತೆ. ಆಗ ರೂಪೇಶ್ ಶೆಟ್ಟಿಗೆ ಖುಷಿ ಆಯ್ತಂತೆ. ಇಲ್ಲ ಅಂದ್ರೆ ಅವತ್ತು ನಾನ್ ಏನ್ ಆಗಿ ಬಿಡ್ತಿದ್ನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

    Published by:Savitha Savitha
    First published: