ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ 9 ಜನ ಔಟ್ ಆಗಿದ್ದಾರೆ. ಅಲ್ಲದೇ ಈ ಬಾರಿ ಓಟಿಟಿ ಸೀಸನ್ ಸಹ ಶುರು ಮಾಡಲಾಗಿತ್ತು. ಓಟಿಟಿಯಿಂದ ರಾಕೇಶ್ ಅಡಿಗ (Rakesh Adiga) ಟಿವಿ ಸೀಸನ್ ಗೆ ಆಯ್ಕೆ ಆಗಿದ್ದರು. ರಾಕಿ ತನ್ನ ತಾಳ್ಮೆಯಿಂದ ಈಡೀ ಕರುನಾಡ ಜನರ ಮನಸ್ಸು ಗೆದ್ದಿದ್ದಾನೆ.
ರಾಕೇಶ್ ಅಡಿಗ ಗೆಲ್ಲಬೇಕು
ರಾಕೇಶ್ ಅಡಿಗ ಓಟಿಟಿಯಿಂದಲೂ ಸ್ಮಾರ್ಟ್ ಗೇಮ್ ಆಡ್ತಾ ಇದ್ದಾರೆ. ಯಾರೊಂದಿಗೂ ಜಗಳ ಆಡಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಯಾರಾದ್ರೂ ಬೇಸರವಾಗಿದ್ರೆ ಸಮಾಧಾನ ಮಾಡ್ತಾರೆ. ರಾಕೇಶ್ ಅಂದ್ರೆ ಎಲ್ಲರಿಗೂ ಇಷ್ಟ. ಅಲ್ಲದೇ ಅವರು ಹೆಚ್ಚಾಗಿ ನಾಮಿನೇಟ್ ಕೂಡ ಆಗಿಲ್ಲ.
ರಾಕೇಶ್ ಅಡಿಗ ಹಾಡು
ಬದುಕಲು ಕಲಿ, ಬದುಕಲು ಕಲಿ, ನಿನ್ನೊಂದಿಗೆ ನೀ ಬದುಕಲು ಕಲಿ
ಶಾಶ್ವತವಿಲ್ಲದ ಭಾವನೆಗಳಿಗೆ ಬೆಲೆ ಕೊಡದೇ ನೀ ಬದುಕಲು ಕಲಿ
ಮನಸು ಮೂಡಿಸೋ ಗೊಂದಲಗಳನು ನೀ ಲೆಕ್ಕಿಸದೇ ಬದಕಲು ಕಲಿ
ನೀ ಬದುಕಲು ಕಲಿ, ನೀ ಬದುಕಲು ಕಲಿ
ನೋವು ನಲಿವಿನಲ್ಲಿ ಅಡಗಿದೆ ಬದುಕು
ತಪ್ಪುಗಳಿಂದ ನಿನ್ನನೇ ಹುಡುಕು, ವಾಮೋಹದ ಬಾಲವ ಹಿಡಿಯದೇ,
ನಿನ್ನ ಅರಿತು, ಕಲಿತು, ನಿನ್ನ ಸ್ನೇಹಿತನ ನಿನ್ನಲೇ ಹುಡುಕು.
ಆಗುವುದೆಲ್ಲಾ ಹೃದಯಕೆ ಕೆಡುಕು, ತಪ್ಪು-ಸರಿಗಳ ಸುಳಿಯಲಿ ಸಿಲುಕದೇ,
ಅನಿಸಿಕೆ ಎಂಭ ಭೂತಕೆ ಮಣಿಯದೇ, ನಿನ್ನ ತನವನು ಎಂದಿಗೂ ಬಿಡದೇ,
ನಿನ್ನನು ನೀ ಪ್ರೀತಿಸಿ ಬದುಕು, ಬದುಕಲು ಕಲಿ,
ಬದುಕಲು ಕಲಿ, ನಿನ್ನೊಂದಿಗೆ ನೀ ಬದುಕಲು ಕಲಿ
View this post on Instagram
ಕನ್ನಡ ರ್ಯಾಪರ್ ಆದ ಕಥೆ
ರಾಕೇಶ್ ಅಡಿಗ ಅವರು ಸ್ನೇಹಿತರು ಸೇರಿ ಕನ್ನಡದಲ್ಲಿ ರ್ಯಾಪರ್ ಸಾಂಗ್ ಮಾಡಿದ್ರಂತೆ. ಎಲ್ಲರೂ ಕನ್ನಡದಲ್ಲಿ ರ್ಯಾಪರ್ ಸಾಂಗ್ ಎಂದು ರೇಗಿಸಿದ್ರಂತೆ. ಆದ್ರೂ ತಲೆ ಕೆಡಿಸಿಕೊಳ್ಳದೇ ಸ್ನೇಹಿತರೆಲ್ಲಾ ಸೇರಿ ಮಾಡಿದ್ರಂತೆ. ಇದ್ದ ದುಡ್ಡಿನಲ್ಲಿ ಅದರ ಪ್ರಮೋಶನ್ ಮಾಡಿದ್ರಂತೆ. ಆದ್ರೆ ಒಂದು ಸಿಡಿ ಸಹ ಸೇಲ್ ಆಗ್ತಾ ಇರಲಿಲ್ವಂತೆ.
ಇದನ್ನೂ ಓದಿ: Olavina Nildana: ಧೀರಜ್ ಜೊತೆ ತಾರಿಣಿ ನಿಶ್ಚಿತಾರ್ಥ, ಸಿದ್ಧಾಂತ್ ಮುಂದಿನ ನಡೆ ಏನು?
ಹೊಟ್ಟೆಗೆ ತಣ್ಣೀರು ಬಟ್ಟೆ
ಎಷ್ಟೋ ದಿನ ಸಿಡಿ ಸೇಲ್ ಆಗದೇ ದುಡ್ಡು ಇಲ್ಲದೇ ಕಷ್ಟ ಪಟ್ಟಿದ್ದೇವೆ. ಊಟ ಸಹ ಇರಲಿಲ್ಲ. ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ರೆ, ಹಸಿವು ನೀಗಿಸುತ್ತೆ ಅಂತ, ಎಷ್ಟೋ ಬಾರಿ ಆ ರೀತಿ ಮಾಡಿದ್ದೇವೆ.
ಇದನ್ನೂ ಓದಿ: SA RI GA MA PA: ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ, ಶಿವಣ್ಣನಿಗೆ ಹಾಡಿನ ಮೂಲಕ ಮೋಡಿ ಮಾಡಿದ ದಿಯಾ!
ನಂತರ ಒಂದು ಮಾಧ್ಯಮದಲ್ಲಿ ನಮ್ಮನ್ನು ಇಂಟರ್ ವೀವ್ ಕರೆದ್ರು. ಅಲ್ಲಿಂದ ಆಗಿದ್ದು ಪವಾಡ. ನೆಕ್ಟ್ ಡೇ ಯಿಂದ ನಮ್ಮ ಲಕ್ ಚೇಂಜ್ ಆಯ್ತು. ಸಾವಿರಾರು ಸಿಡಿಗಳು ಸೇಲ್ ಆದ್ವು. ಜೋಶ್ ಸಿನಿಮಾ ಮಾಡಿದೆ. 8 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ಆದೆ ಎಂದು ರಾಕೇಶ್ ಅಡಿಗ ಈ ಹಿಂದೆ ಹೇಳಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ