• Home
  • »
  • News
  • »
  • entertainment
  • »
  • BBK Season 09: ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರ ಪ್ರತಿಭಟನೆ!

BBK Season 09: ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರ ಪ್ರತಿಭಟನೆ!

ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ!

ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ!

ಪ್ರಶಾಂತ್ ಸಂಬರ್ಗಿ ಪದೇ ಪದೇ ರೂಪೇಶ್ ವಿರುದ್ಧ ಮಾತನಾಡುತ್ತಾರೆ. ಅಲ್ಲದೇ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಮಾತಾನಾಡುವಾಗ ಇಲ್ಲದ ಸಲ್ಲದ ಆರೋಪ ಮಾಡ್ತಾರೆ ಎಂದು ಪ್ರತಿಭಟನೆ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಅದರಲ್ಲಿ ಪ್ರಶಾಂತ್ ಸಂಬರ್ಗಿ ಕೂಡ ಒಬ್ಬರು. ಪ್ರಶಾಂತ್ ಸಂಬರ್ಗಿ  ಇದ್ರೆ ಕೇಳಬೇಕಾ, ಅಲ್ಲಿ ಜಗಳ ಇದ್ದೇ ಇರುತ್ತೆ. ಈ ಬಾರಿ ಆ ಲೀಸ್ಟ್ ಗೆ ರೂಪೇಶ್ ರಾಜಣ್ಣ ಸೇರಿದ್ದಾರೆ. ಇಬ್ಬರು ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಈಗ ಕನ್ನಡ (Kannada) ಹೋರಾಟಗಾರರು ಪ್ರಶಾಂತ್ (Prashanth) ವಿರುದ್ಧ ಸಿಡಿದೆದ್ದಿದ್ದಾರೆ.


    ಪ್ರಶಾಂತ್-ರಾಜಣ್ಣ ಜಗಳ
    ಬಿಗ್ ಬಾಸ್ ಸೀಸನ್ 09ರಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಯಾವುದಾದರೂ ವಿಷಯಕ್ಕೆ ಇಬ್ಬರು ಕಾಲು ಕೆರೆದುಕೊಂಡು ಗಲಾಟೆ ಮಾಡಿಕೊಳ್ತಾನೆ ಇರುತ್ತಾರೆ. ಮತ್ತೆ ಮಾತನಾಡುತ್ತಾರೆ. ಮರುದಿನ ಮತ್ತೆ ಜಗಳ. ಇದೇ ಆಗಿ ಹೋಗಿದೆ.


    ರೋಲ್ ಕಾಲ್ ಗಿರಾಕಿ ಎಂದಿದ್ದ ಪ್ರಶಾಂತ್
    ಈ ಹಿಂದೆ ಟಾಸ್ಕ್ ಆಡುವಾಗು ಪ್ರಶಾಂತ್ ಸಂಬರ್ಗಿ, ಈ ಕನ್ನಡ ಹೋರಾಟಗಾರರು ರೋಲ್ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದು ಹೇಳಿದ್ದರು. ಅದಕ್ಕೆ ರೂಪೇಶ್ ರಾಜಣ್ಣ, ನಾನು ರೋಲ್ ಮಾಡಿದ್ದನ್ನು ಸಾಬೀತು ಮಾಡಿದ್ರೆ, ನಾನು ಸೂಸೈಡ್ ಮಾಡಿಕೊಳ್ಳಲು ರೆಡಿ ಎಂದಿದ್ದರು. ಅವತ್ತು ಜೋರು ಗಲಾಟೆ ಆಗಿತ್ತು.


    ಇದನ್ನೂ ಓದಿ: Actress Ramya: ರಮ್ಯಾ-ಸುದೀಪ್ ಮಧ್ಯೆ ಕೋಳಿ ಜಗಳ, ಆದ್ರೂ ಕಿಚ್ಚನೇ ಬೆಸ್ಟಿ ಎಂದ ಮೋಹಕ ತಾರೆ!


    ಕನ್ನಡ ಪರ ಹೋರಾಟಗಾರರ ಪ್ರತಿಭಟನೆ
    ಈ ಬಾರಿಯ ಬಿಗ್ ಬಾಸ್ ಸೀಸನ್‍ಗೆ ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಬಂದಿದ್ದಾರೆ. ಪ್ರಶಾಂತ್ ಸಂಬರ್ಗಿ ಪದೇ ಪದೇ ರೂಪೇಶ್ ವಿರುದ್ಧ ಮಾತನಾಡುತ್ತಾರೆ. ಅಲ್ಲದೇ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಮಾತಾನಾಡುವಾಗ ಇಲ್ಲದ ಸಲ್ಲದ ಆರೋಪ ಮಾಡ್ತಾರೆ ಎಂದು ಪ್ರತಿಭಟನೆ ಮಾಡಿದ್ದಾರೆ.


    bigg boss kannada season 9, protest against prashant, kannada protester, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ, kannada news, karnataka news,
    ಪ್ರಶಾಂತ್-ರಾಜಣ್ಣ ಜಗಳ


    ಬಿಗ್ ಬಾಸ್ ಮನೆಯಿಂದ ಹೊರ ಹಾಕಿ
    ಪ್ರಶಾಂತ್ ಸಂಬರ್ಗಿ ರಣಹೇಡಿ. ಎದುರಿಗೆ ನಿಂತು ಮಾತನಾಡಲು ಆಗಲ್ಲ. ಸಂಬರ್ಗಿ, ಪದೇ ಪದೇ ನಾನು ಕನ್ನಡ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದ್ದೀನಿ ಅಂತ ಹೇಳ್ತಾರೆ. ಬಿಗ್ ಮನೆಯಲ್ಲಿ ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ತಾರೆ. ಹೀಗೆ ಮಾಡ್ತಾ ಇದ್ರೆ, ಹೊರಗೆ ಬಂದ್ಮೇಲೆ ಏನು ಎಂದು ತೋರಿಸಬೇಕಾಗುತ್ತೆ ಎಂದು ಚಂದನ್ ಗೌಡ್ರು ಎನ್ನುವವರು ಪೋಸ್ಟ್ ಹಾಕಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸುವಂತೆ ಹೇಳಿದ್ದಾರೆ.


    bigg boss kannada season 9, protest against prashant, kannada protester, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ, kannada news, karnataka news,
    ಬಿಗ್ ಬಾಸ್ ಮನೆಯಿಂದ ಹೊರ ಹಾಕಿ


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಾಗಿ ಕಿತ್ತಾಟ, ಜಗಳ; ಕ್ಯಾಪ್ಟನ್ ಅನುಪಮಾಗೆ ತಲೆನೋವು! 


    ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಕಾಮನ್. ಆದ್ರೆ ಅದು ಒಂದು ಸಂಘದ ಬಗ್ಗೆ ಮಾಡಿದ್ರೆ ತಪ್ಪು ಎಂದು ಎಲ್ಲಾ ಕಡೆ ವಿರೋಧ ವ್ಯಕ್ತವಾಗ್ತಿದೆ. ಪ್ರಶಾಂತ್ ಅವರು ಮಾತನಾಡುವಾಗ ಏನೇನು ಮಾತನಾಡುತ್ತಾರೆ ಎಂದು ಕನ್ನಡ ಪರ ಹೋರಾಟಗಾರರು ಸಿಟ್ಟಾಗಿದ್ದಾರೆ. ಪ್ರಶಾಂತ್‍ರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿ ಎನ್ನುತ್ತಿದ್ದಾರೆ.

    Published by:Savitha Savitha
    First published: