ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ನವೀನರಾಗಿ ಈ ಬಾರಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಇದ್ರೆ ಕೇಳಬೇಕೆ, ಅಲ್ಲಿ ಜಗಳ ಇದ್ದೇ ಇರುತ್ತೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ (Prashanth Sambargi) ಮತ್ತು ರೂಪೇಶ್ ರಾಜಣ್ಣ (Rupesh Rajanna) ತುಂಬಾ ಜಗಳ ಆಡಿದ್ದಾರೆ. ಆದ್ರೆ ಈಗ ಪ್ರಶಾಂತ್ ರಾಜಣ್ಣ ಗಡ್ಡ ಬೋಳಿಸಿದ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.
ಪ್ರಶಾಂತ್ ಸಂಬರ್ಗಿ-ರೂಪೇಶ್ ರಾಜಣ್ಣ
ಬಿಗ್ ಸೀಸನ್ 09 ಹಾಟ್ ಆಗಿದೆ ಅಂದ್ರೆ ಅದಕ್ಕೆ ಕಾರಣ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ. ಯಾಕಂದ್ರೆ ಇವರಿಬ್ಬರ ಮಾತು ಜೋರು. ಧ್ವನಿ ಏರಿಸಿಯೇ ಮಾತನಾಡುತ್ತಾರೆ. ಇಬ್ಬರು ಟಾಸ್ಕ್ ವಿಚಾರವಾಗಿ ಎಷ್ಟೋ ಬಾರಿ ಜಗಳ ಮಾಡಿಕೊಂಡಿದ್ದಾರೆ. ಜಗಳ ಆದ ನಂತರ ಒಂದಾಗಿದ್ದಾರೆ.
ಒಮ್ಮೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಿದ್ದ ಸಂಬರ್ಗಿ
ಟಾಸ್ಕ್ ಆಡುವಾಗ ಪ್ರಶಾಂತ್ ಸಂಬರ್ಗಿ ರಾಜಣ್ಣ ಅವರನ್ನು ಬೈಯುವಾಗ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿರುತ್ತಾರೆ. ಅದಕ್ಕೆ ಬಿಗ್ ಬಾಸ್ ಮನೆ ಹೊರಗೆ ಪ್ರತಿಭಟನೆ ನಡೆದಿರುತ್ತೆ. ಆ ಕಾರಣ ಪ್ರಶಾಂತ್ ಸಂಬರ್ಗಿ ಕರ್ನಾಟಕದ ಜನತೆಗೆ ಕ್ಷಮೆ ಕೇಳಿದ್ದರು. ಆಗಿನಿಂದ ಜಗಳ ಸ್ಪಲ್ಪ ಕಮ್ಮಿ ಆಗಿದೆ.
ಇದನ್ನೂ ಓದಿ: Bigg Boss Kannada: ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳೋದು ಹೇಗೆ ಅಂತ ಟಿಪ್ಸ್ ಕೊಟ್ಟ ಆರ್ಯವರ್ಧನ್ ಪತ್ನಿ!
ರಾಜಣ್ಣ ಗಡ್ಡ ಬೋಳಿಸಿದ ಪ್ರಶಾಂತ್
ಪ್ರಶಾಂತ್ ಸಂಬರ್ಗಿ ಶೇವಿಂಗ್ ಮಾಡಿಕೊಳ್ತಾ ಇರ್ತಾರೆ. ಆಗ ರಾಜಣ್ಣ ಅವರು ಪಕ್ಕದಲ್ಲೇ ಇರುತ್ತಾರೆ. ನನಗೆ ಕ್ರೀಮ್ ಹಾಕುವ ಅಭ್ಯಾಸ ಇಲ್ಲ ಅಂತಾರೆ. ಅಭ್ಯಾಸ ಮಾಡಿಕೊಳ್ಳಿ ಎಂದು ಪ್ರಶಾಂತ್ ಹೇಳಿ, ಅವರೇ ಕ್ರೀಮ್ ಹಾಕಿ ಗಡ್ಡ ಬೋಳಿಸುತ್ತಾರೆ. ಸಂಬರ್ಗಿ ಅವರು ತಾಳ್ಮೆಯಿಂದ ಗಡ್ಡ ತೆಗೆದ ವಿಚಾರ ರಾಜ್ಯಾದ್ಯಂತ ಸುದ್ದಿಯಾಗಿದೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ದಿವ್ಯಾ ಉರುಡುಗ ಹೇಳಿದ್ದೇನು?
ನಿಮ್ಮಿಬ್ಬರ ಬಾಂದವ್ಯ ನೋಡಲು 2 ಕಣ್ಣು ಸಾಲದು. ಹುಷಾರಾಗಿರಿ. ಒಂದು ವೇಳೆ ರಾಜಣ್ಣ ಅವರು ಮುಖವನ್ನು ಪ್ರಶಾಂತ್ ಕೈಗೆ ಕೊಟ್ಟು ಬಿಡ್ತಾರೆ. ಆದ್ರೆ ಪ್ರಶಾಂತ್ ಸಂಬರ್ಗಿ ಎಂದೂ ಅವರ ಮುಖವನ್ನು ಯಾರ ಕೈಗೂ ಕೊಡಲ್ಲ. ಇಬ್ಬರನ್ನು ನೋಡಿ ಅನುಪಮಾ ಗೌಡ, ದಿವ್ಯಾ ಉರುಡುಗ ನಕ್ಕಿದ್ದಾರೆ.
ಪ್ರಶಾಂತ್ ತಾಯಿ ಸಂಧಾನ
ಬಿಗ್ ಬಾಸ್ ಮನೆಗೆ ಬಂದಿದ್ದ ಪ್ರಶಾಂತ್ ಅವರ ತಾಯಿ. ನನಗೆ ರೂಪೇಶ್ ರಾಜಣ್ಣ ತುಂಬಾ ಇಷ್ಟ. ಅವರ ಆಟ ಇಷ್ಟ ಆಗಿದೆ ಎಂದು ಹೇಳಿದ್ದರು. ಅದನ್ನೇ ರಾಜಣ್ಣ ಹೇಳಿದ್ದಾರೆ. ಪ್ರಶಾಂತ್ ಅವರ ಅಮ್ಮ ಸಂಧಾನ ಮಾಡಿಸಿದ್ದಾರೆ. ಅದರ ವ್ಯಾಲಿಡಿಟಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಹೆಂಡ್ತಿ ಕಾಲಿಗೆ ಬಿದ್ದ ರೂಪೇಶ್ ರಾಜಣ್ಣ! ನಿಮ್ಮ ಮೇಲೆ ಗೌರವ ಹೆಚ್ಚಾಯ್ತು ಎಂದ ಅಭಿಮಾನಿಗಳು
ಒಟ್ನಲ್ಲಿ ಸದಾ ಜಗಳದಿಂದಲೇ ಇರುತ್ತಿದ್ದ ಪ್ರಶಾಂತ್ ಸಂಬರ್ಗಿ-ರೂಪೇಶ್ ರಾಜಣ್ಣ ಈ ರೀತಿ ಇರುವುದನ್ನು ನೋಡಲು ಖುಷಿ ಆಗುತ್ತೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ