• Home
 • »
 • News
 • »
 • entertainment
 • »
 • Bigg Boss Kannada: ಸಂಬರ್ಗಿ ಮೇಲೆ ದಿವ್ಯಾಗೆ ಕೋಪವೇಕೆ? ಕಾವ್ಯಶ್ರೀ ಜೊತೆ ಕ್ಯಾಪ್ಟನ್ ಹೇಳಿದ್ದೇನು?

Bigg Boss Kannada: ಸಂಬರ್ಗಿ ಮೇಲೆ ದಿವ್ಯಾಗೆ ಕೋಪವೇಕೆ? ಕಾವ್ಯಶ್ರೀ ಜೊತೆ ಕ್ಯಾಪ್ಟನ್ ಹೇಳಿದ್ದೇನು?

ಪ್ರಶಾಂತ್ ಮೇಲೆ ದಿವ್ಯಾಗೆ ಈ ಕಾರಣಕ್ಕೆ ಬೇಸರವಂತೆ!

ಪ್ರಶಾಂತ್ ಮೇಲೆ ದಿವ್ಯಾಗೆ ಈ ಕಾರಣಕ್ಕೆ ಬೇಸರವಂತೆ!

ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ ಆದ ಮೇಲೆ, ಕಾವ್ಯಶ್ರೀ ಜೊತೆ ಮಾತನಾಡುತ್ತಾ ಕೂತಿರುತ್ತಾರೆ. ಆಗ ಕಾವ್ಯ, ದಿವ್ಯಾ ಉರುಡುಗ ನಿಮ್ಮನ್ನು ಹೇಟ್ ಮಾಡುತ್ತಾಳಾ? ಆಗ ದಿವ್ಯಾ ಬಗ್ಗೆ ಪ್ರಶಾಂತ್ ಸಂಬರ್ಗಿ ಮಾತನಾಡುತ್ತಾರೆ...

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ (Bigg Boss) 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದರು. ಆದ್ರೆ ಈಗಾಗಲೇ 6 ಜನ ಬಿಗ್ ಬಾಸ್ ಮನೆಯಿಂದ ಔಟ್ (Out) ಆಗಿದ್ದಾರೆ. ಪ್ರಶಾಂತ್-ಕಾವ್ಯಶ್ರೀ ಕೂತು ದಿವ್ಯಾ ಉರುಡುಗ ಬಗ್ಗೆ ಹೇಳಿದ್ದಾನೆ. ತನ್ನ ಮೇಲೆ ಏಕೆ ದಿವ್ಯಾಗೆ (Divya) ಕೋಪ ಎಂಬುದನ್ನು ಪ್ರಶಾಂತ್ ಹೇಳಿದ್ದಾರೆ.


  ಸೀಸನ್ 8 ರ ಸ್ಪರ್ಧಿಗಳು
  ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 08ರ ಸ್ಪರ್ಧಿಗಳು. ಆ ಸೀಸನ್‍ನಿಂದ ಪ್ರಶಾಂತ್ ದಿವ್ಯಾಳನ್ನು ತಂಗಿ ತಂಗಿ ಎನ್ನುತ್ತಾರೆ. ಆಗ ಇಬ್ಬರು ಜಗಳವಾಡಿಕೊಂಡಿದ್ರು. ಪ್ರಶಾಂತ್ ಸಂಬರ್ಗಿ ಹೇಳೋ ಮಾತಿನಲ್ಲಿ ಸತ್ಯ ಇಲ್ಲ ಎನ್ನಿಸುತ್ತೆ ಎಂದು ದಿವ್ಯಾ, ಬಿಗ್ ಬಾಸ್ ಸೀಸನ್ 09ರ ಪ್ರಾರಂಭದಲ್ಲಿ ಹೇಳಿದ್ರು.


  ದಿವ್ಯಾ-ಅರವಿಂದ್ ಬಗ್ಗೆ ಮಾತನಾಡಿದ್ದ ಪ್ರಶಾಂತ್
  ಬಿಗ್ ಬಾಸ್ 8 ಸೀಸನ್‍ಲ್ಲಿ ಕೊರೊನಾ ಕಾರಣಕ್ಕೆ ಬಿಗ್ ಬಾಸ್‍ನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆಗ ಪ್ರಶಾಂತ್ ಸಂಬರ್ಗಿ ಮಾಧ್ಯಮಗಳಿಗೆ ನೀಡಿದ ಸಂದರ್ಶನ ದಲ್ಲಿ ದಿವ್ಯಾ ಉರುಡುಗ-ಅರವಿಂದ್ ಕೆ.ಪಿ ಬಗ್ಗೆ ಮಾತನಾಡಿದ್ದರು ಅದಕ್ಕೆ ದಿವ್ಯಾಗೆ ಪ್ರಶಾಂತ್ ಸಂಬರ್ಗಿ ಕಂಡ್ರೆ ಆಗಲ್ಲ.  ಇಬ್ಬರ ನಡುವೆ ಮನಸ್ತಾಪ ಇದೆ. ಆದ್ರೂ ಮಾತನಾಡಿಸುತ್ತಾರೆ.


  ಇದನ್ನೂ ಓದಿ: Matte Mayamruga: ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ, ವಿದ್ಯಾಗೆ ಹೆಚ್ಚಾದ ಆತಂಕ! 


  ಕಾವ್ಯಶ್ರೀ ಕೇಳಿದ್ದೇನು?
  ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ ಆದ ಮೇಲೆ, ಕಾವ್ಯಶ್ರೀ ಜೊತೆ ಮಾತನಾಡುತ್ತಾ ಕೂತಿರುತ್ತಾರೆ. ಆಗ ಕಾವ್ಯ, ದಿವ್ಯಾ ಉರುಡುಗ ನಿಮ್ಮನ್ನು ಹೇಟ್ ಮಾಡುತ್ತಾಳಾ? ಅವಳು ನಿಮ್ಮ ಜೊತೆ ಮಾತನಾಡುವಾಗ ಅವರ ಮುಖದ ಭಾವನೆ ಬದಲಾಗುತ್ತೆ. ಆಗ ಅದು ಗೊತ್ತಾಗುತ್ತೆ. ಆದರೆ ನಿಮ್ಮನ್ನು ಬ್ರೋ ಅಂತ ಕರೆಯುತ್ತಾಳೆ. ನಿಮ್ಮನ್ನು ಹೇಟ್ ಮಾಡುವಷ್ಟು ಏನು ಮಾಡಿದ್ದೀರಿ ಎಂದು ಕೇಳ್ತಾಳೆ.


  bigg boss kannada season 9, prashanth sambargi talk about divya, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಪ್ರಶಾಂತ್ ಮೇಲೆ ದಿವ್ಯಾಗೆ ಈ ಕಾರಣಕ್ಕೆ ಬೇಸರವಂತೆ, ಕಾವ್ಯಶ್ರೀ ಬಳಿ ಹೇಳಿದ್ದೇನು?, kannada news, karnataka news,
  ಕಾವ್ಯಶ್ರೀ


  ಪ್ರಶಾಂತ್ ಹೇಳಿದ್ದೇನು?
  ನಾನು ಅವಳ ಫೇವರಿಸಂ ಬಗ್ಗೆ ಹೇಳುತ್ತೇನೆ. ಅದಕ್ಕೆ ದಿವ್ಯಾ ನನ್ನ ಹೇಟ್ ಮಾಡುತ್ತಾಳೆ. ಯಾವಾಗಲೂ ಅರವಿಂದ ಜೊತೆ ಇರುತ್ತಿದ್ದಳು. ಈಗಲೂ ಸಹ ಅವರದ್ದೇ ಗುಂಪು ಮಾಡಿಕೊಂಡು ಇದ್ದಾಳೆ. ಆ ಬಗ್ಗೆ ಹೇಳಿದ್ರೆ ಅವಳಿಗೆ ಕೋಪ ಬರುತ್ತೆ ಎಂದು ಪ್ರಶಾಂತ್ ಹೇಳಿದ್ದಾರೆ.


  bigg boss kannada season 9, prashanth sambargi talk about divya, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಪ್ರಶಾಂತ್ ಮೇಲೆ ದಿವ್ಯಾಗೆ ಈ ಕಾರಣಕ್ಕೆ ಬೇಸರವಂತೆ, ಕಾವ್ಯಶ್ರೀ ಬಳಿ ಹೇಳಿದ್ದೇನು?, kannada news, karnataka news,
  ದಿವ್ಯಾ-ಪ್ರಶಾಂತ್


  ಇದನ್ನೂ ಓದಿ: Lakshana: ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ! ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ? 


  ದರ್ಶ್ ಚಂದ್ರಪ್ಪ ಅದನ್ನೇ ಹೇಳಿದ್ದರು
  ಬಿಗ್ ಬಾಸ್ ಸೀಸನ್ 09ರ ಆರಂಭದಲ್ಲಿ ದರ್ಶ್ ಚಂದ್ರಪ್ಪ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಜಗಳ ನಡೆದಿತ್ತು. ನೀವು ಮನೆಯೊಳಗೆ ಒಂದು ರೀತಿ ಇರುತ್ತೀರಿ. ಆದ್ರೆ ಮನೆಯಿಂದ ಆಚೆ ಹೋದ ಮೇಲೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾಡತನಾಡುತ್ತೀರಿ ಎಂದು ಹೇಳಿದ್ದ. ಆಗ ದಿವ್ಯಾ ಸಹ ಹೌದು ಎಂದಿದ್ದರು. ಆಗ ಪ್ರಶಾಂತ್ ಸಂಬರ್ಗಿ ಅದು ನನ್ನ ಹಕ್ಕು. ನನಗೆ ಇಷ್ಟ ಬಂದಂತೆ ಮಾತನಾಡುತ್ತೇನೆ ಎಂದಿದ್ದರು.

  Published by:Savitha Savitha
  First published: