• Home
  • »
  • News
  • »
  • entertainment
  • »
  • Bigg Boss Kannada: ಈ ಬಾರಿ ಎಲಿಮಿನೇಷನ್ ಇಲ್ಲ; ಹೊಸ ಸದಸ್ಯರ ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ?

Bigg Boss Kannada: ಈ ಬಾರಿ ಎಲಿಮಿನೇಷನ್ ಇಲ್ಲ; ಹೊಸ ಸದಸ್ಯರ ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ?

ಬಿಗ್ ಬಾಸ್ ನಲ್ಲಿ ಈ ಬಾರಿ ಎಲಿಮಿನೇಷನ್ ಇಲ್ಲ?

ಬಿಗ್ ಬಾಸ್ ನಲ್ಲಿ ಈ ಬಾರಿ ಎಲಿಮಿನೇಷನ್ ಇಲ್ಲ?

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ನಡೆದಿದೆ. ಆದ್ರೆ ಅವರಿಗೆ ವೋಟ್ ಮಾಡಲು ಲೈನ್‍ಗಳೇ ತೆರೆದಿಲ್ಲ. ಆದ ಕಾರಣ ಈ ವಾರ ಎಲಿಮಿನೇಷನ್ ಇಲ್ಲ ಎಂದು ಹೇಳಲಾಗ್ತಿದೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ (Bigg Boss) 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. 6 ಜನ ಮನೆಯಿಂದ ಔಟ್ (Out) ಆಗಿದ್ದಾರೆ. ಐಶ್ವರ್ಯ ಪಿಸೆ, ಸೈಕೋ ನವಾಜ್, ದರ್ಶ್ ಚಂದ್ರಪ್ಪ, ಮಯೂರಿ, ನೇಹಾ ಗೌಡ, ಸಾನ್ಯಾ ಐಯ್ಯರ್ ಔಟ್ ಆಗಿದ್ದಾರೆ. ಈ ವಾರ ಎಲಿಮಿನೇಷನ್ ಇಲ್ಲ ಎಂದು ಹೇಳಲಾಗ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾ ಎಂದು ಹೇಳಲಾಗ್ತಿದೆ.


    6 ಜನ ಮನೆಯಿಂದ ಔಟ್
    ಬಿಗ್ ಬಾಸ್ ನಲ್ಲಿ ಪ್ರತಿ ವಾರ ಒಬ್ಬಬ್ಬರು ಔಟ್ ಆಗ್ತಾ ಇದ್ದಾರೆ. ಮೊದಲನೇ ವಾರ ಐಶ್ವರ್ಯ ಪಿಸೆ, ಎರಡನೇ ವಾರ ಸೈಕೋ ನವಾಜ್, ಮೂರನೇ ವಾರ ದರ್ಶ್ ಚಂದ್ರಪ್ಪ, ನಾಲ್ಕನೇ ವಾರ ಮಯೂರಿ, ಐದನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಐಯ್ಯರ್ ಔಟ್ ಆಗಿದ್ದಾರೆ. ಸಾನ್ಯಾ ಮನೆಯಿಂದ ಹೊರ ಹೋದ ಮೇಲೆ ಎಲ್ಲರಿಗೂ ಟೆನ್ಷನ್ ಹೆಚ್ಚಾಗಿದೆ. ಯಾರು ಹೋಗ್ತಿವೋ ಎಂದು ಭಯ ಪಟ್ಟಿದ್ದಾರೆ.


    ಈ ವಾರ ನಾಮಿನೇಟ್ ಆದವರು ಯಾರು?
    ಈ ವಾರ ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯಾ ಉರುಡುಗ, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ಸಂಬರಗಿ ಅವರು ಅಮೂಲ್ಯ ಗೌಡ ಅವರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಎಲ್ಲರ ಔಟ್ ಆಗ್ತೀವಿ ಎನ್ನುವ ಭಯದಲ್ಲಿದ್ದಾರೆ.


    ಇದನ್ನೂ ಓದಿ: BBK Season 09: ದಿವ್ಯಾ ಫೇಕ್ ಎಂದ ರಾಜಣ್ಣ, ಕಣ್ಣೀರಿಟ್ಟ ಉರುಡುಗ! 


    ವೋಟಿಂಗ್ ಲೈನ್‍ಗಳು ತೆರೆದಿಲ್ಲ
    ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ನಡೆದಿದೆ. ಆದ್ರೆ ಅವರಿಗೆ ವೋಟ್ ಮಾಡಲು ಲೈನ್‍ಗಳೇ ತೆರೆದಿಲ್ಲ. ಆದ ಕಾರಣ ಈ ವಾರ ಎಲಿಮಿನೇಷನ್ ಇಲ್ಲ ಎಂದು ಹೇಳಲಾಗ್ತಿದೆ. ಅದಕ್ಕೆ ವೋಟಿಂಗ್ ಲೈನ್‍ಗಳು ಆಪ್ ಲೈನ್ ಆಗಿದೆ.


    bigg boss kannada season 9, no elimination this week, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬಿಗ್ ಬಾಸ್ ನಲ್ಲಿ ಈ ಬಾರಿ ಎಲಿಮಿನೇಷನ್ ಇಲ್ಲ, ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ, kannada news, karnataka news,
    ವೋಟಿಂಗ್ ಲೈನ್‍ಗಳು ತೆರೆದಿಲ್ಲ


    ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ?
    ಈ ವಾರ ಎಲಿಮಿನೇಷನ್ ಏನೋ ಇರುವುದಿಲ್ಲ. ಆದ್ರೆ ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾ ಎಂದು ಹೇಳಲಾಗ್ತಿದೆ. ಮೂಲಗಳ ಪ್ರಕಾರ ಚಕ್ರವರ್ತಿ ಚಂದ್ರಚೂಡ್, ಸೋನು ಗೌಡ ಇಬ್ಬರಲ್ಲಿ ಒಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಆಗೋ ಸಾಧ್ಯತೆ ಇದೆ.


    bigg boss kannada season 9, no elimination this week, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬಿಗ್ ಬಾಸ್ ನಲ್ಲಿ ಈ ಬಾರಿ ಎಲಿಮಿನೇಷನ್ ಇಲ್ಲ, ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ, kannada news, karnataka news,
    ಸುದೀಪ್


    ಓಟಿಟಿಯಲ್ಲಿ ಏಟು ಬಿದ್ದ ಪರಿಣಾಮ ಹೊರ ಹೋಗಿದ್ದ ಅರ್ಜುನ್ ರಮೇಶ್ ಹಾಗೂ ಲೋಕೇಶ್ ಕುಮಾರ್ ವೈಲ್ಡ್ ಕಾರ್ಡ್ ಎಂಟ್ರಿಕೊಡಬಹುದಾ? ಇಲ್ಲ, ಜಯಶ್ರೀ ಆರಾಧ್ಯ ಮತ್ತೆ ಬಿಗ್ ಬಾಸ್ ಮನೆಗೆ ಬರ್ತಾರೆ ಎಂಬ ಗಾಳಿ ಸುದ್ದಿಗಳು ಹಬ್ಬಿವೆ.


    ಇದನ್ನೂ ಓದಿ: Lakshana: ಟೀಯಲ್ಲಿ ಉಪ್ಪು ಹಾಕಿದ್ಯಾರು? ಲಕ್ಷಣದ ಶಕುಂತಲಾ ದೇವಿ ಮುಂದೆ ಹೈಡ್ರಾಮಾ!


    ಹಾಗಾದ್ರೆ ಈ ವಾರ ಎಲಿಮಿನೇಷನ್ ಯಾಕ್ ಆಗ್ತಾ ಇಲ್ಲ? ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾನುವಾರದವರೆಗೆ ಕಾಯಬೇಕು.

    Published by:Savitha Savitha
    First published: