• Home
  • »
  • News
  • »
  • entertainment
  • »
  • Bigg Boss Kannada: ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ!

Bigg Boss Kannada: ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ!

ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ!

ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ!

ಆರ್ಯವರ್ಧನ್ ಗುರೂಜಿ ಔಟ್ ಎಂದು ಸುದೀಪ್ ಹೇಳಿದ್ರು. ಅವರು ಬೇಸರ ಮಾಡಿಕೊಂಡಿದ್ರು. 50 ದಿನ ಕಳೆದಿದ್ದಕ್ಕೆ ಯಾರು ಎಲಿಮಿನೇಟ್ ಆಗಲ್ಲ ಎಂದು ಘೋಷಣೆ ಮಾಡಲಾಯ್ತು. ಅದಕ್ಕೆ ಗುರೂಜಿ ಖುಷಿಯಿಂದ ಕುಣಿದರು

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿರುವವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಈಗಾಗಲೇ ಮನೆಯಿಂದ 6 ಜನ ಔಟ್ ಆಗಿದ್ದಾರೆ. ಐಶ್ವರ್ಯ ಪಿಸೆ, ಸೈಕೋ ನವಾಜ್, ದರ್ಶ್ ಚಂದ್ರಪ್ಪ, ಮಯೂರಿ, ನೇಹಾ ಗೌಡ, ಸಾನ್ಯಾ ಐಯ್ಯರ್ ಔಟ್ (Out) ಆಗಿದ್ದಾರೆ. ಈ ವಾರ ಎಲಿಮಿನೇಷನ್  ನಡೆದಿಲ್ಲ. ಆದ್ರೆ ಆರ್ಯವರ್ಧನ್ (Arya Vardhan) ಗುರೂಜಿ ಸ್ಪಲ್ಪ ಶಾಕ್ (Shock) ಕೊಡಲಾಯ್ತು.


    6 ಜನ ಮನೆಯಿಂದ ಔಟ್
    ಬಿಗ್ ಬಾಸ್ ನಲ್ಲಿ ಪ್ರತಿ ವಾರ ಒಬ್ಬಬ್ಬರು ಔಟ್ ಆಗ್ತಾ ಇದ್ದಾರೆ. ಮೊದಲನೇ ವಾರ ಐಶ್ವರ್ಯ ಪಿಸೆ, ಎರಡನೇ ವಾರ ಸೈಕೋ ನವಾಜ್, ಮೂರನೇ ವಾರ ದರ್ಶ್ ಚಂದ್ರಪ್ಪ, ನಾಲ್ಕನೇ ವಾರ ಮಯೂರಿ, ಐದನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಐಯ್ಯರ್ ಔಟ್ ಆಗಿದ್ದಾರೆ. ಸಾನ್ಯಾ ಮನೆಯಿಂದ ಹೊರ ಹೋದ ಮೇಲೆ ಎಲ್ಲರಿಗೂ ಟೆನ್ಷನ್ ಹೆಚ್ಚಾಗಿದೆ. ಯಾರು ಹೋಗ್ತಿವೋ ಎಂದು ಭಯ ಪಟ್ಟಿದ್ದಾರೆ.


    ಆರ್ಯವರ್ಧನ್ ಗುರೂಜಿಗೆ ಶಾಕ್!
    ಸುದೀಪ್ ಅವರು ಶನಿವಾರದ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಮತ್ತು ಅರುಣ್ ಸಾಗರ್ ಅವರನ್ನು ಸೇವ್ ಮಾಡಿದ್ದರು. ಭಾನುವಾರದ ಸಂಚಿಕೆಯಲ್ಲಿ ಒಬ್ಬಬ್ಬರನ್ನೇ ಸೇವ್ ಮಾಡ್ತಾ ಹೋದ್ರು, ಕೊನೆಯಲ್ಲಿ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ಉಳಿದ್ದರು. ಅವರಲ್ಲಿ ಆರ್ಯವರ್ಧನ್ ಗುರೂಜಿ ಔಟ್ ಎಂದು ಸುದೀಪ್ ಹೇಳಿದ್ರು. ಅವರು ಬೇಸರ ಮಾಡಿಕೊಂಡಿದ್ರು.


    ಇದನ್ನೂ ಓದಿ: Puttakkana Makkalu: ಸ್ನೇಹಾ-ಕಂಠಿಯ ಭರ್ಜರಿ ಫೋಟೋಶೂಟ್! ಪುಟ್ಟಕ್ಕನ ಮಗಳಿಗೆ ಮದ್ವೆ ಫಿಕ್ಸ್ ಆಯ್ತಾ?


    ಖುಷಿಯಿಂದ ಕುಣಿದಾಡಿದ ಗುರೂಜಿ
    ಎಲ್ಲರಿಗೂ ಧನ್ಯವಾದ ಹೇಳಿ, ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಡಲು ಸಿದ್ಧವಾದ್ರು.  ಮನೆಗೆ ಹೋಗಲು ಬಾಗಿಲು ಬಳಿ ಬಂದು ನಿಂತರು. ಆಗ ಬಾಗಿಲು ತೆರೆಯಲಿಲ್ಲ. 50 ದಿನ ಕಳೆದಿದ್ದಕ್ಕೆ ಯಾರು ಎಲಿಮಿನೇಟ್ ಆಗಲ್ಲ ಎಂದು ಘೋಷಣೆ ಮಾಡಲಾಯ್ತು. ಅದಕ್ಕೆ ಗುರೂಜಿ ಖುಷಿಯಿಂದ ಕುಣಿದರು .


    kannada bigg boss, no elimination this week, arya vardhan shock, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ, ಕಣ್ಣೀರಿಟ್ಟ ಅರುಣ್ ಸಾಗರ್, kannada news, karnataka news,
    ಆರ್ಯವರ್ಧನ್ ಗುರೂಜಿ


    ಈ ವಾರ ನಾಮಿನೇಟ್ ಆದವರು ಯಾರು?
    ಈ ವಾರ ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯಾ ಉರುಡುಗ, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ಸಂಬರಗಿ ಅವರು ಅಮೂಲ್ಯ ಗೌಡ ಅವರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಎಲ್ಲರ ಔಟ್ ಆಗ್ತೀವಿ ಎನ್ನುವ ಭಯದಲ್ಲಿದ್ದಾರೆ. ಆದ್ರೆ ಈ ವಾರ ಎಲಿಮಿನೇಷನ್ ಇರಲಿಲ್ಲ.


    kannada bigg boss, no elimination this week, arya vardhan shock, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆರ್ಯವರ್ಧನ್ ಗುರೂಜಿಗೆ ಶಾಕ್, ಆದ್ರೆ ಎಲಿಮಿನೇಷನ್ ಇರಲಿಲ್ಲ, ಕಣ್ಣೀರಿಟ್ಟ ಅರುಣ್ ಸಾಗರ್, kannada news, karnataka news,
    ಸುದೀಪ್


    ಇದನ್ನೂ ಓದಿ: Bigg Boss Kannada: ಗೊಬ್ಬರಗಾಲ ಸೈಲೆಂಟ್ ಆಗಿರ್ಬೇಕಂತೆ! ಆರ್ಯವರ್ಧನ್ ಮೈಕ್ ಏನಾಯ್ತು ಗೊತ್ತಾ?


    50 ದಿನದ ಜರ್ನಿ
    ಬಿಗ್ ಬಾಸ್ ಶುರುವಾಗಿ 50 ದಿನ ಕಳೆದಿದೆ. 6 ಮಂದಿ ಔಟ್ ಆಗಿದ್ದಾರೆ. ಇನ್ನೂ 12 ಮಂದಿ ಇದ್ದಾರೆ. ಉಳಿದ 12 ಮಂದಿಗೆ ತಮ್ಮ ಬಿಗ್ ಬಾಸ್ ಜರ್ನಿಯ ವಿಟಿ ತೋರಿಸಲಾಯ್ತು. ಅದಕ್ಕೆ ಮನೆ ಮಂದಿಯೆಲ್ಲಾ ಖುಷಿಯಾಗಿದ್ರು. ತಮ್ಮ ಜರ್ನಿ ಇಷ್ಟೊಂದು ಚೆನ್ನಾಗಿದೆ ಎಂದು ಖುಷಿ ಪಟ್ರು. ಬಿಗ್ ಬಾಸ್ ಗೆಲ್ಲಬೇಕು ಎಂದುಕೊಂಡ್ರು.

    Published by:Savitha Savitha
    First published: