• Home
 • »
 • News
 • »
 • entertainment
 • »
 • BBK Season 09: ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳಗಳನೇ ಅತ್ತ ಕಾವ್ಯಶ್ರೀ! ಯಾರಿವರು?

BBK Season 09: ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳಗಳನೇ ಅತ್ತ ಕಾವ್ಯಶ್ರೀ! ಯಾರಿವರು?

ಗಳ ಗಳನೇ ಅತ್ತ ಕಾವ್ಯಶ್ರೀ

ಗಳ ಗಳನೇ ಅತ್ತ ಕಾವ್ಯಶ್ರೀ

ದಿನ ಜಿಮ್ಮಿ ಹಾಗೂ ಟಾಮಿ ಜೊತೆ ಕಾಲ ಕಳೆಯುತ್ತಿದ್ದ ಕಾವ್ಯಶ್ರೀ, ಅವರಿಬ್ಬರು ಕಾಣದೇ ಗಳ ಗಳನೇ ಅತ್ತಿದ್ದಾರೆ. ಯಾಕಂದ್ರೆ ಜಿಮ್ಮಿ ಕಪ್ಪೆ ಸಾವನ್ನಪ್ಪಿದೆ. ಟಾಮಿ ಕೂಡ ನಾಪತ್ತೆ ಆಗಿದೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ (Seasons) ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದರು. ಆದ್ರೆ, 4 ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ (Out) ಆಗಿದ್ದಾರೆ. ಐಶ್ವರ್ಯ ಪಿಸೆ, ದರ್ಶ್ ಚಂದ್ರಪ್ಪ, ನವಾಜ್, ಮನೆಯಿಂದ ಮನೆಯಿಂದ ಹೊರ ನಡೆದಿದ್ದಾರೆ. ಮನೆಯಲ್ಲಿ ಜಿಮ್ಮಿ ಹಾಗೂ ಟಾಮಿ ಕಾಣದೇ ಕಾವ್ಯಶ್ರೀ ಗಳಗಳನೇ ಅತ್ತಿದ್ದಾರೆ (Crying).


  ಕಾವ್ಯಶ್ರೀ ಸ್ಪರ್ಧೆ
  ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಮಂಗಳಗೌರಿ ಖ್ಯಾತಿಯ ಕಾವಶ್ರೀ ಭಾಗವಹಿದ್ದಾರೆ. ಅಳುವ ಪಾತ್ರ ಧಾರಾವಾಹಿಯಲ್ಲಿ ಅಷ್ಟೆ. ಬಿಗ್ ಬಾಸ್ ಮನೆಯಲ್ಲಿ ಅಳಲ್ಲ ಎಂದು ಹೇಳಿದ್ದಾರೆ. ಬಿಸ್ ಬಾಸ್ ಶುರುವಾಗಿ 5 ವಾರಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಅರುಣ್ ಸಾಗರ್, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಜೊತೆ ಕಾವ್ಯಶ್ರೀ ಗೌಡ ಆತ್ಮೀಯವಾಗಿದ್ದಾರೆ.


  ಜಿಮ್ಮಿ ಹಾಗೂ ಟಾಮಿ ಕ್ಲೋಸ್
  ಬಿಗ್ ಬಾಸ್ ಮನೆಯಲ್ಲಿ, ಮನೆಯ ಸ್ಪರ್ಧಿಗಳಿಗಿಂತ ಕಾವ್ಯಶ್ರೀ ಹೆಚ್ಚಾಗಿ ಹಚ್ಚಿಕೊಂಡಿರುವುದು, ಜಾಸ್ತಿ ಮಾತುಕತೆ ನಡೆಸುವುದು ಎರಡು ಕಪ್ಪೆಗಳ ಜೊತೆ. ಒಂದು ಕಪ್ಪೆಗೆ ಜಿಮ್ಮಿ ಎಂದು ಹೆಸರಿಟ್ಟಿದ್ದಾರೆ. ಇನ್ನೊಂದು ಕಪ್ಪೆಗೆ ಟಾಮಿ ಎಂದು ಹೆಸರಿಟ್ಟಿದ್ದಾರೆ. ರಾತ್ರಿ ಮಲಗುವ ಮುಂಚೆ, ಪ್ರತಿದಿನ ಜಿಮ್ಮಿ ಹಾಗೂ ಟಾಮಿ ಜೊತೆ ಮಾತನಾಡುತ್ತಾ ಕಾಲಕಳೆಯುತ್ತಿದ್ದರು.


  ಇದನ್ನೂ ಓದಿ: Ashwini Punit Rajkumar: ನೆನಪಿನ ಸಾಗರದಲ್ಲಿ, ಎಂದು ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್!


  ಕಾಣೆಯಾದ ಜಿಮ್ಮಿ ಹಾಗೂ ಟಾಮಿ
  ದಿನ ಜಿಮ್ಮಿ ಹಾಗೂ ಟಾಮಿ ಜೊತೆ ಕಾಲ ಕಳೆಯುತ್ತಿದ್ದ ಕಾವ್ಯಶ್ರೀ, ಅವರಿಬ್ಬರು ಕಾಣದೇ ಗಳ ಗಳನೇ ಅತ್ತಿದ್ದಾರೆ. ಯಾಕಂದ್ರೆ ಜಿಮ್ಮಿ ಕಪ್ಪೆ ಸಾವನ್ನಪ್ಪಿದೆ. ಟಾಮಿ ಕೂಡ ನಾಪತ್ತೆ ಆಗಿದೆ. ಅದಕ್ಕೆ ತನ್ನ ಮನದ ಮಾತು ಹೇಳಿಕೊಳ್ಳೋ ಸ್ನೇಹಿತರಿಲ್ಲದೇ ಕಾವ್ಯಶ್ರೀ ತುಂಬಾ ಅತ್ತಿದ್ದಾರೆ.


  bigg boss kannada season 9, kavya crying in bbk house for frogs, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳ ಗಳನೇ ಅತ್ತ ಕಾವ್ಯಶ್ರೀ, kannada news, karnataka news,
  ಕಾವ್ಯಶ್ರೀ


  ಬಿಗ್ ಬಾಸ್ ಬಳಿ ಕೇಳಿದ್ದೇನು?
  ಟಾಸ್ಕ್ ಗೆ ಪ್ರಾಪರ್ಟಿ ಇಡುವಾಗ, ತೆಗೆಯುವಾಗ ಕಪ್ಪೆಗಳಿರುವ ಜಾಗದಲ್ಲಿ ಕಾಲಿಡಬೇಡಿ ಎಂದು ಹೇಳಿ. ಜಿಮ್ಮಿ ಸಾವನ್ನಪ್ಪಿದೆ. ಟಾಮಿ ಹೆದರಿ ಎಲ್ಲೋ ಮೂಲೆ ಸೇರಿದೆ. ಪ್ರಾಪರ್ಟಿ ಇಡುವವರಿಗೆ ತುಳಿಯಬೇಡಿ ಎಂದು ಹೇಳಿ ಎಂದು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದಾಳೆ. ಜೋರಾಗಿ ಅತ್ತಿದ್ದಾಳೆ.


  ಕಾವ್ಯಶ್ರೀ-ರಾಕೇಶ್ ಜಗಳ
  ಕ್ಯಾಪ್ಟನ್ ಓದುವಾಗ ಎಲ್ಲರೂ ಸೀರಿಯಸ್ ಆಗಿ ಇದ್ದಾಗ, ಕಾವ್ಯಶ್ರೀ ಮಾತ್ರ ನಗ್ತಾಳೆ. ಯಾಕೆ ನಗ್ತೀರಿ ಎಂದು ಕಾವ್ಯಶ್ರೀ ಅವರಿಗೆ ರಾಕೇಶ್ ಗೌಡ ಕೇಳ್ತಾನೆ. ಕ್ಯಾಪ್ಟನ್ ಏನು ಹೇಳ್ತಾರೆ ಅಂತ ನಮಗೆ ಕೇಳಲ್ಲ. ಸುಮ್ಮನೇ ಯಾಕೆ ನಗುತ್ತೀಯಾ ಎಂದು ಕೇಳ್ತಾನೆ, ನಿಮಗೆ ಕಷ್ಟ ಆಗುತ್ತೆ ಅಂತ ನಾನು ನಗಬಾರದ ಎಂದು ಕಾವ್ಯ ರಾಕೇಶ್‍ಗೆ ಪ್ರಶ್ನೆ ಮಾಡ್ತಾಳೆ.


  bigg boss kannada season 9, kavya crying in bbk house for frogs, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಜಿಮ್ಮಿ ಹಾಗೂ ಟಾಮಿ ಕಾಣ್ತಿಲ್ಲ ಅಂತ ಗಳ ಗಳನೇ ಅತ್ತ ಕಾವ್ಯಶ್ರೀ, kannada news, karnataka news,
  ಕಾವ್ಯಶ್ರೀ


  ಇದನ್ನೂ ಓದಿ: BBK Season 09: ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಾನ್ಯಾಗೆ ಈ ಬಾರಿ ಸಿಕ್ಕಿದ್ದು ಕಳಪೆ ಪಟ್ಟ! 


  ಮನೆ ಕೆಲಸ ಮಾಡಲು ಸಹಾಯಕ್ಕೆ ಕೇಳಿದ್ರೆ ಕಾವ್ಯಶ್ರೀ ಬರೋದೇ ಇಲ್ಲ. ಮುಖ ದಪ್ಪ ಮಾಡಿಕೊಂಡು ಕೂರುತ್ತಾಳೆ ಎಂದು ಹೇಳ್ತಾನೆ. ಅದಕ್ಕೆ ಕಾವ್ಯ ನೀನ್ ಹೇಳಬೇಡ ನನಗೆ, ಎಲ್ಲಿ ಸೀರಿಯಸ್ ಆಗಿ ಇರಬೇಕು ಎಂದು ಕಾವ್ಯಶ್ರೀ ಹೇಳ್ತಾಳೆ.

  Published by:Savitha Savitha
  First published: