• Home
 • »
 • News
 • »
 • entertainment
 • »
 • Bigg Boss Kannada: ಸಾನ್ಯಾ ಅಯ್ಯರ್ ಮಡಿಲಲ್ಲಿ ಮಲಗಿ ಜೋರಾಗಿ ಅತ್ತ ರೂಪೇಶ್

Bigg Boss Kannada: ಸಾನ್ಯಾ ಅಯ್ಯರ್ ಮಡಿಲಲ್ಲಿ ಮಲಗಿ ಜೋರಾಗಿ ಅತ್ತ ರೂಪೇಶ್

ಬದಲಾಗಲು ಸಾಧ್ಯವೇ ಇಲ್ಲ ರೂಪಿ

ಬದಲಾಗಲು ಸಾಧ್ಯವೇ ಇಲ್ಲ ರೂಪಿ

ಬದಲಾಗಲ್ಲ ರೂಪಿ, ಬದಲಾಗಲು ಸಾಧ್ಯವೇ ಇಲ್ಲ. ಎಂದಿಗೂ ಆ ಮುದ್ದು ನಗುವಾಗಿ, ನಿನ್ನಲ್ಲಿ ನಾನಿರುತ್ತೇನೆ. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನು ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‍ಸ್ಟಾರ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಓಟಿಟಿಯಿಂದ (OTT) ಬಿಗ್ ಬಾಸ್‍ಗೆ ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಬಂದಿದ್ದಾರೆ. ಈಗ ಸಾನ್ಯಾ ಐಯ್ಯರ್ ಮನೆಯಿಂದ ಔಟ್ ಆಗಿದ್ದಾರೆ. ರೂಪೇಶ್ (Rupesh), ಸಾನ್ಯಾ  ಹೆಚ್ಚು ಕ್ಲೋಸ್ ಆಗಿದ್ದರು. ಈಗ ಅವಳಿಲ್ಲದೇ ಕಣ್ಣೀರಿಟ್ಟಿದ್ದಾನೆ. ಬದಲಾಗಲು ಸಾಧ್ಯವೇ ಇಲ್ಲ ರೂಪಿ ಎಂದು ಸಾನ್ಯಾ ಹೇಳಿದ್ದಾರೆ.


  ರೂಪೇಶ್ ಕಣ್ಣೀರು


  ಬಿಗ್ ಬಾಸ್ ಸೀನಸ್ 09 ರಿಂದ ಸಾನ್ಯಾ ಐಯ್ಯರ್ ಔಟ್ ಆಗಿದ್ದಾರೆ. ಸುದೀಪ್ ಸಾನ್ಯಾ ಐಯ್ಯರ್ ಹೆಸರು ಹೇಳುತ್ತಿದ್ದಂತೆ ರೂಪೇಶ್ ಅಳಲು ಶರು ಮಾಡುತ್ತಾರೆ. ಸಾನ್ಯಾ ಜೊತೆಗಿರಲ್ಲ ಎಂದು ಗೊತ್ತಾಗಿ ಕಣ್ಣೀರು ಹಾಕಿದ್ದಾರೆ. ಸಾನ್ಯಾ ಐಯ್ಯರ್ ಮಡಿಲಲ್ಲಿ ಮಲಗಿ ರೂಪೇಶ್ ಶೆಟ್ಟಿ ಗಳ ಗಳನೇ ಅತ್ತಿದ್ದಾರೆ. ನಿನ್ನ ತುಂಬ ಮಿಸ್ ಮಾಡಿಕೊಳ್ತೀನಿ. ನಿನ್ನಷ್ಟು ನನ್ನ ಯಾರೂ ಕೇರ್ ಮಾಡಿಲ್ಲ ಎಂದು ಹೇಳಿದ್ರು.


  ನೀನು ಬದಲಾಗಬೇಡ ಸಾನ್ಯಾ


  ನೀನು ಮನೆಯಿಂದ ಹೊರಗಡೆ ಹೋದ ಮೇಲೆ ಬದಲಾಗಬೇಡ. ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.


  ಇದನ್ನೂ ಓದಿ: BBK Season 09: ದಿವ್ಯಾ ಫೇಕ್ ಎಂದ ರಾಜಣ್ಣ, ಕಣ್ಣೀರಿಟ್ಟ ಉರುಡುಗ! 


  ಬದಲಾಗಲು ಸಾಧ್ಯವೇ ಇಲ್ಲ ರೂಪಿ


  ಮನೆಯಿಂದ ಹೊರ ಹೋದ ಮೇಲೆ ಸಾನ್ಯಾ ಐಯ್ಯರ್ ಪೋಸ್ಟ್ ಮಾಡಿದ್ದಾರೆ. ನಾನು ಬದಲಾಗಲ್ಲ ರೂಪಿ, ಬದಲಾಗಲು ಸಾಧ್ಯವೇ ಇಲ್ಲ. ಎಂದಿಗೂ ಆ ಮುದ್ದು ನಗುವಾಗಿ, ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನು ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‍ಸ್ಟಾರ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗ್ತಾ ಇದೆ.  ಸಾನ್ಯಾ ಬದಲಾಯಿಸಿದ್ಲು
  ನಮ್ಮ ಮನೆಯಲ್ಲಿ ಕೂಡ ನಾನು ಊಟ ಮಾಡಿದ್ನಾ, ಇಲ್ಲವಾ ಅಂತ ಕೇಳುತ್ತಿರಲಿಲ್ಲ. ನಾನು ಊಟ ಮಾಡಿಲ್ಲ ಅಂತ ಅವಳು ಊಟ ಮಾಡುತ್ತಿರಲಿಲ್ಲ. ಅದಕ್ಕೆ ಅವಳು ಅಷ್ಟು ಇಷ್ಟ ಆಗಿದ್ದಳು. ನಾನು ಸಿಂಗಲ್ ಆಗಿರಬೇಕು ಎಂದುಕೊಂಡಿದ್ದೆ. ಸಾನ್ಯಾ ನನ್ನ ಬದಲಾಯಿಸಿದ್ಲು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.


  ಇದನ್ನೂ ಓದಿ: BBK Season 09: ಸಿಂಗಲ್ಲಾಗಿ ಇರಬೇಕು ಅನ್ಕೊಂಡಿದ್ದ ನನ್ನ ಸಾನ್ಯಾ ಬದಲಾಯಿಸಿದ್ಲು; ಗಳಗಳನೆ ಅತ್ತ ರೂಪೇಶ್ ಶೆಟ್ಟಿ 


  ಉಂಗುರ ಕೊಟ್ಟು ಹೋಗಿರುವ ಸಾನ್ಯಾ


  ಬಿಗ್ ಬಾಸ್‍ನಲ್ಲಿ, ನನ್ನ ಲೈಫ್‍ಗೆ ಸಿಕ್ಕಿರುವ ಬೆಸ್ಟ್ ಫ್ರೆಂಡ್ ಸಾನ್ಯಾ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಸಾನ್ಯಾ ಐಯ್ಯರ್ ಅವರು ರೂಪೇಶ್ ಶೆಟ್ಟಿ ಅವರಿಗೆ ತನ್ನ ಕೈಲಿದ್ದ ಉಂಗುರವನ್ನು ಕೊಟ್ಟು ಹೋಗಿದ್ದಾರೆ. ಸಾನ್ಯಾ ಇರದೇ ಹೇಗೆ ಇರಲಿ ಎಂದು ಮನೆಯವರ ಬಳಿ ಹೇಳಿ ರೂಪೇಶ್ ಶೆಟ್ಟಿ ಅತ್ತಿದ್ದಾರೆ.


  bigg boss kannada season 9, i am not change any time sanya change, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬದಲಾಗಲು ಸಾಧ್ಯವೇ ಇಲ್ಲ ರೂಪಿ, ಇದು ಅಂತರವಲ್ಲ ನಮ್ಮ ಮನಸ್ಸು ಇನ್ನು ಹತ್ತಿರ ಎಂದ ಸಾನ್ಯಾ!, kannada news, karnataka news,
  ಮಿಸ್ ಯು ಸಾನ್ಯಾ ಎಂದು ರೂಪೇಶ್ ಹಣೆ ಮೇಲೆ ಪಟ್ಟಿ


  ಮಿಸ್ ಯು ಸಾನ್ಯಾ ಎಂದು ರೂಪೇಶ್ ಹಣೆ ಮೇಲೆ ಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಊಟ ಮಾಡುವಾಗಲೂ ಅಳುತ್ತಿದ್ದಾರೆ. ಅವಳ ನೆನಪೇ ಕಾಡುತ್ತೆ ಎಂದಿದ್ದಾರೆ.

  Published by:Savitha Savitha
  First published: