• Home
  • »
  • News
  • »
  • entertainment
  • »
  • BBK Deepika Das: ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!

BBK Deepika Das: ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!

ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ!

ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ!

ಮದುವೆ ಆಗಿ ಎರಡೇ ದಿನಕ್ಕೆ ನಮ್ಮ ಅಣ್ಣ ಬದಲಾಗಿ ಬಿಟ್ಟು. ನಮ್ಮ ಅತ್ತಿಗೆ ಮುಂದೆಯೇ ತಟ್ಟೆಯನ್ನು ಬಿಸಾಕಿ ಬಿಟ್ಟ. ಅವರ ಮುಂದೆ ನಮ್ಮನ್ನು ಬಿಟ್ಟುಕೊಟ್ಟು. 2 ದಿನಕ್ಕೆ ಮನೆ ಬಿಟ್ಟು ಹೊರಟು ಹೋದ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 09 (Bigg Boss 09) ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ದೀಪಿಕಾ ದಾಸ್ (Deepika Das), ಕಳೆದ ವಾರ ಶಾಕ್ ಅನ್ನುವಂತೆ ಔಟ್ ಆಗಿದ್ದರು. ಆದ್ರೆ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಸೇರಿದ್ದಾರೆ. ಅಲ್ಲಿ ತಮ್ಮ ಅಣ್ಣನ (Brother) ವಿಚಾರವಾಗಿ ಬೇಸರವಾಗಿದ್ದನ್ನು ಹೇಳಿಕೊಂಡಿದ್ದಾರೆ.


    ಕಾಡಾಗಿರುವ ಬಿಗ್ ಬಾಸ್ ಮನೆ
    ಈ ಬಾರಿ ಬಿಗ್ ಬಾಸ್ ಮನೆ ಕಾಡಾಗಿದೆ. ಮನೆ ಮಂದಿಗೆ ಗಾರ್ಡನ್ ಏರಿಯಾದಲ್ಲೇ ಇರುವ ಟಾಸ್ಕ್ ಕೊಟ್ಟಿದ್ದಾರೆ. ಅಲ್ಲಿ ಅಡುಗೆ ಮಾಡಿಕೊಳ್ಳಬೇಕು. ಅಲ್ಲೇ ಮಲಗಬೇಕು. ಕಾಲ ಕಾಲಕ್ಕೆ ಟಾಸ್ಕ್ ಆಡಿ ಸೌಕರ್ಯಗಳನ್ನು ಪಡೆಯಬೇಕು. 2 ದಿನದಿಂದ ಕಾಡಿನಲ್ಲಿ ಇದ್ದು ನೋವು ಅನುಭವಿಸುತ್ತಿರುವ ಮನೆ ಮಂದಿಗೆ, ತಮ್ಮ ಜೀವನದ ನೋವಿನ ಕಥೆ ಹೇಳಲು ಬಿಗ್ ಬಾಸ್ ಹೇಳಿದ್ರು.


    ಅಣ್ಣನ ಬಗ್ಗೆ ದೀಪಿಕಾಗೆ ಬೇಸರ
    'ನಾನು ತುಂಬಾ ಪ್ರೀತಿಸುವ ನನ್ನ ತಂದೆ ಲಿವರ್ ಜಾಂಡೀಸ್ ನಿಂದ ತೀರಿ ಹೋಗ್ತಾರೆ. ಆಗಾ ನಮ್ಮ ಕುಟುಂಬ ಕುಗ್ಗಿ ಹೋಗುತ್ತೆ. ಇದರ ನಡುವೆ ನಮ್ಮ ತಂದೆ ಸತ್ತು ಹೋದ ಒಂದು ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕು. ಮದುವೆ ಮಾಡಬೇಕು ಎನ್ನುತ್ತಾರೆ. ನಾನು ಚಿಕ್ಕವಳಾದ ಕಾರಣ ಮದುವೆ ಬೇಡ ಎಂದು ಹೇಳುತ್ತೇನೆ.


    ಇದನ್ನೂ ಓದಿ: Bigg Boss Kannada: ಬಿಗ್‌ ಬಾಸ್ ಮನೆಯಲ್ಲಿ ಚಿಕನ್ ಕಳ್ಳರು! ಅವರನ್ನು ಬಿಟ್ಟು, ಇವರನ್ನು ಬಿಟ್ಟು, ಕದ್ದವರು ಯಾರು? 


    ನನ್ನ ಅಣ್ಣನ ಮದುವೆ ಮಾಡುಲು ನಿರ್ಧಾರ ಮಾಡ್ತೇವೆ. ಆಗ ಅಷ್ಟೊಂದು ದುಡ್ಡು ಇರಲ್ಲ. ಮಗನ ಮದುವೆ ಗ್ರ್ಯಾಂಡ್ ಆಗಿ ಮಾಡುಬೇಕು ಎಂದುಕೊಳ್ತೇವೆ. ಅದಕ್ಕಾಗಿ ಮನೆಯಲ್ಲಿದ್ದ ದುಡ್ಡು, ಬೇರೆ ಕಡೆಯಿಂದ ಸಾಲ ತಂದು ಮದುವೆ ಮಾಡ್ತೇವ. ಮದುವೆ ಆಗಿ ಎರಡೇ ದಿನಕ್ಕೆ ನಮ್ಮ ಅಣ್ಣ ಬದಲಾಗಿ ಬಿಟ್ಟು. ನಮ್ಮ ಅತ್ತಿಗೆ ಮುಂದೆಯೇ ತಟ್ಟೆಯನ್ನು ಬಿಸಾಕಿ ಬಿಟ್ಟ. ಅವರ ಮುಂದೆ ನಮ್ಮನ್ನು ಬಿಟ್ಟುಕೊಟ್ಟು. 2 ದಿನಕ್ಕೆ ಮನೆ ಬಿಟ್ಟು ಹೊರಟು ಹೋದ.


    kannada bigg boss, deepika das share her brother matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!, kannada news, karnataka news,
    ದೀಪಿಕಾ


    ನಮಗೆ ಆಗ ತುಂಬಾ ಕಷ್ಟ ಆಯ್ತು. ಅಪ್ಪ ಇಲ್ಲ. ಅಣ್ಣ ಮನೆ ಬಿಟ್ಟು ಹೋದ. ಅದೇ ವೇಳೆಯಲ್ಲಿ ನಮ್ಮ ನಾಯಿ ಮರಿ ತೀರಿ ಹೋಯ್ತು. ಸಂಬಂಧಿಕರೆಲ್ಲಾ ದೂರ ಆದ್ರು. ಆ ನೋವು ಯಾರಿಗೂ ಬರಬಾರದು. ಅದೇ ವೇಳೆ ನನಗೆ ನಾಗಿಣಿ ಧಾರಾವಾಹಿ ಸಿಕ್ತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಆದಾದ ನಂತರ ಬಿಗ್ ಬಾಸ್, ಮತ್ತೆ ಬಿಗ್ ಬಾಸ್. ಖುಷಿಯಾಗಿದೆ. ಈಗ ನಮ್ಮ ಅಣ್ಣ ಬಂದಿದ್ದಾನೆ. ಖುಷಿಯಾಗಿದ್ದೇವೆ. ಆದ್ರೂ ಆ ದಿನ ಮರೆಯೋಕೆ ಸಾಧ್ಯವಿಲ್ಲ' ಎಂದು ದೀಪಿಕಾ ಹೇಳಿದ್ದಾರೆ.


    kannada bigg boss, deepika das share her brother matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!, kannada news, karnataka news,
    ದೀಪಿಕಾ


    ಇದನ್ನೂ ಓದಿ: Kendasampige: ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ! 


    ಮನೆಯ ಬೇರೆ ಬೇರೆ ಸದಸ್ಯರು ಸಹ, ತಮ್ಮ ಜೀವನದ ಒಂದು ನೋವುನ್ನು ಮನೆಯವರು ಬಳಿ ಹೇಳಿಕೊಂಡಿದ್ದಾರೆ. ಕಷ್ಟ ಎನ್ನುವುದ ಸಹಜ. ಆದ್ರೆ ಅದನ್ನು ಮೆಟ್ಟಿ ನಿಲ್ಲಬೇಕು ಎಂದು ಮಾತನಾಡಿಕೊಂಡಿದ್ದಾರೆ.

    Published by:Savitha Savitha
    First published: