• Home
  • »
  • News
  • »
  • entertainment
  • »
  • BBK Season 9: ಆತ್ಮಹತ್ಯೆ ಮಾಡ್ಕೊಬೇಕು ಎಂದು ಅನಿಸಿತ್ತು, ಹೀಗಂದಿದ್ದೇಕೆ ಗುರೂಜಿ?

BBK Season 9: ಆತ್ಮಹತ್ಯೆ ಮಾಡ್ಕೊಬೇಕು ಎಂದು ಅನಿಸಿತ್ತು, ಹೀಗಂದಿದ್ದೇಕೆ ಗುರೂಜಿ?

ಆರ್ಯವರ್ಧನ್ ಗುರೂಜಿ

ಆರ್ಯವರ್ಧನ್ ಗುರೂಜಿ

ಸಾನ್ಯಾ ಆರ್ಯವರ್ಧನ್ ಗುರೂಜಿಯನ್ನು ನೇರವಾಗಿ ನಾಮಿನೇಟ್ ಮಾಡಿದ ಕಾರಣ, ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಎಷ್ಟು ಚೆನ್ನಾಗಿ ಆಡಿದ್ರೂ, ಸಿಲ್ಲಿ ರೀಸನ್ ಕೊಟ್ಟು ನಾಮಿನೇಟ್ ಮಾಡಿದ್ರು. ಆ ಸಂದರ್ಭದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಬೇಸರ ಆಯ್ತು.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 (Season 09) ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಈಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದಾರೆ. ಆದ್ರೆ ಹೀಗಾಗಲೇ 4 ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಐಶ್ವರ್ಯ ಪಿಸೆ, ದರ್ಶ್ ಚಂದ್ರಪ್ಪ, ನವಾಜ್, ಮಯೂರಿ ಮನೆಯಿಂದ ಹೊರ ನಡೆದಿದ್ದಾರೆ. ಆರ್ಯವರ್ಧನ್ ಗುರೂಜಿ (Arya Vardhan) ಆತ್ಮಹತ್ಯೆ (Suicide) ಮಾತನಾಡಿದ್ದಾರೆ.


    ಮನೆಯ ಹಲವು ಮಂದಿ ನಾಮಿನೇಷನ್


    ಸೋಮವಾರದ ಸಂಚಿಕೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ಕಾವ್ಯಶ್ರೀ, ನೇಹಾ ಎಲ್ಲರೂ ಎಲಿಮೆನೇಷನ್ ಗೆ ನಾಮಿನೇಟ್ ಆಗಿದ್ದಾರೆ. ನಂತರ ಕ್ಯಾಪ್ಟನ್ ಆಗಿರುವ ಸಾನ್ಯಾ ಐಯ್ಯರ್ ಆರ್ಯವರ್ಧನ್ ಗುರೂಜಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಗುರೂಜಿ ಬೇಸರ ಮಾಡಿಕೊಂಡಿದ್ದಾರೆ.


    ಸಾನ್ಯಾ ಕೊಟ್ಟ ಕಾರಣವೇನು?
    ಕಳೆದ ವಾರ ಆರ್ಯವರ್ಧನ್ ಗುರೂಜಿ ಚೆನ್ನಾಗಿ ಆಟ ಆಡಿದ್ದಾರೆ. ಜನ ಕೂಡ ಅವರನ್ನು ಸೇವ್ ಮಾಡಿದ್ದಾರೆ. ಆದ್ರೂ ಕ್ಯಾಪ್ಟನ್ ಸಾನ್ಯಾ ಗುರೂಜಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಕಳೆದ ವರ ಗುರೂಜಿ ಆಟದ ಸಂದರ್ಭದಲ್ಲಿ ಅವರ ಕ್ಯಾಪ್ಟನ್ ಮಾಡತು ಕೇಳಿಲ್ಲ ಎಂದು ಕಾರಣ ನೀಡಿದ್ದಾರೆ.


    bigg boss kannada season 9, arya vardhan talk about suicide, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನಿಸಿಬಿಡ್ತು, ಹೀಗೆ ಅಂದಿದ್ಯಾಕೆ ಆರ್ಯವರ್ಧನ್ ಗುರೂಜಿ?, kannada news, karnataka news,
    ಸಾನ್ಯಾ


    ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನಿಸುತ್ತೆ!
    ಸಾನ್ಯಾ ಆರ್ಯವರ್ಧನ್ ಗುರೂಜಿಯನ್ನು ನೇರವಾಗಿ ನಾಮಿನೇಟ್ ಮಾಡಿದ ಕಾರಣ, ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ.


    ಇದನ್ನೂ ಓದಿ: Kannadathi: ಯಶಸ್ವಿ ಆಯ್ತಾ ವರು ಪ್ಲ್ಯಾನ್ ; ಡಿವೋರ್ಸ್​​ ಪೇಪರ್​ಗೆ ಹರ್ಷ-ಭುವಿ ಸಹಿ?


    ಎಷ್ಟು ಚೆನ್ನಾಗಿ ಆಡಿದ್ರೂ, ಸಿಲ್ಲಿ ರೀಸನ್ ಕೊಟ್ಟು ನಾಮಿನೇಟ್ ಮಾಡಿದ್ರು. ಆ ಸಂದರ್ಭದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಬೇಸರ ಆಯ್ತು ಎಂದು ಪ್ರಶಾಂತ್ ಸಂಬರ್ಗಿ, ನೇಹಾ ಗೌಡ ಬಳಿ ಹೇಳಿದ್ದಾರೆ.


    bigg boss kannada season 9, arya vardhan talk about suicide, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನಿಸಿಬಿಡ್ತು, ಹೀಗೆ ಅಂದಿದ್ಯಾಕೆ ಆರ್ಯವರ್ಧನ್ ಗುರೂಜಿ?, kannada news, karnataka news,
    ಆರ್ಯವರ್ಧನ್ ಗುರೂಜಿ


    ಮಗಳು ನೆನಪಾಗ್ತಾಳೆ
    ಪದೆ ಪದೇ ನಾಮಿನೇಟ್ ಆಗ್ತಾ ಇದ್ರೆ, ಮನೆ ನೆನಪಾಗುತ್ತೆ. ಹೋಗ್ತೀವೂ ಏನು? ಮಗಳನ್ನು ನೋಡಬಹುದು ಎನ್ನಿಸುತ್ತೆ ಎಂದು ಒಮ್ಮೆ ಗುರೂಜಿ ಹೇಳ್ತಾರೆ. ಇನ್ನೊಮ್ಮೆ ಇನ್ನೂ 10 ವಾರಗಳ ಕಾಲ ನಾನು ಈ ಮನೆಯಲ್ಲಿ ಇರುತ್ತೇನೆ ಎಂದು ಹೇಳ್ತಾರೆ. ದಯವಿಟ್ಟು ನನಗೆ ವೋಟ್ ಹಾಕಿ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾಳೆ.


    ಇದನ್ನೂ ಓದಿ: Amulya Deepavali: ಅವಳಿ ಮಕ್ಕಳ ಜೊತೆ ಅಮೂಲ್ಯಗೆ ದೀಪಾವಳಿ ಸಂಭ್ರಮ; ಫೋಟೋಗಳಲ್ಲಿ ನೋಡಿ 


    ನಿಂತಲ್ಲೇ ಸುಸ್ಸು ಮಾಡಿದ್ರೂ, ಗೇಮ್ ಬಿಟ್ಟಿರಲಿಲ್ಲ
    ಆರ್ಯವರ್ಧನ್ ಗುರೂಜಿ ಕಳೆದ ವಾರ, ವಾಶ್ ರೂಮ್ ಗೆ ಹೋದ್ರೆ ಗೇಮ್ ತಮ್ಮ ತಂಡದ ಗೇಮ್ ಸೋಲುತ್ತೆ ಅಂತ ನಿಂತಲ್ಲೇ ಸುಸ್ಸು ಮಾಡಿಕೊಂಡಿದ್ದರು. ಅದಕ್ಕೆ ಮನೆಯವರೆಲ್ಲಾ ಮೊದಲು ರೇಗಿಸಿದ್ರೂ, ನಂತರ ನಿಮ್ಮ ಛಲ ನಮಗೆ ಇಷ್ಟ ಆಯ್ತು ಎಂದು ಹೇಳಿದ್ದರು.


    10 ತಾಸಿಗೂ ಹೆಚ್ಚು ಕಾಲ ನಿಂತ ಸ್ಪರ್ಧಿಗಳು
    ಕಂಬವೊಂದಕ್ಕೆ ಕೈಯಿಂದ ಒತ್ತಿ ಹಿಡಿದು ಗ್ರೀನ್ ಲೈಟ್ ಇರುವಂತೆ ನೋಡಿಕೊಳ್ಳುವ ಟಾಸ್ಕ್ ನಲ್ಲಿ ಮನೆಯ 8 ಸ್ಪರ್ಧಿಗಳು 10ಕ್ಕೂ ಹೆಚ್ಚು ತಾಸು ನಿಂತಿದ್ರು. ಆರ್ಯವರ್ಧನ್  ಗುರೂಜಿ ಸುಸ್ಸು ಮಾಡಿಕೊಂಡರೂ, 10ಕ್ಕೂ ಹೆಚ್ಚು ತಾಸು ನಿಂತಿದ್ರು.

    Published by:Savitha Savitha
    First published: