• Home
 • »
 • News
 • »
 • entertainment
 • »
 • Bigg Boss Kannada: ಕಾವ್ಯಶ್ರೀ ಹಿಂದೆನೇ ಓಡಾತ್ತಿದ್ದಾನಾ ರಾಕೇಶ್? ಗುರೂಜಿ ಹೊಸ ಆರೋಪ ಇದು

Bigg Boss Kannada: ಕಾವ್ಯಶ್ರೀ ಹಿಂದೆನೇ ಓಡಾತ್ತಿದ್ದಾನಾ ರಾಕೇಶ್? ಗುರೂಜಿ ಹೊಸ ಆರೋಪ ಇದು

ಕಾವ್ಯಶ್ರೀ ಹಿಂದೆನೇ ಓಡಾತ್ತಿದ್ದಾನಾ ರಾಕೇಶ್?

ಕಾವ್ಯಶ್ರೀ ಹಿಂದೆನೇ ಓಡಾತ್ತಿದ್ದಾನಾ ರಾಕೇಶ್?

ರಾಕೇಶ್  ಹೆಣ್ಣು ಮಕ್ಕಳ ಜೊತೆಯೇ ಹೆಚ್ಚಾಗಿ ಇರ್ತಾನೆ. ಹೆಚ್ಚಾಗಿ ಅಮೂಲ್ಯ ಗೌಡ ಜೊತೆ ಕಾಲ ಕಳೆಯುತ್ತಾರೆ. ಆದ್ರೆ ಈ ವಾರ ಕಾವ್ಯ ಹಿಂದೆ ಓಡಾಡ್ತಿದ್ದಾನೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ರಾಕೇಶ್ ಅಡಿಗ ಓಟಿಟಿಯಿಂದ ಸೆಲೆಕ್ಟ್ ಆಗಿ ಬಿಗ್ ಬಾಸ್‍ಗೆ ಬಂದಿದ್ದಾರೆ. ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ನವೀರಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಕಾವ್ಯ ಕ್ಯಾಪ್ಟನ್ (Captain) ಆಗಿದ್ದು, ರಾಕೇಶ್ (Rakesh) ಆಕೆಯ ಹಿಂದೆನೇ ಸುತ್ತುತ್ತಿದ್ದಾನಂತೆ.


  ಕ್ಯಾಪ್ಟನ್ ಆದ ಕಾವ್ಯಶ್ರೀ
  ಬಿಗ್ ಬಾಸ್ ಶುರುವಾದಗಿನಿಂದ ಕಾವ್ಯಶ್ರೀ ಹೆಚ್ಚಾಗಿ ನಾಮಿನೇಟ್ ಆಗಿಲ್ಲ. ಅಲ್ಲದೇ ಯಾವುದೇ ಗೇಮ್ ಗಳನ್ನು ಸಹ ಕಷ್ಟ ಪಟ್ಟು ಆಡಲ್ಲ. ನನಗೆ ಆಗಲ್ಲ ಅಂತಾನೇ ಹೇಳ್ತಾರೆ. ಮನೆಯವರೆಲ್ಲಾ ಗೇಮ್ ಚೆನ್ನಾಗಿ ಆಡಲ್ಲ ಎಂದು ಡೈರೆಕ್ಟ್ ಆಗಿಯೇ ಹೇಳಿದ್ದಾರೆ. ಆದ್ರೂ ಕಾವ್ಯ ತಲೆಕೆಡಿಸಿಕೊಂಡಿರಲಿಲ್ಲ. ಈ ಬಾರಿ ಕ್ಯಾಪ್ಟನ್ ಟಾಸ್ಕ್ ಆಡಿ ಗೆದ್ದು, ಬಿಗ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.


  ಹೆಚ್ಚು ರಿಯಲ್ ಪಡೆದಿದ್ದ ಕಾವ್ಯಶ್ರೀ
  ಕಾವ್ಯಶ್ರೀ ಗೇಮ್‍ಗಳನ್ನು ಚೆನ್ನಾಗಿ ಆಡಲಿಲ್ಲ ಎಂದ್ರೂ, ಮನೆಯವರ ಜೊತೆ ಚೆನ್ನಾಗಿ ಇರುತ್ತಾಳೆ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾಳೆ. ತನಗೆ ಏನು ಅನ್ನಿಸುತ್ತೋ, ಅದನ್ನು ಮುಚ್ಚಿಟ್ಟುಕೊಳ್ಳದೇ ಧೈರ್ಯವಾಗಿ ಹೇಳ್ತಾಳೆ. ಈ ಗುಣ ಮನೆಯವರಿಗೆ ಇಷ್ಟ ಆಗಿದೆ. ಅದಕ್ಕೆ ಕಳೆದ ವಾರದ ಯಾರು ರಿಯಲ್, ಯಾರು ಫೇಕ್ ಎಂಬ ಟಾಸ್ಕ್ ನಲ್ಲಿ, ಕಾವ್ಯ ಒಂದು ಬಾರಿ ಹೊರತು ಪಡಿಸಿ, ಉಳಿದೆಲ್ಲಾ ಟೈಂ ರಿಯಲ್ ಪಡೆದಿದ್ದರು.


  ಇದನ್ನೂ ಓದಿ: Ramachari: ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ? ಚಾರು ಪ್ರೀತಿ ಹೇಳಿದ್ದನ್ನು ಕೇಳಿಸಿಕೊಳ್ಳಲೇ ಇಲ್ಲ ಚಾರಿ! 


  ರಾಕೇಶ್ ಕಾವ್ಯ ಹಿಂದೆ ಓಡಾಡುತ್ತಿದ್ದಾನಂತೆ
  ರಾಕೇಶ್ ಅಡಿಗ ಈ ಮನೆಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೂ ತುಂಬಾ ಇಷ್ಟ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾನೆ. ಯಾರಿಗಾದ್ರೂ ಬೇಸರ ಆದ್ರೆ ಸಮಾಧಾನಾ ಮಾಡ್ತಾನೆ. ರಾಕೇಶ್  ಹೆಣ್ಣು ಮಕ್ಕಳ ಜೊತೆಯೇ ಹೆಚ್ಚಾಗಿ ಇರ್ತಾನೆ. ಹೆಚ್ಚಾಗಿ ಅಮೂಲ್ಯ ಗೌಡ ಜೊತೆ ಕಾಲ ಕಳೆಯುತ್ತಾರೆ. ಆದ್ರೆ ಈ ವಾರ ಕಾವ್ಯ ಹಿಂದೆ ಓಡಾಡ್ತಿದ್ದಾನೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.


  Colors Kannada Bigg Boss Season 09 Arya Vardhan talk about Kavya and Rakesh
  ಕಾವ್ಯಶ್ರೀ


  ಜಗಳ ತಂದಿಡಲು ಯತ್ನ
  ಕಾವ್ಯಶ್ರೀ ಬಳಿ ರಾಕೇಶ್, ನೀನು ಬೇರೆಯವರ ಮಾತು ನಂಬಬೇಡ. ನಿನ್ನ ಬೇಸರವನ್ನು ಬಳಸಿಕೊಳ್ತಾರೆ. ಗುರೂಜಿ ನಿಂಬೆಹಣ್ಣನ್ನು ಜೇಬಿನಲ್ಲೇ ಇಟ್ಟುಕೊಂಡಿರುತ್ತಾರೆ. ಯಾರಾದ್ರೂ ಜಗಳ ಆಡ್ತಿದ್ರೆ. ಅವರ ಮಧ್ಯೆ ತಂದು ಹಿಂಡಿ ಬಿಡ್ತಾರೆ ಎಂದು ಹೇಳಿದ್ದಾನೆ. ಅದಕ್ಕೆ ಗುರೂಜಿ ನಾನು, ನಿನ್ ಮಾಡಿದ್ದನ್ನು ಹೇಳಿದ್ದೇನೆ ಎಂದು ಹೇಳ್ತಾರೆ.


  ಆರ್ಯವರ್ಧನ್ ಗುರೂಜಿ ಬಳಿ ಹುಷಾರಾಗಿರಿ
  ರೂಪೇಶ್ ರಾಜಣ್ಣ ಆರ್ಯವರ್ಧನ್ ಗುರೂಜಿ ತಲೆಗೆ ಎಣ್ಣೆ ಹಚ್ಚುತ್ತಾ ಇರುತ್ತಾರೆ. ಅದಕ್ಕೆ ರಾಕೇಶ್, ಸರ್ ನಿಮಗೆ ಗೊತ್ತಿಲ್ಲ. ನೀವು ಮುಗ್ಧರು. ಆರ್ಯವರ್ಧನ್ ಗುರೂಜಿ ಬಳಿ ಹುಷಾರಾಗಿರಿ ಎಂದು ಸಲಹೆ ನೀಡ್ತಾರೆ. ಮನೆಯವರೆಲ್ಲಾ ಸದನ್ನು ಕೇಳಿ ನಗ್ತಾರೆ.


  Colors Kannada Bigg Boss Season 09 Arya Vardhan talk about Kavya and Rakesh
  ಆರ್ಯವರ್ಧನ್ ಗುರೂಜಿ ಬಳಿ ಹುಷಾರಾಗಿರಿ


  ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ, ವೈಷ್ಣವ್ ಇದ್ದ ರೂಮ್​ಗೆ ಬೀಗ ಹಾಕಿದ್ದಕ್ಕೆ ಕೋಪ! 


  ಕಾವ್ಯ ಕ್ಯಾಪ್ಟನ್ ಆಗಿದ್ದಕ್ಕೆ , ರಾಕೇಶ್ ಅಡಿಗ ಆಕೆ ಹಿಂದೆ ಸುತ್ತಾಡುತ್ತಿದ್ದಾನಾ? ಅಥವಾ ಅವನ ಸ್ವಭಾವವೇ ಅದ. ಒಟ್ನನಲ್ಲಿ ರಾಕಿ ಗುರೂಜಿ ಕಣ್ಣಿಗೆ ಬಿದ್ದದ್ದಾನೆ.

  Published by:Savitha Savitha
  First published: