• Home
 • »
 • News
 • »
 • entertainment
 • »
 • BBK Season 09: ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ

BBK Season 09: ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ

ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ

ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ

ನೀರು ತುಂಬಿಸೋ ಟಾಸ್ಕ್ ನಲ್ಲಿ ಗುರೂಜಿ ಬೆರಳಿಗೆ ಏಟಾಗಿ ರಕ್ತ ಬರುತ್ತಿರುತ್ತೆ. ಆಗ ಅವರಿಗೆ ಚಿಕಿತ್ಸೆ ನೀಡಿ ಬಿಗ್ ಬಾಸ್ ಕಳಿಸ್ತಾರೆ. ಅಲ್ಲಿಂದ ಬಂದ ಗುರೂಜಿ ಗಳಗಳನೇ ಅತ್ತು ಬಿಡ್ತಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 (Season 09) ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದಾರೆ. ಆದ್ರೆ ಹೀಗಾಗಲೇ ಮೂರ ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ (Out) ಆಗಿದ್ದಾರೆ.


  ಐಶ್ವರ್ಯ ಪಿಸೆ, ದರ್ಶ್ ಚಂದ್ರಪ್ಪ, ನವಾಜ್ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರದ ಟಾಸ್ಕ್ ನಲ್ಲಿ ಗುರೂಜಿ, ಕಾವ್ಯಶ್ರೀ ಏಟು ಮಾಡಿಕೊಂಡು ಮನೆ ನೆನೆದು ಕಣ್ಣೀರು ಹಾಕಿದ್ದಾರೆ.


  ಬಿಗ್ ಬಾಸ್ ಮನೆಯಲ್ಲಿ ಈ ವಾರ 2 ತಂಡ
  ಮುಂದಿನ ವಾರದ ಕ್ಯಾಪ್ಟನ್ ಆಗಲು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ 2 ತಂಡಗಳಾಗಿವೆ. ಕ್ಯಾಪ್ಟನ್ ದೀಪಿಕಾ 2 ತಂಡಕ್ಕೆ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣನನ್ನು ಕ್ಯಾಪ್ಟನ್ ಮಾಡಿ ಆಯ್ಕೆ ಮಾಡಿದ್ದಾರೆ.


  ಉಳಿದವರು ಪ್ರಶಾಂತ್, ರಾಜಣ್ಣ ಫೋಟೋ ಜೋಡಿಸಿ ಅವರ ತಂಡಕ್ಕೆ ಸೇರಿದ್ದಾರೆ. ಪ್ರಶಾಂತ್ ಸಂಬರ್ಗಿ ಟೀಮ್ ಧಮ್ ಪವರ್ ಎಂದು ಹೆಸರು ಇಟ್ಟುಕೊಂಡಿದೆ. ರೂಪೇಶ್ ರಾಜಣ್ಣ ಟೀಮ್ ಕಾಮನಬಿಲ್ಲು ಎಂದು ಹೆಸರು ಇಟ್ಟುಕೊಂಡಿದೆ. ಕಾವ್ಯಶ್ರೀ, ಗುರೂಜಿ ಕಾಮನಬಿಲ್ಲು ತಂಡದಲ್ಲಿದ್ದಾರೆ.


  ರಂಧ್ರವಿರುವ ಡ್ರಮ್ ನಲ್ಲಿ ನೀರು ತುಂಬಿಸೋ ಟಾಸ್ಕ್
  ಮನೆಯಲ್ಲಿ 2 ತಂಡಗಳಾದ ಮೇಲೆ ಬಿಗ್ ಬಾಸ್ ಮೊದಲನೇ ಟಾಸ್ಕ್ ನೀಡ್ತಾರೆ. ರಂಧ್ರವಿರುವ ಡ್ರಮ್​ನಲ್ಲಿ ನೀರು ಹಿಡಿದು ಕೊಟ್ಟಿರುವ ಗಾಜಿನ ತೊಟ್ಟಿಗೆ ಹಾಕಬೇಕು. ಯಾರು ಹೆಚ್ಚು ಹಾಕ್ತರೋ ಅವರೇ ವಿನ್ನರ್. 2 ತಂಡಗಳು ಅದ್ಭುತವಾಗಿ ಆಡಿದವು. ರೂಪೇಶ್ ರಾಜಣ್ಣ ಅವರ ಕಾಮನ ಬಿಲ್ಲು ಟೀಮ್ ಗೆಲ್ಲುತ್ತೆ. ಆದ್ರೆ ಆ ಟೀಮ್‍ನಲ್ಲಿದ್ದ ಕಾವ್ಯಶ್ರೀ ಮತ್ತು ಆರ್ಯವರ್ಧನ್ ಗುರೂಜಿಗೆ ಏಟಾಗುತ್ತೆ.


  ಇದನ್ನೂ ಓದಿ: BBK Season 9: ಗುಂಪಿಗೆ ಸೇರದ ಪದ, ಕ್ಯಾಪ್ಟನ್ ಮೇಲೆ ರಾಜಣ್ಣ ಆರೋಪಗಳ ಸುರಿಮಳೆ!


  ಕಾವ್ಯಾಗೆ ಕಾಲಿಗೆ ಏಟು
  ಕಾವ್ಯಾಗೆ ರಂಧ್ರವಿರುವ ಡ್ರಮ್​ನಲ್ಲಿ ನೀರು ತುಂಬಿಸೋ ಟಾಸ್ಕ್​ನಲ್ಲಿ ಕಾಲಿಗೆ ಏಟು ಬೀಳುತ್ತೆ. ನಡೆಯಲೂ ಆಗುತ್ತಿರಲಿಲ್ಲ. ಆದ್ರೂ ಹೇಗೋ ಟಾಸ್ಕ್ ಮಾಡಿ ಮುಗಿಸಿದ್ರು. ಆದ್ರೆ ಟಾಸ್ಕ್ ನಂತರ ಮಲಗಿದವರು ಹೇಳೋಕೆ ಆಗದೇ ಅಳುತ್ತಿದ್ದರು. ಬಿಗ್ ಬಾಸ್ ಅವರನ್ನು ಕರೆದು ಚಿಕಿತ್ಸೆ ನೀಡಿ, ಬ್ಯಾಂಡೇಜ್ ಹಾಕಿ ಕಳಿಸಿದ್ದಾರೆ. ರಾತ್ರಿ ಊಟ ಮಾಡುವಾಗ ಕಾವ್ಯ ಅಳುತ್ತಾ ಕೂತಿರುತ್ತಾರೆ. ಅಮೂಲ್ಯ, ಕಾಲು ನೋವಾ ಎಂದು ಕೇಳಿದ್ರು. ಅದಕ್ಕೆ ಇಲ್ಲ ಮನೆಯವರು ನೆನಪಾದ್ರು ಎಂದು ಹೇಳ್ತಾಳೆ.


  Bigg Boss Kannada season 9, Arya Vardhan and Kavya crying remembering home, Bigg boss Kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ, Kannada news, Karnataka news,
  ಕಾವ್ಯಾ


  ಇದನ್ನೂ ಓದಿ: Anupama Gowda: ಸೂಸೈಡ್​​ಗೆ ಯತ್ನಿಸಿದ್ರಾ ಅನುಪಮಾ ಗೌಡ? ಕಷ್ಟದ ಕಾಲದಲ್ಲಿ ಸಹಾಯಕ್ಕೆ ಬಂದಿದ್ಲು ಆ ಜೀವದ ಗೆಳತಿ!


  Bigg Boss Kannada season 9, Arya Vardhan and Kavya crying remembering home, Bigg boss Kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಮನೆ ನೆನೆದು ಕಣ್ಣೀರಿಟ್ಟ ಆರ್ಯವರ್ಧನ್, ಕಾವ್ಯಶ್ರೀ, Kannada news, Karnataka news,
  ಮನೆಯವರು ಯಾಕೆ ಎಂದು ಕೇಳಿದ್ದಕ್ಕೆ, ನನಗೆ ಮನೆ ನೆನಪಾಯ್ತು. ನನ್ನ ಮಗಳು ಈ ರೀತಿ ಆದಾಗ ತುಂಬಾ ಕೇರ್ ಮಾಡ್ತಿದ್ಲು ಎಂದು ಹೇಳಿದ್ದಾರೆ.


  ಗಳ ಗಳನೇ ಅತ್ತ ಗುರೂಜಿ
  ಇನ್ನು ರಂದ್ರವಿರುವ ಡ್ರಮ್​ನಲ್ಲಿ ನೀರು ತುಂಬಿಸೋ ಟಾಸ್ಕ್​ನಲ್ಲಿ ಗುರೂಜಿ ಬೆರಳಿಗೆ ಏಟಾಗಿ ರಕ್ತ ಬರುತ್ತಿರುತ್ತೆ. ಆಗ ಅವರಿಗೆ ಚಿಕಿತ್ಸೆ ನೀಡಿ ಬಿಗ್ ಬಾಸ್ ಕಳಿಸ್ತಾರೆ. ಅಲ್ಲಿಂದ ಬಂದ ಗುರೂಜಿ ಗಳಗಳನೇ ಅತ್ತು ಬಿಡ್ತಾರೆ.

  Published by:Savitha Savitha
  First published: