• Home
  • »
  • News
  • »
  • entertainment
  • »
  • Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ಅರುಣ್ ಸಾಗರ್, ಕಾರಣ ಇಲ್ಲಿದೆ

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ಅರುಣ್ ಸಾಗರ್, ಕಾರಣ ಇಲ್ಲಿದೆ

ಕಣ್ಣೀರಿಟ್ಟ ಅರುಣ್ ಸಾಗರ್!

ಕಣ್ಣೀರಿಟ್ಟ ಅರುಣ್ ಸಾಗರ್!

ಅರುಣ್ ಸಾಗರ್ ಅವರು ಟಾಸ್ಕ್ ಆಡುವ ವೇಳೆ ಇದ್ದಕ್ಕಿದ್ದ ಹಾಗೇ ತಂದೆಯನ್ನು ನೆನೆದು, ಕಣ್ಣೀರಿಟ್ಟಿದ್ದಾರೆ. ಆರ್ಯವರ್ಧನ್ ನಿಂತಾಗಲೆಲ್ಲಾ ಅವರ ನೆರಳು ನನ್ನ ತಂದೆ ತರಹ ಕಾಣಿಸುತ್ತೆ ಎಂದು ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್  (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಮೊದಲ ಸೀಸನ್ ಅರುಣ್ ಸಾಗರ್ ಸಹ ಈ ಬಾರಿಯ ಬಿಗ್ ಬಾಸ್ ನಲ್ಲಿ ಇದ್ದಾರೆ. ಅವರು ಮೊದಲ ದಿನದಿಂದಲೂ ಜನರನ್ನು ನಗಿಸುತ್ತಾರೆ. ಎಲ್ಲರಿಗೂ ಇಷ್ಟವಾಗಿದ್ದಾರೆ. ಪದೇ ಪದೇ ಜೋಕರ್ ವೇಷದಲ್ಲಿ ಕಾಣಿಸಿಕೊಳ್ತಾರೆ. ಯಾವಾಗಲೂ ನಗಿಸೋ ಅರುಣ್ ಸಾಗರ್ (Arun Sagar) ಅಪ್ಪನನ್ನು (Father) ನೆನೆದು ಕಣ್ಣೀರಿಟ್ಟಿದ್ದಾರೆ.


    ಮೊದಲ ಸೀಸನ್ ಅಭ್ಯರ್ಥಿ ಅರುಣ್ ಸಾಗರ್
    ಬಿಗ್ ಬಾಸ್ ಸೀಸನ್ 09ಕ್ಕೆ ಈ ಬಾರಿ ಮೊದಲ ಸೀಸನ್ ಅಭ್ಯರ್ಥಿ ಅರುಣ್ ಸಾಗರ್ ಬಂದಿದ್ದಾರೆ. ಅವರಿದ್ದರೇ ಕೇಳ ಬೇಕೇ, ನಗುವಿಗೆ ಕೊರತೆ ಇರಲ್ಲ. ಯಾವಾಗಲೂ ನಗಿಸುತ್ತಲೇ ಇರುತ್ತಾರೆ. ಎಲ್ಲರ ಜೊತೆಯೂ ಚೆನ್ನಾಗಿ ಮಾತನಾಡುತ್ತಾರೆ. ಅವರಿದ್ದರೆ, ಯಾರಿಗೂ ಬೇಸರ ಆಗಲ್ಲ.


    ಅಪ್ಪನನ್ನು ನೆನೆದು ಕಣ್ಣೀರಿಟ್ಟಿದ್ದಾರೆ
    ಅರುಣ್ ಸಾಗರ ಅವರು ಒಂದು ಟಾಸ್ಕ್ ನ್ನು ಗೆದ್ದು, ಯಾರು ರಿಯಲ್, ಯಾರು ಫೇಕ್ ಎಂದು ಹೇಳಬೇಕಿರುತ್ತೆ. ಆಗ ಅರುಣ್ ಸಾಗರ್ ಅವರು ತಮ್ಮ ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಎಲ್ಲರಿಗೂ ಅಪ್ಪ ಎಷ್ಟು ಮುಖ್ಯ ಎಂದು ಹೇಳಿದ್ದಾರೆ.


    ಇದನ್ನೂ ಓದಿ: Jothe Jotheyali: ಆರಾಧನಾಗಿಂತ ಅನು ಮೇಲೆ ಸಂಜುಗೆ ಹೆಚ್ಚು ಕಾಳಜಿ, ಇದೇನಾಗುತ್ತಿದೆ ಧಾರಾವಾಹಿಯಲ್ಲಿ?


    ಆರ್ಯವರ್ಧನ್ ನೆರುಳ ಅಪ್ಪನಂತೆ ಕಾಣ್ತಿದೆ
    ಅರುಣ್ ಸಾಗರ್ ಅವರು ಟಾಸ್ಕ್ ಆಡುವ ವೇಳೆ ಇದ್ದಕ್ಕಿದ್ದ ಹಾಗೇ ತಂದೆಯನ್ನು ನೆನೆದು, ಕಣ್ಣೀರಿಟ್ಟಿದ್ದಾರೆ. ಆರ್ಯವರ್ಧನ್ ನಿಂತಾಗಲೆಲ್ಲಾ ಅವರ ನೆರಳು ನನ್ನ ತಂದೆ ತರಹ ಕಾಣಿಸುತ್ತೆ ಎಂದು ಹೇಳಿದ್ದಾರೆ. ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ.


    kannada bigg boss, arun sagar crying, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆರ್ಯವರ್ಧನ್ ನೆರಳು ಅಪ್ಪನ ತರ ಕಾಣುತ್ತೆ, ಕಣ್ಣೀರಿಟ್ಟ ಅರುಣ್ ಸಾಗರ್, kannada news, karnataka news,
    ಆರ್ಯವರ್ಧನ್


    ಅರುಣ್ ಸಾಗರ್ ಈ ರೀತಿ ಹೇಳಿದ್ರು
    'ಆರ್ಯವರ್ಧನ್ ಗುರೂಜಿ ನಮ್ಮ ಅನ್ನದಾತರು. ನನಗೆ ನಿಮ್ಮ ಬಗ್ಗೆ ಬಹಳ ಗೌರವವಿದೆ. ಗೌರವ ಯಾಕೆ ಅಂದ್ರೆ, ನನಗೆ ಅಡುಗೆ ಮನೆ ಬಹಳ ಇಷ್ಟ. ನಾನು ಹಾಲು-ಅನ್ನ ಯಾವತ್ತೂ ತಿನ್ನಲ್ಲ. ಅದು ತಿಂದಾಗ ನನಗೆ ನನ್ನ ತಂದೆಯ ನೆನಪಾಗುತ್ತದೆ. ನಾನು ನನ್ನ ತಂದೆಯನ್ನ ನೋಡಿದ ಮುಸುಕು ದೃಷ್ಟಿಯಿದೆ. ನನ್ನ ತಂದೆ ಹಾಲು-ಅನ್ನ ತಿನ್ನಿಸಿದ ರುಚಿ ಬಾಯಲ್ಲಿ ಇನ್ನೂ ಹಾಗೇ ಇದೆ.


    kannada bigg boss, arun sagar crying, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಆರ್ಯವರ್ಧನ್ ನೆರಳು ಅಪ್ಪನ ತರ ಕಾಣುತ್ತೆ, ಕಣ್ಣೀರಿಟ್ಟ ಅರುಣ್ ಸಾಗರ್, kannada news, karnataka news,
    ಆರ್ಯವರ್ಧನ್ ನೆರಳು ಅಪ್ಪನ ತರ ಕಾಣುತ್ತೆ, ಕಣ್ಣೀರಿಟ್ಟ ಅರುಣ್ ಸಾಗರ್!


    ಅಡುಗೆ ಮನೆಯನ್ನು ತಾಯಿ ಮನೆ ಅಂತ ಯಾಕೆ ಅವತ್ತು ಬರೆದೆ ಅಂದ್ರೆ ನನ್ನಪ್ಪ ತುಂಬಾ ಒಳ್ಳೆಯ ಮನುಷ್ಯ. ನಾನು ಅವರನ್ನ ನೋಡೋಕೆ ಆಗಲಿಲ್ಲ. ಆರ್ಯವರ್ಧನ್ ನಿಂತಾಗಲೆಲ್ಲಾ ಅವರ ನೆರಳು ನನ್ನ ತಂದೆ ತರಹ ಕಾಣಿಸುತ್ತೆ' ಎಂದು ಅರುಣ್ ಸಾಗರ್ ಹೇಳಿದ್ರು.


    ಇದನ್ನೂ ಓದಿ: Kendasampige: ಸಂಪಿಗೆಯಂತ ಸುಮನಾ, ಸಾಧನಾ ಮುಂದೆ ಕೆಂಡವಾಗಿದ್ದೇಕೆ?


    ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ಆಗಲ್ಲ ಎನ್ನುವುದೇ ಎಲ್ಲರಿಗೂ ಗೊತ್ತು. ಅಂತೆಯೇ ಅರುಣ್ ಸಾಗರ್ ಸಹ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

    Published by:Savitha Savitha
    First published: