• Home
 • »
 • News
 • »
 • entertainment
 • »
 • BBK Season 09: ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ! ಬಹುಮತ ಯಾರಿಗೆ?

BBK Season 09: ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ! ಬಹುಮತ ಯಾರಿಗೆ?

ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ ರಚನೆ!

ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ ರಚನೆ!

ಇಬ್ಬರು ಜಗಳ ಮಾಡೋದು ಬೇಡ ಎಂದು ಅಡುಗೆ ಮನೆಯಲ್ಲಿ ಮಾತನಾಡಿಕೊಂಡು ಹೋಗಿರುತ್ತಾರೆ. ಆದ್ರೆ ಗಾರ್ಡನ್ ಏರಿಯಾಗೆ ಹೋಗುವುದರೊಳಗೆ ಅವರ ದೋಸ್ತಿ ಬಿದ್ದಿರುತ್ತೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್  ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಅದರಲ್ಲಿ ಪ್ರಶಾಂತ್ ಸಂಬರ್ಗಿ (Prashanth Sambargi) ಕೂಡ ಒಬ್ಬರು. ಪ್ರಶಾಂತ್ ಸಂಬರ್ಗಿ ಇದ್ರೆ ಕೇಳಬೇಕಾ, ಅಲ್ಲಿ ಜಗಳ ಇದ್ದೇ ಇರುತ್ತೆ. ಈ ಬಾರಿ ಆ ಲೀಸ್ಟ್ ಗೆ ರೂಪೇಶ್ ರಾಜಣ್ಣ ಸೇರಿದ್ದಾರೆ. ಇಬ್ಬರು ಸೇರಿ ಆರ್ಯವರ್ಧನ್ ಮುಂದೆ ಮೈತ್ರಿ ಸರ್ಕಾರ (Government) ಮಾಡಿದ್ದರು. ಅದು ಗಾರ್ಡನ್ (Garden) ಏರಿಯಾಗೆ ಹೋಗುವಷ್ಟರಲ್ಲಿ ಬಿದ್ದು ಹೋಗಿದೆ.


  ಮುಗಿಯದ ರಾಜಣ್ಣ-ಪ್ರಶಾಂತ್ ಜಗಳ


  ಬಿಗ್ ಬಾಸ್ ಶುರುವಾದಗಿನಿಂದ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಜಗಳ ಆಡ್ತಾನೆ ಇದ್ದಾರೆ. ಯಾವುದಾದರು ಒಂದು ವಿಷಯಕ್ಕೆ ಸುಮ್ಮನೇ ಜಗಳವಾಡುತ್ತಾರೆ. ಮನೆಯವರು ಇವರ ಜಗಳ ನೋಡಿ ನೋಡಿ ಸಾಕಾಗಿ ಹೋಗಿದ್ದಾರೆ.
  ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ


  ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಅಡುಗೆ ಮನೆಯಲ್ಲಿ ಮಾತನಾಡಿಕೊಳ್ಳುತ್ತಾರೆ. ಇನ್ಮೇಲೆ ನಾವು ಜಗಳ ಆಡೋದು ಬೇಡ. ನಾವು ಜಗಳ ಮಾಡಿದ್ರೆ ಬೇರೆಯವರು ಅದರ ಲಾಭ ಪಡೆಯುತ್ತಾರೆ ಎಂದುಕೊಳ್ತಾರೆ. ಅದು ಆರ್ಯವರ್ಧನ್ ಗುರೂಜಿ ಮುಂದೆ ಇಬ್ಬರು ಒಪ್ಪಂದ ಮಾಡಿಕೊಳ್ತಾರೆ.


  ಇದನ್ನೂ ಓದಿ: Guru Shishyaru: OTTಗೆ ಲಗ್ಗೆ ಇಟ್ಟ ಗುರುಶಿಷ್ಯರು, ಜೀ 5ನಲ್ಲಿ ಗ್ರಾಮೀಣ ಸೊಬಗು ಸವಿಯಲು ರೆಡಿಯಾಗಿ! 


  ಗಾರ್ಡನ್ ಏರಿಯಾದಲ್ಲಿ ಮುರಿದು ಬಿದ್ದ ದೋಸ್ತಿ


  ಇಬ್ಬರು ಜಗಳ ಮಾಡೋದು ಬೇಡ ಎಂದು ಅಡುಗೆ ಮನೆಯಲ್ಲಿ ಮಾತನಾಡಿಕೊಂಡು ಹೋಗಿರುತ್ತಾರೆ. ಆದ್ರೆ ಗಾರ್ಡನ್ ಏರಿಯಾಗೆ ಹೋಗುವುದರೊಳಗೆ ಅವರ ದೋಸ್ತಿ ಬಿದ್ದಿರುತ್ತೆ. ಅದನ್ನು ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಪ್ರಶ್ನೆ ಮಾಡಿದ್ದಾರೆ.


  bigg boss kannada season 9, alliance government in bbk house, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ ರಚನೆ, ಬಹುಮತ ಯಾರಿಗೆ?, kannada news, karnataka news,
  ಗಾರ್ಡನ್ ಏರಿಯಾದಲ್ಲಿ ಮುರಿದು ಬಿದ್ದ ದೋಸ್ತಿ


  ಮೈತ್ರಿಗೆ ಆದ ತೊಂದರೆ ಏನು ಎಂದು ಸುದೀಪ್ ಪ್ರಶ್ನೆ?


  ಸುದೀಪ್, ಇಬ್ಬರು ಒಪ್ಪಂದ ಮಾಡಿಕೊಂಡಿದ್ರಿ. ಆದ್ರೆ ಅಡುಗೆ ಮನೆಯಿಂದ, ಗಾರ್ಡನ್ ಏರಿಯಾಗೆ ಹೋಗುವುದರೊಳಗೆ ಏನಾಯ್ತು ಎಂದು ಕೇಳ್ತಾರೆ. ಅದಕ್ಕೆ ಪ್ರಶಾಂತ್, ಇಲ್ಲಿ ಒಪ್ಪಂದ ಮಾಡಿಕೊಂಡು ಹೋಗಿದ್ವಿ. ಆದ್ರೆ ರಾಜಣ್ಣ, ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ, ಪ್ರಶಾಂತ್ ನನಗೆ ಸ್ಪರ್ಧಿಯೇ ಅಲ್ಲ ಎಂದು ಹೇಳ್ತಾರೆ. ಅದಕ್ಕೆ ನನಗೆ ಬೇಸರ ಆಯ್ತು ಎಂದು ಪ್ರಶಾಂತ್ ಹೇಳ್ತಾರೆ.


  bigg boss kannada season 9, alliance government in bbk house, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ ರಚನೆ, ಬಹುಮತ ಯಾರಿಗೆ?, kannada news, karnataka news,
  ಗಾರ್ಡನ್ ಏರಿಯಾದಲ್ಲಿ ಮುರಿದು ಬಿದ್ದ ದೋಸ್ತಿ


  ಪ್ರಶಾಂತ್ ಕಡೆ ಮತ ಹಾಕಿದ ಗುರೂಜಿ
  ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಮೈತ್ರಿಗೆ ಆರ್ಯವರ್ಧನ್ ಗುರೂಜಿ ಸಾಕ್ಷಿ ಆಗಿರುತ್ತಾರೆ. ಕೊನೆಗೆ ಕ್ಯಾಪ್ಟನ್ ಟಾಸ್ಕ್ ನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮತ ಹಾಕ ಬೇಕಿರುತ್ತೆ. ಗುರೂಜಿ , ರಾಜಣ್ಣ ಅಂದ್ರೆ ನನಗೆ ಇಷ್ಟ ಎಂದು ಹೇಳುತ್ತಲೇ, ಪ್ರಶಾಂತ್ ಸಂಬರ್ಗಿಗೆ ವೋಟ್ ಹಾಕ್ತಾರೆ. ಆದ ಕಾರಣ ಪ್ರಶಾಂತ್ ಕ್ಯಾಪ್ಟನ್ ಆಗ್ತಾರೆ.


  ಇದನ್ನೂ ಓದಿ: BBK Season 09: ಬಿಗ್​ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್, ರೂಪೇಶ್ ಶೆಟ್ಟಿ ಕಣ್ಣೀರು! 


  ಮೈತ್ರಿ ಸರ್ಕಾರದ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ, ಎಲ್ಲರನ್ನೂ ನಗಿಸಿದ್ರು. ಮನೆಯವರು ಸಹ ನಕ್ಕರು.

  Published by:Savitha Savitha
  First published: