• Home
  • »
  • News
  • »
  • entertainment
  • »
  • Bhagya Lakshami: ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ

Bhagya Lakshami: ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ

ಭಾಗ್ಯಲಕ್ಷ್ಮಿ

ಭಾಗ್ಯಲಕ್ಷ್ಮಿ

ಅಕ್ಕ ಹೇಳಿದಂತೆ ಕಾವೇರಿ, ಲಕ್ಷ್ಮಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಒಪ್ತಾಳಾ? ಹಾಗಾದ್ರೆ ವೈಷ್ಣವ್-ಕೀರ್ತಿ ಪ್ರೀತಿ ಸಾಯುತ್ತಾ? ವೈಷ್ಣವ್ ಹಾಗೂ ಕೀರ್ತಿ ಕಳೆದ 2 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ (Anchor) ಸುಷ್ಮಾ (Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನಾಗಿ ಬಿಗ್ ಬಾಸ್ ಶಮಂತ್ ಗೌಡ ಕಾಣಿಸಿಕೊಂಡಿದ್ದಾರಡ. ಇದರಲ್ಲಿ ಅವರು ದೊಡ್ಡ ಸಿಂಗರ್ (Singer) ವೈಷ್ಣವ್.


    ಕಾವೇರಿ ಅವನ ಇಷ್ಟದಂತೆ ಮಗ ಬದುಕಬೇಕು


    ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು. ಕೀರ್ತಿ-ವೈಷ್ಣವ್ ಪ್ರೀತಿ ಮಾಡುತ್ತಿದ್ದು, ಆ ವಿಚಾರ ಕಾವೇರಿಗೆ ಗೊತ್ತಾಗಿದೆ.


    ಮಗನ ಬಳಿ ಮದುವೆಗೆ ಓಕೆ ಎನ್ನುವ ನಾಟಕ


    ಕಾವೇರಿ ಮಗನ ಬಳಿ ಮದುವೆಗೆ ಓಕೆ ಎಂದು ಬಂದಿದ್ದಾಳೆ. ಆದ್ರೆ ಅಕ್ಕನಿಗೆ ಫೋನ್ ಮಾಡಿ, ನಾನು ಇಷ್ಟ ಪಟ್ಟಿದ್ದನ್ನೇ ನನ್ನ ಮಗನಿಗೆ ನೀಡುತ್ತೇನೆ. ಅವನು ಇಷ್ಟ ಪಟ್ಟಿದ್ದು ಅಲ್ಲ ಎಂದು ಹೇಳ್ತಾಳೆ. ಅಲ್ಲದೇ ಸಂಪ್ರದಾಯ ಮನೆಯಿಂದ ಹೆಣ್ಣು ಹುಡುಕುವಂತೆ ಶಾಸ್ತ್ರಿಗಳಿಗೂ ಹೇಳಿದ್ದಾಳೆ.


    ಇದನ್ನೂ ಓದಿ: Olavina Nildana: ಅಪ್ಪನ ಜೊತೆ ತಾರಿಣಿ ಮನೆಗೆ ಹೋದ ಸಿದ್ಧಾಂತ್! ಮದುವೆ ಬೇಡ ಅಂತಾರಾ?


    ಲಕ್ಷ್ಮಿ ಮೇಲೆ ಕಣ್ಣು ಹಾಕಿದ ವೈಷ್ಣವ್ ದೊಡ್ಡಮ್ಮ


    ಇನ್ನು ವೈಷ್ಣವ್ ದೊಡ್ಡಮ್ಮ ಅಂದ್ರೆ ಭಾಗ್ಯ ಅತ್ತೆ, ಲಕ್ಷ್ಮಿ ಮೇಲೆ ಕಣ್ಣು ಹಾಕಿದ್ದಾಳೆ. ಇವಳೇ ನಮ್ಮ ವೈಷ್ಣವ್ ಗೆ ಒಳ್ಳೆ ಜೋಡಿ ಆಗ್ತಾಳೆ. ಬರೀ ಸ್ಟೈಲ್, ಚೆಂದ ಇದ್ರೆ ಸಾಕಾಗಲ್ಲ. ಮನೆ ನಿಭಾಯಿಸಿಕೊಂಡು ಹುಡುಗಿ ಮದುವೆ ಆದ್ರೆ ಚೆಂದ ಎನ್ನುವುದು ಅವಳ ವಾದ. ಹೇಗಿದ್ರೂ ತಂಗಿ ತನ್ನ ಮಾತು ಕೇಳ್ತಾಳೆ ಅನ್ನೋ ನಂಬಿಕೆ.


    colors kannada serial, kannada serial, bhagya lakshmi news serial, serial cast, lakshmi vaishnav marriage matter discussion, ಭಾಗ್ಯಲಕ್ಷ್ಮಿ ಧಾರಾವಾಹಿ, ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ ಇಟ್ಟ ಭಾಗ್ಯ ಅತ್ತೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಕೀರ್ತಿ-ವೈಷ್ಣವ್


    ಲಕ್ಷ್ಮಿಯನ್ನು ಸೊಸೆ ಮಾಡಿಕೊಳ್ಳುವಂತೆ ಕಾವೇರಿಗೆ ಸಲಹೆ
    ಹೇಗಿದ್ರೂ ಕಾವೇರಿಗೆ ತನ್ನ ಮಗ ಕೀರ್ತಿಯನ್ನು ಮದುವೆ ಆಗೋದು ಇಷ್ಟ ಇಲ್ಲ. ಅದಕ್ಕೆ ಬೇರೆ ಹುಡುಗಿ ಹುಡುಕುತ್ತಿದ್ದಾಳೆ. ಅಷ್ಟರಲ್ಲಿ ಕಾವೇರಿ ಅಕ್ಕ, ಲಕ್ಷ್ಮಿ ಪ್ರಸ್ತಾಪ ಇಟ್ಟಿದ್ದಾಳೆ. ನೋಡು ಕಾವೇರಿ, ನನ್ನ ಸೊಸೆ ತಂಗಿ ಲಕ್ಷ್ಮಿ ತುಂಬಾ ಒಳ್ಳೆ ಹುಡುಗಿ. ಸಂಪ್ರದಾಯ ಎಲ್ಲ ಗೊತ್ತು. ಮನೆ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾಳೆ. ನಿಮ್ಮ ಮನೆಗೆ ಲಕ್ಷ್ಮಿ ಬಂದ್ರೆ, ಇಬ್ಬರ ಮನೆಗೂ ಭಾಗ್ಯಲಕ್ಷ್ಮಿ ಬಂದಂತೆ ಆಗುತ್ತೆ ಎಂದು ಹೇಳಿದ್ದಾಳೆ.


    colors kannada serial, kannada serial, bhagya lakshmi news serial, serial cast, lakshmi vaishnav marriage matter discussion, ಭಾಗ್ಯಲಕ್ಷ್ಮಿ ಧಾರಾವಾಹಿ, ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ ಇಟ್ಟ ಭಾಗ್ಯ ಅತ್ತೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಕಾವೇರಿ


    ಕಾವೇರಿ ಒಪ್ತಾಳಾ? ಕೀರ್ತಿಗೆ ವೈಷ್ಣವ್ ಸಿಗಲ್ವಾ?
    ಅಕ್ಕ ಹೇಳಿದಂತೆ ಕಾವೇರಿ, ಲಕ್ಷ್ಮಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಒಪ್ತಾಳಾ? ಹಾಗಾದ್ರೆ ವೈಷ್ಣವ್-ಕೀರ್ತಿ ಪ್ರೀತಿ ಸಾಯುತ್ತಾ? ವೈಷ್ಣವ್ ಹಾಗೂ ಕೀರ್ತಿ ಕಳೆದ 2 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದಾರೆ.


    ಇದನ್ನೂ ಓದಿ: Lakshana: ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು? 


    ಇಬ್ಬರು ಮದುವೆ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಆದ್ರೆ ಅದಕ್ಕೆ ಕಾವೇರಿ ಬಿಡ್ತಾ ಇಲ್ಲ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: