ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಹೂವು (Flower) ಮೂಡಿಸುವ ಶಾಸ್ತ್ರ ಮುಗಿದಿದೆ.
ಲಕ್ಷ್ಮಿಗೆ ಹೂವು ಮೂಡಿಸುವ ಶಾಸ್ತ್ರ
ವೈಷ್ಣವ್ ಲಕ್ಷ್ಮಿಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಕೊಂಡು, ಕಾವೇರಿ ಮತ್ತು ಕುಸುಮಾ ಸೇರಿ ಲಕ್ಷ್ಮಿಗೆ ಹೂ ಮುಡಿಸುವ ಶಾಸ್ತ್ರ ಮಾಡಿದ್ದಾರೆ. ವೈಷ್ಣವ್ ಗೆ ಅಲ್ಲಿ ಏನಾಗುತ್ತಿದೆ. ಇದನ್ನು ಹೇಗೆ ತಡೆಯುವುದು ಎಂದು ಗೊತ್ತಾಗಿಲ್ಲ. ಯಾವುದು ಅವನ ನಿಯಂತ್ರಣದಲ್ಲಿ ಇರುವುದಿಲ್ಲ. ಆತಂಕಗೊಂಡಿದ್ದಾನೆ.
ಶಾಸ್ತ್ರದ ಮಧ್ಯೆಯೇ ಎದ್ದು ಹೋದ
ಲಕ್ಷ್ಮಿಗೆ ಹೂವು ಮಡಿಸುವ ಶಾಸ್ತ್ರವೆಲ್ಲಾ ಮುಗಿದು ಫೋಟೊ ತೆಗೆದುಕೊಳ್ಳುತ್ತಿರುವಾಗ ವೈಷ್ಣವ್ ಇದ್ದಕ್ಕಿದ್ದ ಹಾಗೇ ಹೋಗಿ ಬಿಟ್ಟಿದ್ದಾನೆ. ಎಲ್ಲರು ಅದಕ್ಕೆ ಗಾಬರಿಗೊಂಡಿದ್ದಾರೆ. ಏನೂ ಮಾತನಾಡದೇ ಹೋಗಿ ಬಿಟ್ಟ ಅವನಿಗೆ ಮದುವೆ ಇಷ್ಟ ಇಲ್ವಾ ಎಂದು ಮಾತನಾಡಿಕೊಳ್ತಾ ಇದ್ದಾರೆ. ಎಲ್ಲರೂ ಗಾಬರಿ ಆಗಿದ್ದಾರೆ. ವೈಷ್ಣವ್ ನಡೆ ಎಲ್ಲರಿಗೂ ಅನುಮಾನ ಮೂಡಿಸಿದೆ.
ಮದುವೆ ಇಷ್ಟ ಇಲ್ಲ ಎಂದು ವೈಷ್ಣವ್
ವೈಷ್ಣವ್ ಆ ರೀತಿ ಎದ್ದು ಬಂದ ಮೇಲೆ, ಕಾವೇರಿ, ಕುಸುಮಾ ಮನೆಗೆ ಬಂದಿದ್ದಾರೆ. ಯಾಕಮ್ಮ ಈ ಶಾಸ್ತ್ರ ಎಲ್ಲಾ ನನಗೆ ಹೇಳದೇ ಮಾಡಿಬಿಟ್ರಿ. ನನಗೆ ಮದುವೆ ಇಷ್ಟ ಇಲ್ಲ. ನಾನು ಲಕ್ಷ್ಮಿಯನ್ನು ಮದುವೆ ಆಗಲ್ಲ ಎನ್ನುತ್ತಿದ್ದಾನೆ. ಅವರಿಗೆ ಕ್ಷಮೆ ಕೇಳಲು ಸೀರೆ, ಬಳೆ ಕೊಟ್ಟೆ ಅಷ್ಟೇ, ನನಗೆ ಅವರ ಮೇಲೆ ಯಾವುದೇ ಭಾವನೆ ಇಲ್ಲ ಎನ್ನುತ್ತಾನೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಭಾಗ್ಯಾಗೆ ಆತಂಕ
ತನ್ನ ತಂಗಿ ಮದುವೆ ವಿಚಾರದಲ್ಲಿ ಈ ರೀತಿ ಯಾಕೆ ಆಗ್ತಾ ಇದೆ ಎಂದು ಭಾಗ್ಯಾಗೆ ಆತಂಕ ಹೆಚ್ಚಾಗಿದೆ. ಅದಕ್ಕೆ ಬಾಳೆ ಎಲೆಯಲ್ಲಿ ಸಮ, ಬೆಸ ಹೂವುಗಳನ್ನು ಕಟ್ಟಿ ತೆಗೆದಿದ್ದಾಳೆ. ಸಮ ಸಂಖ್ಯೆ ಬಂದಿದೆ. ಆದ್ರೆ ಒಂದು ಹೂವಿನ ದಳಗಳೇ ಇಲ್ಲ. ಅದಕ್ಕೆ ಭಾಗ್ಯ ಆತಂಕಗೊಂಡಿದ್ದಾಳೆ. ಈ ಮದುವೆಯಲ್ಲಿ ಏನಾದ್ರೂ ಸಮಸ್ಯೆ ಇದ್ಯಾ ಎಂದು ಬೇಸರ ಮಾಡಿಕೊಂಡಿದ್ದಾಳೆ.
ದೊಡ್ಡಮ್ಮ ಸಂಬಂಧ ಮುಕ್ತಾಯ
ವೈಷ್ಣವ್ ಯಾವಾಗ ಈ ಸಂಬಂಧ ಬೇಡ ಅಂದ್ನೋ, ಆಗ ಕುಸುಮಾಗೆ ಕೋಪ ಬಂದಿದೆ. ನೀವು 2 ಸಂಬಂಧಗಳನ್ನು ಕಳೆದುಕೊಳ್ಳಬೇಗಾಗುತ್ತೆ. ಒಂದು ಲಕ್ಷ್ಮಿ ಅವರದ್ದು, ಇನ್ನೊಂದು ನನ್ನ ಸಂಬಂಧ ಎಂದು ಹೇಳ್ತಾಳೆ. ಅದಕ್ಕೆ ಕಾವೇರಿ ಮನೆಯವರು ಶಾಕ್ ಆಗಿದ್ದಾರೆ. ಅಲ್ಲದೇ ಕಾವೇರಿ ನಿನಗೂ ಲಕ್ಷ್ಮಿ ಸೊಸೆಯಾಗುವುದು ಇಷ್ಟ ಇಲ್ವಾ ಎಂದು ಕೇಳಿದ್ದಾಳೆ. ಅದಕ್ಕೆ ಕಾವೇರಿ ಇನ್ನೂ ಉತ್ತರ ಕೊಟ್ಟಿಲ್ಲ. ವೈಷ್ಣವ್‍ಗೆ ಪ್ರಾಣ ಸಂಕಟ ಶುರುವಾಗಿದೆ.
ಇದನ್ನೂ ಓದಿ: Kendasampige: ಪ್ರಚಾರವೋ, ಪ್ರೇಮಸಲ್ಲಪವೋ? ತೀರ್ಥಂಕರ್ ಬಗ್ಗೆ ಪೇಪರ್ ನಲ್ಲಿ ಅಪಪ್ರಚಾರ!
ವೈಷ್ಣವ್ ಈಗ ಯಾವ ನಿರ್ಧಾರ ತೆಗೆದುಕೊಳ್ತಾನೆ? ಲಕ್ಷ್ಮಿ ಮದುವೆ ನಡೆಯುತ್ತಾಳಾ? ಭಾಗ್ಯಾಗೆ ಆತಂಕ ಹೆಚ್ಚಾಗುತ್ತಾ? ಕುಸುಮಾ-ಕಾವೇರಿ ಸಂಬಂಧ ಮುಗಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ