ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಹೂವು ಮೂಡಿಸುವ ಶಾಸ್ತ್ರ ಮುಗಿದಿದೆ. ಆದ್ರೆ ವೈಷ್ಣವ್ ಮದುವೆ (Marriage) ಬೇಡ ಎನ್ನುತ್ತಿದ್ದಾನೆ.
ಲಕ್ಷ್ಮಿ ಮೇಲೆ ಮನಸ್ಸಿಲ್ಲ
ವೈಷ್ಣವ್ ಲಕ್ಷ್ಮಿಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಕೊಂಡು, ಕಾವೇರಿ ಮತ್ತು ಕುಸುಮಾ ಸೇರಿ ಲಕ್ಷ್ಮಿಗೆ ಹೂ ಮುಡಿಸುವ ಶಾಸ್ತ್ರ ಮಾಡಿದ್ದಾರೆ.
ಶಾಸ್ತ್ರವೆಲ್ಲಾ ಮುಗಿದು ಫೋಟೋ ತೆಗೆದುಕೊಳ್ಳುತ್ತಿರುವಾಗ ವೈಷ್ಣವ್ ಇದ್ದಕ್ಕಿದ್ದ ಹಾಗೇ ಹೋಗಿ ಬಿಟ್ಟಿದ್ದಾನೆ. ಎಲ್ಲರು ಅದಕ್ಕೆ ಗಾಬರಿಗೊಂಡಿದ್ದಾರೆ. ಏನೂ ಮಾತನಾಡದೇ ಹೋಗಿ ಬಿಟ್ಟ ಅವನಿಗೆ ಮದುವೆ ಇಷ್ಟ ಇಲ್ವಾ ಎಂದು ಮಾತನಾಡಿಕೊಳ್ತಾ ಇದ್ದಾರೆ. ನನಗೆ ಮದುವೆ ಇಷ್ಟ ಇಲ್ಲ ಎಂದು ವೈಷ್ಣವ್ ಹೇಳಿದ್ದಾನೆ.
ಮತ್ತೆ ಸುಪ್ರಿತಾ ಕುತಂತ್ರ
ವೈಷ್ಣವ್ ಮದುವೆ ಬೇಡ ಎಂದಿದ್ದಕ್ಕೆ ದೊಡ್ಡಮ್ಮ ಕುಸುಮಾ ನಮ್ಮ ಸಂಬಂಧ ಸಹ ಇಲ್ಲಿಗೆ ಮುಕ್ತಾಯವಾಗುತ್ತೆ ಎಂದು ಹೇಳಿ ಹೋಗಿದ್ದಾಳೆ. ಅದಕ್ಕೆ ವೈಷ್ಣವ್ ಟೆನ್ಶನ್‍ನಲ್ಲಿ ಇದ್ದಾನೆ. ಆಗ ಸುಪ್ರಿತಾ ಮತ್ತೆ ತನ್ನ ಕುತಂತ್ರ ಬುದ್ಧಿ ತೋರಿಸಿದ್ದಾಳೆ. ವೈಷ್ಣವ್ ನೀನು ಬೇಡ ಅಂದ್ರೆ ತಪ್ಪಾಗುತ್ತೆ. ಅದೇ ಲಕ್ಷ್ಮಿ ಮದುವೆ ಬೇಡ ಎಂದ್ರೆ ನಿಮ್ಮ ಅಮ್ಮ, ದೊಡ್ಡಮ್ಮ ಏನೂ ಮಾಡೋಕೆ ಆಗಲ್ಲ ಎಂದು ಹೇಳ್ತಾಳೆ.
ಪತ್ರ ಬರೆಯುತ್ತೇನೆ ಎಂದು ವೈಷ್ಣವ್
ಸುಪ್ರಿತಾ ವೈಷ್ಣವ್ ಲಕ್ಷ್ಮಿಗೆ ಕಾಲ್ ಮಾಡಿ ನೀನು ಇಷ್ಟ ಇಲ್ಲ ಎಂದು ಹೇಳು ಅಂತಾಳೆ. ಲಕ್ಷ್ಮಿ ತುಂಬಾ ಒಳ್ಳೆಯ ಹುಡುಗಿ ಅವಳಿಗೆ ಹೇಗೆ ಹೇಳೋದು. ಕಾಲ್ ಮಾಡೋಕೆ ಭಯ ಅಂತಾನೆ. ಮೆಸೇಜ್ ಮಾಡು ಎಂದು ಹೇಳ್ತಾಳೆ. ಅದನ್ನು ಮೆಸೇಜ್ ಮಾಡೋಕೆ ಆಗಲ್ಲ. ನಾನು ಪತ್ರ ಬರೆಯುತ್ತೇನೆ ಎಂದು ಹೇಳ್ತಾನೆ. ಅದಕ್ಕೆ ಸುಪ್ರಿತಾ ಓಕೆ ಎನ್ನುತ್ತಾನೆ. ಅವಳಿಗೆ ಬೇಕಿರುವುದು ಮದುವೆ ನಿಲ್ಲುವುದು.
ಮನಸ್ಸಿನ ಮಾತು ಅಕ್ಷರದಲ್ಲಿ
'ಲಕ್ಷ್ಮಿ ಅವರೇ ಈ ಮಾತನ್ನು ಹೇಳೋಕೆ ಕಷ್ಟ ಆಗುತ್ತಿದೆ. ಆದ್ರೂ ಹೇಳಲೇ ಬೇಕಾದ ಪರಿಸ್ಥಿತಿ ಬಂದಿದೆ. ನೀವು ನನ್ನ ಬಗ್ಗೆ ಏನೇನೋ ಕನಸು ಕಾಣುವ ಮೊದಲು ಸತ್ಯ ಹೇಳುತ್ತೇನೆ. ನನಗೆ ಈ ಮದುವೆ ಇಷ್ಟ ಇಲ್ಲ. ನನ್ನ ಕನಸು, ಪ್ರೀತಿ ಎಲ್ಲಾ ನನ್ನ ಕೀರ್ತಿ ಆಕೆಯನ್ನು ಬಿಟ್ಟು, ನಾನು ಬೇರೆಯವರನ್ನು ಮದುವೆ ಆಗಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ' ಎಂದು ವೈಷ್ಣವ್ ಪತ್ರ ಬರೆದಿದ್ದಾನೆ.
ಪತ್ರ ಓದುತ್ತಾಳಾ ಲಕ್ಷ್ಮಿ?
ವೈಷ್ಣವ್ ಬಳಿ ಪತ್ರ ಪಡೆದು ಸುಪ್ರಿತಾನೇ ಲಕ್ಷ್ಮಿ ಮನೆಗೆ ತಂದುಕೊಟ್ಟಿದ್ದಾಳೆ. ಲಕ್ಷ್ಮಿ ತನಗೂ ಪತ್ರ ಬರೆಯುತ್ತಾರೆ ಎಂದು ಖುಷಿ ಆಗಿದ್ದಾಳೆ. ಆದ್ರೆ ಸುಪ್ರಿತಾ ವೈಷ್ಣವ್ ಬರೆದಿದ್ದರ ಜೊತೆ, ಅವಳು ಬರೆದಿದ್ದಾಳಂತೆ. ನಿನ್ನ ಜೀವನ ನಡೆಸಲು ಎಷ್ಟು ಹಣ ಬೇಕೋ ಅಷ್ಟು ಕೊಡುತ್ತೇವೆ ಎಂದು. ಅದನ್ನು ಲಕ್ಷ್ಮಿ ಓದಿದ್ರೆ ಸಂಬಂಧ ಇಲ್ಲಿಗೆ ಮುಗಿದು ಹೋಗುತ್ತಾ? ಕಾವೇರಿ, ಕುಸುಮಾ ಸಂಬಂಧ ಮುಕ್ತಾಯವಾಗುತ್ತಾ ನೋಡಬೇಕು.
ಇದನ್ನೂ ಓದಿ: Lakshana: ಡೆವಿಲ್ ಜಾಡು ಹಿಡಿಯಲು ಶ್ವೇತಾ ಪ್ಲಾನ್, ಮಿಲ್ಲಿ ಮೂಲಕ ಸಿಗ್ತಾಳಾ ಭಾರ್ಗವಿ?
ಲಕ್ಷ್ಮಿ ಪತ್ರ ಓದುತ್ತಾಳಾ? ವೈಷ್ಣವ್ ಅದನ್ನು ತಡೆಯುತ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ