ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ವೈಷ್ಣವ್ ಲಕ್ಷ್ಮಿ ಬಳಿ ವಿಭಿನ್ನವಾಗಿ ಕ್ಷಮೆ (Sorry) ಕೇಳಿದ್ದಾನೆ.
ಮಹಾಲಕ್ಷ್ಮಿ ಭೇಟಿಯಾಗ್ತೇನೆ ಎಂದ ವೈಷ್ಣವ್
ಕಾವೇರಿಯವರು ಲಕ್ಷ್ಮಿಯನ್ನು ನೋಡಲು ಹೋಗಿರುತ್ತಾರೆ. ಆದ್ರೆ ವೈಷ್ಣವ್ ಹೋಗಿರಲ್ಲ. ವೈಷ್ಣವ್ ಬರದೇ ಭಾಗ್ಯ ತಂಗಿಯನ್ನು ಕೊಡಲ್ಲ ಎಂದಿರುತ್ತಾಳೆ. ಅದಕ್ಕೆ ಅವರೆಲ್ಲಾ ಬೇಸರ ಮಾಡಿಕೊಂಡಿರುತ್ತಾರೆ. ಅದಕ್ಕೆ ವೈಷ್ಣವ್ ತಾನು ಮಹಾಲಕ್ಷ್ಮಿಯನ್ನು ಭೇಟಿಯಾಗುತ್ತೇನೆ. ಅವಳ ಜೊತೆ ಮಾತನಾಡುವುದು ತುಂಬಾ ಇದೆ ಎಂದು ಹೇಳ್ತಾನೆ.
ಸುಪ್ರಿತಾ ಕಿತಾಪತಿ
ಲಕ್ಷ್ಮಿಯನ್ನು ಭೇಟಿಯಾಗಬೇಕು ಒಳ್ಳೆ ಹೋಟೆಲ್ ಬುಕ್ ಮಾಡಿ ಎಂದು ವೈಷ್ಣವ್ ತನ್ನ ಅತ್ತೆ ಸುಪ್ರಿತಾ ಬಳಿ ಹೇಳಿರುತ್ತಾನೆ. ಅದಕ್ಕೆ ಆಕೆ ರೆಡಿ ಮಾಡಿರುತ್ತಾಳೆ. ಆದ್ರೆ ಸುಪ್ರಿತಾಗೆ ಲಕ್ಷ್ಮಿ ಇಷ್ಟ ಇರಲ್ಲ. ಅದಕ್ಕೆ ಸಂಬಂಧ ಹಾಳು ಮಾಡಬೇಕು ಎಂದುಕೊಂಡು, ಸೀರೆಯುಟ್ಟು ಬಂದ ಲಕ್ಷ್ಮಿಗೆ ಮಾರ್ಡನ್ ಡ್ರೆಸ್ ಹಾಕಿಸುತ್ತಾಳೆ. ಲಕ್ಷ್ಮಿಗೆ ಅದು ಇಷ್ಟ ಆಗಲ್ಲ.
ನಿಮ್ಮನ್ನು ಮದುವೆ ಆಗಲು ಸಾಧ್ಯವಿಲ್ಲ
ಲಕ್ಷ್ಮಿ ನಾನೊಬ್ಬ ಸಾಧರಣ ಹುಡುಗಿ. ನಿಮ್ಮ ಲೆವೆಲ್‍ಗೆ ತಕ್ಕನಾದವಳು ಅಲ್ಲ. ನೀವು ಬೇರೆ ಯಾರಾನ್ನಾದ್ರೂ ಮದುವೆ ಆಗಿ. ನನಗೆ ಸಾಧ್ಯ ಇಲ್ಲ. ನನಗೆ ಸಿಂಪಲ್ ಆಗಿರೋದೆ ಇಷ್ಟ ಎಂದು ಹೇಳ್ತಾಳೆ. ಆಗ ವೈಷ್ಣವ್‍ಗೆ ಲಕ್ಷ್ಮಿ ಯಾಕೆ ಈ ರೀತಿ ಮಾತಾನಾಡಿದ್ದು ಎಂದು ಗೊತ್ತಾಗಲ್ಲ. ಏಕೆ ಹೇಳಿ ಎಂದು ಕೇಳಿದ್ರೂ ಲಕ್ಷ್ಮಿ ಅಳುತ್ತಾ ಮನೆಗೆ ಹೋಗ್ತಾಳೆ.
ಸುಪ್ರಿತಾ ಕೆನ್ನೆಗೆ ಬಾರಿಸಿದ ಕುಸುಮಾ
ಲಕ್ಷ್ಮಿಗೆ ಅವಮಾನ ಮಾಡಿದ್ದು ಗೊತ್ತಾಗಿ ಕುಸುಮಾ ವೈಷ್ಣವ್ ಮನೆಗೆ ಬರುತ್ತಾಳೆ. ಇದಕ್ಕೆಲ್ಲಾ ಸುಪ್ರಿತಾ ಕಾರಣ ಎಂದು ಗೊತ್ತಾಗಿ ಆಕೆ ಕೆನ್ನೆಗೆ ಬಾರಿಸಿ, ಆಕೆ ತಂಟೆಗೆ ಬರದಂತೆ ಹೇಳ್ತಾಳೆ. ಅಲ್ಲದೇ ಕಾವೇರಿ ವೈಷ್ಣವ್ ನೀನು ಏನ್ ಮಾಡ್ತೀಯೋ ಗೊತ್ತಿಲ್ಲ. ಭಾಗ್ಯ ಮತ್ತು ಲಕ್ಷ್ಮಿ ಮುಖದಲ್ಲಿ ನಗು ಮೂಡಿಸು ಎಂದು ಹೇಳ್ತಾಳೆ. ಅದಕ್ಕೆ ವೈಷ್ಣವ್ ಸರಿ ಅಮ್ಮ ಎಂದು ಹೇಳ್ತಾನೆ.
ಸೀರೆ, ಬಳೆ, ಹೂವು ಕೊಟ್ಟು ಕ್ಷಮೆ
ವೈಷ್ಣವ್ ಭಾಗ್ಯ ಮನೆಗೆ ಹೋಗಿ ಲಕ್ಷ್ಮಿಗೆ ಏನೇನು ಇಷ್ಟ ಎಂದು ಕೇಳಿ, ಅವನ್ನೆಲ್ಲಾ ತೆಗೆದುಕೊಂಡು ಹೋಗ್ತಾನೆ. ಪಾರ್ಕ್ ನಲ್ಲಿ ಎಲ್ಲವನ್ನೂ ಇಟ್ಟಿರುತ್ತಾನೆ. ಲಕ್ಷ್ಮಿ ಬಳಿ ಕ್ಷಮೆ ಕೇಳ್ತಾನೆ. ನನ್ನಿಂದ ಈ ರೀತಿ ಆಗಬಾರದಿತ್ತು ಕ್ಷಮಿಸಿ ಎನ್ನುತ್ತಾನೆ. ಅದಕ್ಕೆ ಲಕ್ಷ್ಮಿ ಅವನನ್ನು ಕ್ಷಮಿಸುತ್ತಾಳೆ. ಅಷ್ಟರಲ್ಲಿ ಮನೆಯಲ್ಲಿ ಇಬ್ಬರ ನಿಶ್ಚಿಯಾರ್ಥ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಅದನ್ನು ನೋಡಿ ವೈಷ್ಣವ್ ಶಾಕ್ ಆಗಿದ್ದಾನೆ.
ಇದನ್ನೂ ಓದಿ: Vanshika Birthday: ವನ್ಷಿಕಾ ಬರ್ತ್ಡೇ, ಎರೆಡೆರೆಡು ರಿಯಾಲಿಟಿ ಶೋ ಗೆದ್ದ ಪುಟ್ಟ ಪೋರಿ
ವೈಷ್ಣವ್-ಲಕ್ಷ್ಮಿ ನಿಶ್ಚಿತಾರ್ಥ ನಡೆಯುತ್ತಾ? ವೈಷ್ಣವ್ ಇದಕ್ಕೆ ಒಪ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ