ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ (Marriage) ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಅದಕ್ಕೆ ವೈಷ್ಣವ್ ಕೀರ್ತಿಯನ್ನು ಭೇಟಿಯಾಗಲು (Meet) ಒಪ್ಪಿದ್ದಾನೆ.
ತಾಂಬೂಲ ಶಾಸ್ತ್ರ ನಿಲ್ಲಿಸಿದ್ದ ಭಾಗ್ಯ
ಕಾವೇರಿ ಮತ್ತು ಕುಸುಮಾ ಲಕ್ಷ್ಮಿಯನ್ನು ನೋಡಲು ಬಂದಿರುತ್ತಾರೆ. ಆದ್ರೆ ವೈಷ್ಣವ್ ಬಂದಿರಲ್ಲ. ಕುಸುಮಾ ತಾಂಬೂಲ ಶಾಸ್ತ್ರ ಮಾಡಲು ತಯಾರಿ ನಡೆಸಿದ್ದಳು. ಆದ್ರೆ ಭಾಗ್ಯ ಅದನ್ನು ನಿಲ್ಲಿಸಿದ್ದಳು. ನನಗೆ ಆದ ರೀತಿ ನನ್ನ ತಂಗಿಗೆ ಆಗಬಾರದು. ವೈಷ್ಣವ್ ಇಲ್ಲಿಗೆ ಬರಬೇಕು. ಆಗ ನಾನು ಈ ಶಾಸ್ತ್ರಕ್ಕೆಲ್ಲಾ ಒಪ್ಪುತ್ತೇನೆ. ಇಲ್ಲ ಅಂದ್ರೆ ವೈಷ್ಣವ್‍ಗೆ ಈ ಮದುವೆ ಇಷ್ಟ ಇಲ್ಲ ಎಂದು ತಿಳಿದುಕೊಳ್ತೇನೆ ಎಂದಿದ್ದಳು.
ಕುಸುಮಾ ಕೋಪ ಮಾಡಿಕೊಂಡಿದ್ದಳು
ತನ್ನ ಸೊಸೆ ತಾನು ಆಯ್ಕೆ ಮಾಡಿದ ಗಂಡನ್ನೇ ಒಪ್ಪಲಿಲ್ಲ ಇವಳು. ನೀನು ನಮ್ಮ ಮನೆಗೆ ಬರಬೇಡ. ನಿನ್ನ ತವರು ಮನೆಯಲ್ಲೇ ಇರು ಎಂದು ಬಿಟ್ಟು ಹೋಗಿರುತ್ತಾಳೆ. ಆದ್ರೂ ಭಾಗ್ಯ ತನ್ನ ಅತ್ತೆ ಮನೆಗೆ ಹೋಗುತ್ತಾಳೆ.
ಭಾಗ್ಯ ಮಾವ ಆಕೆಗೆ ಬೆಂಬಲ ನೀಡ್ತಾನೆ. ವೈಷ್ಣವ್ ಭೇಟಿಯಾಗಲು ಏನು ತೊಂದ್ರೆ ಎಂದು ಕೇಳ್ತಾನೆ. ಅದಕ್ಕೆ ಕುಸುಮಾ ಸುಮ್ಮನಾಗಿ ಭಾಗ್ಯಳನ್ನು ಮನೆಗೆ ಸೇರಿಸುತ್ತಾನೆ.
ಮಹಾಲಕ್ಷ್ಮಿ ಭೇಟಿಯಾಗ್ತೇನೆ ಎಂದ ವೈಷ್ಣವ್
ಕಾವೇರಿ ಮನೆಯವರಿಗೂ ಅವಮಾನ ಆಗಿರುತ್ತೆ. ತನ್ನ ಮಗ ಬರದೇ ಭಾಗ್ಯ ತಂಗಿಯನ್ನು ಕೊಡಲ್ಲ ಎಂದಳು ಎಂದು. ಅದಕ್ಕೆ ಅವರೆಲ್ಲಾ ಬೇಸರ ಮಾಡಿಕೊಂಡಿರುತ್ತಾರೆ. ಅದಕ್ಕೆ ವೈಷ್ಣವ್ ತಾನು ಮಹಾಲಕ್ಷ್ಮಿಯನ್ನು ಭೇಟಿಯಾಗುತ್ತೇನೆ. ಅವಳ ಜೊತೆ ಮಾತನಾಡುವುದು ತುಂಬಾ ಇದೆ ಎಂದು ಹೇಳ್ತಾನೆ. ಅದಕ್ಕೆ ಕಾವೇರಿ ಮತ್ತು ಮನೆಯವರೆಲ್ಲಾ ಖುಷಿ ಆಗ್ತಾರೆ.
ವೈಷ್ಣವ್ ಜೊತೆ ಮನಸ್ಸು ಬಿಚ್ಚಿ ಮಾತನಾಡು
ಮದುವೆ ಆದ ಮೇಲೆ ಹೆಣ್ಣು ಮಕ್ಕಳಿಗೆ ತವರು ಅಂದ್ರೆ ದೂರದ ಚಂದ್ರನ ರೀತಿ. ಮದುವೆ ಆಗುವಾಗ ಒಳ್ಳೆ ಹುಡುಗನನ್ನು ಮದುವೆ ಆಗಬೇಕು. ನಾಳೆ ವೈಷ್ಣವ್ ಬಂದಾಗ ಅವನ ಜೊತೆ ಯಾವುದೇ ಸಂಕೋಚ ಇಲ್ಲದೇ ಮಾತನಾಡು. ಮುಚ್ಚು ಮರೆ ಇಲ್ಲದೇ, ಮನಸ್ಸು ಬಿಚ್ಚಿ ಮಾತನಾಡು. ಇಷ್ಟು ದಿನ ನೀನು ಅವನನ್ನು ನನ್ನ ಮೈದುನಾ ಅಂತ ನೋಡಿದ್ದೆ.
ಈಗ ಬಾಳ ಸಂಗಾತಿ ಎಂದುಕೊಂಡು ಮಾತನಾಡು. ಅವನು ನಿನಗೆ ಸರಿ ಎನ್ನಿಸುತ್ತಾನಾ? ನಿನ್ನ ಕನಸಿನ ಹುಡುಗನ ರೀತಿ ಇದಾನಾ? ಅವನೇ ಇವನಾ? ಯಾವುದಕ್ಕೂ ಸಂಕೋಚ ಬೇಡ. ಆರಾಮಾಗಿ ಮಾತನಾಡು ಎಂದು ಭಾಗ್ಯ ಲಕ್ಷ್ಮಿಗೆ ಸಲಹೆ ನೀಡ್ತಾಳೆ.
ಕೀರ್ತಿ ಮದುವೆ ಆಗ್ತಾನಾ?
ಮನೆಯವರೆಲ್ಲಾ ವೈಷ್ಣವ್‍ಗೆ ಲಕ್ಷ್ಮಿ ಜೊತೆ ಮದುವೆ ಮಾಡಬೇಕು ಎಂದು ಪ್ಲ್ಯಾನ್ ಮಾಡ್ತಾ ಇದ್ರೆ, ವೈಷ್ಣವ್ ತಾನು ಪ್ರೀತಿಸಿದ ಹುಡುಗಿ ಕೀರ್ತಿ ಬಗ್ಗೆ ಯೋಚನೆ ಮಾಡ್ತಾ ಇದ್ದಾನೆ. ಲಕ್ಷ್ಮಿ ಭೇಟಿಯಾಗಿ ಕೀರ್ತಿ ವಿಚಾರ ಹೇಳ್ತಾನಾ? ಕೀರ್ತಿಯನ್ನು ತಾನು ಮದುವೆ ಆಗ್ತೀನಿ ಎಂದು ಹೇಳೋಕೆ ಲಕ್ಷ್ಮಿಯನ್ನು ಭೇಟಿಯಾಗುತ್ತಿರಬಹುದು.
ಇದನ್ನೂ ಓದಿ: Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!
ವೈಷ್ಣವ್‍ಗೆ ಸರಿಯಾದ ಜೋಡಿ ಯಾರು? ಕೀರ್ತಿನಾ? ಲಕ್ಷ್ಮಿನಾ? ಯಾರನ್ನ ಮದುವೆ ಆಗ್ತಾನೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ