ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ . ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಮದುವೆ ಮನೆ ಬಿಟ್ಟು ಹೊರಟಿದ್ದಾನೆ. ಲಕ್ಷ್ಮಿ ಸಹ ಇಷ್ಟವಿಲ್ಲದ ಮದುವೆಗೆ (Marriage) ರೆಡಿ ಆಗಿದ್ದಾಳೆ.
ನನಗೆ ಈ ಮದುವೆ ಇಷ್ಟ ಇಲ್ಲ
ವೈಷ್ಣವ್ ಲಕ್ಷ್ಮಿ ಬಳಿ ಬಂದು, ನನಗೆ ಈ ಮದುವೆ ಇಷ್ಟ ಇಲ್ಲ. ಇನ್ನೊಬ್ಬರು ಮನಸ್ಸಿನಲ್ಲಿ ಒಬ್ಬರನ್ನು ಇಟ್ಟುಕೊಂಡು, ಮತ್ತೊಬ್ಬರನ್ನು ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದನ್ನು ಕೇಳಿ ಲಕ್ಷ್ಮಿ ಶಾಕ್ ಆಗಿದ್ದಾಳೆ. ನಾನು ಕೀರ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ.
ಅಳುತ್ತಾ ಕೂತ ಲಕ್ಷ್ಮಿ
ಲಕ್ಷ್ಮಿ ತನಗೆ ಅಕ್ಕಮ್ಮ ನೋಡಿದ ಹುಡುಗ ವೈಷ್ಣವ್. ಶ್ರೀರಾಮನಂತವನು. ಅವನಿಗೂ ನಾನು ಇಷ್ಟ ಎಂದುಕೊಂಡು ಖುಷಿಯಿಂದ ಮದುವೆಗೆ ರೆಡಿ ಆಗಿದ್ದಳು. ಆದ್ರೆ ವೈಷ್ಣವ್ ಬಂದು ನನಗೆ ಮದುವೆ ಇಷ್ಟ ಇಲ್ಲ ಎಂದು ಹೇಳಿ ಹೋಗಿದ್ದಾನೆ. ಅದನ್ನು ಕೇಳಿಸಿಕೊಂಡು ಲಕ್ಷ್ಮಿ ಶಾಕ್ ಆಗಿದ್ದಾಳೆ. ಅಳುತ್ತಾ ಕೂತಿದ್ದಳು. ಆಗ ಅಲ್ಲಿಗೆ ತಾಂಡವ್ ಬರುತ್ತಾನೆ.
ತಾಂಡವ್‍ಗೆ ಮಾತಿಗೆ ಲಕ್ಷ್ಮಿ ಆತಂಕ
ತಾಂಡವ್ ಬಂದು ಅಳುತ್ತಾ, ಕೂತಿದ್ದೀಯಾ, ನೀನು ಪಾಪದ ಹುಡುಗಿ ಅಂದುಕೊಂಡಿದ್ವಿ. ನೀನು ತುಂಬಾ ಧೈರ್ಯವಂತ ಹುಡುಗಿ. ಮದುವೆ ನಿಲ್ಲಿಸುವಷ್ಟು. ನಿನ್ನ ರೀತಿಯ ಹುಡುಗಿಗೆ ವೈಷ್ಣವ್ ಸಿಕ್ಕಿದ್ದು ಅದೃಷ್ಟ. ನೀನು ಏನ್ ಮಾಡ್ತಿಯೋ ನನಗೆ ಗೊತ್ತಿಲ್ಲ. ನಾಳೆ ಮದುವೆ ಆಗಬೇಕು ಅಷ್ಟೆ. ಇಲ್ಲ ಅಂದ್ರೆ ನಿನ್ನ ಅಕ್ಕಮ್ಮನನ್ನು ನಿನ್ನ ಜೊತೆ ಕರೆದುಕೊಂಡು ಹೋಗು ಎಂದಿದ್ದಾರೆ.
ಮದುವೆ ಸಿದ್ಧವಾದ ಲಕ್ಷ್ಮಿ
ಯಾವಾಗ ತಾಂಡವ್ ಆ ರೀತಿ ಹೇಳಿದ್ನೋ, ಅದನ್ನು ಕೇಳಿ ಲಕ್ಷ್ಮಿ ಗಾಬರಿಯಾಗಿದ್ದಾಳೆ. ನನ್ನಿಂದ ನನ್ನ ಅಕ್ಕಮ್ಮನ ಜೀವನ ಹಾಳಾಗಬಾರದು. ಇಷ್ಟು ದಿನ ನಾನ್ನಿಂದ ಆಕೆಗೆ ಆದ ನೋವೇ ಸಾಕು ಎಂದು, ಇಷ್ಟ ಇಲ್ಲದೇ ಇರುವ ಮದುವೆಗೆ ಸಿದ್ಧವಾಗಿ ನಿಂತಿದ್ದಾಳೆ. ಅದನ್ನು ನೋಡಿ ಭಾಗ್ಯ ಖುಷಿಯಾಗಿದ್ದಾಳೆ. ನನ್ನ ಲಡ್ಡು ತುಂಬಾ ಚೆನ್ನಾಗಿ ಕಾಣ್ತಾ ಇದ್ದಾಳೆ ಎಂದು ಹೇಳಿದ್ದಾಳೆ.
ಮದುವೆ ಮನೆಯಿಂದ ಹೊರಟ ವೈಷ್ಣವ್
ವೈಷ್ಣವ್ ಹೇಗಾದ್ರೂ ಕೀರ್ತಿಯನ್ನು ಒಪ್ಪಿಸಿ, ಇಟ್ಟ ಮುಹೂರ್ತದಲ್ಲಿ ಮದುವೆ ಆಗಬೇಕು ಎಂದುಕೊಂಡಿದ್ದ. ಆದ್ರೆ ಕೀರ್ತಿ ಒಪ್ಪಿಲ್ಲ. ಅದಕ್ಕೆ ಬೇಸರ ಮಾಡಿಕೊಂಡು, ಬಟ್ಟೆ ತುಂಬಿಕೊಂಡು, ಕಾರು ಹತ್ತಿ ಹೊರಟು ಹೋಗಿದ್ದಾನೆ. ನನಗೆ ಮದುವೆ ಬೇಡ, ಏನೂ ಬೇಡ ಎಂದು ಹೇಳಿ ಹೋಗಿದ್ದಾನೆ. ವೈಷ್ಣವ್ ಇಲ್ಲ ಎಂದು ಎಲ್ಲರೂ ಆತಂಕಗೊಂಡಿದ್ದಾರೆ.
ಇದನ್ನೂ ಓದಿ: Bhagya Lakshmi: ಭಾಗ್ಯಾಗೆ ಸಹಾಯ ಮಾಡದ ತಾಂಡವ್, ದುಡ್ಡು ಕೊಟ್ಟು ದೊಡ್ಡವಳಾದ ಶ್ರೇಷ್ಠಾ!
ಒಲ್ಲದ ಮನಸ್ಸಿನಿಂದ ವೈಷ್ಣವ್-ಲಕ್ಷ್ಮಿ ಮದುವೆ ನಡೆಯುತ್ತಾ? ಅಥವಾ ನಿಲ್ಲುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ