• Home
  • »
  • News
  • »
  • entertainment
  • »
  • Bhagya Lakshmi: ಇಬ್ಬರ ಮನಸ್ಸು ಒಂದೇ ತರ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?

Bhagya Lakshmi: ಇಬ್ಬರ ಮನಸ್ಸು ಒಂದೇ ತರ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?

ಭಾಗ್ಯಲಕ್ಷ್ಮಿ

ಭಾಗ್ಯಲಕ್ಷ್ಮಿ

ಲಕ್ಷ್ಮಿ-ವೈಷ್ಣವ್ ಮನಸ್ಸು ಒಂದೇ ರೀತಿ. ಬೇರೆಯವರ ಕಷ್ಟಕ್ಕೆ ಮರುಗೋ ಜೀವಗಳು. ವೈಷ್ಣವ್-ಲಕ್ಷ್ಮಿ ಮದುವೆ ಆಗುತ್ತಾ? ಮುಂದೇನಾಗುತ್ತೆ ನೋಡಬೇಕು.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ  ಸುಷ್ಮಾ (Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ (Sister) ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನಾಗಿ ಬಿಗ್ ಬಾಸ್ ಶಮಂತ್ ಗೌಡ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ-ವೈಷ್ಣವ್ ಮನಸ್ಸು ಒಂದೇ ರೀತಿ. ಇಬ್ಬರು ಒಂದಾಗ್ತಾರಾ?


    ವೈಷ್ಣವ್ ಅಂದ್ರೆ ಅಮ್ಮ ಕಾವೇರಿಗೆ ಇಷ್ಟ
    ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು. ಕೀರ್ತಿ-ವೈಷ್ಣವ್ ಪ್ರೀತಿ ಮಾಡುತ್ತಿದ್ದು, ಆ ವಿಚಾರ ಕಾವೇರಿಗೆ ಗೊತ್ತಾಗಿದೆ. ಆದ್ರೆ ಕಾವೇರಿಗೆ ಅವರಿಬ್ಬರ ಮದುವೆ ಮಾಡಲು ಇಷ್ಟ ಇಲ್ಲ. ಸುಮ್ಮನೇ ಮಗನ ಮುಂದೆ ಓಕೆ ಎಂದಿದ್ದಾಳೆ.


    ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು
    ಲಕ್ಷ್ಮಿ, ಭಾಗ್ಯ ಸ್ವಂತ ತಂಗಿ ಅಲ್ಲ. ಚಿಕ್ಕಪ್ಪನ ಮಗಳು. ಲಕ್ಷ್ಮಿಗೆ ಅಪ್ಪ-ಅಮ್ಮ ಇಲ್ಲ. ಅದಕ್ಕೆ ಭಾಗ್ಯ ಅವರೇ ಸಾಕಿದ್ದಾರೆ. ಅಮ್ಮನ ಸ್ಥಾನದಲ್ಲಿ ನಿಂತು ಭಾಗ್ಯ ಲಕ್ಷ್ಮಿಯನ್ನು ನೋಡಿಕೊಂಡಿದ್ದಾಳೆ. ಅದಕ್ಕೆ ಲಕ್ಷ್ಮಿಗೆ ಅಕ್ಕಮ್ಮ ಎಂದ್ರೆ ಪ್ರಾಣ. ಅವಳು ಹೇಳಿದಂತೆ ಕೇಳುತ್ತಾಳೆ. ಬೇರೆಯವರು ಕಷ್ಟ ಅಂದ್ರೆ ಲಕ್ಷ್ಮಿ ಸಹಾಯಕ್ಕೆ ಮುಂದಿರುತ್ತಾಳೆ. ತನ್ನ ಅಂಗಡಿಯಲ್ಲಿ ಬಡವರಿಗೆ ಸಾಲ ಕೊಡುತ್ತಾಳೆ. ಅವರು ದುಡ್ಡು ಕೊಟ್ಟಾಗ ಬೇಸರ ಮಾಡಿಕೊಳ್ಳದೇ ಪಡೆಯುತ್ತಾಳೆ.


    ಇದನ್ನೂ ಓದಿ: BBK Season 09: ಒಟಿಟಿಯಿಂದ ಬಂದವರಿಂದ ಡೀಲ್! ಕಳಪೆ, ನಾಮಿನೇಟ್ ಮಾಡಬಾರದೆಂದು ನಡೆದಿತ್ತಾ ಒಪ್ಪಂದ? 


    ಅತ್ತಿಗೆಯಲ್ಲಿ ಅಮ್ಮನನ್ನು ಕಾಣೋ ವೈಷ್ಣವ್
    ಭಾಗ್ಯ ಕಾಲಿಗೆ ಏಟು ಮಾಡಿಕೊಂಡಿರುತ್ತಾಳೆ. ಆಗ ವೈಷ್ಣವ್ ಅವಳ ಕಾಲು ಹಿಡಿದು ಏನ್ ಆಯ್ತು ಅತ್ತಿಗೆ, ತುಂಬಾ ನೋವಾಯ್ತಾ ಎಂದು ಕೇಳುತ್ತಾನೆ. ಅದಕ್ಕೆ ಭಾಗ್ಯ, ಏನೂ ಆಗಿಲ್ಲ. ಕಾಲು ಮುಟ್ಟಬೇಡ ಎನ್ನುತ್ತಾಳೆ. ಅಯ್ಯೋ ನಮ್ಮ ಅಮ್ಮ ಆಗಿದ್ರೆ ಸುಮ್ನೆ ಬಿಡ್ತಿದ್ನಾ? ನೀವು ನನಗೆ ಅಮ್ಮನ ರೀತಿ ಎಂದು ಹೇಳ್ತಾನೆ.


    colors kannada serial, kannada serial, bhagya lakshmi news serial, serial cast, lakshmi vaishnav marriage matter discussion, vaishnav lakshmi attitude same, ಭಾಗ್ಯಲಕ್ಷ್ಮಿ ಧಾರಾವಾಹಿ, ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ ಇಟ್ಟ ಭಾಗ್ಯ ಅತ್ತೆ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವೈಷ್ಣವ್


    ಲಕ್ಷ್ಮಿಯನ್ನು ಸೊಸೆ ಮಾಡಿಕೊಳ್ಳುವಂತೆ ಕಾವೇರಿಗೆ ಸಲಹೆ
    ಹೇಗಿದ್ರೂ ಕಾವೇರಿಗೆ ತನ್ನ ಮಗ ಕೀರ್ತಿಯನ್ನು ಮದುವೆ ಆಗೋದು ಇಷ್ಟ ಇಲ್ಲ. ಅದಕ್ಕೆ ಬೇರೆ ಹುಡುಗಿ ಹುಡುಕುತ್ತಿದ್ದಾಳೆ. ಅಷ್ಟರಲ್ಲಿ ಕಾವೇರಿ ಅಕ್ಕ, ಲಕ್ಷ್ಮಿ ಪ್ರಸ್ತಾಪ ಇಟ್ಟಿದ್ದಾಳೆ. ನೋಡು ಕಾವೇರಿ, ನನ್ನ ಸೊಸೆ ತಂಗಿ ಲಕ್ಷ್ಮಿ ತುಂಬಾ ಒಳ್ಳೆ ಹುಡುಗಿ. ಸಂಪ್ರದಾಯ ಎಲ್ಲ ಗೊತ್ತು. ಮನೆ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾಳೆ. ನಿಮ್ಮ ಮನೆಗೆ ಲಕ್ಷ್ಮಿ ಬಂದ್ರೆ, ಇಬ್ಬರ ಮನೆಗೂ ಭಾಗ್ಯಲಕ್ಷ್ಮಿ ಬಂದಂತೆ ಆಗುತ್ತೆ ಎಂದು ಹೇಳಿದ್ದಾಳೆ.


    colors kannada serial, kannada serial, bhagya lakshmi news serial, serial cast, lakshmi vaishnav marriage matter discussion, vaishnav lakshmi attitude same, ಭಾಗ್ಯಲಕ್ಷ್ಮಿ ಧಾರಾವಾಹಿ, ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ ಇಟ್ಟ ಭಾಗ್ಯ ಅತ್ತೆ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಲಕ್ಷ್ಮಿ


    ಇದನ್ನೂ ಓದಿ: Olavina Nildana: ಸಿದ್ಧಾಂತ್ ತನ್ನ ಪ್ರೀತಿ ಹೇಳಿಕೊಳ್ಳೋ ಮೊದಲೇ ತಾರಿಣಿಗೆ ಗುಂಡೇಟು! ಸಾವು-ಬದುಕಿನ ಮಧ್ಯೆ ಹೋರಾಟ! 


    ಲಕ್ಷ್ಮಿ-ವೈಷ್ಣವ್ ಮನಸ್ಸು ಒಂದೇ ರೀತಿ. ಬೇರೆಯವರ ಕಷ್ಟಕ್ಕೆ ಮರುಗೋ ಜೀವಗಳು ಒಂದಾಗ್ತಾವಾ? ವೈಷ್ಣವ್-ಲಕ್ಷ್ಮಿ ಮದುವೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: