• Home
 • »
 • News
 • »
 • entertainment
 • »
 • Bhagya Lakshmi: ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ? ಕೇಕ್​ನಿಂದ ಸತ್ಯ ಬಯಲು

Bhagya Lakshmi: ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ? ಕೇಕ್​ನಿಂದ ಸತ್ಯ ಬಯಲು

ತನ್ನ ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ?

ತನ್ನ ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ?

ವೈಷ್ಣವ್​ಗೆ ತನ್ನ ಅಣ್ಣನೇ ಆ ಹೋಟೆಲ್‍ನಲ್ಲಿ ಇದ್ದದ್ದು ಎಂದು ತಿಳಿಯುತ್ತೆ. ಅದಕ್ಕೆ ಅಣ್ಣನೇ ಕೇಕ್ ಆರ್ಡರ್ ಮಾಡಿದ್ದು. ಯಾರಿಗಾಗಿ ಮಾಡಿದ. ಹಾಗಾದ್ರೆ ಯಾರ ಜೊತೆ ಅಣ್ಣ ಬಂದಿದ್ದ? ಅಣ್ಣ ಯಾರಿಗಾಗಿ ಅದನ್ನು ತರಿಸಿದ್ದ ಎಂದು ಆತಂಕಗೊಂಡಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯು (Serial) ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್ ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ (Relationship) ಇದೆ. ಈ ವಿಷ್ಯ ವೈಷ್ಣವ್ ಗೆ ಗೊತ್ತಾಗುತ್ತಾ?


  ಶ್ರೇಷ್ಠ ಜೊತೆ ತಾಂಡವ್ ಸಂಬಂಧ


  ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ.


  ಇವಳಿಗೆ ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ. ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಯಾವಾಗಲೂ ಆಕೆಯ ಜೊತೆ ಸುತ್ತಾಡುತ್ತಿರುತ್ತಾನೆ. ಎಲ್ಲದಕ್ಕೂ ಆಕೆಯ ಬಳಿಯೇ ಸಲಹೆ ಕೇಳ್ತಾನೆ.


  ಕೇಕ್ ಬದಲಾವಣೆ


  ಶ್ರೇಷ್ಠ ಮತ್ತು ತಾಂಡವ್ ಹೋಟೆಲ್‍ಗೆ ಹೋಗಿರುತ್ತಾರೆ. ಊಟ ಆದ ಮೇಲೆ, ತಾಂಡವ್, ಶ್ರೇಷ್ಠಾಗಾಗಿ ಕೇಕ್ ಆರ್ಡರ್ ಮಾಡಿರುತ್ತಾನೆ. ಆ ಕೇಕ್ ತಾಂಡವ್ ಟೇಬಲ್ ಬದಲು, ವೈಷ್ಣವ್ ಟೇಬಲ್ ಗೆ ಸರ್ವ್ ಮಾಡಿರುತ್ತಾರೆ. ವೈಷ್ಣವ್ ಆ ಕೇಕ್ ನ್ನು ಅತ್ತಿಗೆ ಆರ್ಡರ್ ಮಾಡಿರಬಹುದು ಎಂದು ಕಟ್ ಮಾಡಿ ಬಿಡುತ್ತಾರೆ. ಅದನ್ನು ತಿಂದು ಬಿಡುತ್ತಾರೆ.


  ಇದನ್ನೂ ಓದಿ: Kannadathi: ಭುವಿ ಕೈ ಹಿಡಿಯುತ್ತಲೇ ಕೊನೆಯುಸಿರೆಳೆದ್ರಾ ಅಮ್ಮಮ್ಮ? ಕನ್ನಡತಿ ಕುಟುಂಬದ ಕಣ್ಣೀರು! 


  ತಾಂಡವ್ ರೂಪ ತೋರಿಸಿದ ಭಾಗ್ಯ ಪತಿ
  ತಾಂಡವ್ ಶ್ರೇಷ್ಠಗಾಗಿ ಆರ್ಡರ್ ಮಾಡಿದ್ದ ಕೇಕ್ ಬದಲಾದ ಕಾರಣ, ಹೋಟೆಲ್ ಮ್ಯಾನೇಜರ್ ಜೊತೆ ಜಗಳ ಮಾಡಿದ್ದಾನೆ. ಕೇಕ್ ಬೇಕೇ ಬೇಕು ಎಂದು ಹಠ ಹಿಡಿದಿದ್ದಾನೆ. ಆ ಕೇಕ್ ಕಟ್ ಮಾಡಿದವರಿಗೆ ಮ್ಯಾನರ್ಸ್ ಇಲ್ವಾ ಎಂದು, ಅವರ ಬಳಿ ಹೋಗುತ್ತಾನೆ. ಅಲ್ಲಿ ವೈಷ್ಣವ್, ಭಾಗ್ಯ ಮತ್ತು ಲಕ್ಷ್ಮಿ ಇರುವುದನ್ನು ನೋಡಿ ವಾಪಸ್ ಹೋಗುತ್ತಾನೆ.


  ಕೇಕ್ ಆರ್ಡರ್ ಮಾಡಿದ್ದು ತಾಂಡವ್


  ವೈಷ್ಣವ್ ಈ ಕೇಕ್ ಯಾರು ಆರ್ಡರ್ ಮಾಡಿದ್ದು ಎಂದು ಸರ್ವರ್‍ಗೆ ಕೇಳ್ತಾನೆ. ಅವರು ಬೇರೆಯವರು ಸರ್. ಅವರು ನಮ್ಮ ಜೊತೆ ಜಗಳ ಮಾಡಿದ್ರು ಎಂದು ಹೇಳ್ತಾನೆ. ಅದಕ್ಕೆ ವೈಷ್ಣವ್ ನಾನು ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೋಗ್ತಾನೆ. ಅಷ್ಟರಲ್ಲಿ ತಾಂಡವ್ ಹೋಗಿರುತ್ತಾನೆ. ಅವನ ಕಾರ್ ನೋಡಿ. ಇದು ಅಣ್ಣನ ಕಾರು. ಅವನೇ ಕೇಕ್ ಆರ್ಡರ್ ಮಾಡಿದ್ದು ಎಂದು ತಿಳಿಯುತ್ತೆ.


  colors kannada serial, kannada serial, bhagya lakshmi news serial, serial cast, vaishnav know about his brother matter, ಭಾಗ್ಯಲಕ್ಷ್ಮಿ ಧಾರಾವಾಹಿ, ತನ್ನ ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಕೇಕ್ ಆರ್ಡರ್ ಮಾಡಿದ್ದು ತಾಂಡವ್


  ಅಣ್ಣನ ಸಂಬಂಧದ ಬಗ್ಗೆ ತಿಳಿಯುತ್ತಾ?


  ವೈಷ್ಣವ್ ತನ್ನ ಅಣ್ಣನೇ ಆ ಹೋಟೆಲ್‍ನಲ್ಲಿ ಇದ್ದದ್ದು ಎಂದು ತಿಳಿಯುತ್ತೆ. ಅದಕ್ಕೆ ಅಣ್ಣನೇ ಕೇಕ್ ಆರ್ಡರ್ ಮಾಡಿದ್ದು. ಯಾರಿಗಾಗಿ ಮಾಡಿದ. ಕಾಲ್ ಮಾಡಿದಾಗ ಕೆಲಸ ಇದೆ ಎಂದಿದ್ದ. ನೋಡಿದ್ರೆ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದ. ಹಾಗಾದ್ರೆ ಯಾರ ಜೊತೆ ಅಣ್ಣ ಬಂದಿದ್ದ? ಅಣ್ಣ ಯಾರಿಗಾಗಿ ಅದನ್ನು ತರಿಸಿದ್ದ ಎಂದು ಆತಂಕಗೊಂಡಿದ್ದಾನೆ.


  colors kannada serial, kannada serial, bhagya lakshmi news serial, serial cast, vaishnav know about his brother matter, ಭಾಗ್ಯಲಕ್ಷ್ಮಿ ಧಾರಾವಾಹಿ, ತನ್ನ ಅಣ್ಣ ತಾಂಡವ್ ಸಂಬಂಧದ ಬಗ್ಗೆ ವೈಷ್ಣವ್‍ಗೆ ಗೊತ್ತಾಗುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವೈಷ್ಣವ್


  ಇದನ್ನೂ ಓದಿ: BBK Season 09: ಬಿಗ್‌ ಬಾಸ್‌ ಮನೆಯಲ್ಲಿ ಸಾನ್ಯಾ-ರೂಪೇಶ್ ಶೆಟ್ಟಿ ಕಿತ್ತಾಟ! ಹಾಡು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡ ಜೋಡಿ! 


  ವೈಷ್ಣವ್ ಅಣ್ಣನ ಬಗ್ಗೆ ಪೂರ್ತಿ ತಿಳಿದುಕೊಳ್ಳದೇ ಬಿಡುವುದಿಲ್ವಾ? ತಾಂಡವ್ ಏನ್ ಮಾಡ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

  Published by:Savitha Savitha
  First published: