ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಮದುವೆ ಮಾಡಲು ಅಕ್ಕ ಒಳ್ಳೆ ಹುಡುಗನನ್ನು ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಕೀರ್ತಿ ಎಂಗೇಜ್ಮೆಂಟ್ (Engagement) ನಡೆಯಬೇಕಿತ್ತು. ಆದ್ರೆ ಕೀರ್ತಿ ಅದನ್ನು ನಿಲ್ಲಿಸಿದ್ದಾಳೆ. ವೈಷ್ಣವ್ ಸಾಯಲು (Suicede) ಹೊರಟಿದ್ದಾನೆ.
ವೈಷ್ಣವ್ ಜೊತೆ ಬ್ರೇಕ್ ಅಪ್
ಕೀರ್ತಿಗೆ ವೈಷ್ಣವ್ ಅಂದ್ರೆ ಪ್ರಾಣ. ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ ಇದ್ಲು. ವೈಶ್ ಇಲ್ಲ ಅಂದ್ರೆ ಸತ್ತು ಹೋಗ್ತೀನಿ ಎಂದು ಹೇಳ್ತಾ ಇದ್ಲು. ಈಗ ಮನೆಯವರೇ ನಿಶ್ಚಿತಾರ್ಥ ಮಾಡುತ್ತಿದ್ದಾರೆ.
ಆದ್ರೆ ಕೀರ್ತಿ, ನಾನು ಈ ಎಂಗೇಜ್ಮೆಂಟ್ ಬೇಡ ಎಂದು ಡಿಸೈಡ್ ಮಾಡಿದ್ದೀನಿ. ನಾನು ನಿನ್ನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ತೇನೆ ಎಂದು ಹೇಳಿದ್ದಾಳೆ. ಈ ಸಂಬಂಧ ಇವತ್ತಿಗೆ ಮುಗಿದು ಹೋಗುತ್ತೆ. ಈ ನಿಶ್ಚಿತಾರ್ಥ ನಡೆಯಲ್ಲ ಎಂದು ಕೀರ್ತಿ ಹೇಳಿದ್ದಳು.
ಉಡುಗೊರೆಗಳನ್ನು ಸುಟ್ಟು ಹಾಕಿದ ಕೀರ್ತಿ
ಕೀರ್ತಿ ಏನೋ ಆ ಟೈಮ್ ಗೆ ಆ ರೀತಿ ಮಾತನಾಡಿಬಹುದು ಎಂದುಕೊಂಡು, ವೈಷ್ಣವ್ ಮತ್ತೆ ಕೀರ್ತಿ ಬಳಿ ಹೋಗಿರುತ್ತಾನೆ. 3 ವರ್ಷದಿಂದ ಕೊಟ್ಟ ಉಡುಗೊರೆ ಇವು. ನಿನಗೆ ಇವನ್ನು ನೋಡಿಯಾದ್ರೂ ಮನಸ್ಸು ಚೇಂಜ್ ಆಗಬಹುದು ಎಂದು ಹೇಳ್ತಾನೆ. ಆದ್ರೆ ಕೀರ್ತಿ ಮನಸ್ಸು ಮಾತ್ರ ಕರಗಿಲ್ಲ. ಅವಕ್ಕೆಲ್ಲಾ ಬೆಂಕಿ ಹಾಕಿ ಮತ್ತೆ ತನ್ನ ನಿರ್ಧಾರ ತಿಳಿಸಿದ್ದಾಳೆ. ನನಗೆ ನೀನು ಬೇಡ ಎಂದಿದ್ದಾಳೆ.
ಇದನ್ನೂ ಓದಿ: Kendasampige: ಸುಮನಾಳನ್ನು ಮನೆಗೆ ಕರೆದ ಮಾವ, ಹೆಂಡ್ತಿಗಾಗಿ ಬದಲಾದ ಕೇಶವ್ ಪ್ರಸಾದ್!
ಬೇರೆ ಮದುವೆ ಮಾಡ್ತೀನಿ ಎಂದು ವೈಷ್ಣವ್ ತಂದೆ
ಕೀರ್ತಿ ನಡೆಯಿಂದ ವೈಷ್ಣವ್ ಮನೆಯವರಿಗೆಲ್ಲಾ ತುಂಬಾ ಬೇಜಾರು ಆಗಿದೆ. ಅದಕ್ಕೆ ಆ ಕೀರ್ತಿ ನಮಗೆ ಬೇಡ. ವೈಷ್ಣವ್ ಗೆ ನಾನು ಬೇರೆ ಮದುವೆ ಮಾಡ್ತೀನಿ ಎಂದು ವೈಷ್ಣವ್ ತಂದೆ ಹೇಳಿದ್ದಾರೆ. ಅದಕ್ಕೆ ಕಾವೇರಿಗೂ ಖುಷಿ ಆಗಿದೆ. ಆದ್ರೆ ವೈಷ್ಣವ್ ಮಾತ್ರ ತಾನು ಬೇರೆ ಮದುವೆ ಆಗಲ್ಲ ಎಂದು ಕೂತಿದ್ದಾನೆ.
ಸಾಯೋಕೆ ಹೊರಟ ವೈಷ್ಣವ್
ವೈಷ್ಣವ್ ಮನೆಯವರು ಬೇರೆ ಮದುವೆ ಮಾಡ್ತಾರೆ ಎಂದು ತುಂಬಾ ಬೇಜಾರಾಗಿದ್ದಾನೆ. ಅದಕ್ಕೆ ತಾನು ಬದುಕಿರಬಾರದು ಎಂದು ನಿರ್ಧಾರ ಮಾಡಿದ್ದಾನೆ. ಕಟ್ಟಡದ ಮೇಲೆ ಹತ್ತಿ ಸಾಯೋಕೆ ಹೊರಟಿದ್ದಾನೆ. ಅದನ್ನು ನೋಡಿ ಮನೆಯವರೆಲ್ಲಾ ಆತಂಕಗೊಂಡಿದ್ದಾರೆ. ಹಾಗಾದ್ರೆ ವೈಷ್ಣವ್ ನನ್ನು ಯಾರು ಕಾಪಾಡ್ತಾರೆ ನೋಡಬೇಕು.
ಭಾಗ್ಯಗೆ ಬುದ್ಧಿ ಮಾತು
ಭಾಗ್ಯಾಗೆ ಅತ್ತೆ ಕುಸುಮಾ ಬೈದಿದ್ದಾಳೆ. ಮನೆಯ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಗಂಡನನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲ ಅಂದ್ರೆ ಅವರು ಹಾದಿ ತಪ್ಪುತ್ತಾರೆ. ನಿನಗೆ ಏನೂ ಗೊತ್ತಾಗಲ್ಲ ಎಂದು ಭಾಗ್ಯಗೆ ಬೈದಿದ್ದಾಳೆ. ಯಾಕಂದ್ರೆ ಕುಸುಮಾಗೆ ಶ್ರೇಷ್ಠಾ ಮತ್ತು ತಾಂಡವ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಸೀಸನ್ 08 ರ ಸ್ಪರ್ಧಿಗಳ ಸಮಾಗಮ, ಹಳೇ ಸ್ನೇಹಿತರ ಮಸ್ತಿ!
ವೈಷ್ಣವ್ ನನ್ನು ಕಾಪಾಡೋದು ಯಾರು? ಭಾಗ್ಯಾಗೆ ಶ್ರೇಷ್ಠಾ ಸಂಬಂಧ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ